Karnataka Times
Trending Stories, Viral News, Gossips & Everything in Kannada

Arecanut: ಕಡಿಮೆ ನೀರಿನಲ್ಲಿ ಅಡಿಕೆ ಬೆಳೆಯುವ ವಿಧಾನ ಹೇಗೆ ಗೊತ್ತಾ? ಇಲ್ಲಿದೆ ಟ್ರಿಕ್ಸ್

advertisement

ಇಂದು ಕೃಷಿಯಲ್ಲಿ ಹೆಚ್ಚು ಪ್ರಸಿದ್ಧಿ ಯಾಗಿರುವ ಕೃಷಿಯೆಂದರೆ ಅಡಿಕೆ ಕೃಷಿ‌. ಹೆಚ್ಚಿನ‌ ರೈತರು‌ ಇತರ ಕೃಷಿಯನ್ನು ಬಿಟ್ಟು ಅಡಿಕೆ,ಬಾಳೆ ಇತ್ಯಾದಿಗಳ ತೋಟ ಮಾಡುತ್ತಿದ್ದಾರೆ. ಯಾಕಂದರೆ ಅಡಿಕೆಗೆ ಮಾರುಕಟ್ಟೆ ಯಲ್ಲಿ ಹೆಚ್ಚಿನ ಬೆಲೆ ಇದ್ದು , ಇಂದು ಹೆಚ್ಚಿನ ಧಾರಣೆಯನ್ನು ಉಳಿಸಿಕೊಂಡು ಬಂದಿದೆ. ಹಾಗೆಯೇ ಅಡಿಕೆ ತೋಟದಲ್ಲಿ ಇತರ ಉಪ ಬೆಳೆಯನ್ನು ಸಹ ಬೆಳೆಯ ಬಹುದಾಗಿದೆ. ಹಾಗಾಗಿ ಅಡಿಕೆ ಜೊತೆಗೆ ರೈತರು ಬಾಳೆ, ಕೋಕೊ, ಕರಿಮೆಣಸು ಬಳ್ಳಿ ಇತ್ಯಾದಿ ಬೆಳೆಯುವ ಮೂಲಕ ಲಾಭ ಗಳಿಸುತ್ತಿದ್ದಾರೆ.

ಕಡಿಮೆ ನೀರು ಖರ್ಚು

ಇಲ್ಲೊಬ್ಬ ರೈತರು ಅಡಿಕೆಗೆ ಕಡಿಮೆ ಖರ್ಚಿನ ನೀರನ್ನು ಉಪಯೋಗಿ ಸುತ್ತಿದ್ದಾರೆ. ಹೇಗೆಂದರೆ ಅಡಿಕೆ ತೋಟದಲ್ಲಿ ಬೀಳುವ ಗರಿ, ಕಡ್ಡಿ ಸೊಪ್ಪು, ತರಗೆಲೆ, ಸೋಗೆ ಇತ್ಯಾದಿಯನ್ನು ತೋಟದಲ್ಲಿಯೇ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ತೋಟದಲ್ಲಿಯೇ ನೈಸರ್ಗಿಕ ಮುಚ್ಚಿಗೆ ಅಳವಡಿಸಿಕೊಂಡು ಈಡೀ ತೋಟದಲ್ಲಿ ಸೋಗೆ,ಸೊಪ್ಪು ಅಡಿಕೆ ಬೆಳೆದ ನೆಲದಲ್ಲಿ ಹಾಕುವ ಮೂಲಕ ನೀರು ಮಣ್ಣೊಳಗೆ ಇಂಗುವಂತೆ ಮಾಡಿದ್ದಾರೆ. ಇದರಿಂದ ನೀರು ಕಡಿಮೆ ಬಿಟ್ಟರು ಪೂರ್ತಿ ಪ್ರಮಾಣದ ನೀರನ್ನು ಬೇರುಗಳು ಹೀರಿ ಕೊಳ್ಳುತ್ತವೆ ಎಂದು ರೈತರು ಸಲಹೆ ನೀಡಿದ್ದಾರೆ.

Image Source: YT-Super Napier

advertisement

ಉಪಯೋಗ ಏನು?

  • ಹೀಗೆ ಮಾಡುವುದರಿಂದ ಕಳೆಗಳು ಬೆಳೆಯುದಿಲ್ಲ
  • ನೀರು ಕಡಿಮೆ ಪ್ರಮಾಣದಲ್ಲಿ ಸಾಕು
  • ಕಳೆನಾಶಕ ಸಿಂಪಡಣೆ ಮಾಡಬೇಕಿಲ್ಲ
  • ಸೂರ್ಯನ ತಾಪಮಾನ ಹೆಚ್ಚಾದರೂ ಗಿಡಗಳಿಗೆ ತೊಂದರೆ ಆಗುವುದಿಲ್ಲ
  • ಬೇರುಗಳು ಮತ್ತಷ್ಟು ಅಭಿವೃದ್ಧಿ ಯಾಗಲಿದೆ.

ಈ ಸಲಹೆ ನೀಡಿದ್ದಾರೆ

ಇಲ್ಲಿ ರೈತನು ಸಾವಯವ ಕೃಷಿ ಮಾಡುವ ಮೂಲಕ ಹೆಚ್ಚು ಲಾಭ ಗಳಿಸಿದ್ದಾರೆ. ಯಾವುದೇ ರೀತಿ ಕಳೆನಾಶಕ ಬಳಸ ಬಾರದು ಎಂದು ಸಲಹೆ‌ನೀಡಿದ್ದಾರೆ‌.ಹೆಚ್ಚಿನ ರೈತರು ಬಿಸಿಲು ತಡೆಗಟ್ಟಲು ಪ್ಲಾಸ್ಟಿಕ್ ‌ಕವರ್ ಗಳನ್ನು ಗಿಡಗಳಿಗೆ ಬಳಕೆ ಮಾಡುತ್ತಾರೆ. ಆದರೆ ಇದು ತಪ್ಪು ಗಿಡಗಳು ಉಸಿರಾಡಬೇಕು. ತಮ್ಮ ಆಹಾರ ತಾವೇ ತಯಾರಿಸಬೇಕು‌‌‌‌. ಹಾಗಾಗಿ ಸೂರ್ಯನ ಬೆಳಕು,ಗಾಳಿ,ನೀರು ಇತ್ಯಾದಿ ಸರಿಪ್ರಮಾಣದಲ್ಲಿ ದೊರೆಯಬೇಕು ಎಂದಿದ್ದಾರೆ.ಮನೆಯಲ್ಲೆ ದನದ ಗೊಬ್ಬರ, ಒಣಗಿದ ಎಲೆ ಇತ್ಯಾದಿ ಬಳಸಿ ಗೊಬ್ಬರ ತಯಾರಿ ಮಾಡಬೇಕು ಎಂದು ಸಲಹೆ ನೀಡಿದ್ದಾರೆ.

ಒಟ್ಟಿನಲ್ಲಿ ಅಡಿಕೆ ಕೃಷಿಯಲ್ಲಿ ರೈತನು ಸರಿಯಾದ ವಿಧಾನ ಅಳವಡಿಸಿ ಕೊಂಡರೆ ಹೆಚ್ಚು ಇಳುವರಿಯ ಜೊತೆಗೆ ಲಾಭವು ಗಳಿಸಬಹುದು.

advertisement

Leave A Reply

Your email address will not be published.