Karnataka Times
Trending Stories, Viral News, Gossips & Everything in Kannada

HSRP: ಇದುವರೆಗೂ HSRP ಹಾಕದ ಇಂತಹ ವಾಹನಗಳಿಗೆ ಹೊಸ ಸೂಚನೆ

advertisement

ಇಂದು ವಾಹನ ಸುರಕ್ಷತೆ ದೃಷ್ಟಿಯಿಂದ ಸಾರಿಗೆ ಇಲಾಖೆಯು ಹಲವು ರೀತಿಯ ನೀತಿ ನಿಯಮಗಳನ್ನು ಜಾರಿಗೆ ತರುತ್ತಲೇ ಇರುತ್ತದೆ. ಅದೇ ರೀತಿ ಹಳೆಯ ವಾಹನಗಳಿಗೆ ಅತಿ ಸುರಕ್ಷಿತ ಎಚ್ ಎಸ್ ಅರ್ ಪಿ (HSRP) ನೋಂದಣಿ ಫಲಕ ಕಡ್ಡಾಯವಾಗಿ ಬೇಕು ಎಂದು ಸಾರಿಗೆ ಇಲಾಖೆಯು ಈಗಾಗಲೇ ವಾಹನ ಸವಾರರಿಗೆ ಹಲವು ಭಾರಿ ಮನವಿ ಮಾಡಿದೆ. ಹೊಸ ವಾಹನ ಖರೀದಿ ಮಾಡಿದ್ದರೆ ಈ ನೋಂದಣಿ ಫಲಕ ಬಳಕೆ ಮಾಡುವುದೇನೋ ಸುಲಭ ಆದರೆ ತೀರ ಹಳೆಯ ವಾಹನಗಳಿಗೆ ‌ ಇದೀಗ ಸಂಕಷ್ಟ ಎದುರಾಗಿದೆ.

ಇನ್ನು ಕೂಡ ನೋಂದಣಿ ಬಾಕಿ:

ಸರಕಾರ ಈ ಬಗ್ಗೆ ಅನೇಕ ಸಲ ಕಾಲಾವಕಾಶ ನೀಡಿದ್ದರೂ ವಾಹನ ಸವಾರರು ಈ ಬಗ್ಗೆ ಪೂರ್ತಿ ನಿರ್ಲಕ್ಷ್ಯ ತೋರುತ್ತಿದ್ದಾರೆ. ಎಚ್​ಎಸ್​ಆರ್​ಪಿ (HSRP) ಅಳವಡಿಕೆ ಮಾಡಲು ಅವಧಿಯನ್ನು ಎರಡು ಬಾರಿ ವಿಸ್ತರಣೆ ಮಾಡಿದ್ದು ಇದೀಗ ಮೇ 31 ಕ್ಕೆ ಅವಧಿ ಕೊನೆಗೊಳ್ಳಲಿದ್ದು ನಂತರದಲ್ಲಿ ಸಮಯ ವಿಸ್ತರಣೆ ಆಗುವ ಸಾಧ್ಯತೆ ‌ಕಡಿಮೆ ಎನ್ನಬಹುದು.

ಕಡ್ಡಾಯ ಮಾಡಬೇಕು:

 

Image Source: Spinny

 

2019 ರ ಏಪ್ರಿಲ್ 1 ರ ಮೊದಲು ನೋಂದಣಿಯಾದ ಎಲ್ಲಾ ವಾಹನಗಳು ಎಚ್‌ಎಸ್‌ಆರ್‌ಪಿ ಅಳವಡಿಸುವುದನ್ನು ಕಡ್ಡಾಯಗೊಳಿಸಲಾಗಿದೆ.ಸಾರಿಗೆ ಮತ್ತು ರಸ್ತೆ ಸುರಕ್ಷತೆ ಆಯುಕ್ತರು ಕೂಡ ಈ ಬಗ್ಗೆ ಸುತ್ತೋಲೆ ಯನ್ನು ಹೊರಡಿಸಿದ್ದು ಹೀಗಾಗಿ ಎಲ್ಲ ವಾಹನಗಳಿಗೆ ಅವಧಿಯ ಮೊದಲು ಸುರಕ್ಷಿತ ನೋಂದಣಿ ಫಲಕವನ್ನು ಕಡ್ಡಾಯವಾಗಿ ಅಳವಡಿ ಸಬೇಕು ಎಂದು ಸಾರಿಗೆ ಇಲಾಖೆ ತಿಳಿಸಿದೆ.ಹೊಸದಾಗಿ ವಾಹನ ಖರೀದಿ‌ ಮಾಡುವವರಿಗೆ ರಿಲೀಫ್ ಆಗಲಿದ್ದು ಹಾಗೆಯೇ ವಾಹನ ಖರೀದಿ ಮಾಡಿ ಒಂದು ವರ್ಷ ಕೂಡ ಆಗಿರದಿದ್ದರೆ ವಾಹನ ಖರೀದಿ ಮಾಡಿದವರಿಗೆ ಶೋ ರೂಂ ನವರೆ ನಂಬರ್ ಪ್ಲೇಟ್ ಹಾಕಿಸಿಕೊಡಬೇಕು ಎಂಬ ನಿಯಮ ಮಾಡಲಾಗಿದೆ.

advertisement

ದಂಡ ವಿಧಿಸಲಿದೆ:

ಮೇ 31ರ ಬಳಿಕ ಈ ನೋಂದಣಿ ಆಗದಿದ್ದರೆ ಅಂತಹ ವಾಹನ ಸವಾರರಿಗೆ 500-1,500 ವರೆಗೆ ದಂಡ ವಿಧಿಸಲಾಗುವುದು ಹಾಗೂ ಲೈಸೆನ್ಸ್‌ (License) ಕೂಡ ರದ್ದು ಮಾಡಲಾಗುತ್ತದೆ ಎಂದು ಸಾರಿಗೆ ಇಲಾಖೆ ಈಗಾಗಲೇ ತಿಳಿಸಿದೆ.

ಹಳೆಯ ವಾಹನಗಳಿಗೆ ಸಂಕಷ್ಟ:

ಇದೀಗ ಕೆಲವೊಂದು ಹಳೆಯ ವಾಹನಗಳಿಗೆ ನಂಬರ್ ಪ್ಲೇಟ್ ಅಳವಡಿಕೆ ಮಾಡಿಕೊಳ್ಳುವುದು ಬಹಳ ಕಷ್ಟವಾಗಿದೆ.ಹಳೆಯ ಮಾಡೆಲ್​​​ಗಳ‌ ವಾಹನಗಳ ತಯಾರಿಕಾ ಕಂಪನಿಗಳು ಕೆಲವೊಂದು ಸ್ಥಗಿತ ಆಗಿರುವ ನಿಟ್ಟಿನಲ್ಲಿ ಹೀಗಾಗಿ ಆ ವಾಹನಗಳ ಮಾಲೀಕರಿಗೆ ಎಚ್‌ಎಸ್‌ಆರ್‌ಪಿ ಅರ್ಜಿ ಸಲ್ಲಿಸಲು ಆಯ್ಕೆಯೇ ಇಲ್ಲದಂತೆ ಆಗಿದೆ. ಇದೀಗ ಈ ಸಮಸ್ಯೆಗೆ ಸಂಬಂಧಿಸಿ ದಂತೆ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯಕ್ಕೆ ಪತ್ರ ಬರೆಯಲು ಕರ್ನಾಟಕ ಸಾರಿಗೆ ಇಲಾಖೆ ಮುಂದಾಗಿದೆ.

ಈ ಬಗ್ಗೆ ತಿಳಿಸಿದೆ:

ರಾಜ್ಯ ಸಾರಿಗೆ ಇಲಾಖೆಯು ಕೂಡ ಈ ಬಗ್ಗೆ ‌ ಹಳೆಯ ವಾಹನ ಮಾಲೀಕರಿಂದ ಮನವಿಗಳನ್ನು ಸ್ವೀಕಾರ ಮಾಡಿದ್ದು ಹಳೆಯ ವಾಹನಗಳಿಗೆ ಯಾವುದೇ ಆಯ್ಕೆಗಳಿಲ್ಲದ ಕಾರಣ ಅವರಿಗೆ ಎಚ್​ಎಸ್​ಆರ್​ಪಿ (HSRP) ಅಳವಡಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ‌ಈ ಪರಿಸ್ಥಿತಿಯನ್ನು ಮನಗಂಡು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯಕ್ಕೆ ಪತ್ರ ಬರೆಯಲು ನಿರ್ಧರಿಸಿದ್ದೇವೆ ಎಂದು ಕರ್ನಾಟಕ ಸಾರಿಗೆ ಇಲಾಖೆಯ ಹೆಚ್ಚುವರಿ ಆಯುಕ್ತ ಮಲ್ಲಿಕಾರ್ಜುನ ತಿಳಿಸಿದ್ದಾರೆ. ಅಂಥ ಹಳೆಯ ವಾಹನಗಳಿಗೆ ನಂಬರ್​ ಪ್ಲೇಟ್ ಒದಗಿಸಲು ಇತರ ಕಂಪನಿಗಳಿಗೆ ಅವಕಾಶ ನೀಡುವಂತೆ ಕೊರುತ್ತೇವೆ ಎಂದಿದ್ದಾರೆ.

advertisement

Leave A Reply

Your email address will not be published.