Karnataka Times
Trending Stories, Viral News, Gossips & Everything in Kannada

Rs 100 Note: 100 ರೂಪಾಯಿ ನೋಟ್ ಬಗ್ಗೆ ರಿಸರ್ವ್ ಬ್ಯಾಂಕ್ ಹೊಸ ಘೋಷಣೆ!

advertisement

ಇತ್ತೀಚಿನ ದಿನಗಳಲ್ಲಿ ಸೋಶಿಯಲ್ ಮೀಡಿಯಾಗಳ ತುಂಬೆಲ್ಲ ನೂರು ರೂಪಾಯಿ ಹಳೆಯ ನೋಟುಗಳನ್ನು ಆರ್‌ಬಿಐ ಹಿಂಪಡೆಯಲ್ಲಿರುವ ಮಾಹಿತಿ ವೈರಲಾಗುತ್ತಿದೆ. 2016ರಲ್ಲಿ ಹಳೆಯ 500 ಮತ್ತು 1000 ರೂಪಾಯಿ ನೋಟುಗಳ ಡಿಮಾನಿಟೈಸೇಷನ್ (Demonetization) ಆದ ಹಾಗೆ ನೂರು ರೂಪಾಯಿಯ ಹಳೆಯ ನೋಟುಗಳನ್ನು RBI ಮೇ 31, 2024ರ ಒಳಗೆ ಹಿಂಬಡಿಯಲ್ಲಿದ್ದಾರಂತೆ. ಅಷ್ಟಕ್ಕೂ ಆರ್ಬಿಐ ಹೊರಡಿಸಿರುವ ಸೂಚನೆಗಳೇನು? ನಿಜಕ್ಕೂ ನೂರು ರೂಪಾಯಿ ನೋಟುಗಳು (Rs 100 Note) ಬ್ಯಾನ್ ಆಗಲಿದೆಯೇ? ಎಂಬ ಅಸಲಿ ವಿಚಾರಗಳನ್ನು ಈ ಪುಟದ ಮುಖಾಂತರ ತಿಳಿದುಕೊಳ್ಳಿ.

100 ಹಳೆಯ ನೋಟಿನ ಚಲಾವಣೆ ಸಂಪೂರ್ಣ ಸ್ಥಗಿತ?

 

Image Source: Zee Business

 

ಸಾಮಾಜಿಕ ಮಾಧ್ಯಮಗಳಲ್ಲಿ ಒಂದಾದ Instagram ನಲ್ಲಿ @nawababrar131 ಎಂಬ ಬಳಕೆದಾರರು ಆರ್‌ಬಿಐನಿಂದ ಹೊರಡಿಸಿರುವ ಮಾಹಿತಿಯೊಂದನ್ನು ಪೋಸ್ಟ್ ಮಾಡಿದ್ದಾರೆ. ಅದರ ಅನ್ವಯ ಮೇ 31ರ ಕಡೆಯ ದಿನಾಂಕವನ್ನು ನಿಗದಿಪಡಿಸಿ RBI ಎಲ್ಲಾ ಹಳೆಯ 100ರ ನೋಟುಗಳನ್ನು (Old Rs 100 Note) ಹಿಂಪಡೆದು, ಅದರ ಚಲಾವಣೆಯನ್ನು ಸಂಪೂರ್ಣ ಭಾರತದಾತ್ಯಂತ ಸ್ಥಗಿತಗೊಳಿಸಲಿದ್ದಾರಂತೆ. ಹೀಗಾಗಿ ನಿಮ್ಮ ಬಳಿ ನೂರು ರೂಪಾಯಿ ನೋಟುಗಳಿದ್ದರೆ ಮೇ 31ರ ಒಳಗೆ ಬದಲಿಸಿಕೊಳ್ಳಬೇಕೆಂಬ ಪೋಸ್ಟ್ ಇದಾಗಿದೆ.

 

advertisement

Image Source: India TV

 

ಈ ವೈರಲ್ ಸುದ್ದಿಯ ಅಸಲಿಯತ್ತೇನು?

ಸೋಶಿಯಲ್ ಮೀಡಿಯಾದಲ್ಲಿ (Social media) ಈ ಪೋಸ್ಟ್ ಬಾರಿ ಆಗುತ್ತಾ ಇದ್ದ ಹಾಗೆ ಜನರೆಲ್ಲರೂ ತಮ್ಮ ಬಳಿ ಇರುವಂತಹ ನೂರು ರೂಪಾಯಿ ನೋಟುಗಳನ್ನು ಬದಲಿಸಿಕೊಳ್ಳುವುದ್ಹೇಗೆ ಎಂಬ ಚಿಂತೆಗೀಡಾಗಿದ್ದರು. ಆದರೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ (RBI) ಯಾವುದೇ ಅಫೀಸಿಯಲ್ ವೆಬ್ಸೈಟ್ನಲ್ಲಿಯೂ (Official Website) ಈ ಕುರಿತಾದ ಮಾಹಿತಿಯನ್ನು ಹಾಕಿಲ್ಲ.

ನೂರು ರೂಪಾಯಿ (Rs 100 Note) ನೋಟ್ ಬ್ಯಾನ್ ಆಗುವುದು ಕೇವಲ ಗಾಳಿ ಸುದ್ದಿಯಾಗಿದೆ, ಕೆಲ ಸೋಶಿಯಲ್ ಮೀಡಿಯಾ ಬಳಕೆದಾರರು ಇಲ್ಲಸಲ್ಲದ ಸುದ್ದಿಗಳನ್ನು ಹಬ್ಬಿಸಿದ್ದಾರೆ ಹೊರತು RBI ಹಳೆಯ ನೂರು ರೂಪಾಯಿ ನೋಟುಗಳನ್ನು ಹಿಂಪಡೆಯುವ (Withdrawal of 100 Rupee Old Note) ಅಥವಾ ಸ್ಥಗಿತಗೊಳಿಸುವ ಯಾವುದೇ ನಿಯಮಗಳನ್ನು ಜಾರಿಗೊಳಿಸಿಲ್ಲ.

advertisement

Leave A Reply

Your email address will not be published.