Karnataka Times
Trending Stories, Viral News, Gossips & Everything in Kannada

Supreme Court: ದೇಶದ ಎಲ್ಲಾ ಗರ್ಭಿಣಿ ಮಹಿಳೆಯರಿಗೆ ಸಿಹಿಸುದ್ದಿ! ಸುಪ್ರೀಂ ಕೋರ್ಟ್ ಹೊಸ ತೀರ್ಪು

advertisement

ಹೆಣ್ಣು ಮಕ್ಕಳು ಈ ಬದಲಾದ ಕಾಲಘಟ್ಟದಲ್ಲಿ ಎಲ್ಲ ಕ್ಷೇತ್ರದಲ್ಲಿಯೂ ಸಾಧನೆ ಮಾಡುತ್ತಿದ್ದಾರೆ.  ಹಿಂದೆಲ್ಲ ಮದುವೆ, ಮನೆ, ಗಂಡ, ಮಕ್ಕಳು ಎಂದು ಇರುತ್ತಿದ್ದ ಕಾಲ ಈಗ ಬದಲಾಗಿದೆ. ಹೆಣ್ಣು ಮಕ್ಕಳು ಕೂಡ ಗಂಡಿಗೆ ಸಮಾನವಾಗಿ ಎಲ್ಲ ಕ್ಷೇತ್ರದಲ್ಲಿಯೂ ತಮ್ಮ ಇರುವಿಕೆ ತಿಳಿಸುತ್ತಿದ್ದಾರೆ. ಆದರೆ ಮದುವೆ ಆದ ಬಳಿಕ ಮಗು ಹುಟ್ಟಿ ಅದರ ಪಾಲನೆಗೆ ಕೂಡ ಸಮಯ ವ್ಯಯಿಸುವುದು ಅಗತ್ಯವಿದ್ದು ಉದ್ಯೋಗಸ್ಥ ಮಹಿಳೆಯರ ಪರವಾಗಿ ಕೇಂದ್ರದ ಸುಪ್ರೀಂ ಕೋರ್ಟ್ (Supreme Court) ಕಡ್ಡಾಯ ಆದೇಶ ಒಂದನ್ನು ಹೊರಡಿಸಿದ್ದು ಇದು ಅನೇಕರಿಗೆ ಬಹಳ ಅನುಕೂಲ ಆಗಿದೆ ಎಂದು ಹೇಳಬಹುದು.

ಇಂದು ಕುಟುಂಬ ಎಂಬ ಪರಿಕಲ್ಪನೆ ಜಾರಿಯಲ್ಲಿ ಇರುವಾಗ ಪುರುಷ ಮಾತ್ರ ದುಡಿದರೆ ಸಂಸಾರದ ಹೊಣೆ ಹೊರಲು ಸಾಧ್ಯ ಆಗಲಾರದು. ಹಾಗಾಗಿ ಸತಿ- ಪತಿಗಳು ಇಬ್ಬರು ಕೂಡ ಅಗತ್ಯವಾಗಿ ದುಡಿಯಲೇ ಬೇಕಾಗಿತ್ತದೆ. ಆದರೆ ಮಗುವಾದ ಬಳಿಕ ಕೂಡ ಎಳೆ ಶಿಶುವನ್ನು ಬಿಟ್ಟು ಕೆಲಸಮಾಡುವುದು ಕೂಡ ಕಷ್ಟ. ಭಾರತೀಯ ಸಂವಿಧಾನದಲ್ಲಿ ತಾಯಿಗೆ ನೀಡುವ ಶಿಶುಪಾಲನಾ ರಜೆ ಬಗ್ಗೆ ನೂತನ ಆದೇಶ ಹೊರಡಿಸಲಾಗಿದೆ.

ಯಾವುದು ಆ ಆದೇಶ

ಭಾರತದಲ್ಲಿ ಉದ್ಯೋಗಸ್ಥ ಮಹಿಳೆಯರಿಗೆ ತಾವು ಗರ್ಭಿಣಿಯಗಿದ್ದಾಗ ಮತ್ತು ಮಗು ಜನಿಸಿದ ಬಳಿಕ ಇಂತಿಷ್ಟು ಪ್ರಮಾಣದಲ್ಲಿ ರಜೆ ಪಡೆಯುವ ಅವಕಾಶ ನೀಡಲಾಗಿದೆ. ಅದರ ಪ್ರಕಾರ ಮಗುವಿನ ಪಾಲನೆ ಪೋಷಣೆ ಮಾಡುವ ಜೊತೆಗೆ ರಜೆಯನ್ನು ಕಳೆಯಬಹುದಾಗಿದೆ.  ಈ ಅವಧಿಯಲ್ಲಿ ಕಡ್ಡಾಯವಾಗಿ ರಜೆ ನೀಡಲೆ ಬೇಕಿದ್ದು ಇದೀಗ ಅದಕ್ಕೆ ಕೆಲವು ಅಂಶಗಳು ಕೂಡ ಸೇರ್ಪಡೆ ಆಗಿದೆ. ಹಾಗಾಗಿ ಮಹಿಳೆಯರಿಗೆ ಮಗುವಿನ ಆರೈಕೆಗೆ ಹೆಚ್ಚಿನ ಕಾಲಾವಕಾಶ ಸಿಕ್ಕಂತಾಗಲಿದೆ.

advertisement

Image Source: IndiaToday

2017ರಲ್ಲಿ ಮಾತೆಯರಿಗೆ ಶಿಶುಪಾಲನಾ ರಜೆಯ ಅವಧಿಯನ್ನು ಪರಿಶೀಲನೆ ಮಾಡಲಾಗಿತ್ತು ಆಗ ಕೆಲವು ರಜಾ ಅವಧಿಯಲ್ಲಿ ವೇತನ ಸಂಬಂಧ ಪಟ್ಟ ನಿಯಮ ಕೂಡ ಬದಲಾಯಿಸಲಾಗಿತ್ತು‌. ಇದೀಗ ಮತ್ತೆ ನಿಯಮ ಬದಲಾಯಿಸಲಾಗುತ್ತಿದೆ. ಕಡ್ಡಾಯ 180ದಿನಗಳ ಹೆರಿಗೆ ರಜೆ ನೀಡಲೇ ಬೇಕು ಎಂದು ತಿಳಿಸಲಾಗಿದೆ. ಅದರ ಜೊತೆಗೆ 2ವರ್ಷಗಳ ಶಿಶುಪಾಲನಾ ರಜೆಯನ್ನು ಕೂಡ ಘೋಷಣೆ ಮಾಡಲಾಗಿದೆ. ಎರಡು ವರ್ಷಗಳ ಶಿಶುಪಾಲನಾ ರಜೆ ನೀಡುವುದು ಮಹಿಳಾ ಉದ್ಯೋಗಿಗಳ ಸಂವಿಧಾನಿಕ ಹಕ್ಕು ಎಂದು ಪ್ರತಿಪಾದಿಸಲಾಗುತ್ತಿದೆ.

ಸುಪ್ರೀಂ ಕೋರ್ಟ್ (Supreme Court) ನಿಂದಲೇ ಸ್ಪಷ್ಟನೆ

ಈ ಬಗ್ಗೆ ಇತ್ತೀಚಿನ ದಿನದಲ್ಲಿ ಗೊಂದಲ ಉಂಟಾಗಿದ್ದು ತಾಯಂದಿರ ಶಿಶುಪಾಲನಾ ರಜೆಯನ್ನು ಮರು ಪರಿಶೀಲನೆ ಮಾಡುವಂತೆ ಪರಮರ್ಶೆಗಾಗಿ ಸಮಿತಿ ಸ್ಥಾಪಿಸುವಂತೆ ರಾಜ್ಯ ನ್ಯಾಯಾಲಯಗಳಿಗೆ ಭಾರತದ ಸುಪ್ರೀಂ ಕೋರ್ಟ್ ಆದೇಶ ನೀಡಿದೆ. ಅದರಲ್ಲಿಯೇ ಮಹಿಳೆಯರಿಗೆ ಶಿಶುಪಾಲನಾ ರಜೆ ನೀಡುವುದು ಸಾಂವಿಧಾನಿಕ ಹಕ್ಕು ಎಂದು ಪ್ರತಿಪಾದಿಸಲಾಗುತ್ತಿದೆ.

advertisement

Leave A Reply

Your email address will not be published.