Karnataka Times
Trending Stories, Viral News, Gossips & Everything in Kannada

Team India T20 Captain: ಹಾರ್ದಿಕ್ ಪಾಂಡ್ಯ ಬಿಟ್ಟು ಯಾರಾಗ್ತಾರೆ ಭಾರತ ಟಿ20 ವಿಶ್ವಕಪ್ ನಾಯಕ?

advertisement

ಇದೀಗ ಭಾರತದ ಕ್ರಿಕೇಟ್ ತಂಡದಲ್ಲಿ ಮುಂದಿನ ತಿಂಗಳು ಸೌತ್ ಆಫ್ರಿಕಾ ಸರಣಿಗೆ ಭಾರತ ಟಿ20 ತಂಡದ ನಾಯಕ (Team India T20 Captain) ಯಾರು ಅನ್ನೋ ಪ್ರಶ್ನೆ ಹುಟ್ಟಿಕೊಂಡಿದೆ. ಈ ಮೊದಲು ಹಾರ್ದಿಕ್ ಪಾಂಡ್ಯ ಇದ್ದರು. ಅದರೆ ಅವರಿಗ ಇಂಜುರಿ ಆಗಿ ಆಟದಿಂದ ಹಿಂದೆ ಸರಿದಿದ್ದಾರೆ. ಅವರ ಸ್ಥಾನಕ್ಕೆ ಹೊಸ ನಾಯಕನನ್ನ ನೇಮಿಸಬೇಕು. ಈಗ ಯಾರು ಟಿ20 ವಿಶ್ವಕಪ್ನಲ್ಲೂ ತಂಡವನ್ನ ಲೀಡ್ ಮಾಡ್ತಾರೆ ಅನ್ನೋ ಪ್ರಶ್ನೆ ಎಲ್ಲರಲ್ಲಿ ಹುಟ್ಟಿಕೊಂಡಿದೆ.

ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಇಂಜುರಿ ಆಗಿರುವುದು ಟೀಂ ಇಂಡಿಯಾಗೆ ಭಾರಿ ತಲೆ ನೋವಾಗಿದೆ ಪರಿಣಮಿಸಿದೆ. ವಿಶ್ವಕಪ್ನಲ್ಲಿ ಬಾಂಗ್ಲಾದೇಶ ವಿರುದ್ಧದ ಪಂದ್ಯದ ವೇಳೆ ಪಾದದ ನೋವಿಗೆ ತುತ್ತಾಗಿ ಟೂರ್ನಿಯಿಂದಲೇ ಹೊರಬಿದ್ದಿದ್ದ ಪಾಂಡ್ಯ ಅನುಪಸ್ಥಿತಿ ವರ್ಲ್ಡ್‌ಕಪ್ ಫೈನಲ್ನಲ್ಲೂ ಭಾರತಕ್ಕೆ ಬಹಳ ಕಾಡಿತ್ತು. ಹಾರ್ದಿಕ್ ಪ್ಲೇಯಿಂಗ್-11ನಲ್ಲಿ ಇದ್ದಿದ್ದರೆ ಫಲಿತಾಂಶವೇ ಬೇರೆ ಆಗ್ತಿತ್ತು. ಅನ್ನೊದು ಹಲವರ ಅಭಿಪ್ರಾಯ. ಆದ್ರೆ ಅದು ಬಿಡಿ, ಮುಗಿದು ಹೋದ ಕಥೆ. ಈಗ ಪಾಂಡ್ಯ ಕೂಡ ಐಪಿಎಲ್‌ವರೆಗೂ ಫಿಟ್ ಆಗಲ್ಲ ಅನ್ನೋ ಸುದ್ದಿ ಕೂಡ ಹೊರಬಿದ್ದಿದ್ದು ಕ್ರಿಕೇಟ್ ಪ್ರೀಯರ ಹೃದಯ ಓಡೆದಂತಾಗಿದೆ.

ಈಗಾಗಲೇ ಪಾದದ ನೋವಿನಿಂದ ಬಳಲುತ್ತಿರುವ ಹಾರ್ದಿಕ್ ಪಾಂಡ್ಯ (Hardik Pandya) ಫುಲ್ ಫಿಟ್ನೆಸ್ ಸಾಧಿಸಲು ಇನ್ನು ಮೂರು ತಿಂಗಳು ಬೇಕು ಅನ್ನೋ ಸುದ್ದಿ ಹೊರಬಿದ್ದಿದೆ. ಅಲ್ಲಿಗೆ ಪಾಂಡ್ಯ ಐಪಿಎಲ್‌ (IPL) ನವರೆಗೂ ಟೀಂ ಇಂಡಿಯಾ ಪರ ಯಾವ್ದೇ ಮ್ಯಾಚ್ ಆಡಲ್ಲ ಎಂದು ಕೇಳಿ ಬರ್ತಿದೆ. ಫುಲ್ ಫಿಟ್ ಆಗಿಯೇ ಐಪಿಎಲ್‌ಗೆ ಕಣಕ್ಕಿಳಿಯಲಿದ್ದಾರಂತೆ. ಸದ್ಯ ಅವರ ಟಾರ್ಗೆಟ್ ಸಹ ಕಲರ್ ಫುಲ್ ಟೂರ್ನಿಯೇ ಆಗಿರುವುದರಿಂದ ಅದಕ್ಕಾಗಿ ನಿಧಾನವಾಗಿ ತಯಾರಿ ಮಾಡಿಕೊಳ್ತಿದ್ದಾರೆ ಎಂಬ ಸುದ್ಧಿ ಎಲ್ಲೆಡೆ ವೈರಲ್ ಆಗಿದೆ.

ಟಿ20 ವಿಶ್ವಕಪ್‌ ಗೆ ಯಾರಾಗುತ್ತಾರೆ ಭಾರತದ ಟಿ20 ನಾಯಕ..? 

advertisement

ಈಗಾಗಲೇ ಹೇಳಿರುವ ಹಾಗೆ ಹಾರ್ದಿಕ್ ಪಾಂಡ್ಯ ಅನುಪಸ್ಥಿತಿಯಲ್ಲಿ ಆಸ್ಟ್ರೇಲಿಯಾ ಟಿ20 ಸರಣಿಯಲ್ಲಿ ಸೂರ್ಯಕುಮಾರ್ ಯಾದವ್ ಟೀಂ ಇಂಡಿಯಾವನ್ನ ಲೀಡ್ ಮಾಡ್ತಿದ್ದಾರೆ. ಇದಾದ ಬಳಿಕ ಭಾರತ ತಂಡ, ಸೌತ್ ಆಫ್ರಿಕಾ, ಐರ್ಲೆಂಡ್ ಮತ್ತು ನ್ಯೂಜಿಲೆಂಡ್ ವಿರುದ್ಧ ಟಿ20 ಸರಣಿ ಆಡಲಿದೆ. ಆಗ ಯಾರು ಟಿ20 ಕ್ಯಾಪ್ಟನ್ ಅನ್ನೋ ಪ್ರಶ್ನೆ ಎದ್ದಿದೆ. ಇದರ ಜೊತೆ ಈ ಮೂರು ಸರಣಿಗೆ ನಾಯಕನಾದವನೇ ಜೂನ್‌ನಲ್ಲಿ ನಡೆಯೋ ಟಿ20 ವಿಶ್ವಕಪ್ನಲ್ಲೂ ತಂಡವನ್ನ ಮುನ್ನಡೆಸುತ್ತಾರಾ..? ಅಥವಾ ಹಾರ್ದಿಕ್ ಪಾಂಡ್ಯನೇ ನಾಯಕರಾಗುತ್ತಾರೋ ಅನ್ನೋ ಪ್ರಶ್ನೆ ಎಲ್ಲರನ್ನು ಕಾಡಿದೆ.

ರಾಹುಲ್-ಶ್ರೇಯಸ್ ನಡುವೆ ಜಿದ್ದಾಜಿದ್ದಿ?

ಟಿ20 ವಿಶ್ವಕಪ್ ಬಳಿಕ ಕೆಎಲ್ ರಾಹುಲ್ (KL Rahul) ಟಿ20 ಟೀಮ್ ನಲ್ಲಿಲ್ಲ. ಏಕದಿನ ವಿಶ್ವಕಪ್ ತಯಾರಿಗಾಗಿ ಅವರನ್ನ ಟಿ20 ಟೀಮ್ ನಿಂದ ಕೈಬಿಡಲಾಗಿದೆ ಅಂತ ಬಿಸಿಸಿಐ ಹೇಳಿತ್ತು. ಇನ್ನು ಶ್ರೇಯಸ್ ಅಯ್ಯರ್ (Shreyas Iyer) ಸಹ ಟಿ20 ತಂಡದಲ್ಲಿ ಇರಲಿಲ್ಲ. ಆದ್ರೂ ಆಸ್ಟ್ರೇಲಿಯಾ ವಿರುದ್ಧದ ಕೊನೆ ಎರಡು ಟಿ20 ಮ್ಯಾಚ್ಗೆ ಸೆಲೆಕ್ಟ್ ಆಗಿದ್ದು, ಅವರೇ ವೈಸ್ ಕ್ಯಾಪ್ಟನ್ ಆಗಿದ್ದರು. ಈಗ ಈ ಇಬ್ಬರಲ್ಲಿ ಒಬ್ಬರು ಭಾರತ ಟಿ20 ತಂಡದ ಖಾಯಂ ನಾಯಕ ಆಗ್ತಾರೆ ಅನ್ನೋ ಸುದ್ದಿಯೂ ಹರಿದಾಡ್ತಿದೆ. ಸದ್ಯ ಇಬ್ಬರು ಅದ್ಭುತ ಫಾರ್ಮ್ನಲ್ಲಿದ್ದು, ವಿಶ್ವಕಪ್ನಲ್ಲಿ ರನ್ ಹೊಳೆಯನ್ನೇ ಹರಿಸಿದ್ದಾರೆ. ಪದೇ ಪದೇ ಇಂಜುರಿಯಾಗೋ ಪಾಂಡ್ಯ ಬದಲು ಈ ಇಬ್ಬರಲ್ಲಿ ಒಬ್ಬರನ್ನ ಕ್ಯಾಪ್ಟನ್ ಮಾಡಲು ಬಿಸಿಸಿಐ ಮನಸ್ಸು ಮಾಡಿದೆ ಎಂಬ ಸುದ್ಧಿ ಹರಿದಾಡುತ್ತಿದೆ.

ಪಾಂಡ್ಯ ಇರಲ್ಲ ಇನ್ಯಾರು ಎಂಬುದೇ ಸೆಲೆಕ್ಟರ್ಸ್ ಗೆ ತಲೆ ನೋವು..!

ಕಳೆದ ವರ್ಷ ಟಿ20 ವಿಶ್ವಕಪ್ ಬಳಿಕ ಹಾರ್ದಿಕ್ ಪಾಂಡ್ಯ ಟಿ20 ತಂಡವನ್ನ ಲೀಡ್ ಮಾಡಿಕೊಂಡು ಬಂದಿದ್ದಾರೆ. ಅದರಲ್ಲಿ ಯಶಸ್ವಿಯೂ ಆಗಿದ್ದಾರೆ. ಆದ್ರೆ 2024ರ ಟಿ20 ವಿಶ್ವಕಪ್ ಹತ್ತಿರವಿರುವಾಗ ಇಂಜುರಿಯಾಗಿದ್ದಾರೆ. ಈಗ ಹೊಸ ನಾಯಕನ್ನ ನೇಮಿಸಿದ್ರೆ ಆತನನ್ನೇ ಟಿ20 ವಿಶ್ವಕಪ್‌ಗೂ ನಾಯಕನ್ನಾಗಿ ಮಾಡೋದಾ..? ಅಥವಾ ಪಾಂಡ್ಯ ರಿಟರ್ನ್ ಆದ್ಮೇಲೆ ಅವರಿಗೆ ಟಿ20 ಕ್ಯಾಪ್ಟನ್ಸಿ ನೀಡ್ಬೇಕಾ ಅನ್ನೋ ಗೊಂದಲವೂ ಸೆಲೆಕ್ಟರ್ಸ್ಗಿದೆ. ಇದೇ ಬಿಸಿಸಿಐಗೂ ತಲೆ ನೋವಾಗಿರೋದು. ಸದಾ ಫಿಟ್ನೆಸ್ ಕಾಪಾಡಿಕೊಳ್ಳದವರನ್ನ ಕ್ಯಾಪ್ಟನ್ ಮಾಡಬಾರದು ಅನ್ನೋ ಕನಿಷ್ಟ ಜ್ಞಾನವೂ ಬಿಸಿಸಿಐಗಿಲ್ಲ. ಒಟ್ನಲ್ಲಿ ಸದ್ಯ ಬಿಸಿಸಿಐಗೆ ಟಿ20 ವಿಶ್ವಕಪ್ ಟಾರ್ಗೆಟ್ ಆಗಿದ್ದು, ಅದಕ್ಕಾಗಿ ಈಗ ಯೋಚನೆ ಮಾಡಿ ಡಿಷಿಶನ್ ತೆಗೆದುಕೊಳ್ಳಲೇಬೇಕಾಗಿದೆ.

advertisement

Leave A Reply

Your email address will not be published.