Karnataka Times
Trending Stories, Viral News, Gossips & Everything in Kannada

Tiger: ನಾಯಿಯಂತೆ ಹುಲಿಗೆ ಚೈನ್ ಹಾಕಿ ಫೋಸ್ ಕೊಟ್ಟ ಪುಟ್ಟ ಬಾಲಕ! ಎದೆ ಝಲ್ ಎನಿಸುವ ದೃಶ್ಯ ವೈರಲ್!

advertisement

ಎಷ್ಟೋ ಬಾರಿ ಒಂದು ಸಣ್ಣ ನಾಯಿ ಮರಿ ಕುತ್ತಿಗೆಗೆ ಸರಪಳಿ ಹಾಕಿ ಅದನ್ನು ಹೊರಗಡೆ ಕರೆದುಕೊಂಡು ಹೋಗಲು ಕೂಡ ಭಯವಾಗುತ್ತದೆ ಅದರಲ್ಲೂ ಈ ಒಬ್ಬ ಪುಟ್ಟ ಬಾಲಕ ನಾಯಿಮರಿ ಅಂತೇಯೇ ದೊಡ್ಡದಾಗಿರುವ ಹುಲಿ (Tiger) ಒಂದಕ್ಕೆ ಸರಪಳಿ ಹಾಕಿ ಕರೆದುಕೊಂಡು ಹೋಗುತ್ತಿದ್ದಾನೆ. ಜೊತೆಗೆ ಮನೆ ತುಂಬಾ ಹುಲಿ ಓಡಾಡುತ್ತಿದೆ. ಇಂಥದೊಂದು ಎದೆ ಝಲ್ ಎನಿಸುವ ದೃಶ್ಯ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಮಿಲಿಯನ್ ಗಟ್ಟಲೆ ವೀಕ್ಷಣೆಯಾಗಿದೆ.

ಪಾಕಿಸ್ತಾನದ ಯೂಟ್ಯೂಬರ್ (Pakistan Youtuber) ಒಬ್ಬ ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ಪುಟ್ಟ ಮಗು ಒಂದು ಸಾಕಿದ ಹುಲಿಯೊಂದಿಗೆ ನಡೆದುಕೊಂಡು ಹೋಗುತ್ತಿದೆ. ಹುಲಿಯ ಕತ್ತಿಗೆ ಕಟ್ಟಿರುವ ಸರಪಳಿ ಹಿಡಿದು ಆ ಪುಟ್ಟ ಹುಡುಗ ನಡೆದುಕೊಂಡು ಬರುತ್ತಿದ್ದಾನೆ. ನೌಮನ್ ಹಸನ್ (Nouman Hassan) ಎನ್ನುವ ವ್ಯಕ್ತಿ ಇನ್ಸ್ಟಾಗ್ರಾಮ್ ನಲ್ಲಿ ಈ ಪೋಸ್ಟ್ ಹಂಚಿಕೊಂಡಿದ್ದಾರೆ. ಪೋಸ್ಟ್ ಹಂಚಿಕೊಂಡ ಕೇವಲ ನಾಲ್ಕು ದಿನಗಳಲ್ಲಿ ಈ ವಿಡಿಯೋವನ್ನು ಲಕ್ಷಾಂತರ ಮಂದಿ ವೀಕ್ಷಿಸಿದ್ದಾರೆ ಸಾಕಷ್ಟು ಕಮೆಂಟ್ಗಳು ಕೂಡ ಬಂದಿವೆ. ಕೆಲವರು ಮಗುವಿನ ಧೈರ್ಯಕ್ಕೆ ಶಹಬ್ಬಾಸ್ ಹೇಳಿದರೆ ಇನ್ನೂ ಕೆಲವರು ಮಕ್ಕಳ ಕೈಯಲ್ಲಿ ಈ ರೀತಿಯ ಸಾಹಸ ಮಾಡಿಸಬೇಡಿ ಎಂದು ಕಮೆಂಟ್ ಮಾಡಿದ್ದಾರೆ.

Nouman Hassan ಅವರ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪ್ರಾಣಿಗಳದ್ದೆ ಪೋಸ್ಟ್:

advertisement

ನೌಮನ್ ಹಸನ್ (Nouman Hassan) ಅವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವೈಯಕ್ತಿಕವಾಗಿ ಸಾಕಿರುವ ಸಾಕಷ್ಟು ಪ್ರಾಣಿಗಳ ವಿಡಿಯೋಗಳನ್ನು ಹಂಚಿಕೊಳ್ಳುತ್ತಾರೆ ಇದರಲ್ಲಿ ಹುಲಿ ಹಾಗೂ ಮೊಸಳೆ ಮೊದಲಾದ ಪ್ರಾಣಿಗಳು ಇರುತ್ತವೆ. ಇದೀಗ ಸದ್ಯ ಹಸನ್ ಅವರು ಹಂಚಿಕೊಂಡಿರುವ ವಿಡಿಯೋದಲ್ಲಿ ಇರುವ ಮಗುವಿನ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ ಹಸನ್ ಅವರ ಸೋದರಳಿಯ ಇರಬೇಕು ಎಂದು ಸಾಮಾಜಿಕ ಜಾಲತಾಣದಲ್ಲಿ ಹೇಳಲಾಗುತ್ತಿದೆ. ಈ ಹಿಂದೆಯೂ ಇದೇ ಮಗು ಹುಲಿ ಜೊತೆಗೆ ನಡೆದುಕೊಂಡು ಹೋಗುತ್ತಿರುವ ವಿಡಿಯೋವನ್ನು ಹಾಸನ್ ತಮ್ಮ Instagram ಖಾತೆಯಲ್ಲಿ ಹಂಚಿಕೊಂಡಿದ್ದು ಜನರ ಗಮನ ಸೆಳೆದಿತ್ತು.

ಮೃಗಾಲಯದ ಪ್ರಾಣಿ ಖರೀದಿಸುವ ಹಸನ್:

ಹಸನ್ ಅವರು ಕಳೆದ ವರ್ಷ ಆಗಸ್ಟ್ ತಿಂಗಳಿನಲ್ಲಿ ಮೃಗಾಲಯದಿಂದ ಹರಾಜಿನಲ್ಲಿ ಸಿಂಹವನ್ನು ಖರೀದಿಸುವುದಾಗಿ ಹೇಳಿಕೊಂಡಿದ್ದರು ಒಂದು ಡಜನ್ ಸಿಂಹ ಹಾಗೂ ಚಿರತೆ ಗಳನ್ನು ಮೃಗಾಲಯದಲ್ಲಿ ಹರಾಜು ಹಾಕಲಾಗಿತ್ತು ಈ ಸಂದರ್ಭದಲ್ಲಿ ಸಿಂಹ ಹಾಗೂ ಚಿರತೆಯನ್ನು ಖರೀದಿಸಿ ಹಸನ್ ಸಾಕುತ್ತಿದ್ದಾರೆ ಎನ್ನಲಾಗಿದೆ. ಹಾಗಾಗಿ ಸಾಕಷ್ಟು ವಿಡಿಯೋ ಹಾಗೂ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಾರೆ ಅಷ್ಟೇ ಅಲ್ಲದೆ ಚಲನಚಿತ್ರಗಳಿಗೆ ಪ್ರಾಣಿಯನ್ನು ಒದಗಿಸುತ್ತಾರೆ

ಪಾಕಿಸ್ತಾನದಲ್ಲಿ ಮೃಗಾಲಯದ ಸ್ಥಿತಿ ಚಿಂತಾಜನಕವಾಗಿತ್ತು. ಪ್ರಾಣಿಗಳಿಗೆ ಮಾಂಸ ಕೊಡುವುದಕ್ಕೂ ಪ್ರಾಣಿಗಳ ನಿರ್ವಹಣೆಗೂ ಕೂಡ ಅಲ್ಲಿರುವ ಸಿಬ್ಬಂದಿಗಳಿಗೆ ಸಾಧ್ಯವಾಗುತ್ತಿಲ್ಲ. ಈ ಕಾರಣಕ್ಕಾಗಿ ಮೃಗಾಲಯದ ಬಾಗಿಲು ಮುಚ್ಚುವಂತೆ 2020ರಲ್ಲಿ ಆದೇಶ ನೀಡಲಾಗಿತ್ತು. ಹಾಗಾಗಿ ಇಲ್ಲಿರುವ ಪ್ರಾಣಿಗಳನ್ನು ಹರಾಜು ಹಾಕಲಾಗಿದ್ದು ಹಲವರು ಖರೀದಿ ಮಾಡಿದ್ದಾರೆ ಎನ್ನಲಾಗಿದೆ.

advertisement

Leave A Reply

Your email address will not be published.