Karnataka Times
Trending Stories, Viral News, Gossips & Everything in Kannada

Sleeping Tips: ನಿದ್ದೆ ಸಮಸ್ಯೆ ಇರುವವರು ಈ ಹವ್ಯಾಸ ಪಾಲಿಸಿದರೆ ಕೆಲವೇ ನಿಮಿಷಗಳಲ್ಲಿ ನಿದ್ರೆಗೆ ಜಾರುತ್ತಿರಿ.

advertisement

ನಿದ್ರೆ ಪ್ರತಿಯೊಂದು ಜೀವ ಸಂಕುಲಕ್ಕು ತುಂಬಾ ಅಗತ್ಯ. ಆದರೆ ಬದಲಾದ ಈ ಕಾಲಘಟ್ಟದಲ್ಲಿ ಕೆಲಸ, ಕುಟುಂಬ ಎಂಬ ಒತ್ತಡದ ನಡುವೆ ಸರಿಯಾಗಿ ನಿದ್ದೆಯೇ ಇಲ್ಲದೆ ಜೀವನ ಸಾಗಿಸುತ್ತಿದ್ದಾರೆ. ನಿದ್ದೆ ಮಾಡಲು ಮೊಬೈಲ್ ಬಳಕೆ ಬಿಡುತ್ತಿಲ್ಲ. ಮೊಬೈಲ್ ದೂರಿಟ್ಟು ಕಣ್ಣು ಮುಚ್ಚಿ ನಿದ್ರಿಸಬೇಕೆಂದರೂ ಹೊರಳಾಡಬೇಕು ಇಲ್ಲ ಟ್ಯಾಬ್ಲೆಟ್ ಕೊಳ್ಳಬೇಕೇ ವಿನಃ ನಿದ್ದೆ ಮಾತ್ರ ಬರುವುದಿಲ್ಲ ಎನ್ನಬಹುದು.

ಅಧಿಕ ಸಮಸ್ಯೆ

ಇಂದು ನಿದ್ದೆ ಬರದ ಕಾರಣಕ್ಕೆಮಾನಸಿಕ ಒತ್ತಡ ತಡೆಯಲಾಗದೇ ಆ ಸಮಸ್ಯೆ ಪರಿಹಾರಕ್ಕೆ ಅನೇಕ ಡಾಕ್ಟರ್ ಗಳ ಮೊರೆಹೋಗುವ ಪ್ರಮಾಣ ಅಧಿಕವಾಗುತ್ತಿದೆ. ಚಿಂತೆ ಇಲ್ಲದವನಿಗೆ ಸಂತೆಯಲ್ಲೂ ನಿದ್ದೆ ಎನ್ನುತ್ತಾರೆ ಹಾಗೆಂದು ಯಾವುದಾದರೂ ಚಿಂತೆ ಇಲ್ಲದೆ ಮಲಗುವ ಜನ ಈಗ ತುಂಬಾ ವಿರಳ. ನಿದ್ರಾಹೀನತೆ ಸಮಸ್ಯೆಯಿಂದ ಬಳಲುತ್ತಿರುವವರಿಗೆ ನಾವಿಂದು ತಿಳಿಸಲ್ಪಡುವ ಸರಳ ಮಾರ್ಗ ಬಹಳ ಉಪಯುಕ್ತ ಆಗಲಿದ್ದು ನಿಮಗೂ ಈ ಸಮಸ್ಯೆ ಇದ್ದರೆ ಪರಿಹಾರ ಕಂಡುಕೊಳ್ಳಬಹುದು.

advertisement

ನಿದ್ರೆ ಯಾಕೆ ಬರುತ್ತಿಲ್ಲ

ನಿದ್ರಾಹೀನತೆ ಸಮಸ್ಯೆ ಜಾಗತಿಕ ಮಟ್ಟದ್ದಾಗಿದ್ದು ಅದಕ್ಕೆ ಅನೇಕ ಕಾರಣ ಇರಬಹುದು. ಕೆಲಸದ ಒತ್ತಡ, ಕೌಟುಂಬಿಕ ಕಿರಿ ಕಿರಿ, ಅತಿಯಾಗಿ ಕಂಪ್ಯೂಟರ್ ಮತ್ತು ಮೊಬೈಲ್ ಬಳಕೆ, ತಡವಾಗಿ ಏಳುವುದು ಎಲ್ಲ ನಿದ್ರಾಹೀನತೆ ಸಮಸ್ಯೆಗೆ ಕಾರಣ ಎನ್ನಬಹುದು‌. ನಿದ್ರೆ ನಿಮ್ಮ ದೇಹಕ್ಕೆ ಅವಶ್ಯ ಪ್ರಮಾಣದಷ್ಟು ದೊರೆಯದಿದ್ದರೆ ಅನೇಕ ವಿಧವಾದ ಆರೋಗ್ಯ ಸಮಸ್ಯೆ ಎದುರಾಗಲಿದೆ. ಹಾಗಾಗಿ ನಿಮ್ಮ ದೈನಿಕ ಬದುಕಲ್ಲಿ ಕೆಲ ಅಗತ್ಯ ಬದಲಾವಣೆ ಜಾರಿಗೆ ತಂದರೆ ನಿದ್ರಾ ದೇವಿ ನಿಮಗೆ ಒಲಿಯಬಹುದು.

ಈ ಹವ್ಯಾಸ ಅನುಸರಿಸಿ

  • ಉತ್ತಮ ಹವ್ಯಾಸ ಉತ್ತಮ ಜೀವನಕ್ಕೆ ಸಾಕ್ಷಿಯಾಗಿದ್ದು ನಿಮಗಮ ಜೀವನ ಶೈಲಿ ಬದಲಾಗುವುದು ಅತ್ಯಗತ್ಯ.
  • ಪುಸ್ತಕ ಪ್ರೀತಿ ಬೆಳಸಿಕೊಂಡರೆ ನಿಮ್ಮ ಜ್ಞಾನ ವೃದ್ಧಿಯ ಜೊತೆಗೆ ಆರೋಗ್ಯ ಪ್ರಯೋಜನ ಸಿಗಲಿದೆ. ಇದು ನಿಮಗೆ ಬೇಗ ನಿದ್ದೆ ಮಾಡಲು ಮಾರ್ಗ ಸೂಚಿಸಲಿದೆ.
  • ನಿದ್ದೆ ಸಮಸ್ಯೆ ಇರುವವರು ಯೋಗ, ಧ್ಯಾನ, ದೈಹಿಕ ಕಸರತ್ತಿಗೆ ಮಾನ್ಯತೆ ನೀಡಿದರೆ ನಿಮಗೆ ಬೇಗ ನಿದ್ದೆ ಬರಲಿದೆ.
  • ಒಂದೇ ಸಮಯ ಪಾಲಿಸಿ ನಿದ್ದೆ ಮಾಡಿದರೆ ಪ್ರತಿ ದಿನ ನಿಮಗೆ ಅದೇ ಹವ್ಯಾಸವಾಗಿ ಆ ಸಮಯಕ್ಕೆ ನಿದ್ದೆ ಸರಿಯಾಗಿ ಬರಲಿದೆ.
  • ರಾತ್ರಿ ಆಹಾರ ಯಾವಾಗಲೂ ಲೈಟ್ ಆಗಿ ಇರಬೇಕು. ತೀರ ಮಸಾಲೆ ಯುಕ್ತ ಆಹಾರ ನಿದ್ದೆ ಬಾರದಂತೆ ಎಸಿಡಿಟಿ ಸಮಸ್ಯೆ ನೀಡಲಿದೆ. ರಾತ್ರಿ ಟೀ ಕುಡಿಯುವುದು ನಿದ್ದೆ ಬರದಂತೆ ಮಾಡಲಿದೆ.
  • ಮೊಬೈಲ್ ಬಳಕೆ ಹಿತ ಮಿತವಾಗಿರಬೇಕು ಮಿತಿ ಮೀರಿ ಬಳಸಿದರೆ ಕಣ್ಣಿಗೆ ಹಾನಿ ಮತ್ತು ನಿದ್ದೆ ಕೂಡ ಬರಲಾರದು.
  • ರಾತ್ರಿ ಮಲಗುವ ಅರ್ಧಗಂಟೆ ಮುನ್ನ ಕೆಟ್ಟ ಆಲೋಚನೆ ವ್ಯತಿರಿಕ್ತ ಭಾವನೆಯನ್ನು ದೂರ ಸರಿಸಿ. ಕೆಲ ಶಾಂತ ಸಂಗೀತ ಆಲಾಪನೆ ಕೇಳುವುದು ಉತ್ತಮವಾಗಿದೆ.
  • ದೈಹಿಕ ಆಯಾಸ ಆದರೆ ನಿದ್ರೆ ಚೆನ್ನಾಗಿ ಬರುತ್ತದೆ ಎಂದು ಹೇಳುತ್ತಾರೆ. ಆದರೆ ತೀರಾ ಆಯಾಸ ಆದರೆ ಸ್ನಾಯು ಸೆಳೆತ ಮಲಗಲು ದೊಡ್ಡ ಸಮಸ್ಯೆಯನ್ನೇ ನೀಡಲಿದೆ. ಹಾಗಾಗಿ ಉಗುರು ಬೆಚ್ಚಗಿನ ನೀರಿ‌ನಲ್ಲಿ ಸ್ನಾನ ಮಾಡಿ ನಿದ್ರೆ ಮಾಡುವುದು ಉತ್ತಮ.

advertisement

Leave A Reply

Your email address will not be published.