Karnataka Times
Trending Stories, Viral News, Gossips & Everything in Kannada

Agriculture: ಅಡಿಕೆ ಬದಲು ಈ ಕೃಷಿ ಮಾಡಿ ಎಕರೆಗೆ 15 ಲಕ್ಷ ದುಡಿದ ರೈತ! ಕಡಿಮೆ ನಿರ್ವಹಣೆ

advertisement

Agriculture: ಭಾರತ ಕೃಷಿ ಪ್ರಧಾನ ದೇಶವಾಗಿದೆ. ಇಲ್ಲಿ ಹೆಚ್ಚಿನ ಜನರು ಕೃಷಿಯನ್ನೆ ಮಾಡಿ ಬದುಕು ಕಟ್ಟಿಕೊಂಡವರು ಹೆಚ್ಚು ಮಂದಿ ಇದ್ದಾರೆ.ಹಾಗಾಗಿ ಕೃಷಿ ಅಂತ ಬಂದಾಗ ಸರಕಾರ ಕೂಡ ಹಲವು ರೀತಿಯ ಪ್ರೋತ್ಸಾಹ ನೀಡುತ್ತಲೆ ಬಂದಿದೆ.ರೈತರು ಕೃಷಿ ಮಾಡುವ ಸಂದರ್ಭದಲ್ಲಿ ಯಾವ ಬೆಳೆ ಬೆಳೆದರೆ ಉತ್ತಮ ಯಾವ ಸಮಯಕ್ಕೆ ಯಾವ ಬೆಳೆ ಬೆಳೆಸಿದರೆ ಉತ್ತಮ ಎಂಬುದನ್ನು ಮೊದಲು ತಿಳಿದುಕೊಂಡಿರಬೇಕು.ಅದೇ ರೀತಿ ನುಗ್ಗೆ ಕೃಷಿ ಮಾಡುವ ಮೂಲಕ ರೈತರೊಬ್ಬರು ಅಡಿಕೆಗಿಂತ ದುಪ್ಪಟ್ಟು ಆದಾಯ ಪಡೆದ ಬಗ್ಗೆ ಮಾಹಿತಿ ಇಲ್ಲಿದೆ‌.

ಪ್ರಾಚೀನ ಕೃಷಿ

ಇಂದು ಸೊಪ್ಪು ಪದಾರ್ಥಗಳಿಗೆ ಜನರು ಹೆಚ್ಚಿನ ಬೇಡಿಕೆ ಇಟ್ಟಿದ್ದಾರೆ. ನಮ್ಮ ಆರೋಗ್ಯ ವೃದ್ದಿ ಯಾಗಬೇಕಾದರೆ ಸೊಪ್ಪು ಪದಾರ್ಥಗಳು ಮುಖ್ಯವಾಗಿ ಬೇಕು.ಅದರಲ್ಲೂ ನುಗ್ಗೆ ಸೊಪ್ಪು(Moringa Leaves)  ಎನ್ನುವುದು ಹೆಚ್ಚು ‌ ಪೋಷಕಾಂಶಗಳನ್ನು(Vitamins)  ಹೊಂದಿರುವ ಆಹಾರ ಪದಾರ್ಥವಾಗಿದ್ದು ಹೆಚ್ಚಿನ‌ಜನರು ಈ ಸೊಪ್ಪಿನ ‌ಪದಾರ್ಥ,ಚಟ್ನಿ ಇತ್ಯಾದಿ ‌ಮಾಡಿ ಸವಿಯುತ್ತಾರೆ.ಈ ನುಗ್ಗೆ ಸೊಪ್ಪು ಬಹಳ ಪ್ರಾಚೀನ ಕಾಲದಿಂದಲೂ ಹೆಚ್ಚು ಬೇಡಿಕೆಯನ್ನು ಹೊಂದಿರುವ ಸಸ್ಯವಾಗಿದೆ.ಇದು ಆರೋಗ್ಯಕ್ಕೆ ಮಾತ್ರವಲ್ಲ. ಇದರ ಎಣ್ಣೆಯು ಕೂಡ ಬಹಳ ಉಪಯುಕ್ತ.

Moringa Leaves Health Benefits
Image Source: Times Now

advertisement

ಹೆಚ್ಚು ಬೇಡಿಕೆ ಇದೆ
ಇಂದು ಮಾರುಕಟ್ಟೆಯಲ್ಲಿಯು ನುಗ್ಗೆ ಸೊಪ್ಪಿಗೆ ಅಧಿಕ ಬೇಡಿಕೆ ಇರಲಿದ್ದು ನುಗ್ಗೆ ಸೊಪ್ಪು, ನುಗ್ಗೆ ಕಾಯಿ, ನುಗ್ಗೆ ಹೂವು ಇದೆಲ್ಲಕ್ಕೂ ಕೂಡ ಬಹಳಷ್ಟು ಬೇಡಿಕೆ ಇದ್ದೆ ಇದೆ.‌ ಹಾಗಾಗಿ ಈ ನುಗ್ಗೆ ಸೊಪ್ಪಿನ ಕೃಷಿ ಮಾಡಿದ್ರೆ ಹೆಚ್ಚಿನ‌ ಲಾಭವನ್ನು ‌ಕೃಷಿಕರು ಗಳಿಸಬಹುದು.‌ನುಗ್ಗೆ ಸೊಪ್ಪಿನಲ್ಲಿ ಪೋಷಕ ಗುಣಗಳು ಸಹ ಇರಲಿದ್ದು ಇದರಿಂದ ಕ್ಯಾಪ್ಸೂಲ್, ನುಗ್ಗೆ ಸೊಪ್ಪಿನ ಪೌಡರ್ ಇತ್ಯಾದಿಗಳನ್ನು ತಯಾರಿಸಿ ಮಾರಾಟ ಮಾಡಬಹುದು.ಬಹುವಾರ್ಷಿಕ ತರಕಾರಿ ಬೆಳೆಯಾಗಿರುವ ಈ ನುಗ್ಗೆ ಇನ್ನೂ ಹೆಚ್ಚಿನ ಫಸಲು ನೀಡುವ ಮೂಲಕ‌ ರೈತನಿಗೆ ಹೆಚ್ಚು ಇಳುವರಿ ಯನ್ನು ನೀಡಲಿದೆ.

ಕೃಷಿ ಹೇಗೆ?
ಈ ನುಗ್ಗೆ ಸೊಪ್ಪನ್ನು ಕೆಂಪು ಮಣ್ಣಿನ ಜಮೀನಿನಲ್ಲಿ ನೆಟ್ಟರೆ ಉತ್ತಮ,ಇದರಲ್ಲಿ 6*6 ಅಡಿ ಅಂತರದಲ್ಲಿ ಗಿಡಗಳನ್ನು ನೇಡಬೇಕು.ನುಗ್ಗೆ ಸೊಪ್ಪನ್ನು ನರ್ಸರಿ ಗಳಿಂದ ತರುವ ಮೂಲಕ ಸಸಿಗಳನ್ನು ತಂದು ಕೃಷಿ ಮಾಡಬಹುದಾಗಿದೆ. ಅದೇ ರೀತಿ ನೀವೇ ಬೀಜ ತಂದು ನಾಟಿ ಮಾಡಬಹುದು.ನುಗ್ಗೆ ಗಿಡಗಳಿಗೆ ಕೀಟನಾಶಕ ಬಳಕೆ ಮಾಡದೇ ಸಾವಯವ ಕೃಷಿ ಮಾಡುವ ಮೂಲಕ ನೈಸರ್ಗಿಕವಾಗಿ ಕೃಷಿ ಮಾಡಿದ್ರೆ ಹೆಚ್ಚಿನ ಇಳುವರಿಯನ್ನು ಪಡೆಯಬಹುದಾಗಿದೆ.

Moringa Leaves Health Benefits
Image Source: Times Now

ಹೆಚ್ಚಿನ ಆದಾಯ
ಸಾವಯವ ನುಗ್ಗೆ ಗಿಡಗಳಲ್ಲಿ ಸೊಪ್ಪನ್ನು ಆಗಾಗ್ಗೆ ಕೊಯ್ಲುಮಾಡುವ ಮೂಲಕ ಸೊಪ್ಪಿನ ಬಳಕೆ ಮಾಡಿಕೊಳ್ಳಬಹುದು.ಸೊಪ್ಪಿನ ಎಲೆಗಳ ಬಣ್ಣ ಕೆಡದಂತೆ ಸೋಲಾರ್‌ ಡ್ರೈಯಿಂಗ್‌ ವಿಧಾನದ ಮೂಲಕ ಎಲೆಗಳನ್ನು ಒಣಗಿಸಿ ಪುಡಿ ಮಾಡಿದರೆ 8 ರಿಂದ 10 ಕೆಜಿ ನುಗ್ಗೆ ಪುಡಿ ಬರಲಿದೆ.ಸೊಪ್ಪು ಒಣಗಿಸಿ ಹದ ಮಾಡಿದರೆ ಉತ್ತಮ ಬೆಲೆ ಸಿಗುತ್ತದೆ. ಸೊಪ್ಪಿನ ಪೌಡರ್ ಮಾಡುವ ಮೂಲಕವು ಎಕರೆಗೆ 15 ಲಕ್ಷ ಪಡೆಯಬಹುದು‌.100 ಗ್ರಾಂ ಪ್ರಾಡಕ್ಟ್ ನುಗ್ಗೆ ಸೊಪ್ಪಿನ ಪೌಂಡರ್ ಗೆ ರೂ.450ಗಿಂತ ಹೆಚ್ಚಿಗೆ ಹಣ ಇರಲಿದೆ.ಹಾಗಾಗಿ ಇದರ ಸೊಪ್ಪು,ಹೂ, ಕಾಯಿ ಎಲ್ಲವೂ ಉಪಯೋಗ ವಾಗುವುದರಿಂದ ಕಡಿಮೆ ಖರ್ಚಿನಲ್ಲಿ ಹೆಚ್ಚಿನ ಆದಾಯ ಪಡೆಯಬಹುದು.

advertisement

Leave A Reply

Your email address will not be published.