Karnataka Times
Trending Stories, Viral News, Gossips & Everything in Kannada

Farming tips: ಒಂದೇ ಬಳ್ಳಿಯಿಂದ 15Kg ಬರುತ್ತೆ? ಕೆಜಿಗೆ 250 ರೂ ಇರುವ ಈ ಬೆಳೆ ಬೆಳೆಯಲು ಮುಗಿಬಿದ್ದ ರೈತರು

advertisement

Farming tips: ಇಂದು ಕೃಷಿ ಮಾಡಿ ಬದುಕು ಕಟ್ಟಿಕೊಂಡ ರೈತರು ಬಹಳಷ್ಟು ಮಂದಿ ಇದ್ದಾರೆ.ಅದರಲ್ಲೂ ಕೃಷಿಯಲ್ಲಿ ಸರಿಯಾದ ಕ್ರಮವನ್ನು ಪಾಲಿಸಿ ಪೋಷಣೆ ಮಾಡಿದ್ರೆ ಹೆಚ್ಚಿನ ಇಳುವರಿ ಯನ್ನು ರೈತರು ಪಡೆಯಬಹುದು. ಇಂದು ತೆಂಗು,ಕಂಗು,ಭತ್ತ,ರಾಗಿ,ತರಕಾರಿ, ದಿದ್ವಳ ಧಾನ್ಯ , ಇತ್ಯಾದಿಗಳ ಕೃಷಿ ಮಾಡುವ ಮೂಲಕ ರೈತರು ಲಾಭ ಗಳಿಕೆ ಮಾಡುತ್ತಿದ್ದಾರೆ. ಅದೇ ರೀತಿ ರೈತರು ಕೃಷಿ ಮಾಡಲು ಸರಿಯಾದ ಮಣ್ಣಿನ ಬಳಕೆ ಮಾಡಿಕೊಂಡರೂ ಕೃಷಿಯಲ್ಲಿ ಹೆಚ್ಚಿನ ಲಾಭ ಸಹ ಪಡೆಯಬಹುದಾಗಿದೆ.

ಮಣ್ಣಿನ ಹದ ಮಾಡಿ
ಮಣ್ಣಿನ ಸರಿಯಾದ ಹದ ಮಾಡುವ ಮೂಲಕ ಮಳೆ ನೀರನ್ನು ಇಂಗಲು‌ಬಿಡುವ ಮೂಲಕ ನೀರಿನ‌ ತೇವಾಂಶ ಇದ್ದರೆ ಮಣ್ಣು ಸರಿಯಾಗಿ ಹದ ಆಗಲಿದೆ.‌ಆಗ ಸೂಕ್ಷ್ಮಾಣು ಜೀವಿಗಳ ಪ್ರಮಾಣವು ಕೃಷಿಗೆ ಸಿಕ್ಕಿ ಗಿಡಗಳು ಉತ್ತಮ ಇಳುವರಿ ನೀಡುತ್ತದೆ.ಹಾಗಾಗಿ ಯಾವುದೇ ಕೃಷಿ ಮಾಡಿದ್ರು ಮಣ್ಣು, ನೀರು,ಸಾವಯವ ಗೊಬ್ಬರ ಇತ್ಯಾದಿಗಳ ಬಳಕೆ ಬಗ್ಗೆ ತಿಳಿದುಕೊಳ್ಳಿ.

farming tips kannada
Image Credit: Google

advertisement

ಬಾಳೆಗಿಡ ದೊಂದಿಗೆ ಪರ್ಯಾಯ ಗಿಡ
ಇಂದು ಬಾಳೆ ಗಿಡ ಬೆಳೆಯುವ ಮೂಲಕ ರೈತರು ಹೆಚ್ಚಿನ ಲಾಭ ಗಳಿಕೆ ಮಾಡುತ್ತಾರೆ.ಇಂದು ಬಾಳೆ ಹಣ್ಣಿಗೂ ಬೇಡಿಕೆ ಇದ್ದು ಬಾಳೆಗಿಡವನ್ನು ಹೆಚ್ಚು ನಿರ್ವಹಣೆ ಮಾಡುವ ಕೆಲಸ ಇಲ್ಲ.‌ಇದರ ಜೊತೆ ದ್ವಿದಳ ಧಾನ್ಯ ಬೆಳೆ ಮಾಡುವ ಲಾಭ ಗಳಿಕೆ ಮಾಡಬಹುದು.ಅದೇ ರೀತಿ ಇದರ ಮದ್ಯೆ ಹಣ್ಣುಗಳ ಗಿಡಗಳನ್ನು ಬೆಳೆಸುವ ಮೂಲಕ ಲಾಭ ಗಳಿಸಬಹುದು.ಇಂದು ಬೇಸಿಗೆ ಕಾಲ ಆಗಿರುವುದರಿಂದ ಜ್ಯೂಸ್ ಗೆ ಅಧಿಕ ಬೇಡಿಕೆ ಇದೆ. ಹಾಗಾಗಿ ಚಕ್ಕೋತ ಹಣ್ಣನ್ನು ರೈತರೊಬ್ಬರು ‌ ಬೆಳೆಯುವ ಮೂಲಕ ಉತ್ತಮ ಇಳುವರಿ ಪಡೆದಿದ್ದಾರೆ. ಈ ಹಣ್ಣಿಗೂ ಉತ್ತಮ ಮಾರುಕಟ್ಟೆ ಇರುವುದರಿಂದ ಲಾಭ ಪಡೆಯಬಹುದು.

ಗೆಡ್ಡೆಯಂತಿರುವ ಬಳ್ಳಿಯಲ್ಲಿ ಬೆಳೆಯುವ ಆಲೂಗಡ್ಡೆ
ಇಂದು ಈ ಕೃಷಿ ಮಾಡಿದ್ರೆ ಹೆಚ್ಚು ಲಾಭ ದಾಯಕ ಎನ್ನಬಹುದು.‌ಇಂದು ಆಲೂಗಡ್ಡೆ ಗೆ ಹೆಚ್ಚಿನ ಬೇಡಿಕೆ ಇದೆ. ಯಾವುದೇ ಪದಾರ್ಥ,ಸಾಂಬಾರು ಮಾಡುದಾದ್ರೂ ಆಲೂಗೆಡ್ಡೆ ಹೆಚ್ಚಾಗಿ ಬಳಕೆ ಮಾಡುವುದರಿಂದ ಮಾರುಕಟ್ಟೆ ಯಲ್ಲಿ ಉತ್ತಮ ಬೆಲೆಯು ಇದೆ. ಆದೇ ರೀತಿ ಇಲ್ಲೊಬ್ಬ ರೈತರು ಹೊಸ ಕೃಷಿ ವಿಧಾನ ಅಂದರೆ ಬಳ್ಳಿಯಲ್ಲಿ ಬೆಳೆಯುವಂತಹ ಆಲೂಗಡ್ಡೆ ಇದಾಗಿದೆ.

farming tips kannada
Image Credit: Google

ಆಲೂಗಡ್ಡೆ ರೀತಿಯೇ ರಚನೆ ಹೊಂದಿದ್ದು‌ ಇದರ ಬಳ್ಳಿಯಿಂದ 15 kg ಗಡ್ಡೆ ಪಡೆಯಬಹುದು.ಕೆಜಿಗೆ 250 ರೂಪಾಯಿ ಇದ್ದು ರೈತರಿಗೆ ಈ ಬೆಳೆ ಲಾಭ ನೀಡಲಿದೆ.ಈ ಬೆಳೆ ಗುಡುಗು ಸಿಡಿಲಿಗೆ ಮಾತ್ರ ಮೊಳಕೆ ಬರಲಿದ್ದು ಮೊಳಕೆ ಇಡುವ ಗಡ್ಡೆಯ ಮೂಲಕೇ ಬಳ್ಳಿ ರಚನೆಯಾಗುತ್ತದೆ. ಆದ್ದರಿಂದ ಇದನ್ನು ಪೋಷಣೆ ಮಾಡುವ ವಿಧಾನ ವು ಸುಲಭವಾಗಿದ್ದು ಹೆಚ್ಚಿನ ಖರ್ಚು ಇಲ್ಲ.ಮಾರುಕಟ್ಟೆ ಯಲ್ಲಿ ಇದಕ್ಕೆ ಬೇಡಿಕೆಯು ಇದೆ ಎಂದು ಈ ಬೆಳೆ ಮಾಡಿದ ರೈತರು ತಿಳಿಸಿದ್ದಾರೆ. ಈ ಕೃಷಿಯ ಬಗ್ಗೆ ಸಂಪೂರ್ಣ ವಿವರಣೆ ಕೆಳಗಿನ ವಿಡಿಯೋದಲ್ಲಿದೆ ನೋಡಿ.

advertisement

Leave A Reply

Your email address will not be published.