Karnataka Times
Trending Stories, Viral News, Gossips & Everything in Kannada

ಪ್ರತಿ ತಿಂಗಳು 3000 EMI ಪಾವತಿ ಮಾಡಿ ಖರೀದಿಸಿ ಈ ಬೆಂಕಿ ಬೈಕ್! ಬೊಂಬಾಟ್ ಲುಕ್

advertisement

ಭಾರತ ಅತಿ ದೊಡ್ಡ ಟು ವೀಲರ್ ತಯಾರಿಕಾ (Largest 2 Wheeler Manufacturers) ಕಂಪನಿಯಾಗಿರುವ ಹೀರೋ ಮೋಟೊ ಕಾರ್ಪ್ ಹಲವು ದಶಕಗಳಿಂದ ತನ್ನ ಅತ್ಯುತ್ತಮ ವಿಶ್ವಾಸಾರ್ಹ (Reliability) ಹಾಗೂ ಇಂಧನ ಸಾಂದ್ರತೆ (Fuel Efficiency) ಒಳಗೊಂಡಿರುವ ಬೈಕ್ ಗಳನ್ನು ತಯಾರು ಮಾಡುವ ಮೂಲಕ ಬಾರಿ ಜನಪ್ರಿಯತೆಯನ್ನು ಪಡೆದುಕೊಂಡಿದೆ. ಗ್ರಾಹಕರಿಗೆ ಇಷ್ಟವಾಗುವ ರೀತಿ ಬೈಕ್ ಗಳನ್ನು ತಯಾರು ಮಾಡಿ ಮಾರುಕಟ್ಟೆಗೆ ಪರಿಚಯಿಸುವ ಹೀರೋ ಮೋಟಾರ್ ಕಾರ್ಪ್ ಇತ್ತೀಚಿಗಷ್ಟೇ ಹೀರೋ ಎಕ್ಸ್ಟ್ರೀಮ್ 125R (Hero Xtreme 125R) ಬೈಕನ್ನು ಮೋಟರ್ ಸೈಕಲ್ ಸೆಗ್ಮೆಂಟ್ನಲ್ಲಿ ಪರಿಚಯಿಸಿದ್ದಾರೆ.

ಸ್ಪೂರ್ಟಿ ಡಿಸೈನ್ (Sporty Design) ಹಾಗೂ ಅತ್ಯಾಕರ್ಷಕ ಫೀಚರ್ಸ್ಗಳಿಂದ ಲಕ್ಷಾಂತರ ಭಾರತೀಯ ಗ್ರಾಹಕರ ಮನಸ್ಸನ್ನು ಗೆದ್ದಿರುವ ಹೀರೋ ಎಕ್ಸ್ಟ್ರೀಮ್ 125ನಲ್ಲಿ ಬಹಳಷ್ಟು ನೂತನ ವೈಶಿಷ್ಟತೆಗಳನ್ನು ಒಳಗೊಂಡಿದ್ದು, LED DRL ಅನ್ನು ಒಳಗೊಂಡಿರುವ ಶಾರ್ಪ್ ಪ್ರಾಜೆಕ್ಟರ್ ಹೆಡ್ ಲೈಟ್ ಬೈಕಿಗೆ ಮಾಡ್ರನ್ ಟಚ್ ನೀಡುತ್ತದೆ. ಶಾರ್ಪ್ ಮತ್ತು ಅಗ್ರೆಸ್ಸಿವ್ ಫ್ರೆಂಟ್ ಲುಕ್ (Sharp and Aggressive Front look) ನಲ್ಲಿ ಬೈಕ್ ತಯಾರಾಗಿದ್ದು, ಬೈಕ್ ಪ್ರೇಮಿಗಳಿಗೆ ಬಹಳ ಇಷ್ಟವಾಗಲಿದೆ. ಅಷ್ಟೇ ಅಲ್ಲದೆ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಅಳವಡಿಕೆಯು ಬೈಕನ್ನು ಮತ್ತಷ್ಟು ಆಧುನಿಕ ಗೊಳಿಸಿದೆ.

Hero Xtreme 125R Exciting Colors:

 

Image Source: BikeWale

 

ನೋಡಲು ಬಹಳ ಅಗ್ರೆಸ್ಸಿವ್ ಲುಕ್ಕನ್ನು ಹೊಂದಿರುವ ಹೀರೋ ಎಕ್ಸ್ಟ್ರೀಮ್ 125 ಕೋಬಾಲ್ಟ್ ಬ್ಲೂ (Cobalt Blue), ಫೈರ್ಸ್ಟಾರ್ಮ್ ರೆಡ್ (Firestorm Red) ಮತ್ತು ಸ್ಟಾಲಿಯನ್ ಬ್ಲಾಕ್ (Stallion Black) ಎಂಬ ಮೂರು ಆಕರ್ಷಕ ಬಣ್ಣಗಳಲ್ಲಿ ಭಾರತಕ್ಕೆ ಲಗ್ಗೆ ಇಟ್ಟಿದೆ.

advertisement

Hero Xtreme 125R Powerful Fuel System:

124.7cc BS6 ಇಂಧನದ ವ್ಯವಸ್ಥೆಯಲ್ಲಿ ತಯಾರು ಮಾಡಲಾಗಿರುವ ಹೇರೋ ಎಕ್ಸ್ಟ್ರೀಮ್, 8250 rpm ನೊಂದಿಗೆ 11.4bhp ಶಕ್ತಿ ಉತ್ಪಾದಿಸುತ್ತಿದೆ. ಅದರಂತೆ 6,000 rpm ನಲ್ಲಿ 10.5 Nm torque ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಟಾಪ್ ಸ್ಪೀಡ್ಗೆ ಶಿಫ್ಟ್ ಮಾಡಿ ಹೈವೇಯಲ್ಲಿ ಪ್ರಯಾಣಿಸಲು ಶುರು ಮಾಡಿದರೆ ಗಂಟೆಗೆ 110 ಕಿಲೋಮೀಟರ್ ವ್ಯಾಪ್ತಿಯನ್ನು ತಲುಪಲಿದೆ. 5 ಸ್ಪೀಡ್ ಗೇರ್ ಬಾಕ್ಸ್ ಆಯ್ಕೆಯಲ್ಲಿ ತಯಾರಾಗಿರುವ ಹೀರೋ ಎಕ್ಸ್ಟ್ರೀಮ್ ಬೈಕ್ನಲ್ಲಿ ಸ್ಮೂತ್ ಗೇರ್ ಆಯ್ಕೆ ಕೂಡ ಲಭ್ಯವಿದೆ ಹಾಗೂ ಪ್ರತಿ ಲೀಟರ್ ಪೆಟ್ರೋಲ್ಗೆ 66 km ಮೈಲೇಜ್ ನೀಡುವ ಸಾಮರ್ಥ್ಯ ಹೀರೋ ಎಕ್ಸ್ಟ್ರೀಮ್ಗಿದೆ.

Hero Xtreme 125R Price:

 

Image Source: Autocar India

 

ಭಾರತದಲ್ಲಿ Hero Xtreme 125R with CBS & XTREME 125 R with ABS ಎಂಬ ಎರಡು ಅದ್ಭುತ ರೂಪಗಳಲ್ಲಿ ಲಭ್ಯವಿರುವ ಹೀರೋ ಎಕ್ಸ್ಟ್ರೀಮ್ 125 Rನ್ನು ಹೀರೋ ಮೋಟೊ ಕಾರ್ಪ್ ಕಂಪನಿಯು (Hero MotoCorp Company) ಕೇವಲ 95,000 ಶೋರೂಮ್ ಬೆಲೆಯಲ್ಲಿ ಬೈಕನ್ನು ಮಾರಾಟ ಮಾಡಲು ಮುಂದಾಗಿದ್ದಾರೆ.

ಕೇವಲ 20 ಸಾವಿರ ರೂಪಾಯಿ ಡೌನ್ ಪೇಮೆಂಟ್ ಮಾಡಿ ಬೈಕ್ ಖರೀದಿಸಬಹುದು. ಇದರಿಂದ ಪ್ರತಿ ತಿಂಗಳು 2642 ರೂಪಾಯಿಯ ಇಎಂಐ ಹಣವನ್ನು ಪಾವತಿ ಮಾಡಬೇಕಾಗುತ್ತದೆ. ಅದರಂತೆ ಟಾಪ್ ವೇರಿಯಂಟ್ನ(Top Variants) ಹೀರೋ ಎಕ್ಸ್ಟ್ರೀಮ್ 125 R ₹99,500 ಗಳಿಗೆ ಲಭ್ಯವಿದ್ದು ಇದಕ್ಕೂ ಕೂಡ ಕೇವಲ 20 ಸಾವಿರ ರೂಪಾಯಿ ಡೌನ್ ಪೇಮೆಂಟ್ ಮಾಡಿ ಪ್ರತಿ ತಿಂಗಳು ₹3,011 ಈಎಂಐ ಹಣವನ್ನು ಪಾವತಿ ಮಾಡಬೇಕಾಗುತ್ತದೆ.

advertisement

Leave A Reply

Your email address will not be published.