Karnataka Times
Trending Stories, Viral News, Gossips & Everything in Kannada

20 ಲಕ್ಷದ ಈ ಕಾರು ಇನ್ಮೇಲೆ ಸಿಗಲಿದೆ ಕೇವಲ 13 ಲಕ್ಷಕ್ಕೆ! ಹೇಗೆ ಗೊತ್ತಾ?

advertisement

ಕಾರು ಕೊಳ್ಳಬೇಕು ಎಂಬುದು ಬಹುತೇಕರ ಜೀವನದ ಒಂದು ಕನಸ್ಸಾಗಿರುತ್ತದೆ. ಆದರೆ ಇಂದು ಸಾಮಾನ್ಯ ಕಾರ್ ನ ಬೆಲೆ ಎರಡು ಮೂರು ಲಕ್ಷದ ಮೇಲೆ ಇರಲಿದೆ. ಕಾರಿನ ಬೆಲೆಯು ಅದರ ಇಂಜಿನ್ ಮಾತ್ರವಲ್ಲದೆ ಅದರ ಮೇಲೆ ತೆರಿಗೆ ನಿಯಮ ಕೂಡ ದೊಡ್ಡ ಮಟ್ಟದ ಹೊರೆಯಾಗಲಿರುವ ಸಾಧ್ಯತೆ ಇದೆ. ಇದೀಗ ಕೇಂದ್ರ ಸರಕಾರದ ಒಂದು ಕ್ರಮದಿಂದಾಗಿ ಅನೇಕರಿಗೆ ಹೊರೆಯಾಗಿದ್ದು ಈ ಒಂದು ವಾಹನದ ಮೇಲೆ ವಿಧಿಸಲಾಗುವ GST ಹೊರೆ ತಗ್ಗಿಸುವ ಬಗ್ಗೆ ಕೇಂದ್ರ ರಸ್ತೆ ಸಾರಿಗೆ ಸಚಿವರಾದ ನಿತಿನ್ ಗಡ್ಕರಿ ಅವರು ಇತ್ತೀಚೆಗೆ ಮಾಧ್ಯಮದ ಮುಂದೆ ಮಾತನಾಡಿದ್ದಾರೆ.

ಬದಲಾವಣೆ ಆಗಲಿದೆ:

 

Image Source: Motoring World

 

ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ (Maruti Grand Vitara) ಬೆಲೆಯು ಪ್ರಸ್ತುತ 20.9ಲಕ್ಷ ರೂಪಾಯಿ ಶೋ ರೂಂ ಬೆಲೆ ಇದೆ 12% GST ಕಡಿತ ಮಾಡಿದರೆ 13.5ಲಕ್ಷ ರೂಪಾಯಿ ಆಗಲಿದೆ. ಅಂದರೆ 6ಲಕ್ಷ ರೂಪಾಯಿ ತನಕ ಗ್ರಾಹಕರಿಗೆ ಉಳಿತಾಯ ಆಗಲಿದೆ. ಇದು ಆರ್ಥಿಕವಾಗಿ ಅನೇಕ ಜನರಿಗೆ ಬಹಳ ಅನುಕೂಲ ಆಗಲಿದೆ ಎಂದು ಹೇಳಬಹುದು. ಇದೇ ರೀತಿ ಟೊಯೋಟಾ ಅರ್ಬನ್ ಕ್ರೋಸಿಯರ್ ಹೈಬ್ರೀಡ್ (Toyota Urban Cruiser Hybrid), ಹೋಂಡಾ ಸಿಟಿ ಹೈ ಬ್ರೀಡ್ (Honda City Hybrid) ನಲ್ಲಿಯೂ ಮಹತ್ವದ ಬದಲಾವಣೆ ಆಗಲಿದೆ ಎಂದು ಹೇಳಬಹುದು.

ತೆರಿಗೆ ಹೊರೆ:

 

advertisement

Image Source: Vikatan

 

ವಾಹನಗಳ ಮೇಲೆ ಸರಕಾರದಿಂದ ವಿಧಿಸಲಾಗುವ GST ಈಗ ಹೊರೆಯಾಗಿ ಪರಿಣಮಿಸುತ್ತಿದೆ. ಬಹುತೇಕ ಇಂಧನ ಚಾಲಿತ ವಾಹನಗಳ ಮೇಲೆ ಈ GST ಪ್ರಮಾಣ ಅಧಿಕವಾಗೆ ಇದೆ ಅದೇ ರೀತಿ ಎಲೆಕ್ಟ್ರಾನಿಕ್ ವಾಹನಗಳ GST ಪ್ರಮಾಣ ಕಡಿಮೆ ಎಂದೆ ಹೇಳಬಹುದು ಆದರೆ ಹೈಬ್ರೀಡ್ ವಾಹನಗಳ ಮೇಲೆ ಸಾಮಾನ್ಯ ಇಂಧನಕ್ಕೆ ವಿಧಿಸಲಾಗುವ 48% GSTಯನ್ನು ವಿಧಿಸಿರುವುದನ್ನು ನಾವು ಕಾಣಬಹುದು. ಇದು ಸರಿಯಾದ ಕ್ರಮ ಅಲ್ಲ ಹಾಗಾಗಿ ಈ GST ಹೊರೆಯನ್ನು ತಗ್ಗಿಸಿ 12% ಗೆ ಇಳಿಸುವ ಬಗ್ಗೆ ಸರಕಾರ ಕ್ರಮ ಕೈಗೊಳ್ಳುವುದಾಗಿ ಇತ್ತೀಚೆಗೆ ಕೇಂದ್ರ ರಸ್ತೆ ಸಾರಿಗೆ ಸಚಿವರಾದ ನಿತಿನ್ ಗಡ್ಕರಿ ಅವರು ಈ ಬಗ್ಗೆ ಮಾಹಿತಿ ನೀಡಿದ್ದಾರೆ.

ಹೈಬ್ರೀಡ್ ವಾಹನ ಹೇಗಿರುತ್ತೆ?

ಹೈ ಬ್ರೀಡ್ ವಾಹನ ಎಂದರೆ 60% ಎಲೆಕ್ಟ್ರಾನಿಕ್ ಹಾಗೂ 40% ಇಂಧನ ಚಾಲಿತವಾಗಲಿದೆ. ಈ ಹೈಬ್ರೀಡ್ ಕಾರಿನಲ್ಲಿ ಎಲೆಕ್ಟ್ರಾನಿಕ್ ವಾಹನಕ್ಕೆ ಇರುವ GST ರಿಯಾಯಿತಿ ಇಲ್ಲ ಹಾಗಾಗಿ 48% ನಷ್ಟು ತೆರಿಗೆ ಹೊರೆ ಇರಲಿದೆ. ಈ ಕ್ರಮ ಹೈಬ್ರೀಡ್ ವಾಹನ ಕೊಳ್ಳುವವರಿಗೆ ಪ್ರೋತ್ಸಾಹ ಆಗದು ಎಂಬ ಕಾರಣಕ್ಕೆ ಕೇಂದ್ರ ರಸ್ತೆ ಸಾರಿಗೆ ಸಚಿವರಾದ ನಿತಿನ್ ಗಡ್ಕರಿ ಅವರು ತೆರಿಗೆ ಮಟ್ಟವನ್ನು 48% ನಿಂದ 12% ಗೆ ಇಳಿಸಲು GST ಸಭೆಯಲ್ಲಿ ತೀರ್ಮಾನಿಸಲು ವರದಿ ಮಂಡಿಸಲಾಗಿದ್ದು ಶೀಘ್ರವೇ ಹೈಬ್ರೀಡ್ ವಾಹನದ ಮೇಲೆ GST ಹೊರೆ ತಗ್ಗಲಿದೆ.

ಉದ್ದೇಶ ಏನು?

ಸಾಂಪ್ರದಾಯಿಕ ಇಂಧನ ಚಾಲಿತ ವಾಹನ ಓಡಿಸುವವರ ಪ್ರಮಾಣ ಕಡಿಮೆ ಮಾಡುವ ಮೂಲಕ ದೇಶದಲ್ಲಿ ಎಲೆಕ್ಟ್ರಾನಿಕ್ ಮತ್ತು ಹೈಬ್ರೀಡ್ ವಾಹನವನ್ನು ಕೊಳ್ಳುವವರನ್ನು ಉತ್ತೇಜಿಸುವ ಉದ್ದೇಶ ಹೊಂದಿರಲಾಗಿರುವುದನ್ನು ನಾವು ಕಾಣಬಹುದು. ಈ ಮೂಲಕ 12%GST ವಿಧಿಸುವುದರಿಂದ ಹೈಬ್ರೀಡ್ ವಾಹನದ ಬೆಲೆಯಲ್ಲಿ ದೊಡ್ಡ ಮಟ್ಟದ ಇಳಿಕೆ ಆಗಲಿದೆ. ಹೈಬ್ರೀಡ್ ಎನ್ನುವುದು ಇಂಧನ ಚಾಲಿತದ ಜೊತೆಗೆ ಎಲೆಕ್ಟ್ರಾನಿಕ್ ಅಂಶವೂ ಕೂಡ ಸೇರಿದ್ದು ಪರಿಸರಕ್ಕೆ ಪೂರಕ ಆಗುವ ಹಿನ್ನೆಲೆಯಲ್ಲಿ ಶೀಘ್ರ ಬೆಲೆ ಇಳಿಕೆ ಆಗಲಿದೆ.

advertisement

Leave A Reply

Your email address will not be published.