Karnataka Times
Trending Stories, Viral News, Gossips & Everything in Kannada

Gold: ಚಿನ್ನ ಖರೀದಿಸುವ ಎಲ್ಲರಿಗೂ ಹೊಸ ಸೂಚನೆ ಮತ್ತೆ! ತಪ್ಪದೇ ಗಮನಿಸಿ

advertisement

ಇತ್ತೀಚಿನ ದಿನಗಳಲ್ಲಿ ನಗರ ಇರಲಿ ಅಥವಾ ಹಳ್ಳಿ ಆಗಿರಲಿ ಚಿನ್ನ (Gold) ದ ಆಭರಣಗಳನ್ನು ಖರೀದಿ ಮಾಡುವಂತಹ ಜನರ ಸಂಖ್ಯೆ ದಿನೇ ದಿನೇ ಗಣನೀಯವಾಗಿ ಹೆಚ್ಚಾಗುತ್ತಿದೆ. ಅದರಲ್ಲಿ ವಿಶೇಷವಾಗಿ ಈಗ ಮದುವೆ ಸೀಸನ್ ಆಗಿರುವುದರಿಂದಾಗಿ ಸ್ವಲ್ಪಮಟ್ಟಿಗೆ ನಾವು ಚಿನ್ನದ ಖರೀದಿಯನ್ನು (Gold Purchase) ಹೆಚ್ಚಾಗಿಯೇ ಕಾಣಬಹುದಾಗಿದೆ. ಒಂದು ವೇಳೆ ನೀವು ಕೂಡ ಈಗ ಚಿನ್ನವನ್ನು ಖರೀದಿ ಮಾಡುವುದಕ್ಕೆ ಹೋಗ್ತಾ ಇದ್ದರೆ ಸ್ವಲ್ಪಮಟ್ಟಿಗೆ ಜಾಗ್ರತೆ ಆಗಿರಬೇಕಾಗಿರುತ್ತದೆ. ಇಲ್ವಾದಲ್ಲಿ ಇರುವಂತಹ ಹಣವನ್ನು ಕೂಡ ಕಳೆದುಕೊಳ್ಳ ಬೇಕಾದಂತಹ ಪರಿಸ್ಥಿತಿ ಒದಗಿ ಬರಬಹುದು.

ಗ್ರಾಹಕರಿಂದ ಕೇಳಿ ಬರ್ತಾ ಇದೆ ದೂರು:

 

Image Source: Mint

 

ಇಲ್ಲೊಂದು ಪ್ರದೇಶದಲ್ಲಿ ಕಳೆದ ಮೂರು ವರ್ಷದಲ್ಲಿ ನೂರಕ್ಕೂ ಹೆಚ್ಚಿನ ಚಿನ್ನದ ಅಂಗಡಿಗಳು ಓಪನ್ ಆಗಿವೆ ಆದರೆ ಚಿನ್ನದ (Gold) ಬಗ್ಗೆ ಇರುವಂತಹ ಯಾವುದೇ ನಿಯಮಗಳನ್ನು ಇವರು ಪಾಲನೆ ಮಾಡುತ್ತಿಲ್ಲ ಎನ್ನುವುದಾಗಿ ತಿಳಿದು ಬಂದಿದೆ. ಅಲ್ಲಿನ ಕೆಲವರಿಗೆ ಚಿನ್ನದ ಮೇಲೆ ಇರುವಂತಹ ಹಾಲ್ ಮಾರ್ಕ್ ಬಗ್ಗೆ ಕೂಡ ತಿಳಿದಿಲ್ಲ ಎಂಬುದಾಗಿ ತಿಳಿದು ಬಂದಿದೆ.

ಯಾವುದೇ ರೀತಿಯ ಅಧಿಕೃತ ಬಿಲ್ (Official Bill) ಅನ್ನು ಕೂಡ ನೀಡುತ್ತಿಲ್ಲ ಕೇವಲ ಕಾಗದದಲ್ಲಿ ಬರೆದು ನೀಡುತ್ತಿದ್ದಾರೆ. ಅರ್ಧಕ್ಕೆ ಅರ್ಧ ಬೆಲೆಯಲ್ಲಿ ಮೋಸ ಮಾಡಲಾಗುತ್ತಿದೆ ಎನ್ನುವಂತಹ ಮಾಹಿತಿ ಕೂಡ ತಿಳಿದು ಬಂದಿದೆ. ಗ್ರಾಹಕರಿಗೂ ಕೂಡ ಚಿನ್ನದ ಬೆಲೆ ಹಾಗೂ ಇನ್ನಿತರ ನಿಯಮಗಳ ಬಗ್ಗೆ ಮಾಹಿತಿ ತಿಳಿಯದೆ ಇರುವ ಕಾರಣದಿಂದಾಗಿ ಇಲ್ಲಿ ಚಿನ್ನದ ಅಂಗಡಿಯವರು ಗ್ರಾಹಕರನ್ನ ಲೂಟಿ ಮಾಡುತ್ತಿದ್ದಾರೆ ಎನ್ನ ಬಹುದಾಗಿದೆ.

advertisement

ಚಿನ್ನವನ್ನು ಖರೀದಿ ಮಾಡುವಾಗ ಈ ವಿಚಾರಗಳ ಬಗ್ಗೆ ಪ್ರಮುಖವಾಗಿ ಗಮನವಹಿಸಿ:

ಮಾರಾಟ ಮಾಡಿರುವಂತಹ ಚಿನ್ನ (Gold) ವನ್ನು ಮಾರುಕಟ್ಟೆಯ ದರದಲ್ಲಿ ವಾಪಸ್ ನೀಡುತ್ತೇನೆ ಆರಂಭದಲ್ಲಿ ಅಂಗಡಿಯವರು ಹೇಳಿರುತ್ತಾರೆ ಆದರೆ ಆತ ಹೇಳಿರುವ ರೀತಿಯಲ್ಲಿ ನಡೆದುಕೊಳ್ಳುತ್ತಾನೆ ಅನ್ನೋದು ಗ್ಯಾರಂಟಿ ಇರುವುದಿಲ್ಲ. ಚಿನ್ನದ ಶುದ್ಧತೆಯನ್ನು ಹಾಲ್ಮಾರ್ಕ್ ಆಧಾರದ ಮೇಲೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೂಡ ಮಾಪನವನ್ನು ಮಾಡಲಾಗುತ್ತದೆ.

 

Image Source: Vakilsearch

 

ಒಂದು ವೇಳೆ ನೀವು ಯಾವುದೇ ರೀತಿಯ ಚಿನ್ನವನ್ನು ಖರೀದಿ ಮಾಡಿದ್ರೆ ಅದರ ಮೇಲೆ HUID ನಂಬರ್ ಅನ್ನು ನೀವು ಕಾಣಬಹುದಾಗಿದೆ. ಒಂದು ಆಭರಣದ ಮೇಲೆ ಈ ರೀತಿಯ ಒಂದೇ ನಂಬರ್ ಅನ್ನು ನೀವು ಇಡೀ ಪ್ರಪಂಚದಲ್ಲಿ ಪಡೆದುಕೊಳ್ಳಬಹುದಾಗಿದೆ. ಆಭರಣಕ್ಕೆ ಬೇರೆ ರೀತಿಯ ನಂಬರ್ ಸಿಗೋದಿಲ್ಲ.

ಇದರ ಜೊತೆಗೆ ನೀವು ಚಿನ್ನವನ್ನು ಖರೀದಿ ಮಾಡುವ ಸಂದರ್ಭದಲ್ಲಿ ಜಿಎಸ್‌ಟಿ ಬಿಲ್ ಅನ್ನು ಕಡ್ಡಾಯವಾಗಿ ಪಡೆದುಕೊಳ್ಳಿ. ಇನ್ನು ಇದು ನಿಮ್ಮ ಚಿನ್ನದ ಪರಿಶುದ್ಧತೆಯ ಹಾಗೂ ಪ್ರತಿಯೊಂದು ವಿಚಾರದ ಬಗ್ಗೆ ಕೂಡ ಸಾಬೀತು ಮಾಡುವಂತಹ ಸರ್ಟಿಫಿಕೇಟ್ ರೀತಿಯಲ್ಲಿ ಕೆಲಸ ಮಾಡುತ್ತದೆ. ಹೀಗಾಗಿ ನೀವು ಪ್ರತಿ ಬಾರಿ ಚಿನ್ನವನ್ನು ಖರೀದಿ ಮಾಡುವ ಸಂದರ್ಭದಲ್ಲಿ ಇವೆರಡು ವಿಚಾರಗಳನ್ನ ಪ್ರಮುಖವಾಗಿ ಗಮನವಹಿಸಬೇಕಾಗಿರುತ್ತದೆ.

advertisement

Leave A Reply

Your email address will not be published.