Karnataka Times
Trending Stories, Viral News, Gossips & Everything in Kannada

Electric Bike:150 km ರೇಂಜ್ ನೀಡುವ ಎಲೆಕ್ಟ್ರಿಕ್ ಬೈಕ್ ಬಿಡುಗಡೆ! ಕಡಿಮೆ ಬೆಲೆಯಲ್ಲಿ ಲಭ್ಯ

advertisement

ಎಲೆಕ್ಟ್ರಿಕ್ ವಾಹನಗಳಿಗೆ ಬೇಡಿಕೆ ಹೆಚ್ಚಾಗುತ್ತಿರುವ ಕಾರಣ ಎಲ್ಲಾ ವಾಹನ ತಯಾರಿಕ ಕಂಪನಿಗಳು ಮಾರುಕಟ್ಟೆಗೆ ಅತ್ಯದ್ಬುತ ಇವಿಗಳನ್ನು ಪರಿಚಯಿಸುತ್ತಿದ್ದಾರೆ. ಈ ನಡುವೆ ಎಲೆಕ್ಟ್ರಿಕ್ ಬೈಕ್ಗಳ (Electric Bikes) ಬೆಲೆಯು ಫೀಚರ್ಸ್ ಮತ್ತು ರೇಂಜಿನ ಆಧಾರದ ಮೇಲೆ ಏರಿಕೆಯಾಗುತ್ತಿದೆ. ಅದರಂತೆ ನಾವಿವತ್ತು ಅತ್ಯುತ್ತಮ ವೈಶಿಷ್ಟ್ಯತೆ ಹಾಗೂ ಮೈಲೇಜ್ ಸಾಮರ್ಥ್ಯ (Features and mileage capacity) ವನ್ನು ಹೊಂದಿರುವ ಎಲೆಕ್ಟ್ರಿಕ್ ಬೈಕ್ ಒಂದರ ಮಾಹಿತಿ ತಿಳಿಸ ಹೊರಟಿದ್ದೇವೆ. ಇದನ್ನು ಒಮ್ಮೆ ಚಾರ್ಜ್ ಮಾಡಿದ್ರೆ 120 ರಿಂದ 148 km ಮೈಲೇಜ್ ಕೊಡುವ ಸಾಮರ್ಥ್ಯವನ್ನು ಹೊಂದಿದೆ. ಇತರೆ ಕಂಪನಿಯ ಎಲೆಕ್ಟ್ರಿಕ್ ಬೈಕುಗಳಿಗೆ ಸೆಡ್ಡು ಹೊಡೆಯುವ MX Moto MX9 ನ ಬೆಲೆ, ವೈಶಿಷ್ಟ್ಯತೆ, ವಿನ್ಯಾಸ ಹಾಗೂ ಇಂಧನ ವ್ಯವಸ್ಥೆ ಹೇಗಿದೆ ಎಂಬುದನ್ನು ಈ ಪುಟದ ಮುಖಾಂತರ ತೆಗೆದುಕೊಳ್ಳಿ.

MX Moto MX9 Features: 

 

Image Source: HT Auto

 

MX MOTO MX 9ನಲ್ಲಿ ಬ್ಲೂಟೂತ್ ಕನೆಕ್ಟಿವಿಟಿ, ಕ್ರುಸಿ ಕಂಟ್ರೋಲರ್, ಡಿಜಿಟಲ್ ನ್ಯಾವಿಗೇಶನ್ ಸಿಸ್ಟಮ್, ಡಿಜಿಟಲ್ ಸ್ಪೀಡೋಮೀಟರ್ (Digital Speedometer), ಡಿಜಿಟಲ್ ಓಡೋ ಮೀಟರ್ (Digital Odometer), ನ್ಯಾವಿಗೇಶನ್ ಅಸೆಸ್ಟ್, ಎಲ್ಇಡಿ ಹೆಡ್ ಲೈಟ್ ಮತ್ತು ಟೈಲ್ ಲೈಟ್ಗಳ ಅಳವಡಿಕೆಗಳಿದೆ.

advertisement

MX Moto MX9 Fuel System:

4kw BLD ಮೋಟಾರ್ ಪವರ್ ಅಳವಡಿಕೆಯಲ್ಲಿ ತಯಾರು ಮಾಡಲಾಗಿರುವ MX MOTO MX 9 ಅತ್ಯುತ್ತಮ ಬ್ಯಾಟರಿ ಬ್ಯಾಕಪ್ ಅನ್ನು ಹೊಂದಿದ್ದು, ಈ ಬೈಕನ್ನು ಒಮ್ಮೆ ಮೂರು ಗಂಟೆಗಳ ಕಾಲ(೦-90%);ಚಾರ್ಜ್ ಮಾಡಿದರೆ, 120 ರಿಂದ 148 km ನಷ್ಟು ರೇಂಜ್ ನೀಡುವ ಸಾಮರ್ಥ್ಯವಿದೆ. ಕಂಪನಿ ವತಿಯಿಂದ ಬ್ಯಾಟರಿಗೆ 8 ವರ್ಷಗಳ ಅಥವಾ 80,000 km ವ್ಯಾರೆಂಟಿ (Warranty) ಯನ್ನು ನೀಡುತ್ತಿದ್ದಾರೆ.

MX Moto MX9 Price:

 

Image Source: BikeDekho

 

ಸದ್ಯದ ಆಟೋ ಮೊಬೈಲ್ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ವಾಹನಗಳ ಬೆಲೆ ಸ್ವಲ್ಪ ಏರಿಕೆಯಾಗಿದೆ, ಅತ್ಯುನ್ನತ ಆವಿಷ್ಕಾರಗಳನ್ನು ಒಳಗೊಂಡಿರುವ ಬೈಕ್ ಖರೀದಿ ಮಾಡಲು ಹೋದರೆ ಅದರ ಬೆಲೆ 5 ಲಕ್ಷಕ್ಕಿಂತ ಮೇಲ್ಪಟ್ಟಿರುತ್ತದೆ. ಆದರೆ MX MOTO MX9 ಕಂಪನಿಯು ಗ್ರಾಹಕರ ಕೈಗೆ ಟಕ್ವ ಬೆಲೆಯಲ್ಲಿ ನೂತನ ವೈಶಿಷ್ಟ್ಯತೆಗಳನ್ನು ಒಳಗೊಂಡಿರುವ ಬೈಕ್ ಗಳನ್ನು ನೀಡುತ್ತಿದ್ದು, MX MOTO MX 9 ಎಕ್ಸ್ ಶೋರೂಮ್ ನಲ್ಲಿ ಕೇವಲ 1.46 ಲಕ್ಷ ರೂಪಾಯಿಗಳಿಗೆ ಲಭ್ಯವಿದೆ.

advertisement

Leave A Reply

Your email address will not be published.