Karnataka Times
Trending Stories, Viral News, Gossips & Everything in Kannada

Ration Card: ರೇಶನ್ ಕಾರ್ಡ್ ವಿತರಣೆ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ! ಹೊಸ ರೂಲ್ಸ್

advertisement

ಇಂದು ರೇಶನ್ ಕಾರ್ಡ್ ಎನ್ನುವುದು ಅನೇಕ ವಿಚಾರದಲ್ಲಿ ಅಗತ್ಯ ದಾಖಲೆಗಳ ಸಾಲಿಗೆ ಸೇರುತ್ತಿದೆ. ಸಾಮಾನ್ಯ ಅಕ್ಕಿ ಸಕ್ಕರೆ, ಗೋಧಿ ವಿತರಣೆ ಮಾತ್ರ ಇಲ್ಲಿ ಸಿಗುವುದಿಲ್ಲ ಬದಲಾಗಿ ಬಡವರಿಗಾಗಿ ಮಾಡಿದ್ದ ಯೋಜನೆಯ ಫಲಾನುಭವಿಗಳಾಗಬೇಕಾದರೆ ಅಂತವರು ರೇಶನ್ ಕಾರ್ಡ್ ಅನ್ನು ಹೊಂದಿರಬೇಕು ಎಂಬ ನಿಯಮ ಕೂಡ ಇದೆ. ರೇಶನ್ ಕಾರ್ಡ್ (Ration Card) ಅನ್ನು ವಾಸ್ತವ್ಯ ಪುರಾವೆ ಎಂದು ಸಹ ಪರಿಗಣಿಸಲಾಗುವುದು. ವಿದ್ಯಾರ್ಥಿ ವೇತನ (Student Scholarship), ವಿಧವಾ ವೇತನ, ಪಿಂಚಣಿ (Pension) ಹೀಗೆ ಅನೇಕ ವ್ಯವಸ್ಥೆ ಅಡಿಯಲ್ಲಿ ಸಿಗುವ ಲಾಭ ಪಡೆಯಲು ರೇಶನ್ ಕಾರ್ಡ್ ತುಂಬಾ ಮಹತ್ವದ ದಾಖಲೆ ರೂಪದ ವ್ಯವಸ್ಥೆ ಕೂಡ ಆಗಿದೆ.

ಕೇಂದ್ರ-ರಾಜ್ಯದ ಜಂಟಿ ಸಹಭಾಗಿತ್ವ:

ರೇಶನ್ ಕಾರ್ಡ್ (Ration Card) ಹೊಂದಿರುವವರಿಗೆ ಕೇಂದ್ರ ಮತ್ತು ರಾಜ್ಯ ಸರಕಾರದ ಜಂಟಿ ಸಹಭಾಗಿತ್ವದಲ್ಲಿ ಅನೇಕ ಸೌಲಭ್ಯ ನೀಡಲಾಗುತ್ತಿದೆ. ಅನುದಾನ ಕೂಡ ಮಂಜೂರಾಗುತ್ತಿದೆ. ಕಳೆದ ವರ್ಷದಲ್ಲಿ ಕಾಂಗ್ರೆಸ್ ಸರಕಾರವು ಅನ್ನಭಾಗ್ಯ ಯೋಜನೆಯ ಫಲಾನುಭವಿಗಳಾಗಲು ರೇಶನ್ ಕಾರ್ಡ್ ಅಗತ್ಯವೆಂದು ತಿಳಿಸಿತ್ತು.

ಕೇಂದ್ರದಿಂದ ಅಕ್ಕಿ ಪೂರೈಕೆಗೆ ಸಹಕಾರ ಸಿಗದ ಕಾರಣ 10 kg ಅಕ್ಕಿ ವಿತರಣಾ ವ್ಯವಸ್ಥೆಯಲ್ಲಿ 5kg ಅಕ್ಕಿ ಬದಲು ಹಣ ನೀಡಲು ಸರಕಾರ ಮುಂದಾಗಿತ್ತು 174ರೂಪಾಯಿ ನಂತೆ ಈ ಯೋಜನೆ ಅಡಿಯಲ್ಲಿ ಹಣ ನೀಡಲಾಗುತ್ತಿದ್ದು ಈ ಹಣ ಪಡೆಯಬೇಕು ಎಂಬ ಕಾರಣಕ್ಕೆ ರೇಶನ್ ಕಾರ್ಡ್ ನಲ್ಲಿ ಸದಸ್ಯರ ಸಂಖ್ಯೆ ಹೆಚ್ಚು ಮಾಡಿಕೊಳ್ಳಲು ಹೋದವರು ಇದ್ದಾರೆ.

 

Image Source: The Indian Express

 

ಅನರ್ಹರ ಸಂಖ್ಯೆ ಹೆಚ್ಚಳ:

advertisement

ಸರಕಾರಿ ಯೋಜನೆ ಸೌಲಭ್ಯ ಪಡೆಯುವ ಸಲುವಾಗಿ ಪಡಿತರ ಚೀಟಿ ಪಡೆಯುವಲ್ಲಿ ಮಹತ್ವದ ಮೋಸ ಆಗುತ್ತಲಿದೆ. ಉನ್ನತ ಸರಕಾರಿ ಹುದ್ದೆಯಲ್ಲಿ ಇರುವವರು ಹಾಗೂ ಆದಾಯ ತೆರಿಗೆಯನ್ನು ಭರಿಸುವವರು ಕೂಡ ಅಂತ್ಯೋದಯ ಹಾಗೂ ಬಿಪಿಎಲ್ ಕಾರ್ಡ್ (BPL Card) ಅನ್ನು ಪಡೆಯುತ್ತಿದ್ದಾರೆ ಇದರಿಂದಾಗಿ ಬಡವರ್ಗದ ಸೌಲಭ್ಯಗಳು ಶ್ರೀಮಂತರಿಗೂ ಹಂಚಿಕೆ ಆಗುತ್ತಿದೆ ಈ ವ್ಯವಸ್ಥೆ ಬದಲಾವಣೆ ಮಾಡಲು ಸರಕಾರ ಚಿಂತನೆ ನಡೆಸಿದೆ.

ಅನರ್ಹರ ವಿರುದ್ಧ ಕ್ರಮ:

 

Image Source: News Next Live

 

ಇತ್ತೀಚಿನ ದಿನಗಳಲ್ಲಿ ಪಡಿತರ ಚೀಟಿ ಪಡೆಯುವಲ್ಲಿ ಅನರ್ಹರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಶ್ರೀಮಂತರು , ಸರಕಾರಿ ಉದ್ಯೋಗಿಗಳು, ಆದಾಯ ತೆರಿಗೆ ಕಟ್ಟುವವರು ಮತ್ತು ಅಪಾರ ಪ್ರಮಾಣದಲ್ಲಿ ಭೂಮಿ ಹೊಂದಿದ್ದವರಿಗೂ BPL, ಅಂತ್ಯೋದಯ ಕಾರ್ಡ್ ಸಿಗುತ್ತಿದೆ ಅಂತವರು ಅನರ್ಹರಾದ ಕಾರಣ ಶಿಸ್ತು ಕ್ರಮ ಕೈಗೊಳ್ಳುವಂತೆ ಕೇಂದ್ರ ಮತ್ತು ರಾಜ್ಯ ಸರಕಾರ ಈ ಬಗ್ಗೆ ಆದೇಶ ನೀಡಿದೆ. ಹಾಗಾಗಿ ಅಕ್ರಮ ಪಡಿತರ ಕಾರ್ಡ್ ಹೊಂದಿದ್ದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು.

EKYC ಕಡ್ಡಾಯ:

ಕೆವೈಸಿ ನಿಯಮ ಇಂದು ಬಹುತೇಕ ರಂಗದಲ್ಲಿ ಜಾರಿ ಆಗಿರುವುದು ನೀವು ಸಹ ನೋಡಿರಬಹುದು. ಇದೀಗ ಕೇಂದ್ರದ ಸಹಕಾರದ ಜೊತೆಗೆ ರಾಜ್ಯ ಸರಕಾರದಿಂದ ನೀಡುವ ಪಡಿತರ ವ್ಯವಸ್ಥೆಯಲ್ಲಿ ಕೂಡ ಕೆವೈಸಿ ನಿಯಮ ಕಡ್ಡಾಯ ಮಾಡಲಾಗಿದ್ದು ಅದನ್ನು ಪಾಲಿಸಲು ಕೂಡ ಸೂಚಿಸಿದೆ. ಮೇ 1 ರಿಂದಲೇ KYC ಕಡ್ಡಾಯ ನಿಯಮ ಇದ್ದು ಯಾರು ಕೆವೈಸಿ ಮಾಡಿಸಿಲ್ಲ ಅಂತವರ ಕಾರ್ಡ್ (Ration Card) ರದ್ದಾಗುತ್ತದೆ.

advertisement

Leave A Reply

Your email address will not be published.