Karnataka Times
Trending Stories, Viral News, Gossips & Everything in Kannada

BPL Card: ಬಿಪಿಎಲ್‌ ಕಾರ್ಡ್ ಇದೆಯಾ? ಕೇಂದ್ರದಿಂದ ನಿಮಗಿದೆ ಮಹತ್ವದ ಯೋಜನೆ!

advertisement

ಹಣ, ಉದ್ಯಮ, ಆಸ್ತಿ ಮೌಲ್ಯ ಇದಕ್ಕಿಂತ ಬಹಳ ಮುಖ್ಯ ನಮ್ಮ ಆರೋಗ್ಯ, ಯಾಕಂದ್ರೆ ಆರೋಗ್ಯ ಸರಿಯಾಗಿದ್ರೆ ಮಾತ್ರ ನೆಮ್ಮದಿಯಿಂದ ಬದುಕಲು ಸಹ ಸಾಧ್ಯ.‌ಇಂದು ಬಡ ವರ್ಗದ ಜನತೆಗೆ ಆರೋಗ್ಯ ಸೌಲಭ್ಯ ವನ್ನು ಉಚಿತವಾಗಿ ನೀಡುವ ನಿಟ್ಟಿನಲ್ಲಿ ಕೇಂದ್ರ ಸರಕಾರ ಈ ಯೋಜನೆಯನ್ನು ರೂಪಿಸಿದೆ. ಕರ್ನಾಟಕದಲ್ಲಿ 2018 ರಲ್ಲಿ ರಾಜ್ಯ ಸರ್ಕಾರ ಆರೋಗ್ಯ ಕರ್ನಾಟಕ ಯೋಜನೆ ಅನುಷ್ಠಾನಗೊಳಿಸಿದೆ. ಈ ಯೋಜನೆ ಸಂಯೋಜಿಸಿ ಆಯುಷ್ಮಾನ್ ಭಾರತ (Ayushman Bharat) ಆರೋಗ್ಯ ಕರ್ನಾಟಕ ಎಂಬ ಯೋಜನೆ ಜಾರಿಗೆ ಮಾಡಿದೆ. ಆಯುಷ್ಮಾನ್‌ ಯೋಜನೆ (Ayushman Yojana) ಯ ಮೂಲಕ ಬಡವರಿಗೆ ಉತ್ತಮ ಉಚಿತ ಆರೋಗ್ಯ ಸೇವೆ ಒದಗಿಸುವುದು ಮೊದಲ ಗುರಿಯಾಗಿದೆ.

ಉಚಿತ ಆರೋಗ್ಯ ಸೌಲಭ್ಯ:

 

 

ಈಗಾಗಲೇ ಈ ಯೋಜನೆಯು ಸಾರ್ವಜನಿಕ ಹಾಗೂ ಖಾಸಗಿ ವಲಯದಲ್ಲಿ ಆರೋಗ್ಯ ಸೇವೆಯ ಗುಣಮಟ್ಟದ ಸುಧಾರಣೆಗಾಗಿ, ಎಲ್ಲ ಜನರಿಗೂ ಆರೋಗ್ಯ ಸೇವೆಯನ್ನು ಉಚಿತವಾಗಿ ನೀಡಬೇಕು ಎಂಬ ಉದ್ದೇಶ ಕೂಡ ಆಗಿದ್ದು ಆಸ್ಪತ್ರೆಯಲ್ಲಿ ದಾಖಲಾಗುವಾಗ ಖರ್ಚು, ಔಷಧಿ, ಆಸ್ಪತ್ರೆಯಿಂದ ಡಿಸ್‌ಚಾರ್ಜ್ ಆದ ಬಳಿಕ ನೀಡಲಾಗುವ ಚಿಕಿತ್ಸೆಯ ಖರ್ಚು ಮೊದಲಾದ ಸೌಲಭ್ಯ ಈ ಕಾರ್ಡ್ ‌ಮೂಲಕ ನೀಡಲಾಗುತ್ತದೆ.

advertisement

ಎಷ್ಟು ಸೌಲಭ್ಯ ಇದೆ?

ಈ ಕಾರ್ಡ್ ಮೂಲಕ ಒಂದು ವರ್ಷಕ್ಕೆ 5 ಲಕ್ಷ ರೂ. ವರೆಗೆ ಉಚಿತ ಚಿಕಿತ್ಸೆ ಲಭ್ಯವಿದ್ದು ವಾರ್ಷಿಕ ಮಿತಿ ಪ್ರತಿ ಕುಟುಂಬಕ್ಕೆ 1.50 ಲಕ್ಷ ರೂ. ಇರುತ್ತದೆ. ರೋಗಿಗಳು ಚಿಕಿತ್ಸೆ ಪಡೆಯಲು ತಮ್ಮ ರೇಷನ್ ಕಾರ್ಡ್ (Ration Card) ಮತ್ತು ಆಧಾರ್ ಕಾರ್ಡ್ (Aadhaar Card) ಅನ್ನು ನೀಡುವುದು ಕಡ್ಡಾಯವಾಗಿದೆ. ಬಿಪಿಎಲ್‌ ಕಾರ್ಡ್ (BPL Card) ಅನ್ನು ಹೊಂದಿರುವವರು ಈ ಅವಕಾಶವನ್ನು ಪಡೆಯಲು ಅರ್ಹರಾಗಿದ್ದು 1.5 ‌ಲಕ್ಷ ರೂಪಾಯಿಯ ವರೆಗೆ ಚಿಕಿತ್ಸೆ ಪಡೆದುಕೊಳ್ಳಲು ನಿಮಗೆ ಅವಕಾಶ ಇದೆ.

ಈ ದಾಖಲೆ ಬೇಕು

  • Aadhaar Card
  • Ration Card
  • PAN Card
  • Caste Certificate
  • Income

ನೀವು ಈ ಕಾರ್ಡ್ ಮಾಡಿಸಬೇಕಾದ್ರೆ ಈ ಲಿಂಕ್ ಗೆ abdm.gov.in/ ಗೆ ಭೇಟಿ ನೀಡುವ ಮೂಲಕ ನೀವು Ayushman Yojana ಗೆ ಅರ್ಜಿಯನ್ನು ಹಾಕಬಹುದಾಗಿದೆ. ಈ ಯೋಜನೆಯಡಿ ನಿಗದಿಪಡಿಸಿದ ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ , ಖಾಸಗಿ ಆಸ್ಪತ್ರೆ ಯಲ್ಲಿ ಚಿಕಿತ್ಸೆ ಪಡೆಯಬಹುದು.

advertisement

Leave A Reply

Your email address will not be published.