Karnataka Times
Trending Stories, Viral News, Gossips & Everything in Kannada

Dinesh Gundu Rao: ಸರ್ಕಾರೀ ಆಸ್ಪತ್ರೆಗಲ್ಲಿ ಚಿಕಿತ್ಸೆ ಪಡೆಯುವ ಜನರಿಗೆ ಗುಡ್ ನ್ಯೂಸ್ ಕೊಟ್ಟ ಸರ್ಕಾರ!

advertisement

ರಾಜ್ಯ ಸರ್ಕಾರವು ರಾಜ್ಯದ ಜನತೆಗೆ ಮತ್ತೊಂದು ಸಿಹಿಸುದ್ದಿ ನೀಡಿದ್ದು, ಸರ್ಕಾರಿ ಆಸ್ಪತ್ರೆಗಳಲ್ಲಿ ಎಲ್ಲ ಬಗೆಯ ಔಷಧಿ ಲಭ್ಯವಿರುವಂತೆ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ Dinesh Gundu Rao ಹೇಳಿದ್ದಾರೆ, ರಾಜ್ಯದ ಪ್ರಾಥಮಿಕ ಮತ್ತು ಜಿಲ್ಲಾ ಆರೋಗ್ಯ ಕೇಂದ್ರ ಗಳಲ್ಲಿ ತುರ್ತು ಅಗತ್ಯ ಔಷಧಿಗಳ ಕೊರತೆ ಇದ್ದಲ್ಲಿ ರಾಷ್ಟ್ರೀಯ ಉಚಿತ ಔಷಧಿ ಸೇವೆಗಳ ಕಾರ್ಯಕ್ರಮದ ಅನುದಾದಡಿ, ಎಬಿಎಆರ್‌ ಕೆ ಅನುದಾನ, ಎಆರ್ ಎಸ್ ಅನುದಾನ ಹಾಗೂ ಇತರ ಅನುದಾನಗಳಲ್ಲಿ ಖರೀದಿಸಿ ಫಲಾನುಭವಿಗಳಿಗೆ ನೀಡಲು ಸೂಚಿಸಲಾಗಿದೆ ಎಂದರು.

ರಾಜ್ಯದ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಇನ್ಮುಂದೆ ಎಲ್ಲಾ ಔಷಧಿಗಳೂ ಲಭ್ಯವಾಗುವಂತೆ ಈಗಾಗಲೇ ಸೂಚನೆ ನೀಡಲಾಗಿದ್ದು, ಶೀಘ್ರೇ ಎಲ್ಲ ಔಷಧಗಳು ಸಿಗಲಿವೆ ಎಂದು ತಿಳಿಸಿದ್ದಾರೆ.

ದಿನೇಶ್ ಗುಂಡೂರಾವ್ ಹೇಳಿದ್ದೇನು?

 

 

advertisement

ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ಮುಂದಿನ ಆರೆಂಟು ತಿಂಗಳಲ್ಲಿ ಎಲ್ಲ ಬಗೆಯ ಔಷಧಿ ಲಭ್ಯವಿರುವಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ (Dinesh Gundu Rao) ತಿಳಿಸಿದರು. ಬಿಜೆಪಿಯ H.S. Gopinath ಅವರ ಪ್ರಶ್ನೆಗೆ D.S. Arun ಅವರು ಕೇಳಿದ ಉಪಪ್ರಶ್ನೆಗೆ ಉತ್ತರಿಸಿದ ಸಚಿವರು, ಸರ್ಕಾರಿ ಆಸ್ಪತ್ರೆಗಳಿಗೆ 732 ಬಗೆಯ ಔಷಧಿಗಳನ್ನು ರಾಜ್ಯ ವೈದ್ಯಕೀಯ ಸರಬರಾಜು ನಿಗಮದಿಂದ ಪೂರೈಕೆ ಮಾಡಬೇಕು. 410 ಔಷಧಗಳು ಅಗತ್ಯವಿದ್ದರೆ, ಉಳಿದವು ಅಪೇಕ್ಷಣಿಯ ಔಷಧಿಗಳಾಗಿವೆ.

ಈ ಪೈಕಿ 192 ಬಗೆಯ ಔಷಧಿಗಳು ಸ್ಟಾಕ್‌ ಇಲ್ಲ. ರಾಜ್ಯದ ಪ್ರಾಥಮಿಕ ಮತ್ತು ಜಿಲ್ಲಾ ಆರೋಗ್ಯ ಕೇಂದ್ರಗಳಲ್ಲಿ ತುರ್ತು ಅಗತ್ಯ ಔಷಧಿಗಳು ಕೊರತೆ ಇದ್ದಲ್ಲಿ ರಾಷ್ಟ್ರೀಯ ಉಚಿತ ಔಷಧಿ ಸೇವೆಗಳ ಕಾರ್ಯಕ್ರಮದ ಅನುದಾದಡಿ ಲಭ್ಯವಿರುವ ಅನುದಾನ, ಎಬಿಎಆರ್‌ಕೆ ಅನುದಾನ, ಎಆರ್‌ಎಸ್‌ ಅನುದಾನ ಹಾಗೂ ಇತರ ಅನುದಾನಗಳಲ್ಲಿ ಖರೀದಿಸಿ ಫಲಾನುಭವಿಗಳಿಗೆ ನೀಡುವಂತೆ ಸೂಚಿಸಲಾಗಿದೆ ಎಂದು ತಿಳಿಸಿದರು.

2 ವರ್ಷಕ್ಕೊಮ್ಮೆ ಟೆಂಡರ್‌

ಔಷಧಿಗಳ ಕೊರತೆ ಆಗದಂತೆ ನಿರಂತವಾಗಿ ಪೂರೈಕೆಯಾಗಲು ಎರಡು ವರ್ಷದ ಅವಧಿಗೆ ಟೆಂಡರ್ ನೀಡಲು ಉದ್ದೇಶಿಸಲಾಗಿದೆ. ರಾಜ್ಯಾದ್ಯಂತ ಔಷಧಗಳ ಸುಗಮ ಪೂರೈಕೆ ವ್ಯವಸ್ಥೆಯನ್ನು ಇನ್ನಷ್ಟು ಸದೃಢ ಮಾಡಲಾಗುವುದು. ಅದೇ ರೀತಿ ಸರ್ಕಾರಿ ಆಸ್ಪತ್ರೆಗಳ ನಿರ್ವಹಣೆ ಹೇಗೆ ಮಾಡಬೇಕೆಂಬ ಬಗ್ಗೆ ಸಿ-ಡಾಕ್‌ ಕಂಪನಿಗೆ ವರದಿ ನೀಡುವಂತೆ ತಿಳಿಸಲಾಗಿದೆ.

ಆಸ್ಪತ್ರೆಗಳಲ್ಲಿ ವೈದ್ಯಕೀಯ ಉಪಕರಣಗಳು ಎಷ್ಟಿವೆ, ಎಷ್ಟು ಅಗತ್ಯವಿದೆ ಎಂಬ ಬಗ್ಗೆ ಸರ್ಕಾರಕ್ಕೂ ಮಾಹಿತಿ ಇಲ್ಲ. ಹೀಗಾಗಿ ಈ ಬಗ್ಗೆ ವರದಿ ನೀಡಲು ಕೆಪಿಎಂಜಿ ಸಂಸ್ಥೆಗೆ ತಿಳಿಸಲಾಗಿದೆ ಎಂದು ಸಚಿವರು ವಿವರಿಸಿದರು. ಮುಂಬರುವ ದಿನಗಳಲ್ಲಿ ಸರ್ಕಾರಿ ಆಸ್ಪತ್ರೆಗಳ ಬಳಿ ಯಾವುದೇ ಫಾರ್ಮಸಿಗಳು ಇರಬಾರದು, ಜನರಿಗೆ ಆಸ್ಪತ್ರೆಗಳಲ್ಲಿ ಎಲ್ಲ ಬಗೆಯ ಔಷಧಿಗಳು ದೊರೆಯುವಂತಾಗಬೇಕು ಎಂಬುದು ತಮ್ಮ ಉದ್ದೇಶವಾಗಿದೆ ಎಂದು ಸಚಿವ ದಿನೇಶ್‌ ಗುಂಡೂರಾವ್‌ ಹೇಳಿದರು.

advertisement

Leave A Reply

Your email address will not be published.