Karnataka Times
Trending Stories, Viral News, Gossips & Everything in Kannada

Dearness Allowance: ನೌಕರರ ತುಟ್ಟಿ ಭತ್ಯೆ ಏರಿಕೆ, ಹಳೆ ಬಾಕಿ ಶೀಘ್ರ ಪಾವತಿ ಎಂದ್ರು ಸಿಎಂ, ನೌಕರರು ಫುಲ್ ಖುಷ್

advertisement

ಸರಕಾರಿ ಕೆಲಸ ಪಡೆಯುವುದು ಬಹುತೇಕರ ಜೀವನದ ಒಂದು ಕನಸ್ಸಾಗಿರುತ್ತದೆ.ಸರಕಾರಿ ಕೆಲಸದಲ್ಲಿ ಅನೇಕ ಸೌಲಭ್ಯ ಸಿಗುವ ಕಾರಣ ಸರಕಾರಿ ಕೆಲಸಕ್ಕೂ ಅಧಿಕ ಮಾನ್ಯತೆ ಇದೆ. ಇದೀಗ ಹಿಮಾಚಲ ಪ್ರದೇಶದಲ್ಲಿ ಸರಕಾರಿ ನೌಕರರಿಗೆ ತುಟ್ಟಿ ಭತ್ಯೆ (Dearness Allowance) ಹೆಚ್ಚಿಸಲು ರಾಜ್ಯ ಸರಕಾರ ಮುಂದಾಗಿದ್ದು ಅಲ್ಲಿನ ಜನರಿಗೆ ಅದರಲ್ಲೂ ಸರಕಾರಿ ಉದ್ಯೋಗದಲ್ಲಿ ಇರುವವರಿಗೆ ಇದೊಂದು ಬೊಂಬಾಟ್ ಕೊಡುಗೆ ನೀಡಿದಂತಾಗಿದೆ. ಇಷ್ಟು ಮಾತ್ರವಲ್ಲದೇ ಉದ್ಯೋಗಸ್ಥರಿಗಾಗಿ ಕೆಲ ಕ್ರಮ ಕೈಗೊಂಡಿದ್ದು ಹಂತ ಹಂತವಾಗಿ ಅಭಿವೃದ್ಧಿ ಕಾರ್ಯಚಟುವಟಿಕೆಗಳನ್ನು ಘೋಷಣೆ ಮಾಡಲಾಗಿದೆ.

ಸಿಎಂ ರಿಂದ ಘೋಷಣೆ:

 

 

ಹಿಮಾಚಲ ಪ್ರದೇಶದ ಸಿಎಂ ಆದ ಸುಖುವಿಂದರ್ ಸಿಂಗ್ ಸುಖು ಅವರು ತಮ್ಮ ರಾಜ್ಯದ ಜನತೆಗೆ ಕೆಲ ಅನುಕೂಲಕರ ಯೋಜನೆ ರೂಪಿಸಿದ್ದರ ಬಗ್ಗೆ ಮಾಹಿತ ನೀಡಿದ್ದಾರೆ. ಮಾರ್ಚ್ 1 ರಿಂದಲೇ ನೌಕರರ ಮತ್ತು ಪಿಂಚಣಿದಾರರ ಬಾಕಿ ಮೊತ್ತವನ್ನು ಹಂತ ಹಂತವಾಗಿ ಬಿಡುಗಡೆ ಮಾಡುವುದಾಗಿ ತಿಳಿಸಿದ್ದಾರೆ. ಅದರ ಜೊತೆಗೆ ಎಪ್ರಿಲ್ 1 ರಿಂದ 4% Dearness Allowance (ತುಟ್ಟಿ ಭತ್ಯೆ) ನೀಡುವುದಾಗಿ ಘೋಷಣೆ ಮಾಡಿದ್ದಾರೆ ಹಾಗಾಗಿ ನಾನ್ ಗೆಜೆಟೆಡ್ ಎಂಪ್ಲಾಯ್ಸ್ ಫೆಡರೇಶನ್ ಮುಖ್ಯ ಮಂತ್ರಿ ಅವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.

ಇತರ ಸೌಲಭ್ಯ:

advertisement

ಹಿಮಾಚಲ ಪ್ರದೇಶದ ಸಿಎಂ ಆದ ಸುಖುವಿಂದರ್ ಸಿಂಗ್ ಸುಖು (CM Sukhvinder Singh Sukhu) ಅವರು ತಮ್ಮ ಆಡಳಿತ ಅವಧಿಯ ಎರಡನೇ ಬಜೆಟ್ ಮಂಡಿಸಿದ್ದು ಅಂಗನವಾಡಿ ಕಾರ್ಯಕರ್ತರು, ಸಿಬಂದಿ, ಜಿಲ್ಲಾ ಪರಿಷತ್ ಅಧ್ಯಕ್ಷರು, ಕಾರ್ಮಿಕರು, ಕೌನ್ಸಿಲರ್ ಗಳು, ಉಪಾಧ್ಯಕ್ಷರು ಹಾಗೂ ಪಂಚಾಯತ್ ಪ್ರತಿನಿಧಿಗಳ ಗೌರವ ಧನ ಹೆಚ್ಚಿಸುವುದಾಗಿ ಸಿಎಂ ಅವರು ತಿಳಿಸಿದ್ದಾರೆ.ಸರಕಾರಿ ಮತ್ತು ಖಾಯಂ ನೌಕರರ ಬಾಕಿ ಮೊತ್ತ ನೀಡುವ ಜೊತೆಗೆ ತುಟ್ಟಿ ಭತ್ಯೆ ಏರಿಕೆ ಮಾಡುವುದಾಗಿ ಹೇಳಿದ್ದಾರೆ.

ಗ್ಯಾಚ್ಯುಟಿ ಸೌಲಭ್ಯ:

ಮಾರ್ಚ್ 1ರಿಂದಲೇ ನೌಕರರಿಗೆ ಹಾಗೂ ಪಿಂಚಣಿ (Pension) ದಾರರಿಗೆ ಹಳೆ ಮೊತ್ತ ಬಾಕಿ ಉಳಿಸಿದ್ದನ್ನು ನೀಡುವ ಪ್ರಕ್ರಿಯೆ ಆರಂಭ ಆಗಲಿದೆ. ಜನವರಿ 2016 ರಿಂದ 2021 ರ ಡಿಸೆಂಬರ್ 31ರ ವೇಳೆಗೆ ನಿವೃತ್ತರಾದವರಿಗೆ ಬಾಕಿ ಮೊತ್ತ ನೀಡುವ ಜೊತೆಗೆ ಗ್ರ್ಯಾಚುಟಿ ಸಹ ಲಭ್ಯವಾಗಲಿದೆ ಎಂದು ಹಿಮಾಚಲ ಪ್ರದೇಶದ ಸಿಎಂ ಅವರು ತಿಳಿಸಿದ್ದಾರೆ. ಎಪ್ರಿಲ್ 1 ರಿಂದ 4%ನಷ್ಟು DA ನೀಡಲಾಗುತ್ತದೆ. ಇದಕ್ಕಾಗಿ 580 ಕೋಟಿ ರೂಪಾಯಿ ಅಗತ್ಯ ವಿದ್ದು ಆ ಮೊತ್ತ ಕಾಯ್ದಿರಿಸಲಾಗಿದೆ. ಇಲ್ಲಿ ವರೆಗೆ LTC ಸೌಲಭ್ಯ ಒಮ್ಮೆ ಮಾತ್ರ ಪಡೆಯಲಾಗುತ್ತಿತ್ತು ಆದರೆ ಇನ್ನು ಮುಂದೆ ಎರಡು ಬಾರಿ ಪಡೆಯಲಿದ್ದಾರೆ ಎಂದು ಸಿಎಂ ಅವರು ತಿಳಿಸಿದ್ದಾರೆ.

ಕರ್ನಾಟಕದ ಮೇಲೂ ಪ್ರಭಾವ:

ಹಿಮಾಚಲ ಪ್ರದೇಶದಲ್ಲಿ ಪ್ರಸ್ತುತ ಕಾಂಗ್ರೆಸ್ ಸರಕಾರ ಆಡಳಿತದಲ್ಲಿದ್ದು ಇದು ಲೋಕಸಭೆ ಚುನಾವಣೆಗೆ ಮುನ್ನ ಬಜೆಟ್ ನಿಂದ ಘೋಷಣೆಯಾದ ಅಂಶವಾಗಿದೆ. ನೌಕರರ ತುಟ್ಟಿ ಭತ್ಯೆ ಏರಿಕೆಯನ್ನು ಕರ್ನಾಟಕದಲ್ಲಿಯೂ ಶೀಘ್ರ ಅಳವಡಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದ್ದು ಈ ಕ್ರಮ ಜಾರಿಗೆ ಬಂದರೆ ಸಾಮಾನ್ಯ ನೌಕರರು ಮತ್ತು ಸರಕಾರಿ ನೌಕರರಿಗೆ ಬಂಪರ್ ಕೊಡುಗೆ ನಮ್ಮ ರಾಜ್ಯದಲ್ಲೂ ಸಿಕ್ಕಂತಾಗುವುದು.

advertisement

Leave A Reply

Your email address will not be published.