Karnataka Times
Trending Stories, Viral News, Gossips & Everything in Kannada

Mahindra Scorpio N: ಕಣ್ಣು ಮುಚ್ಚಿ ಖರೀದಿಸುತ್ತಿದ್ದಾರೆ ಮಹಿಂದ್ರಾ ಕಂಪನಿಯ ಈ SUV ಕಾರು, 1 ಲಕ್ಷ ಬುಕ್ಕಿಂಗ್!

advertisement

ಮಹಿಂದ್ರ ಮೋಟಾರ್ ಇಂಡಸ್ಟ್ರಿಯಲ್ಲಿ ಸಾಕಷ್ಟು ಹೆಸರುಗಳಿಸಿದೆ. ಅದರಲ್ಲೂ ಮಹಿಂದ್ರಾದ ವಾಹನಗಳ ಕಾರ್ಯಕ್ಷಮತೆಯ ಬಗ್ಗೆ ಮಾತನಾಡುವಂತೆ ಇಲ್ಲ. ಎಲ್ಲಾ ರೀತಿಯಲ್ಲಿಯೂ ಉತ್ತಮವಾದ ಶಕ್ತಿಶಾಲಿ ವಾಹನಗಳನ್ನು ತಯಾರು ಮಾಡಿಕೊಡುತ್ತದೆ ಮಹಿಂದ್ರ. ಇದೀಗ ಮಹಿಂದ್ರಾದ 2024 ಫೆಬ್ರವರಿ ತಿಂಗಳಿನಲ್ಲಿ ಹೊಸ Mahindra Scorpio N Classic ಬುಕಿಂಗ್ ಆರಂಭವಾಗಿದೆ. ಆಶ್ಚರ್ಯ ಅಂದ್ರೆ ಈಗಾಗಲೇ ಒಂದು ಲಕ್ಷಕ್ಕೂ ಹೆಚ್ಚಿನ ಬುಕ್ಕಿಂಗ್ ಆಗಿದೆ.

ನಿರಂತರವಾಗಿ ಹೆಚ್ಚಿದ Mahindra Scorpio N ಕ್ಲಾಸಿಕ್ ಬುಕಿಂಗ್:

 

 

ಮಹಿಂದ್ರದ ಹೊಸ ಸ್ಕಾರ್ಪಿಯೋ ಎಸ್ಯುವಿ ಪ್ರತಿ ತಿಂಗಳು 16,000 ಬುಕಿಂಗ್ ಅನ್ನು ಪಡೆದುಕೊಳ್ಳುತ್ತಿದೆ. 2,25,800 ಬುಕಿಂಗ್ ಗೆ ಅವಕಾಶ ಇದ್ದು ಈಗಾಗಲೇ 1.01 ಲಕ್ಷ ಬುಕಿಂಗ್ ಮಾಡಲಾಗಿದೆ.

Mahindra Scorpio N ರೂಪಾಂತರಗಳು ಮತ್ತು ಬೆಲೆ:

 

advertisement

 

Mahindra Scorpio N ಐದು ಟ್ರಿಮ್ಗಳಲ್ಲಿ ಲಭ್ಯವಿದೆ. Z2, Z4, Z6, Z8, Z8L ಈ ರೂಪಾಂತರಗಳನ್ನು ಕಾಣಬಹುದು. ಸ್ಕಾರ್ಪಿಯೊ ಕ್ಲಾಸಿಕ್ 7 ಮತ್ತು 9 ಆಸನಗಳಲ್ಲಿ ಎರಡು ರೂಪಾಯಿಗಳಲ್ಲಿ ಲಭ್ಯವಿದೆ. ಇದರ ಆರಂಭಿಕ ಬೆಲೆ ಎಕ್ಸ್ ಶೋರೂಮ್ ಪ್ರಕಾರ 13. 59 ಲಕ್ಷ ರೂಪಾಯಿಗಳಿಂದ ಆರಂಭವಾಗುತ್ತದೆ.

ಪೆಟ್ರೋಲ್ ಗಿಂತ ಡೀಸೆಲ್ ರೂಪಾಂತರಕ್ಕೆ ಬೇಡಿಕೆ ಹೆಚ್ಚು:

ಮಹಿಂದ್ರಾ ಸ್ಕಾರ್ಪಿಯೊದ ಡೀಸೆಲ್ ರೂಪಾಂತರ ಪೆಟ್ರೋಲ್ ರೂಪಾಂತರಕ್ಕಿಂತಲೂ ಹೆಚ್ಚಿನ ಬೇಡಿಕೆಯನ್ನು ಪಡೆದುಕೊಂಡಿದೆ. 2024, ಜನವರಿ ತಿಂಗಳಿನಲ್ಲಿ ಒಟ್ಟು ಮಾರಾಟವಾದ ಯೂನಿಟ್ ಗಳು 14,293. ಅವುಗಳಲ್ಲಿ ಡೀಸೆಲ್ ರೂಪಾಂತರ 13,528 ಯೂನಿಟ್ ಆಗಿದ್ದರೆ ಪೆಟ್ರೋಲ್ ರೂಪಾಂತರ ಕೇವಲ 765 ಯೂನಿಟ್ ಗಳು ಮಾತ್ರ.

ಒಟ್ಟಿನಲ್ಲಿ ಮಹಿಂದ್ರಾ ಸ್ಕಾರ್ಪಿಯೊದ ಪೆಟ್ರೋಲ್ ಹಾಗೂ ಡೀಸೆಲ್ ಆವೃತ್ತಿಗಳು ಜನರನ್ನು ಹೆಚ್ಚು ಆಕರ್ಷಿಸುತ್ತಿದ್ದು, ದಿನದಿಂದ ದಿನಕ್ಕೆ ಬುಕಿಂಗ್ ಸಂಖ್ಯೆ ಕೂಡ ಜಾಸ್ತಿ ಆಗುತ್ತಿದೆ. ನೀವು ಮುಂದಿನ ಕಾರು ಬುಕ್ ಮಾಡಲು ಯೋಚಿಸುತ್ತಿದ್ದರೆ ಸ್ಕಾರ್ಪಿಯೊ ಎಸ್ಯುವಿ ಉತ್ತಮ ಆಯ್ಕೆಯಾಗಿದೆ.

advertisement

Leave A Reply

Your email address will not be published.