Karnataka Times
Trending Stories, Viral News, Gossips & Everything in Kannada

LPG Cylinder Subsidy: ಗ್ಯಾಸ್ ಸಿಲಿಂಡರ್ ಸಬ್ಸಿಡಿ ಹಣ ಪಡೆಯಲು ಈ ಕೆಲಸ ಕಡ್ಡಾಯ, ತಪ್ಪಿದ್ರೆ ಹಣ ಬರಲ್ಲ!

advertisement

ಸಿಲಿಂಡರ್ ಬಳಕೆಯನ್ನು ಉತ್ತೇಜಿಸುವ ಸಲುವಾಗಿ ಕೇಂದ್ರ ಸರಕಾರದಿಂದಲೇ ಬಡವರ್ಗದ ಜನರಿಗೆ ಅನುಕೂಲ ಆಗಲೆಂಬ ಉದ್ದೇಶಕ್ಕಾಗಿ ಉಜ್ವಲ್ ಯೋಜನೆಯನ್ಮು ಪರಿಚಯಿಸಲಾಗಿದ್ದು ಈ ಒಂದು ಕ್ರಮದಿಂದ ಸಾಕಷ್ಟು ಬಡ ವರ್ಗದ ಜನರು ಅನುಕೂಲಕರ ಪರಿಸ್ಥಿತಿ ಕಂಡಿದ್ದಾರೆ. ಅದೆ ರೀತಿ ಜನರಿಗೆ ಉಜ್ವಲ್ ಯೋಜನೆ (PM Ujjwala Yojana) ಗೆ ಬೆಂಬಲಿಸುವ ಸಲುವಾಗಿ ಸಬ್ಸಿಡಿ ಯನ್ನು ಸಹ ನೀಡಲಾಗುತ್ತಿದ್ದು ಈ ಸಬ್ಸಿಡಿ ಮೊತ್ತ ಮಧ್ಯಮ ಮತ್ತು ಬಡ ವರ್ಗಕ್ಕೆ ಸಹಕಾರ ನೀಡಿದಂತಾಗಿದೆ.

ಸಬ್ಸಿಡಿ ಪಡೆಯಲು ಈ ಕ್ರಮ ಕಡ್ಡಾಯ:

ರಾಷ್ಟ್ರೀಯ ಮಟ್ಟದಲ್ಲಿ ಪ್ರತೀ ಹಂತಕ್ಕೂ ಈಗ EKYC ಕೇಳಲಾಗುತ್ತಿದೆ. ಹಾಗಾಗಿ ಈಗ ಉಜ್ವಲ್ ಯೋಜನೆ (PM Ujjwala Yojana) ಗೆ ಕೂಡ ಕೆವೈಸಿ ಕಡ್ಡಾಯ ಮಾಡಲಾಗುತ್ತಿದೆ. ಕೆವೈಸಿ ಮಾಡುವ ಮೂಲಕ  ಸಬ್ಸಿಡಿ ಪಡೆಯಬಹುದು. ಕೆವೈಸಿ ಮಾಡಿಸದೇ ಇದ್ದರೆ ಸಬ್ಸಿಡಿ ಮೊತ್ತ ಸಹ ಬರಲಾರದು. ಮಾರ್ಚ್ 31ರ ಒಳಗೆ ಕೆವೈಸಿ ಕಡ್ಡಾಯವಾಗಿ ಮಾಡಿಸಲೇ ಬೇಕೆಂದು ಕೇಂದ್ರ ಸರಕಾರ ಮಾಧ್ಯಮ ಮೂಲಗಳಿಗೆ ಮಾಹಿತಿ ನೀಡಿವೆ. ಕೆವೈಸಿಯನ್ನು ನೀವು ಆನ್ಲೈನ್ ಮೂಲಕ ಮಾಡಿಸಬಹುದಾಗಿದ್ದು ಆ ಪ್ರಕ್ರಿಯೆ ಬಗ್ಗೆ ತಿಳಿಯಲು ಪೂರ್ತಿ ಓದಿ.

 

 

advertisement

ಯಾಕೆ KYC?

ಉಜ್ವಲ್ ಯೋಜನೆ (PM Ujjwala Yojana) ಮೂಲಕ ಮಧ್ಯಮ ವರ್ಗದ ಹಾಗೂ ಬಡವರಿಗೆ ಕೂಡ ಎಲ್ ಪಿಜಿ ಸಿಲಿಂಡರ್ (LPG Cylinder) ಬಳಸಲು ಪ್ರೋತ್ಸಾಹ ನೀಡಲಾಗುತ್ತಿದೆ. ಖಾಸಗಿ ಸಿಲಿಂಡರ್ ಗೆ ಹೋಲಿಸಿದರೆ ಕಡಿಮೆ ಮೊತ್ತದ ಮತ್ತು ಸರಕಾರದಿಂದ ಕೂಡ ಸಹಾಯಧನ ನೀಡಲಾಗುತ್ತಿದೆ. ಹೀಗಾಗಿ ಕೆಲಸವೂ ಸುಲಭ ಜೊತೆಗೆ ಸಬ್ಸಿಡಿ ಸಹ ದೊರೆಯುತ್ತದೆ. ಆದರೆ ಬಹುತೇಕರಿಗೆ ಈ ಕೆವೈಸಿ ಮಾಡಿಸುವ ಮೂಲ ಕಾರಣ ಗೊತ್ತಿರದು. ಸರಕಾರಕ್ಕೆ ತನ್ನ ಗ್ರಾಹಕ ಯಾರು ಎಂಬುದನ್ನು ತಿಳಿಯುವ ಸಲುವಾಗಿ ಈ ವ್ಯವಸ್ಥೆ ಮಾಡಲಾಗಿದೆ. ಅನೇಕ ಅಕ್ರಮ ಚಟುವಟಿಕೆ ನಡೆಯುತ್ತಲಿದ್ದು KYC ಕಡ್ಡಾಯ ಮಾಡಲಾಗುತ್ತಿದೆ.

ಪ್ರಕ್ರಿಯೆ ಹೇಗೆ?

ಇದಕ್ಕಾಗಿಯೇ ಸರಕಾರದಿಂದ ಅಧಿಕೃತ ವೆಬ್ಸೈಟ್ ತಯಾರಾಗಿದ್ದು https://www.mylpg.in/ ಗೆ ಭೇಟಿ ನೀಡಿ. ವೆಬ್ಸೈಟ್ ಓಪನ್ ಮಾಡುತ್ತಲೇ ಇಂಡಿಯನ್ ಹಾಗೂ HP Gas , ಭಾರತ್ ಎಂಬ ಆಯ್ಕೆ ಕಾಣಲಿದೆ. ಅದರಲ್ಲಿ ನೀವು ಸಂಪರ್ಕ ಹೊಂದಿರುವ ಗ್ಯಾಸ್ ಸಿಲಿಂಡರ್ ಮೇಲೆ ಕ್ಲಿಕ್ ಮಾಡಿ. ಆಗ KYC ಗೆ ಸಂಬಂಧಿಸಿದ ಗ್ಯಾಸ್ ಕಂಪೆನಿಗಳು ನಿಮಗೆ ಕಾಣಸಿಗಲಿದೆ. ಬಳಿಕ ಗ್ರಾಹಕರ ಸಂಖ್ಯೆ , LPG ಐಡಿ ಯನ್ನು ನಮೋದಿಸಿ. ಬಳಿಕ ಅದರಲ್ಲಿ ಆಧಾರ್ ಪರಿಶೀಲನೆ ಮಾಡಿ OTP ಕೇಳಲಾಗುತ್ತದೆ. OTP ಹಾಕಬೇಕು ಬಳಿಕ ಪೂರ್ತಿ ಪ್ರಕ್ರಿಯೆ ಪೂರ್ಣವಾಗಲಿದೆ. ಹೀಗೆ KYC ಸಲ್ಲಿಕೆ ಆಗಲಿದೆ.

ಒಟ್ಟಾರೆಯಾಗಿ ಎಲ್ಲ ಸರಕಾರದ ಯೋಜನೆ, ಅನುದಾನ ಇತ್ಯಾದಿ ಪ್ರಕ್ರಿಯೆಗಳಿಗೆ KYC ಕಡ್ಡಾಯಮಾಡಲಾಗುತ್ತಿದ್ದು ಅಕ್ರಮ ತಡೆಗಟ್ಟಲು ಈ ಕ್ರಮ ಬಹಳ ಅನುಕೂಲ ಆಗಲಿದೆ. ನೀವು ಕೂಡ ಸರಕಾರದ ಉಜ್ವಲ್ ಯೋಜನೆ ಫಲಾನುಭವಿಗಳಾಗಿದ್ದರೆ ಈಗಲೆ ಕೆವೈಸಿ ಅಪ್ಡೇಟ್ ಆಗಿದೆ ಅಥವಾ ಇಲ್ಲ ಎಂದು ಖಾತರಿ ಪಡಿಸಿಕೊಳ್ಳಿ. ಈ ಮೂಲಕ ಸಬ್ಸಿಡಿ ಸೌಲಭ್ಯ ಪಡೆಯಿರಿ.

advertisement

Leave A Reply

Your email address will not be published.