Karnataka Times
Trending Stories, Viral News, Gossips & Everything in Kannada

Student Scholarship: ಕಾರ್ಮಿಕರ ಮಕ್ಕಳಿಗೆ ಬಂಪರ್ ಗುಡ್ ನ್ಯೂಸ್! 11 ಸಾವಿರ ರೂ ನೇರವಾಗಿ ಖಾತೆಗೆ

advertisement

ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರಿಗೆ ಈಗಾಗಲೇ ಸರಕಾರದಿಂದ ಅನೇಕ ಯೋಜನೆಗಳು ಸಿದ್ಧವಾಗಿದೆ. ವಿಮೆ ಸೌಲಭ್ಯ ವಿತರಣೆಯಿಂದ ಹೆಚ್ಚುವರಿ ಸಹಾಯಧನದವರೆಗೂ ಅನೇಕ ಸೇವಾ ಸೌಲಭ್ಯ ನೀಡುವುದನ್ನು ನಾವು ಕಾಣಬಹುದು. ಇದೀಗ ಕಾರ್ಮಿಕರ ಮಕ್ಕಳಿಗೆ ರಾಜ್ಯ ಸರಕಾರವು ಬೊಂಪರ್ ಗುಡ್ ನ್ಯೂಸ್ ಒಂದನ್ನು ನಾವಿಂದು ನಿಮಗೆ ನೀಡಲಿದ್ದು ಈ ಮಾಹಿತಿಯನ್ನು ನೀವು ಕೂಡ ಪೂರ್ತಿಯಾಗಿ ಓದಿ.

ಕಟ್ಟಡ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಕಾಯುವ ಸಲುವಾಗಿ ಈಗಾಗಲೇ ಬೇರೆ ಬೇರೆ ಯೋಜನೆಯನ್ನು ಸರಕಾರ ಪರಿಚಯಿಸಿದ್ದು ಅವರ ಮಕ್ಕಳಿಗೂ ವಿದ್ಯಾಭ್ಯಾಸ ಸಿಗಬೇಕು ಎಂಬ ನೆಲೆಯಲ್ಲಿ ವಿದ್ಯಾರ್ಥಿ ವೇತನ (Student Scholarship) ವಿತರಣೆ ಮಾಡಲು ರಾಜ್ಯ ಸರಕಾರ ಮುಂದಾಗಿದ್ದು ಇದಕ್ಕಾಗಿ ಅರ್ಜಿಯನ್ನು ಕೂಡ ಆಹ್ವಾನಿಸಲಾಗಿದೆ. ಈ ವಿದ್ಯಾರ್ಥಿ ವೇತನವು ಬಡವರ್ಗದ ಮಕ್ಕಳಿಗೆ ಹಣಕಾಸಿನ ನೆರವು ನೀಡಲಿದೆ ಎಂದು ಹೇಳಬಹುದು.

ಕಾರ್ಮಿಕರ ಕಾರ್ಡ್ ಅಗತ್ಯ:

 

Image Source: NG Manpower

 

ಈ ವಿದ್ಯಾರ್ಥಿ ವೇತನವು ಎಲ್ಲ ಕಾರ್ಮಿಕರ ಮಕ್ಕಳಿಗೆ ಸಿಗಲಾರದು ಬದಲಿಗೆ ಕಾರ್ಮಿಕರ ಕಾರ್ಡ್ ಹೊಂದಿದ್ದ ಪೋಷಕರ ಮಕ್ಕಳು ವಿದ್ಯಾರ್ಥಿ ವೇತನಕ್ಕೆ (Student Scholarship) ಅಪ್ಲೈ ಮಾಡಬಹುದು. ಕಾರ್ಮಿಕರ ಮಕ್ಕಳು ಈ ವಿದ್ಯಾರ್ಥಿ ವೇತನ ಪಡೆಯಲು ಕಾರ್ಮಿಕರ ಕಾರ್ಡ್ (Labour Card) ಅಗತ್ಯ ವಾಗಿ ಬೇಕು. ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಗುಣವಾಗಿ ವಾರ್ಷಿಕ 1100 ನಿಂದ 11,000 ದ ವರೆಗೆ ವಿದ್ಯಾರ್ಥಿ ವೇತನ ಸಿಗಲಿದೆ.

advertisement

ಅರ್ಹತೆ ಏನು? ಎಷ್ಟು ಮೊತ್ತ ಸಿಗಲಿದೆ:

 

Image Source: ExamBangla.com

 

  • ಸಾಮಾನ್ಯ ಲೇಬರ್ ಕಾರ್ಡ್ (Labour Card) ಹೊಂದಿರುವವರ ಮಕ್ಕಳು ಕಳೆದ ಸಾಲಿನಲ್ಲಿ 50% ಪಡೆದಿರಬೇಕು. ST/SC ಅವರು 45%ನಷ್ಟು ಪಡೆಯಬೇಕು.
  • ಪೋಷಕರ ಆದಾಯ ತಿಂಗಳಿಗೆ 35,000ಕ್ಕಿಂತ ಕಡಿಮೆ ಇರಬೇಕು ಹಾಗೂ ವಿದ್ಯಾರ್ಥಿಗಳ ಪೋಷಕರು ಕರ್ನಾಟಕ ಕಾರ್ಮಿಕ ಕಲ್ಯಾಣ ಮಂಡಳಿಯ ನೋಂದಾಯಿತ ಸದಸ್ಯರಾಗಿರಬೇಕು.
  • 1ನೇ ತರಗತಿಯಿಂದ ಪದವಿವರೆಗೆ 1,100 ರೂಪಾಯಿಂದ 6000ದವರೆಗೆ ಸ್ಕಾಲರ್ ಶಿಪ್ ಸಿಗಲಿದೆ.
  • ಸ್ನಾತಕೋತ್ತರ ಪದವಿಗೆ 10,000 ಸ್ಕಾಲರ್ ಶಿಪ್ ಪಡೆಯಬಹುದು.
  • PHD ಮಾಡುವವರಿಗೆ ವಾರ್ಷಿಕ 11,000 ವಿದ್ಯಾರ್ಥಿ ವೇತನವು ಸಿಗಲಿದೆ.

ಎಲ್ಲಿ ಅರ್ಜಿ ಸಲ್ಲಿಸುವುದು?

ಅರ್ಜಿ ಸಲ್ಲಿಸಲು ಕೂಡ ಕೆಲವು ದಾಖಲಾತಿ ಅಗತ್ಯವಾಗಿದೆ. ವಿದ್ಯಾರ್ಥಿಗಳ ಆಧಾರ್ ಕಾರ್ಡ್, ಪೋಷಕರ ಆಧಾರ್ ಕಾರ್ಡ್, ಜಾತಿ ಪ್ರಮಾಣ ಪತ್ರ, ಲೇಬರ್ ಕಾರ್ಡ್, ಆದಾಯ ಪ್ರಮಾಣ ಪತ್ರ, ಬ್ಯಾಂಕ್ ಖಾತೆಯ ವಿವರ, ಹಿಂದಿನ ಶೈಕ್ಷಣಿಕ ವರ್ಷದ ಅಂಕಪಟ್ಟಿ, ಶಾಲೆ ಅಥವಾ ಕಾಲೇಜಿನ ದಾಖಲಾತಿ ಪಡೆದರೆ ಅದಕ್ಕೆ ಸಂಬಂಧ ಪಟ್ಟ ರಿಸಿಪ್ಟ್ ಅಗತ್ಯವಾಗಿದೆ. ನೀವು http://klwbapp.Karnataka.gov.in ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು.

advertisement

Leave A Reply

Your email address will not be published.