Karnataka Times
Trending Stories, Viral News, Gossips & Everything in Kannada

Labour Card Scholarship: ಇಂತಹವರಿಗೆ ಲೇಬರ್ ಕಾರ್ಡ್ ಸ್ಕಾಲರ್ ಶಿಪ್ ಹಣ ಬರಲ್ಲ! ಕೂಡಲೇ ಚೆಕ್ ಮಾಡಿಕೊಳ್ಳಿ

advertisement

ಕಾರ್ಮಿಕ ಇಲಾಖೆ ಅಥವಾ ಕರ್ನಾಟಕ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ವತಿಯಿಂದ ಹೊಸ ಅಪ್ಡೇಟ್ ಒಂದನ್ನು ವಿದ್ಯಾರ್ಥಿಗಳಿಗೆ ಬಿಡುಗಡೆ ಮಾಡಲಾಗಿದೆ. ಅಂದರೆ ಸ್ಕಾಲರ್ ಶಿಪ್ ಗೆ ಸಂಬಂಧಪಟ್ಟಂತಹ ಹೊಸ ಅಪ್ಡೇಟ್ ಒಂದನ್ನು ಕಾರ್ಮಿಕ ಇಲಾಖೆ ವತಿಯಿಂದ ನೀಡಲಾಗಿದ್ದು ವಿದ್ಯಾರ್ಥಿಗಳು ಈ ಕೂಡಲೇ ಅಪ್ಡೇಟ್ ಮಾಡಿಕೊಳ್ಳುವಂತೆ ಸೂಚಿಸಲಾಗಿದೆ.

ಇಲಾಖೆಯಿಂದ ನೀಡಿರುವಂತಹ ಹೊಸ ಅಪ್ಡೇಟ್ ಏನು ಎಂದು ತಿಳಿದುಕೊಳ್ಳೋಣ:

ಕಾರ್ಮಿಕ ಇಲಾಖೆ ವತಿಯಿಂದ ಲೇಬರ್ ಕಾರ್ಡ್ (Labour Card) ಹೊಂದಿರುವಂತಹ ಪ್ರತಿ ಕಟ್ಟಡ ಕಾರ್ಮಿಕ ಕುಟುಂಬಕ್ಕೆ ಸೇರಿದಂತಹ ಇಬ್ಬರೂ ಮಕ್ಕಳಿಗೆ ಧನಸಹಾಯವನ್ನು ಮಾಡುವ ಮೂಲಕ ಅವರ ವಿದ್ಯಾಭ್ಯಾಸಕ್ಕೆ ಸಹಾಯ ಮಾಡಲಾಗುತ್ತಿತ್ತು. ಇನ್ನು ಈ ವರ್ಷವೂ ಕೂಡ ಅದರ ಅರ್ಜಿಗೆ ಆಹ್ವಾನ ಮಾಡಲಾಗಿದ್ದು, ಮೇ 31ನೇ ತಾರೀಕು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ಇನ್ನು ಈಗಾಗಲೇ ಎಸ್ ಎಸ್ ಪಿ ಸ್ಕಾಲರ್ ಶಿಪ್ (SSP Scholarship) ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ ಮುಗಿದು ಹೋಗಿದ್ದು, ಇದರ ಮೇಲೆಯೂ ಸಹ ಕರ್ನಾಟಕ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

advertisement

ಇನ್ನು ಎಸ್ ಎಸ್ ಪಿ (SSP) ಸ್ಕಾಲರ್ ಶಿಪ್ ನಲ್ಲಿ ಅರ್ಜಿ ಸಲ್ಲಿಸಿರುವ ದಾಖಲೆಗಳನ್ನೇ ಮುಂದುವರೆಸಿಕೊಂಡು ಈ ಲೇಬರ್ ಕಾರ್ಡ್ (Labour Card) ನಿಂದ ಸಿಗುವಂತಹ ಧನ ಸಹಾಯವನ್ನು ವಿದ್ಯಾರ್ಥಿಗಳು ಪಡೆಯಬಹುದಾಗಿದೆ. ಇನ್ನು ಎಸ್ ಎಸ್ ಪಿ ಮೂಲಕ ರಿಜಿಸ್ಟರ್ ಮಾಡಿಕೊಂಡು ಅರ್ಜಿ ಸಲ್ಲಿಸಿದ ನಂತರ ವಿದ್ಯಾರ್ಥಿಗಳು ಒಮ್ಮೆ ಕಾರ್ಮಿಕ ಇಲಾಖೆ ವೆಬ್ ಸೈಟ್ ನಲ್ಲಿ ಆಲ್ರೆಡಿ ಎಕ್ಸಿಸ್ಟಿಂಗ್ ಸೇವಾ ಸಿಂಧು ಕನ್ಸ್ಟ್ರಕ್ಷನ್ ವರ್ಕರ್(Already Existing Seva Sindhu Construction Worker) ಎಂಬಲ್ಲಿ ಲಾಗಿನ್ ಮಾಡಿಕೊಂಡು ತಮ್ಮ ಆಧಾರ್ ಕಾರ್ಡ್ ಸೀಡಿಂಗ್ ಮಾಡಿಕೊಳ್ಳಬೇಕು.

 

Image Source: India Tv News

 

ಇನ್ನು ಹೊಸದಾಗಿ ಅರ್ಜಿ ಹಾಕುತ್ತಿರುವವರು ಅಲ್ಲಿ ತಮ್ಮ ದಾಖಲೆಗಳನ್ನು ಪರಿಶೀಲಿಸಿ ಸಬ್ಮಿಟ್ ಮಾಡಿ ನಂತರ ಲೇಬರ್ ಕಾರ್ಡ್ ರಿಜಿಸ್ಟ್ರೇಷನ್ ಆಗಿರುವ ಮೊಬೈಲ್ ನಂಬರ್ ಗೆ ಬರುವ ಓ ಟಿ ಪಿ (OTP) ನಮೂದಿಸಿ ಆಧಾರ್ ಕಾರ್ಡ್ ಲಿಂಕ್ ಮಾಡಿಕೊಳ್ಳಬೇಕು.

ಇನ್ನು ಅರ್ಜಿ ಸಲ್ಲಿಸಿರುವ ವಿದ್ಯಾರ್ಥಿಗಳ ಆಧಾರ್ ಕಾರ್ಡ್ ಸೀಡಿಂಗ್ ಆಗದೇ ಇದ್ದರೆ ಅಂತವರ ಅಪ್ಲಿಕೇಶನ್ ಅರ್ಹತೆಗೆ ಒಳಪಡುವುದಿಲ್ಲ ಆದ್ದರಿಂದ ಅಂತವರಿಗೆ ವಿದ್ಯಾರ್ಥಿ ವೇತನ ಸಿಗುವುದಿಲ್ಲ. ಇನ್ನು ಆಧಾರ್ ಕಾರ್ಡ್ ಸೀಡಿಂಗ್ ನ ಜೊತೆಗೆ NPCI (National Payment Corporation of India) ಮ್ಯಾಪಿಂಗ್ ಮಾಡಬೇಕಾಗಿರುವುದು ಕೂಡ ಕಡ್ಡಾಯವಾಗಿದೆ. ಇನ್ನು ಆಧಾರ್ ಕಾರ್ಡ್ ಸೀಡಿಂಗ್ ಮತ್ತು NPCI ಮ್ಯಾಪಿಂಗ್ ಮಾಡುವುದಕ್ಕೆ ಜೂನ್ 31 ಕೊನೆಯ ದಿನಾಂಕವಾಗಿದೆ. ಇದರ ಒಳಗಾಗಿ ವಿದ್ಯಾರ್ಥಿಗಳು ಅರ್ಜಿಯನ್ನು ಸಲ್ಲಿಸಿ, ಸ್ಕಾಲರ್ ಶಿಪ್ ಪಡೆಯಬೇಕೆಂದು ಕಾರ್ಮಿಕ ಇಲಾಖೆಯ ತಿಳಿಸಿದೆ.

advertisement

Leave A Reply

Your email address will not be published.