Karnataka Times
Trending Stories, Viral News, Gossips & Everything in Kannada

Labour Card: ಕಾರ್ಮಿಕ ಕಾರ್ಡ್ ಇರುವ ಮಕ್ಕಳಿಗೆ ಸಿಗುವ 10 ಸಾವಿರ ರೂ ಸ್ಕಾಲರ್ ಶಿಪ್ ಗೆ ಅರ್ಜಿ ಹಾಕುವ ಡೈರೆಕ್ಟ್ ಲಿಂಕ್ ಇಲ್ಲಿದೆ

advertisement

ಕಾರ್ಮಿಕರ ಮಕ್ಕಳಿಗೂ ಶೈಕ್ಷಣಿಕ ಅರ್ಹತಾ ಸ್ಥಾನ ಮಾನ ನೀಡಬೇಕು ಎಂಬ ನೆಲೆಯಲ್ಲಿ ಸರಕಾರದ ಕಾರ್ಮಿಕ ಇಲಾಖೆಯ ಕಲ್ಯಾಣ ಮಂಡಳಿ ವತಿಯಿಂದ ಅರ್ಹ ಕಾರ್ಮಿಕರ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡಲು ಅರ್ಜಿಯನ್ನು ಆಹ್ವಾನಿಸಲಾಗಿದೆ. ಎಷ್ಟು ಮೊತ್ತದ ವಿದ್ಯಾರ್ಥಿ ವೇತನ ಸಿಗಲಿದೆ ಯಾರೆಲ್ಲ ಈ ಒಂದು ಯೋಜನೆಗೆ ಅರ್ಹರಾಗುತ್ತಾರೆ ಎಂಬ ಇತ್ಯಾದಿ ವಿವರಣೆಯ ಮಾಹಿತಿ ಇಲ್ಲಿದೆ.

ಅರ್ಹತೆ ಏನು?

 

Image Source: The Economic Times

 

ಕರ್ನಾಟಕದಲ್ಲಿ ವಾಸ್ತವ್ಯ ಹೊಂದಿರುವ ಕಟ್ಟಡ ನಿರ್ಮಾಣ ಮತ್ತು ಇತರ ಕಾರ್ಮಿಕರ ಮಕ್ಕಳಿಗೆ ವಿದ್ಯಾರ್ಥಿ ವೇತನ (Student Scholarship) ವನ್ನು ನೀಡಲಾಗುತ್ತದೆ. ವಿದ್ಯಾರ್ಥಿ ವೇತನ ಪಡೆಯಲು ಕಾರ್ಮಿಕರ ಕಾರ್ಡ್ ಅಂದರೆ ಲೇಬರ್ ಕಾರ್ಡ್ (Labour Card) ಅನ್ನು ಹೊಂದಿರುವುದು ಕಡ್ಡಾಯವಾಗಿದೆ. ಅಂದರೆ ಕಾರ್ಮಿಕರ ಮಕ್ಕಳು ಶೈಕ್ಷಣಿಕ ವರ್ಷದಲ್ಲಿ ವಿದ್ಯಾಭ್ಯಾಸ ಪಡೆಯುತ್ತಿದ್ದರೆ ಮಾತ್ರವೇ ಈ ಒಂದು ಯೋಜನೆಗೆ ಅರ್ಹರಾಗಿರುತ್ತಾರೆ.

ಎಷ್ಟು ಮೊತ್ತ ಸಿಗಲಿದೆ?

 

advertisement

Image Source: IndiaToday

 

  • ಕಾರ್ಮಿಕರ ಮಕ್ಕಳಿಗೆ 8ನೇ ತರಗತಿಯಿಂದ 10 ನೇ ತರಗತಿ ವರೆಗೆ ವಿದ್ಯಾಭ್ಯಾಸ ಮಾಡುವ  ವಿದ್ಯಾರ್ಥಿಗಳಿಗೆ 3,000 ರೂಪಾಯಿ ಸಿಗಲಿದೆ.
  • PUC, ಡಿಪ್ಲೊಮಾ ಹಾಗೂ TCH ಕೋರ್ಸ್ ಗಳಿಗೆ ವ್ಯಾಸಾಂಗ ಮಾಡುವ ಕಾರ್ಮಿಕರ ಮಕ್ಕಳಿಗೆ 4,000 ರೂಪಾಯಿ.
  • ಪದವಿ ವ್ಯಾಸಾಂಗ ಮಾಡುವ ಕಾರ್ಮಿಕರ ಮಕ್ಕಳಿಗೆ 5,000 ರೂಪಾಯಿ ಸಿಗಲಿದೆ.
  • ಎಂಜಿನಿಯರಿಂಗ್ ಹಾಗೂ ವೈದ್ಯಕೀಯ ಕೋರ್ಸ್ ಓದುತ್ತಿರುವ ಕಾರ್ಮಿಕರ ಮಕ್ಕಳಿಗೆ  10,000 ರೂಪಾಯಿ ಸಿಗಲಿದೆ.
  • ಕಾರ್ಮಿಕರ ಮಕ್ಕಳಲ್ಲಿ ಯಾರಾದರೂ ಸ್ನಾತಕೋತ್ತರ ಪದವಿ ವ್ಯಾಸಾಂಗ ಮಾಡುತ್ತಿದ್ದರೆ ಅಂತವರಿಗೆ 6000 ಮೊತ್ತ ವಿದ್ಯಾರ್ಥಿ ವೇತನವಾಗಿ ನೀಡಲಾಗುವುದು.

ಈ ನಿಯಮ ಕಡ್ಡಾಯ:

  • ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ಪೋಷಕರಿಗೆ ಲೇಬರ್ ಕಾರ್ಡ್ (Labour Card) ಹೊಂದಿರಬೇಕು.
  • ಆಧಾರ್ ಕಾರ್ಡ್ ಹಾಗೂ ಬ್ಯಾಂಕ್ ಖಾತೆ ಸುಸ್ಥಿತಿಯಲ್ಲಿ ಇರಬೇಕು.
  • ಆಧಾರ್ ಕಾರ್ಡ್  ಅನ್ನು ಬ್ಯಾಂಕ್ ಖಾತೆ ಜೊತೆ ಲಿಂಕ್ ಮಾಡಿರಬೇಕು ಇಲ್ಲವಾದರೆ ಹಣ ಬರಲಾರದು.
  • ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದರೆ ಮಾತ್ರವೆ ಈ ವಿದ್ಯಾರ್ಥಿ ವೇತನ ಸಿಗಲಿದೆ.

ಎಲ್ಲಿ ಅರ್ಜಿ ಸಲ್ಲಿಸುವುದು?

ಕಾರ್ಮಿಕರು ಲೇಬರ್ ಕಾರ್ಡ್ (Labour Card) ಅನ್ನು ಹೊಂದಿದ್ದು ಆಫ್ ಲೈನ್ ಹಾಗೂ ಆನ್ಲೈನ್ ಮೂಲಕ ಈ ಒಂದು ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಬಹುದು. SSP ಪೋರ್ಟಲ್ ಮೂಲಕ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಬಹುದು. ಆಫ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಬಯಸಿದರೆ ಕಾರ್ಮಿಕ ಇಲಾಖೆಗೆ ಭೇಟಿ ನೀಡಿ ಅರ್ಜಿ ಭರ್ತಿ ಮಾಡಿ ನೀಡಬಹುದು. SSP ಪೋರ್ಟಲ್ ನಲ್ಲಿ ಅರ್ಜಿ ಸಲ್ಲಿಸಲು ಸಾಧ್ಯವಾಗದೇ ಇರುವವರಿಗೆ ಕಾರ್ಮಿಕ ಇಲಾಖೆಯ ಅಧಿಕೃತ ವೆಬ್‌ಸೈಟ್‌ನಲ್ಲಿ Karnataka Labour Welfare Board, klwbapps.karnataka.gov.in ಈ ಲಿಂಕ್ ಗೆ ಭೇಟಿ ನೀಡುವ ಮೂಲಕ ಆಪ್ಲೈ ಮಾಡಬಹುದು.

advertisement

Leave A Reply

Your email address will not be published.