Karnataka Times
Trending Stories, Viral News, Gossips & Everything in Kannada

Indian Railways: ಜನರಲ್ ಬೋಗಿಯಲ್ಲಿ ಪ್ರಯಾಣಿಸುವ ಪುರುಷ ಮಹಿಳೆಯರು ಎಲ್ಲರಿಗೂ ಸಿಹಿಸುದ್ದಿ

advertisement

ದೂರದ ಹಾಗೂ ಅತಿ ಕಡಿಮೆ ವೆಚ್ಚದಲ್ಲಿ ಪ್ರಯಾಣ ಮಾಡಲು ಬಹಳ ಅನುಕೂಲಕರ ವಿಧಾನ ಎಂದರೆ ಅದು ರೈಲ್ವೆ ಪ್ರಯಾಣ ಎಂದು ಹೇಳಬಹುದು. ರೈಲಿನಲ್ಲಿ ಪ್ರಯಾಣ ಮಾಡುವುದು ಸುಖಕರ ಹಾಗೂ ಖರ್ಚಿನಲ್ಲಿ ಕೂಡ ಬಹಳ ಉಳಿತಾಯ ಆಗಲಿದೆ. ಕಾಲಕ್ಕೆ ತಕ್ಕಂತೆ ರೈಲ್ವೆ ಇಲಾಖೆಯ ಅನೇಕ ಸೇವೆಗಳನ್ನು ಬದಲಾಯಿಸಲಾಗುತ್ತಿದ್ದು ಇದೀಗ ಭಾರತೀಯ ರೈಲ್ವೇ ಇಲಾಖೆಯು (Indian Railways) ಜನರ ಹಿತದೃಷ್ಟಿಯಿಂದ ನೂತನ ಕ್ರಮ ಜಾರಿಗೆ ತರಲು ಮುಂದಾಗಿದೆ. ಹೀಗಾಗಿ ಸಾಮಾನ್ಯ ವರ್ಗದ ಗ್ರಾಹಕರಿಗೆ ಈ ಕ್ರಮ ದೊಡ್ಡ ಮಟ್ಟದಲ್ಲಿ ಕೊಡುಗೆ ನೀಡಿದಂತಾಗಲಿದೆ.

ಯಾವುದು ಆ ಕ್ರಮ:

ಇತ್ತೀಚಿನ ದಿನದಲ್ಲಿ ಡಿಜಿಟಲ್ ವ್ಯವಹಾರ ಎಲ್ಲ ಕ್ಷೇತ್ರದಲ್ಲಿಯೂ ಸ್ಥಾನ ಪಡೆದಿದೆ. ಅದೇ ರೀತಿ ಇದೀಗ ರೈಲ್ವೇ ಇಲಾಖೆಯ ಸಾಮಾನ್ಯ ಸೇವೆಗೆ ಕೂಡ ಡಿಜಿಟಲ್ ಸ್ಪರ್ಷ ನೀಡಲಾಗುತ್ತಿದೆ. ರೈಲ್ವೇಯ AC, NON AC, Sleeper Coach ಅನ್ನು ಆನ್ಲೈನ್ ಮೂಲಕ ಬುಕ್ಕಿಂಗ್ ಮಾಡಲು ಅವಕಾಶ ನೀಡಿದ್ದು ನಮಗೆಲ್ಲ ತಿಳಿದೆ ಇದೆ. ಹೀಗಾಗಿ ಮುಂಗಡವಾಗಿ ಟಿಕೆಟ್ ಕಾಯ್ದಿರಿಸಲು ಈ ಕ್ರಮ ಬಹಳ ಉಪಯುಕ್ತ ಆಗಿತ್ತು, ಆದರೆ ಕಾಲ ಕ್ರಮೇಣ ಇದೇ ಡಿಜಿಟಲ್ ವ್ಯವಸ್ಥೆಯನ್ನು ಸಾಮಾನ್ಯ ಪ್ರಯಾಣಿಕರಿಗೆ ಕೂಡ ನೀಡಲು ಕೇಂದ್ರ ಸರಕಾರ (Centre Govt) ತೀರ್ಮಾನಿಸಿದೆ.

Digital Pay System:

 

Image Source: Jagran Josh

 

advertisement

ಇಂದು ಸಾಮಾನ್ಯ ಅಂಗಡಿಯಿಂದ ಹಿಡಿದು ದೊಡ್ಡ ದೊಡ್ಡ ಮಾಲ್ ಗಳಲ್ಲಿಯು ಡಿಜಿಟಲ್ ಪೇಮೆಂಟ್ ಸಿಸ್ಟಂ ಬಂದಿದೆ. ಈ ಒಂದು UPI System ಎನ್ನುವುದು ಈಗ ಸಾಮಾನ್ಯ ಟಿಕೇಟ್ ಖರೀದಿಗೆ ರೈಲ್ವೇ ಇಲಾಖೆ ಅಳವಡಿಸಿಕೊಳ್ಳಲು ಮುಂದಾಗಿದೆ. ಟಿಕೆಟ್ ಕೌಂಟರ್ ನಲ್ಲಿ ಟಿಕೆಟ್ ಪಡೆಯುವ ಪ್ರಕ್ರಿಯೆಯಲ್ಲಿ ಕೆಲವು ಅಗತ್ಯ ಬದಲಾವಣೆ ಜಾರಿಗೆ ತರಲಾಗಿದ್ದು ಅದರಲ್ಲಿ UPI Payment ಬೆಂಬಲಿಸುವುದನ್ನು ನಾವು ಕಾಣಬಹುದು. ಹಾಗಾಗಿ ಇದು ಸಾಮಾನ್ಯ ವರ್ಗದ ಜನರಿಗೆ ಬಹಳ ಅನುಕೂಲ ಆಗಲಿದೆ.

ಸಮಯ ಉಳಿತಾಯ:

ಟಿಕೆಟ್ ಅನ್ನು ಕೌಂಟರ್ ನಲ್ಲಿ ಪಡೆಯುವಾಗ ಹಣಕ್ಕಾಗಿ ಚಿಲ್ಲರೆ ಹುಡುಕುವ ಪ್ರಮೇಯ ಬರಲಾರದು. ಸುಲಭಕ್ಕೆ Google Pay, PhonePe ಮಾಡಿಬಿಡಬಹುದು. ಚಿಲ್ಲರೆ ಇಲ್ಲ ಎಂಬ ಗೋಳು ಕೂಡ ತಪ್ಪಲಿದೆ ಹಾಗಾಗಿ ಸಮಯ ಸಾಕಷ್ಟು ಉಳಿತಾಯ ಆಗಲಿದೆ. ಎಪ್ರಿಲ್ ಒಂದರಿಂದಲೇ ಸಾಮಾನ್ಯ ವರ್ಗದ ಪ್ರಯಾಣಿಕರ ಟಿಕೇಟ್ ಪೇ ಮಾಡಲು ಯುಪಿಐ ವ್ಯವಸ್ಥೆ ಜಾರಿಯಾಗಲಿದ್ದು ಮೊದಲು ಬೆಂಗಳೂರಿನಲ್ಲಿ ಆ ಬಳಿಕ ಹಂತ ಹಂತವಾಗಿ ವ್ಯವಸ್ಥೆ ವಿಸ್ತರಣೆ ಆಗಲಿದೆ.

ಕೌಂಟರ್ ನಲ್ಲಿ ಪಾವತಿಗೂ ಅವಕಾಶ:

ಎಸಿ, ನಾನ್ ಎಸಿ ಹಾಗೂ ಸ್ಲೀಪರ್ ರೈಲ್ವೆ ಟಿಕೆಟ್ ಅನ್ನು ಆನ್ಲೈನ್ ಮೂಲಕ ಬುಕ್ ಮಾಡಲಾಗುತ್ತಿದ್ದು ಬುಕ್ ಆಗದೆ ಇರುವ ಸೀಟ್ ಅನ್ನು ಕೌಂಟರ್ ಟಿಕೇಟ್ ಪಡೆಯುವ ಮೂಲಕ ಪಾವತಿ ಮಾಡಲು ಅವಕಾಶ ನೀಡಲಾಗಿದೆ. ಹೀಗಾಗಿ AC, Non AC, ಬುಕ್ಕಿಂಗ್ ಆಗದೆ ಇದ್ದರೆ ನೀವು ಕೌಂಟರ್ ಟಿಕೆಟ್ ಪಡೆಯುವ ಮೂಲಕ ಅನುಮತಿ ಪಡೆಯಬಹುದು‌.

advertisement

Leave A Reply

Your email address will not be published.