Karnataka Times
Trending Stories, Viral News, Gossips & Everything in Kannada

RBI: ದೇಶದ ಈ 3 ಬ್ಯಾಂಕ್ ಗಳಲ್ಲಿ ಹಣ ಇಟ್ಟವರಿಗೆ ಭರ್ಜರಿ ಗುಡ್ ನ್ಯೂಸ್!

advertisement

ಪ್ರತಿಯೊಬ್ಬರು ಕೂಡ ತಮ್ಮ ಕಷ್ಟಪಟ್ಟು ದುಡಿದಿರುವಂತಹ ಹಣವನ್ನು ಸೇವಿಂಗ್ ಖಾತೆಯ ಮೂಲಕ ಬ್ಯಾಂಕಿನಲ್ಲಿ ಕೂಡಿ ಇಡುತ್ತಾರೆ ಇಲ್ಲವೇ ಫಿಕ್ಸೆಡ್ ಡೆಪಾಸಿಟ್ ಯೋಜನೆ (FD Scheme) ಯಲ್ಲಿ ಹೂಡಿಕೆ ಮಾಡಿ ದೀರ್ಘಕಾಲದವರೆಗೆ ಹಣವನ್ನು ಅಲ್ಲಿಯೇ ಇಡುತ್ತಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಬ್ಯಾಂಕ್ಗಳು ಮುಳುಗಿ ಹೋಗುತ್ತಿರುವುದನ್ನು ಕೂಡ ನೀವು ನೋಡಿರಬಹುದು.

ಜನರು ಕಷ್ಟಪಟ್ಟು ದುಡಿದಿರುವಂತಹ ಹಣವನ್ನು ಕಳೆದುಕೊಳ್ಳುವುದು ಅಷ್ಟೊಂದು ಸುಲಭದ ಮಾತಲ್ಲ. ಇನ್ನು ಬ್ಯಾಂಕ್ ಕೂಡ ಕೇವಲ 5 ಲಕ್ಷಗಳವರೆಗೆ ಮಾತ್ರ ಪರಿಹಾರವನ್ನು ನೀಡುವಂತಹ ನಿಯಮವನ್ನು ಜಾರಿಗೆ ತಂದಿದೆ ಹೀಗಾಗಿ ಅಲ್ಲಿ ಕೂಡ ಸಮಸ್ಯೆ ಕಂಡು ಬರುತ್ತದೆ.

ಇದರ ನಡುವೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಮೂರು ಬ್ಯಾಂಕುಗಳನ್ನು ಅತ್ಯಂತ ಸುರಕ್ಷಿತ ಬ್ಯಾಂಕುಗಳು ಎಂಬುದಾಗಿ ಪರಿಗಣಿಸಿದ್ದು ಒಂದು ವೇಳೆ ಇವುಗಳು ಮುಳುಗುವಂತಹ ಪರಿಸ್ಥಿತಿ ಬಂದ್ರು ಕೂಡ ಇವುಗಳನ್ನು ಉಳಿಸುವಂತಹ ಕೆಲಸವನ್ನು ಮಾಡುತ್ತದೆ.

ಯಾವುವು ಆ ಬ್ಯಾಂಕುಗಳು?

ಇದರಲ್ಲಿ ಎರಡು ಖಾಸಗಿ ಹಾಗೂ ಒಂದು ಸರ್ಕಾರಿ ಬ್ಯಾಂಕನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಗುರುತಿಸಿದೆ. ಮೊದಲ ಬ್ಯಾಂಕ್ ಅದು ಸರ್ಕಾರಿ ಬ್ಯಾಂಕ್ ಆಗಿದ್ದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಆಗಿದೆ. ಇದಾದ ನಂತರ ಕಾಣಿಸಿಕೊಳ್ಳುವ ಎರಡು ಖಾಸಗಿ ಬ್ಯಾಂಕುಗಳು ಅಂದ್ರೆ ಹೆಚ್‌ಡಿಎಫ್‍ಸಿ (HDFC) ಹಾಗೂ ಐಸಿಐಸಿಐ ಬ್ಯಾಂಕ್ (ICICI Bank).

 

advertisement

Image Source: Reuters

 

ಬ್ಯಾಂಕ್ ಗಳ ಮಹತ್ವದ ಮೇರೆಗೆ ಅವುಗಳನ್ನು ಬೇರೆ ಬೇರೆ ಬಕೆಟ್ ನಲ್ಲಿ ವರ್ಗಾಯಿಸಲಾಗಿರುತ್ತದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಇವುಗಳಿಗಾಗಿ ಐದು ಬಕೆಟ್ ಅನ್ನು ನಿರ್ಮಾಣ ಮಾಡಿದೆ. 5ನೇ ಬಕೆಟ್ ಅಲ್ಲಿರುವಂತಹ ಬ್ಯಾಂಕ್ ಅತ್ಯಂತ ಸುರಕ್ಷಿತ ಎಂಬುದಾಗಿ ಪರಿಗಣಿಸಲಾಗುತ್ತದೆ.

 

Image Source: The Economic Times

 

ಒಂದನೇ ಬಕೆಟ್ ನಲ್ಲಿರುವಂತಹ ಬ್ಯಾಂಕು ಸುರಕ್ಷತೆ ವಿಚಾರದಲ್ಲಿ ಸ್ವಲ್ಪಮಟ್ಟಿಗೆ ಚಿಂತಾದಾಯಕವಾಗಿರುತ್ತದೆ ಎಂದು ಪರಿಗಣಿಸಬಹುದಾಗಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಬಕೆಟ್ 3 ರಲ್ಲಿ ಕಾಣಿಸಿಕೊಳ್ಳುತ್ತದೆ. ಉಳಿದ ಬ್ಯಾಂಕುಗಳು ಬಕೆಟ್ ಒಂದರಲ್ಲಿ ಕಾಣಿಸಿಕೊಳ್ಳುತ್ತವೆ ಇದರ ಅರ್ಥ ಸಂಪೂರ್ಣವಾಗಿ ಇವುಗಳು ಸುರಕ್ಷಿತ ಇಲ್ಲದ ಬ್ಯಾಂಕುಗಳು ಎಂದಲ್ಲ ಬೇರೆ ಬ್ಯಾಂಕ್ಗಳಿಗೆ ಹೋಲಿಸಿದರೆ ಇವುಗಳು ಸುರಕ್ಷಿತ ಸ್ಥಾನದ ಬಕೆಟ್ನಲ್ಲಿ ಕಾಣಿಸಿಕೊಳ್ಳುತ್ತವೆ ಎಂಬುದಾಗಿ ಪರಿಗಣಿಸಬಹುದಾಗಿದೆ.

 

Image Source: Moneycontrol

 

ಈ ಸುರಕ್ಷಿತ ಬ್ಯಾಂಕುಗಳ ಲಿಸ್ಟ್ ನಲ್ಲಿ ಕಾಣಿಸಿಕೊಳ್ಳಬೇಕು ಅಂದ್ರೆ ಇವುಗಳ ಆಸ್ತಿ (Property), ದೇಶದ ಜಿಡಿಪಿಯ ಎರಡು ಪ್ರತಿಶತಕ್ಕಿಂತ ಜಾಸ್ತಿ ಆಗಿರ ಬೇಕಾಗಿರುತ್ತದೆ ಎಂಬುದನ್ನು ನಿಯಮಾವಳಿಗಳಲ್ಲಿ ಸ್ಪಷ್ಟಪಡಿಸಲಾಗಿದೆ. ಬೇರೆ ಬ್ಯಾಂಕುಗಳಿಗೆ ಹೋಲಿಸಿದರೆ ಈ ಬ್ಯಾಂಕುಗಳಲ್ಲಿ ಹಣವನ್ನು ಹಿಡಿಯುವುದರ ಮೂಲಕ ನೀವು ನಿಮ್ಮ ಹಣವನ್ನು ಸುರಕ್ಷಿತವಾಗಿದೆ ಎಂಬುದಾಗಿ ಭಾವಿಸಬಹುದಾಗಿದೆ. ಈ ವರ್ಗದಲ್ಲಿ ಬ್ಯಾಂಕುಗಳು ಹೆಚ್ಚಾದಷ್ಟು ಭಾರತದ ಆರ್ಥಿಕತೆ ಇನ್ನಷ್ಟು ಸುರಕ್ಷಿತವಾಗಿದೆ ಎಂಬುದಾಗಿ ಪರಿಗಣಿಸಬಹುದಾಗಿದೆ.

advertisement

Leave A Reply

Your email address will not be published.