Karnataka Times
Trending Stories, Viral News, Gossips & Everything in Kannada

Crop Compensation Money: ಬೆಳೆ ಪರಿಹಾರ ಹಣ ಬರುವ ರೈತರು ಒಂದು ವೇಳೆ ಕೃಷಿ ಸಾಲ ಮಾಡಿದ್ದರೆ ಸಿಹಿಸುದ್ದಿ!

advertisement

ರಾಜ್ಯದಲ್ಲಿ ಈ ಭಾರಿ ಮಳೆ‌ ಇಲ್ಲದೆ ರೈತರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ನೀರಿನ ಅಭಾವದಿಂದ ಬಹಳಷ್ಟು ಸಮಸ್ಯೆ ಆಗಿದ್ದು ಕೃಷಿ ಹಾನಿ ಸಂಭವಿಸಿದೆ. ಈ ನಿಟ್ಟಿನಲ್ಲಿ ನಷ್ಟ ಉಂಟಾದ ರೈತರಿಗೆ ಬೆಳೆ ಪರಿಹಾರ ಮೊತ್ತ (Crop Compensation Money) ವನ್ನು ನೀಡಲು ಸರಕಾರ ಮುಂದಾಗಿದೆ.‌ ರಾಜ್ಯ ಸರ್ಕಾರವು ರಾಜ್ಯದ 223 ತಾಲ್ಲೂಕುಗಳನ್ನು ಬರ ಪೀಡಿತ ತಾಲ್ಲೂಕುಗಳು ಎಂದು ಘೋಷಿಸಿದ್ದು 48 ಲಕ್ಷ ಹೆಕ್ಟೇರ್ ನಲ್ಲಿ ಬೆಳೆ ಹಾನಿಯಾಗಿದೆ. ಇದರಿಂದಾಗಿ 35,162 ಕೋಟಿ ರೂಪಾಯಿಗಳಷ್ಟು ಮೊತ್ತ ನಷ್ಟವಾಗಿದೆ.

ರಾಜ್ಯ ಸರಕಾರದಿಂದ ಹಣ ಬಿಡುಗಡೆ:

 

Image Source: India.Com

 

ಕರ್ನಾಟಕ ಸರ್ಕಾರ ಈ ಹಿಂದೆ ನೀಡಿದ್ದ ಭರವಸೆಯಂತೆ ಒಟ್ಟು 628 ಕೋಟಿ ರೂ. ಹಣವನ್ನು 33 ಲಕ್ಷ ರೈತರ ಖಾತೆಗೆ ವರ್ಗಾವಣೆ ಮಾಡಿದೆ. ಬರ ಪರಿಹಾರದ ಮೊತ್ತವನ್ನು ರಾಜ್ಯಸರಕಾರ ಈಗಾಗಲೇ ‌ಮೊದಲ ಕಂತಿನ ಹಣವನ್ನು ಬಿಡುಗಡೆ‌ಮಾಡಿದ್ದು ಎರಡನೇ ಕಂತಿನ ಹಣವೂ ಸದ್ಯದಲ್ಲೇ ರೈತರ ಖಾತೆಗೆ ಜಮೆ ಯಾಗಲಿದೆ.

ಆದೇಶ ಹೊರಡಿಸಿದೆ:

advertisement

ಈಗಾಗಲೇ ರಾಜ್ಯ ಸರಕಾರ ಕೇಂದ್ರ ಸರಕಾರದ ವಿರುದ್ದ ರಿಟ್ ಅರ್ಜಿ ಸಲ್ಲಿಕೆ ಮಾಡುವ ಮೂಲಕ ದೂರು ಸಲ್ಲಿಕೆ ಮಾಡಿತ್ತು. ಈಗಾಗಲೇ ಕೇಂದ್ರ ಸರ್ಕಾರ ಹಣ ಬಿಡುಗಡೆ ಮಾಡುವ ಬಗ್ಗೆ ವರದಿ ಬಂದಿದ್ದು ಬಿಡುಗಡೆಗೊಳಿಸಿದ ಬರ ಪರಿಹಾರ ಹಣ (Crop Compensation Money) ವನ್ನು ಬೆಳೆಹಾನಿಗಾಗಿ ರೈತರಿಗೆ ಪಾವತಿಸುವಂತೆ ಕಂದಾಯ ಇಲಾಖೆ ಈಗಾಗಲೇ ಆದೇಶ ಕೂಡ ಹೊರಡಿಸಿದೆ.

ಈ ಸೂಚನೆ ನೀಡಲಾಗಿದೆ:

ಡಿಬಿಟಿ ಮೂಲಕ ರೈತರ ಖಾತೆಗೆ ಬರ ಪರಿಹಾರ ಮೊತ್ತ (Crop Compensation Amount) ಜಮೆಯಾಗಲಿದ್ದು ಬ್ಯಾಂಕ್‍ನವರು ಸರಕಾರದಿಂದ ಬಂದ ಈ ಮೊತ್ತವನ್ನು ಸಾಲಕ್ಕೆ (Loan) ಜಮೆ ಮಾಡಿ ಕೊಳ್ಳಬಾರದು ಎಂದು ಸೂಚನೆಯನ್ನು ಕೂಡ ನೀಡಲಾಗಿದೆ.

ಬ್ಯಾಂಕ್ ಗಳು ಹಣ ಬಳಸಿಕೊಳ್ಳುವಂತಿಲ್ಲ:

ಕೃಷಿಯಲ್ಲಿ ಪ್ರಗತಿ ಕಾಣಲು ಮತ್ತು ಕೃಷಿಯಲ್ಲಿ ರೈತರನ್ನು ಆಕರ್ಷಣೆ ಮಾಡುವ ನಿಟ್ಟಿನಲ್ಲಿ ಸರಕಾರವು ಹಲವು ರೀತಿಯ ಯೋಜನೆಗಳನ್ನು ರೂಪಿಸುವ ಮೂಲಕ ಬೆಳೆವಿಮೆ ಪರಿಹಾರ, ಬರ ಪರಿಹಾರ (Crop Compensation), ಪಿಎಂ ಕಿಸಾನ್ (PM Kisan), ರೈತ ಮಿತ್ರ ಇತ್ಯಾದಿ ಹಲವು ಯೋಜನೆಗಳ ಮೂಲಕ ಆರ್ಥಿಕ ಬೆಂಬಲವನ್ನು ನೀಡುತ್ತ ಈ ಹಣವನ್ನು ನೇರವಾಗಿ ರೈತರ ಖಾತೆಗೆ ಜಮೆ ಮಾಡುತ್ತಿದೆ.

ಆದರೆ ಈ ಹಣವನ್ನು ಬ್ಯಾಂಕ್‍ನವರು ರೈತರ ಸಾಲಕ್ಕೆ ಜಮೆ ಮಾಡಿಕೊಳ್ಳುತ್ತಿರುವ ಬಗ್ಗೆ ರೈತರು, ರೈತ ಮುಖಂಡರು ದೂರೂ ನೀಡಿದ್ದು ರೈತರಿಗೆ ನೀಡುವ ಸಹಾಯಧನ ಮೊತ್ತವನ್ನು ಸರ್ಕಾರವು ನಿರ್ದಿಷ್ಟ ಉದ್ದೇಶಗಳಿಗಾಗಿ ನೀಡುತ್ತಿದ್ದು, ಈ ಮೊತ್ತವನ್ನು ಯಾವುದೇ ಬ್ಯಾಂಕುಗಳು ಸಾಲಗಳಿಗೆ ಜಮೆ ಮಾಡಿಕೊಳ್ಳದೇ ಇರಲು ಆದೇಶ ಕೂಡ ನೀಡಲಾಗಿದೆ

advertisement

Leave A Reply

Your email address will not be published.