Karnataka Times
Trending Stories, Viral News, Gossips & Everything in Kannada

Budget Car: ಮಾರುತಿ ಸ್ವಿಫ್ಟ್ ಗಿಂತ ಗಟ್ಟಿಮುಟ್ಟಾಗಿದೆ ಈ ಬೆಂಕಿ ಕಾರು! ಅತ್ಯಂತ ಕಡಿಮೆ ಬೆಲೆಗೆ ಮುಗಿಬಿದ್ದ ಜನ

advertisement

ಇತ್ತೀಚಿನ ದಿನದಲ್ಲಿ ಕಾರು ಕೊಳ್ಳುವವರ ಸಂಖ್ಯೆ ಹೆಚ್ಚಾಗುತ್ತಿದೆ. ಕಾರಿನ ಬೇಡಿಕೆ ಹೆಚ್ಚಾಗುತ್ತಿದ್ದಂತೆ ಕಾರನ್ನು ಉತ್ಪಾದಿಸುವ ಕಂಪೆನಿಗಳು ಗ್ರಾಹಕರ ಸುರಕ್ಷತಾ ದೃಷ್ಟಿಯಿಂದ ಅನೇಕ ಹೊಸ ತರನಾದ ಫೀಚರ್ಸ್ ಅನ್ನು ಜಾರಿಗೆ ತರುತ್ತಲೇ ಇದೆ. ಹಾಗಾಗಿ ಇಂಧನ ದಕ್ಷತೆಯ ಜೊತೆಗೆ ಹೆಚ್ಚಿನ ಸುರಕ್ಷತಾ ವೈಶಿಷ್ಟ್ಯ ಕ್ಕೂ ಕೂಡ ಬೆಂಬಲ ನೀಡಲಾಗುತ್ತಿದೆ. ಈಗ ಕಾರಿನ ಕಂಫರ್ಟ್ ಝೋನ್ ಗಿಂತ ಹೆಚ್ಚಾಗಿ ಸುರಕ್ಷತಾ ಫೀಚರ್ಸ್ ಗೆ ಕೂಡ ಆಧ್ಯತೆ ನೀಡಲಾಗುತ್ತಿದೆ. ಹಾಗಾಗಿ ಕಡಿಮೆ ಬಜೆಟ್ ಗೆ ಅತ್ಯುತ್ತಮ ಕಾರು (Budget Car) ಬೇಡಿಕೆ ಮಾಡೋರಿಗೆ ಇಲ್ಲಿದೆ ಮಹತ್ವದ ಸುದ್ದಿ.

ಪ್ರಭಾವ ಶಾಲಿ ಮೈಲೇಜ್:

ಭಾರತದಲ್ಲಿ ಕಳೆದ ಕೆಲವು ವರ್ಷದಿಂದ ಕಾರು ಮಾರಾಟದಲ್ಲಿ ಗಣನೀಯ ಸಾಧನೆ ಮಾಡುತ್ತಲಿದೆ. ಮಾರುತಿ ಸುಜುಕಿ ಸ್ವಿಫ್ಟ್ (Maruti Suzuki Swift) ಕಾರು ಕೈಗೆಟಕುವ ಬೆಲೆಯಲ್ಲಿ ಪ್ರಭಾವ ಶಾಲಿ ಮೈಲೇಜ್ ನೀಡುವ ಕಾರಿನ ಸಾರಿನಲ್ಲಿ ಸೇರಿದೆ. ಮಾಸಿಕವಾಗಿ 15,000 ಘಟಕವನ್ನು ಮಾರಾಟ ಮಾಡುತ್ತಿದೆ. ಸ್ವಿಫ್ಟ್ ಬೆಲೆಯು ಆರಂಭಿಕ ಎಕ್ಸ್ ಶೋ ರೂಂ ನಲ್ಲಿ 6.24 ಲಕ್ಷ ರೂಪಾಯಿಗೆ ಮಾರಾಟ ಆಗುತ್ತಿದೆ. ಈಗ ಈ ಮಾರುತಿ ಸುಜುಕಿಗಿಂತ ಅಧಿಕ ಫೀಚರ್ಸ್ ನ ಕಾರು ಮಾರುಕಟ್ಟೆಯಲ್ಲಿ ಪ್ರಬಲ ಸುದ್ದಿ ಮಾಡುತ್ತಲೇ ಇದೆ.

ಯಾವುದು ಈ ಕಾರು?

 

Image Source: IndiaToday

 

advertisement

ಕಾಂಪ್ಯಾಕ್ಟ್ SUV ವಿಭಾಗದಲ್ಲಿ ಟಾಟಾ ಮೋಟಾರ್ಸ್ ನೆಕ್ಸಾನ್ (Tata Nexon) ಕಾಂಪ್ಯಾಕ್ಟ್ ನಲ್ಲಿ ಹೆಚ್ಚು ಮಾರಾಟವಾಗುತ್ತಿದೆ. ಮಾಸಿಕ ಸರಾಸರಿ 16,000 ಯುನಿಟ್ ನಷ್ಟು ಮಾರಾಟವಾಗುತ್ತಿದೆ. ಇದರ ಬೆಲೆಯು 8.16 ಲಕ್ಷ ರೂಪಾಯಿ ಆಗಿದೆ. ಬೆಲೆ ವಿಚಾರದಲ್ಲಿ ಅಧಿಕ ಇದ್ದರೂ ಇದು ಅತ್ಯುತ್ತಮ ಫೀಚರ್ಸ್ ನ ಅಳವಡಿಕೆ ಇರುವುದು ಕಾಣಬಹುದು. ಇದು ವಿಶ್ವಮಟ್ಟದಲ್ಲಿ NPAC ನಲ್ಲಿ 5ಸ್ಟಾರ್ ಸುರಕ್ಷತಾ ರೇಟಿಂಗ್ ಅನ್ನು ಹೊಂದಿದೆ.

ನೆಕ್ಸಾನ್ ಯಾವ ರೀತಿ ಇರಲಿದೆ?

 

Image Source: IndiaMART

 

  • ನೆಕ್ಸಾನ್ ಕಾರಿನಲ್ಲಿ 1.5 ಪಟ್ಟು ಉಕ್ಕು ಹೊಂದಿದೆ. ಇದು ಸ್ವಿಫ್ಟ್ ಗಿಂತ 400kg ಹೆಚ್ಚು ತೂಕ ಹೊಂದಿದೆ.
  • ಟಾಟಾ ನೆಕ್ಸಾನ್ ಪೆಟ್ರೋಲ್ , ಡೀಸೆಲ್‌ ಮತ್ತು ಎಲೆಕ್ಟ್ರಾನಿಕ್ ಕಾರಿನ ರೂಪಾಂತರದಲ್ಲಿ ಈ ಕಾರು ಲಭ್ಯ ಇದೆ.
  • ನೆಕ್ಸಾನ್ ಕಂಪೆನಿಯ CNG ಮಾದರಿಯು ಕೂಡ ಶೀಘ್ರವೇ ಬಿಡುಗಡೆ ಆಗಲಿದೆ.
  • SUV ಕಾರು 8.15 ಲಕ್ಷದಿಂದ 15.80 ಲಕ್ಷ ರೂಪಾಯಿ ಎಕ್ಸ್ ಶೋ ರೂಂ ನಲ್ಲಿ ಮಾರಾಟವಾಗುತ್ತಿದೆ.
  • ಪೆಟ್ರೋಲ್ ಮಾದರಿಯು 1.2ಲೀಟರ್ ಎಂಜಿನ್ ನಿಂದ ನಿಯಂತ್ರಿಸಲ್ಪಡುತ್ತದೆ.
  • ಡಿಸೇಲ್ ಮಾದರಿಯಲ್ಲಿ 1.5ಲೀಟರ್ ಎಂಜಿನ್ ಅನ್ನು ಹೊಂದಿದೆ.
  • ಪೆಟ್ರೋಲ್ ಆವೃತ್ತಿಯು 17kmpl ನಷ್ಟು ಮೈಲೇಜ್ ನೀಡಲಿದೆ.
  • ಡಿಸೇಲ್ ರೂಪಾಂತರವು 23kmpl ವರೆಗೆ ಮೈಲೇಜ್ ಇದೆ.

ಒಟ್ಟಾರೆಯಾಗಿ ಟಾಟಾ ನೆಕ್ಸಾನ್ (Tata Nexon) ಕಂಪೆನಿಯ ಕಾರುಗಳು ಮಾರುತಿ ಸ್ವಿಫ್ಟ್ ಗಿಂತಲೂ ಗಮನಾರ್ಹ ಸಾಧನೆ ಮಾಡುತ್ತಿದೆ. ಹಾಗಾಗಿ ಈ ಕಾರಿಗೆ ಉತ್ತಮ ಗುಣಮಟ್ಟದ ವಿಚಾರವಾಗಿ ಪ್ರಾತಿನಿಧ್ಯ ಸಿಗುತ್ತಿದೆ ಎಂದು ಹೇಳಬಹುದು. ನೀವು ಹೊಸ ಕಾರು ಪಡೆಯಬೇಕು ಎಂದು ಬಯಸಿದರೆ ಕೂಡಲೇ ಬುಕ್ ಮಾಡಿ ಇದಕ್ಕೆ EMI ಸೌಲಭ್ಯ ಕೂಡ ಸಿಗಲಿದೆ.

advertisement

Leave A Reply

Your email address will not be published.