Karnataka Times
Trending Stories, Viral News, Gossips & Everything in Kannada

Tata Tiago EV: ಟಾಟಾ ಟಿಯಾಗೋ ಇವಿ ಮೇಲೆ 1.10 ಲಕ್ಷ ರೂಪಾಯಿವರೆಗೆ ರಿಯಾಯಿತಿ; ಈ ದಿನಾಂಕದವರೆಗೆ ಮಾತ್ರ ಅವಕಾಶ.

advertisement

ಸಾಮಾನ್ಯವಾಗಿ ಯಾವುದೇ ವಸ್ತುಗಳನ್ನು ಮಾರಾಟ ಮಾಡುವ ಕಂಪನಿಗಳು, ಮೋಟರ್ಸ್ ಕಂಪನಿಗಳು ವರ್ಷದ ಅಂತ್ಯದ ವೇಳೆಗೆ ಅಂದರೆ ನವೆಂಬರ್ ಡಿಸೆಂಬರ್ ತಿಂಗಳಿನಲ್ಲಿ ತಾವು ಮಾರಾಟ ಮಾಡುವ ವಸ್ತು, ವಾಹನಗಳ ಮೇಲೆ ಹೆಚ್ಚಿನ ಕೊಡುಗೆಯನ್ನು ನೀಡುತ್ತದೆ ಹಾಗಾಗಿ ನೀವು ನಿಮ್ಮದೇ ಆಗಿರುವ ಸ್ವಂತ ವಾಹನ ಖರೀದಿಸುವುದಕ್ಕೆ ವರ್ಷಾಂತ್ಯವನ್ನು ಆಯ್ದುಕೊಳ್ಳುವುದು ಒಳ್ಳೆಯದು. ಸಾಕಷ್ಟು ಹೆಚ್ಚಿನ ಆಫರ್ ಗಳನ್ನು ಈ ಸಮಯದಲ್ಲಿ ಪಡೆದುಕೊಳ್ಳಬಹುದು.

Tata Tiago EV 1.10 lakh ಆಫರ್:

ಟಾಟಾ ಮೋಟಾರ್ಸ್ (Tata Motors) ತನ್ನ ಇವಿ ಮಾರಾಟದಲ್ಲಿ ವರ್ಷಾಂತ್ಯದಲ್ಲಿ ಅತಿ ಉತ್ತಮ ರಿಯಾಯಿತಿಯನ್ನು ನೀಡುತ್ತಿದೆ. ನೆಕ್ಸಾನ್ ಇವಿ (Nexon EV) ಲೈನ್ ಅಪ್ ಮೇಲೆ 2.60 ಲಕ್ಷದವರೆಗೆ ರಿಯಾಯಿತಿ ಪಡೆಯಬಹುದು. ಅದೇ ರೀತಿ ಟಾಟಾ ಟಿಯಾಗೋ ಇವಿ (Tata Tiago EV) ಖರೀದಿ ಮಾಡುವುದಾದರೆ ಅತಿ ಹೆಚ್ಚು ಆಫರ್ ನೀಡಲಾಗುತ್ತಿದೆ. ಈ ಆಫರ್ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ.

Tata Tiago EV ಮೇಲಿನ ಆಫರ್:

ಟಾಟಾ ಟಿಯಾಗೋ ಇವಿ ಎಲ್ಲಾ ರೂಪಾಂತರಗಳ ಮೇಲೆ 50,000 ವಿನಿಮಯ ಬೋನಸ್ ಹಾಗೂ 50,000ಗಳ ಫ್ಲಾಟ್ ನಗದು ಆಫರ್ ಕೂಡ ಪಡೆದುಕೊಳ್ಳಬಹುದು. ಅಷ್ಟೇ ಅಲ್ಲದೆ ಕಾರ್ಪೊರೇಟ್ ಪ್ರಯೋಜನಗಳನ್ನು 10,000 ವರೆಗೆ ನೀಡಲಾಗುವುದು. ಪ್ರಸ್ತುತ 12.49 ಲಕ್ಷ ರೂಪಾಯಿಗಳಿಂದ 13.75 ಲಕ್ಷ ರೂಪಾಯಿಗಳ ವರೆಗೆ ಟಿಯಾಗೊ ಇವಿ ಎಕ್ಸ್ ಶೋರೂಮ್ ಬೆಲೆ ನಿಗದಿತವಾಗಿದ್ದು, ಈ ಕಾರಿನ ಮೇಲೆ ಇದೀಗ 1.10 ಲಕ್ಷ ರೂಪಾಯಿಗಳವರೆಗೆ ಆಫರ್ ಪಡೆದುಕೊಳ್ಳಬಹುದು.

 

advertisement

 

ಟಿಯಾಗೋ ಇವಿ (Tata Tiago EV) ವರ್ಷನ್ ಬಗ್ಗೆ ಮಾತನಾಡುವುದಾದರೆ, 26 kWh ಲಿಥಿಯಂ ಅಯಾನ್ ಬ್ಯಾಟರಿ ಪ್ಯಾಕ್ (Lithium Ion Battery Pack) ಅಳವಡಿಸಲಾಗಿದೆ. ಪ್ರತಿ ಚಾರ್ಜ್ ಗೆ 315 ಕಿ.ಮೀ ವ್ಯಾಪ್ತಿಯನ್ನು ಒದಗಿಸುತ್ತದೆ. ಶಾಶ್ವತ ಮ್ಯಾಗ್ನೆಟ್ ಸಿಂಕ್ರೋನೈಸ್ ಎಲೆಕ್ಟ್ರಿಕ್ ಮೋಟಾರ್ ನಿಂದ ಚಾಲಿತವಾಗಿದ್ದು 75 ಎಚ್ ಪಿ ಪವರ್ ಹಾಗೂ 170 nmಸಾಮರ್ಥ್ಯ ಹೊಂದಿದೆ.

Tata Tiago ಈ ರೂಪಾಂತರದ ಮೇಲು ಸಿಗುತ್ತೆ ಆಫರ್:

ಟಿಯಾಗೋ ಇವಿ (Tata Tiago EV) ಯಲ್ಲಿ ಎರಡು ರೂಪಾಂತರಗಳು ಲಭ್ಯವಿದ್ದು ಒಂದು ಮಧ್ಯಮ ಶ್ರೇಣಿ ಹಾಗು ಇನ್ನೊಂದು ದೀರ್ಘ ಶ್ರೇಣಿ. ಈ ಮಧ್ಯಮ ಶ್ರೇಣಿ ಕಾರಿನ ಎಕ್ಸ್ ಶೋರೂಮ್ ಬೆಲೆ (Ex Showroom Price) 8.69 ಲಕ್ಷದಿಂದ 12.4 ಲಕ್ಷದವರೆಗೆ ಇದೆ. ಇದಕ್ಕೂ ಕೂಡ ಆಫರ್ಗಳು ಲಭ್ಯವಿದ್ದು 15,000ಗಳ ವಿನಿಮಯ ಬೋನಸ್ ಪಡೆಯಬಹುದು. ನಗದು ಆಫರ್ ನೀಡಲಾಗುವುದಿಲ್ಲ. ಆದರೆ 55000 ರವರಿಗೆ ಗ್ರೀನ್ ಬೋನಸ್ ನೀಡಲಾಗುತ್ತದೆ. ಇದು ಟಿಯಾಗೋ ನಲ್ಲಿ ಇವಿ ಅಳವಡಿಸಿಕೊಳ್ಳಲು ಸಹಾಯವಾಗುತ್ತದೆ. ಇನ್ನು ಇದರಲ್ಲಿ 7,000 ವರೆಗೆ ಕಾರ್ಪೊರೇಟ್ ರಿಯಾಯಿತಿ ಕೂಡ ಲಭ್ಯವಿದೆ.

Tata Tiago EV ಮೊದಲ ವರ್ಷನ್ ನಲ್ಲಿ, 19.2 kWh ಸರಿ ಬಳಸಿ ಪ್ರತಿ ಚರ್ಚೆಗೆ 250 ಕಿಲೋ ಮೀಟರ್ ವ್ಯಾಪ್ತಿ ಪಡೆಯಬಹುದಿತ್ತು. ಇದು 61 ಎಚ್ಪಿ ಹಾಗೂ 110 nm ಟಾರ್ಕ್ ಉತ್ಪಾದಿಸುವ, ಫ್ರಂಟ್ ಎಕ್ಸೆಲ್ ಮೌಂಟೆಡ್ ಎಲೆಕ್ಟ್ರಿಕ್ ಮೋಟಾರ್ ಅಳವಡಿಸಲಾಗಿತ್ತು. ಇನ್ನು ಲಾಂಗ್ ರೇಂಜ್ ವೇರಿಯಂಟ್ ನಲ್ಲಿ 24kWh ಬ್ಯಾಟರಿ ಅಳವಡಿಸಲಾಗಿದ್ದು 315 ಕಿಲೋಮೀಟರ್ ವ್ಯಾಪ್ತಿಯನ್ನು ನೀಡುತ್ತದೆ. 74 hp ಹಾಗೂ 114nm ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಹಾಗಾಗಿ ವರ್ಷದ ಅಂತ್ಯದಲ್ಲಿ ಉತ್ತಮ ಕಾರ್ಯಕ್ಷಮತೆ ಹೊಂದಿರುವ Tiago EV ಕಾರನ್ನು ಸಾಕಷ್ಟು ಆಫರ್ ಗಳ ಜೊತೆಗೆ ಖರೀದಿಸಿ ಇದು ಸ್ಟಾಕ್ ಮುಗಿಯುವವರೆಗೆ ಅಥವಾ ಡಿಸೆಂಬರ್ ಅಂತ್ಯದವರಿಗೆ ಮಾತ್ರ ಲಭ್ಯ ಇರುವ ಆಫರ್ ಆಗಿದ್ದು ಬೇಗ ಪ್ರಯೋಜನ ಪಡೆದುಕೊಳ್ಳಿ.

advertisement

Leave A Reply

Your email address will not be published.