Karnataka Times
Trending Stories, Viral News, Gossips & Everything in Kannada

GruhaJyoti Scheme: ಮಹಿಳೆಯರಿಗೆ ಆಯ್ತು, ಇವಾಗ ಶಾಲಾ ಮಕ್ಕಳಿಗಾಗಿ ಉಚಿತ ವ್ಯವಸ್ಥೆ ಜಾರಿಗೆ ಮಾಡಿದ ಸರ್ಕಾರ.

advertisement

ರಾಜ್ಯ ಸರಕಾರದ ಗ್ಯಾರಂಟಿ ಯೋಜನೆಗಳು ಒಂದೊಂದೆ ಜಾರಿಗೆ ಬಂದಿದ್ದು ಯುವ ನಿಧಿ ಯೋಜನೆ ಹೊಸ ವರ್ಷದ ಆರಂಭದಲ್ಲಿ ಈ ಸೌಲಭ್ಯ ಸಿಗಲಿದೆ. ಗ್ಯಾರಂಟಿ ಯೋಜನೆಯಲ್ಲಿ ಮೊದಲು ಆರಂಭ ವಾಗಿದ್ದೆ ಗೃಹಜ್ಯೋತಿ ಯೋಜನೆ. ಈಗಾಗಲೇ ಹಲವಾರು ಜನರು ಈ ಯೋಜನೆಗೆ ನೊಂದಾಯಿಸಿ ಕೊಂಡು ಉಚಿತ ವಿದ್ಯುತ್ ಅನ್ನು ಪಡೆಯುತ್ತಿದ್ದಾರೆ. ಸ್ವಂತ ಮನೆ, ಬಾಡಿಗೆ ಮನೆಗೂ ಉಚಿತ ವಿದ್ಯುತ್ ಸಿಗ್ತಾ ಇದ್ದು ಇದೀಗ ವಿದ್ಯಾರ್ಥಿಗಳಿಗೂ ಗುಡ್ ನ್ಯೂಸ್ ಸಿಕ್ಕಿದಂತಾಗಿದೆ. ಹೌದು ರಾಜ್ಯದ ಎಲ್ಲಾ ಸರ್ಕಾರಿ ಶಾಲೆ ಹಾಗೂ ಪದವಿ ಪೂರ್ವ ಕಾಲೇಜುಗಳಿಗೆ ಉಚಿತ ವಿದ್ಯುತ್ ಮತ್ತು ಉಚಿತ ನೀರಿನ ವ್ಯವಸ್ಥೆ ಜಾರಿಗೊಳಿಸುವ ಸಿದ್ಧತೆ ಯನ್ನು ರಾಜ್ಯ ಸರ್ಕಾರ ಇದೀಗ ಮಾಡಿದೆ.

ಸರ್ಕಾರಿ ಶಾಲೆಗಳಿಗೆ ಮಾನ್ಯತೆ

ಇಂದು ರಾಜ್ಯ ಮತ್ತು ಕೇಂದ್ರ ಸರಕಾರ ಸರಕಾರಿ ಶಾಲೆಗಳಿಗೆ ಹೆಚ್ಚಿನ ಪ್ರೋತ್ಸಾಹ ವನ್ನು ನೀಡುತ್ತಲೆ ಬಂದಿದೆ. ಶಾಲೆಗಳು ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡುತ್ತಿದ್ದು ರಾಜ್ಯದ ಬಡ ವರ್ಗದ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡಲು ಸರ್ಕಾರಿ ಶಾಲೆಗಳಿಗೆ ಬರುತ್ತಾರೆ.‌ಸರ್ಕಾರಿ ಶಾಲೆಗಳ ಅಭಿವೃದ್ಧಿ ಯಾಗಬೇಕು ಎನ್ನುವ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ಗೃಹ ಜ್ಯೋತಿ (GruhaJyoti) ಯೋಜನೆಯಡಿ ವಿದ್ಯುಚ್ಛಕ್ತಿಯನ್ನು ರಾಜ್ಯದ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಗೂ ಸಹ ಉಚಿತ ವಿದ್ಯುತ್ ನೀಡಲು ಮುಂದಾಗಿದೆ.

advertisement

ಉಚಿತ ನೀರಿನ ಸೌಲಭ್ಯ

ಅದೇ ರೀತಿ ಉಚಿತ ನೀರಿನ ಸೌಲಭ್ಯವನ್ನು ನೀಡಲು ಮುಂದಾಗಿದೆ‌. ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ಬಾಕಿ ಇದ್ದ ವಿದ್ಯುತ್ ಮತ್ತು ನೀರಿನ ಬಿಲ್ಲುಗಳನ್ನು ಪಾವತಿ ಮಾಡಲು ಸಹ ವಿನಾಯಿತಿ ನೀಡಿದೆ. ವಿದ್ಯಾರ್ಥಿಗಳಿಗೆ ಶೌಚಾಲಯ ಬಳಕೆ, ಕುಡಿಯಲು ನೀರಿನ ವ್ಯವಸ್ಥೆ ಇತ್ಯಾದಿಗಳಿಗೆ ನೀರಿನ ಸಮಸ್ಯೆ ಯಾಗದಂತೆ ಈ ಸೌಲಭ್ಯ ಜಾರಿಗೊಳಿಸಲಾಗಿದೆ.

ಅಧಿಸೂಚನೆ ನೀಡಿದೆ

2024-25ನೇ ಸಾಲಿನಿಂದ ರಾಜ್ಯದ ಎಲ್ಲಾ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳು ಹಾಗೂ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಿಗೆ ಉಚಿತವಾಗಿ ವಿದ್ಯುತ್ ಮತ್ತು ನೀರು ಸರಬರಾಜು ಮಾಡುವ ಅಗತ್ಯ ‌ಕ್ರಮ ಕೈಗೊಂಡಿದ್ದು,‌ ಉಚಿತವಾಗಿ ನೀಡುವ ವಿದ್ಯುತ್ ಮತ್ತು ನೀರಿನ ಸೌಲಭ್ಯವನ್ನು ಸಮರ್ಪಕವಾಗಿ ಬಳಕೆ ಮಾಡುವಂತೆ ಅಧಿಸೂಚನೆ ಹೊರಡಿಸಿದೆ. ಇದರಿಂದ ಸರಕಾರಿ ಶಾಲೆಗಳಿಗೆ ಹೆಚ್ಚಿನ ಒತ್ತು ನೀಡಿ ಮತ್ತಷ್ಟು ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿ ಬರ ಮಾಡಿ ಕೊಂಡಂತೆ ಆಗುತ್ತದೆ. ರಾಜ್ಯ ಸರಕಾರದ ಈ ನಿರ್ಧಾರ ಶಿಕ್ಷಣ ಇಲಾಖೆಗೆ ಖುಷಿ ತಂದಂತಾಗಿದೆ.

advertisement

Leave A Reply

Your email address will not be published.