Karnataka Times
Trending Stories, Viral News, Gossips & Everything in Kannada

Electric Vehicle Tax: ಎಲೆಕ್ಟ್ರಿಕ್ ವಾಹನ ಖರೀದಿಸುವವರಿಗೆ ಸಿಹಿಸುದ್ದಿ ಕೊಟ್ಟ ಸರ್ಕಾರ, ಇನ್ಮುಂದೆ ಕಡಿಮೆ ಬೆಲೆಗೆ ಖರೀದಿಸಿ ಇವಿ ವಾಹನ.

advertisement

ಇತ್ತೀಚೆಗೆ ವಾಹನವನ್ನು ಕೊಳ್ಳುವವರ ಪ್ರಮಾಣ ಈ ಹಿಂದಿಗಿಂತಲೂ ಅಧಿಕವಾಗುತ್ತಿದೆ. ಹಾಗಾಗಿ ವಾಹನಗಳ ಬೇಡಿಕೆ ಕೂಡ ಹೆಚ್ಚಾಗುತ್ತಿದೆ. ಅದೇ ರೀತಿ ವಾಹನಗಳಲ್ಲಿ ಇಂದು ಎಲೆಕ್ಟ್ರಾನಿಕ್ ಗೆ ಅಧಿಕ ಮಾನ್ಯತೆ ಸಿಗುತ್ತಿದೆ. ಹಾಗಾಗಿ ವಾಹನ ಕೊಳ್ಳುವವರ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಕಂಪೆನಿಗಳು ಕೂಡ ಅಧಿಕವಾಗಿ ಹೋಗುತ್ತಿದೆ. ಅದೇ ರೀತಿ ಸರಕಾರ ಕೂಡ ಮೋಟಾರು ವಾಹನ ಕಾಯ್ದೆ ಅಡಿಯಲ್ಲಿ ಹೊಸತೊಂದು ನಿಯಮ ಕೈಗೊಳ್ಳಲು ಮುಂದಾಗಿದ್ದು ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

ರಾಜ್ಯ ಮಟ್ಟದಲ್ಲಿ ಚರ್ಚೆ:

ಕರ್ನಾಟಕ ರಾಜ್ಯದಲ್ಲಿ ಈ ಹಿಂದೆ ಕಾಂಗ್ರೆಸ್ ಸರಕಾರವು ಎಲೆಕ್ಟ್ರಾನಿಕ್ ವಾಹನ (Electric Vehicle) ಗಳ ಮೇಲೆ 20% ತೆರಿಗೆ ವಿಧಿಸಲು ಪ್ರಸ್ತಾವನೆ ಮುಂದಿಟ್ಟಿತ್ತು ಆದರೆ ಈ ಪ್ರಸ್ತಾವನೆಯನ್ನು ಹಿಂಪಡೆಯುವಂತೆ ಕಾಂಗ್ರೆಸ್ ಸರಕಾರದ ಅನೇಕ ಶಾಸಕರು, ಆಡಳಿತಾಧಿಕಾರಿಗಳು ಮನವಿ ಮಾಡಿದ್ದು ಈಗ ಈ ಪ್ರಸ್ತಾವನೆಯಿಂದ ಕಾಂಗ್ರೆಸ್ ಸರಕಾರ ಹಿಂಪಡೆದಿದೆ.ಹಾಗಾಗಿ ಈ ಬಗ್ಗೆ ರಾಜ್ಯ ಮಟ್ಟದಲ್ಲಿ ಚರ್ಚೆ ಸಹ ಏರ್ಪಡುತ್ತಿದೆ.

10% ತೆರಿಗೆ ವಿಧಿಸುವ ಸಾಧ್ಯತೆ:

 

 

advertisement

ಕರ್ನಾಟಕ ಮೋಟಾರು ವಾಹನ ತೆರಿಗೆ ಮಸೂದೆಯಲ್ಲಿ ಹೊಸ ಎಲೆಕ್ಟ್ರಾನಿಕ್ ವಾಹನದ (Electric Vehicle) ಮೇಲೆ 20% ನಷ್ಟು ತೆರಿಗೆ (Tax) ವಿಧಿಸಲು ಪ್ರಸ್ತಾವನೆ ಮುಂದಿಡಲಾಗಿದ್ದು ಇದೀಗ ತಡೆಹಿಡಿಯಲಾಗಿದೆ. ಈ‌ ಮೂಲಕ 20% ಎಲೆಕ್ಟ್ರಾನಿಕ್ ವಾಹನದ ಮೇಲೆ ವಿಧಿಸಲಾಗುವ ತೆರಿಗೆಯನ್ನು ಕೈ ಬಿಡಲು ಸರಕಾರ ಒಪ್ಪಿಗೆ ಸೂಚಿಸಿದೆ‌. ಈ ಬಗ್ಗೆ ವಿಧೇಯಕವನ್ನು ವಿಧಾನಸಭೆಯಲ್ಲಿ ಅಂಗೀಕರಿಸಲಾಗಿದೆ. ಬಳಿಕ ಈ ಮಸೂದೆ ತಿದ್ದುಪಡಿ ಮಾಡಲಾಗಿದ್ದು 10% ನಂತೆ ತೆರಿಗೆ ವಿಧಿಸಲಾಗುವುದರ ಬಗ್ಗೆ ಪ್ರಸ್ತಾಪಿಸಲಾಗಿದೆ.

ಸಚಿವರು ಹೇಳಿದ್ದೇನು?

 

 

ಈ ಬಗ್ಗೆ ಸಚಿವ ರಾಮಲಿಂಗ ರೆಡ್ಡಿ (Ramalinga Reddy) ಅವರು ಮಾಧ್ಯಮದ ಮುಂದೆ ಮಾತನಾಡಿದ್ದಾರೆ. 10ರಿಂದ 15ಲಕ್ಷ ಮೌಲ್ಯದ ಟ್ಯಾಕ್ಸಿ ಕ್ಯಾಬ್ ನಂತಹ ಹಳದಿ ಬೋರ್ಡ್ ವಾಹನಕ್ಕೆ ಹಾಗೂ 1,500ರಿಂದ 12,000KG ವರೆಗೆ ಸರಕಿನ ವಾಹನಗಳಿಗೆ ತೆರಿಗೆ ವಿನಾಯಿತಿ ಇರಲಿದೆ. ಅದೇ ರೀತಿ ಎಲೆಕ್ಟ್ರಾನಿಕ್ ವಾಹನಗಳ ಮೇಲೆ 20%ತೆರಿಗೆ ವಿಧಿಸುವ ಪ್ರಸ್ತಾವನೆ ಹಿಂಪಡೆಯಲಾಗಿದ್ದು ಮುಂದಿನ ದಿನದಲ್ಲಿ ಈ ಬಗ್ಗೆ ಶೀಘ್ರ ಸೂಕ್ತ ಕ್ರಮ ಬರಲಿದೆ ಎಂದು ಅವರು ತಿಳಿಸಿದ್ದಾರೆ.

ಒಟ್ಟಾರೆಯಾಗಿ ಈ ಒಂದು ವಿಧಾನದಿಂದ ಎಲೆಕ್ಟ್ರಾನಿಕ್ ವಾಹನ ಕೊಳ್ಳುವವರಿಗೆ ತೆರಿಗೆ ಹೊರೆ ತಪ್ಪಿಸಿದಂತಾಗಿದೆ. ಪ್ರಾಕೃತಿಕ ಕೊಡುಗೆ ನೀಡುವ ಎಲೆಕ್ಟ್ರಾನಿಕ್ ವಾಹನ ಬಳಕೆ ಕೂಡ ಅಧಿಕ ವಾಗಲು ಈ ಕ್ರಮ ಸಹಕಾರಿ ಆಗಲೂ ಬಹುದಾಗಿದೆ.ಈ ಬಗ್ಗೆ ಮಾಹಿತಿ ಇಷ್ಟವಾದಲ್ಲಿ ಲೈಕ್ ಮಾಡಿ ಮತ್ತು ನಿಮ್ಮ ಅಭಿಪ್ರಾಯವನ್ನು ಕಮೆಂಟ್ ಮಾಡಿ ತಿಳಿಸಿ.

advertisement

Leave A Reply

Your email address will not be published.