Karnataka Times
Trending Stories, Viral News, Gossips & Everything in Kannada

Traffic Rules: ಟ್ರಾಫಿಕ್ ರೂಲ್ಸ್ ನಲ್ಲಿ ದೊಡ್ಡ ಬದಲಾವಣೆ, ಈ ತಪ್ಪು ಮಾಡಿದ್ದಲ್ಲಿ ಶಿಕ್ಷೆ ಗ್ಯಾರಂಟಿ.

advertisement

ವಾಹನ ಹೊಂದಿರುವ ಮತ್ತು ಓಡಾಟ ಮಾಡುವ ಪ್ರಮಾಣ ಹಿಂದಿಗಿಂತಲೂ ಈಗ ತುಂಬಾ ಹೆಚ್ಚಾಗಿ ಇದೆ ಎಂದು ಹೇಳಬಹುದು. ಹಾಗಾಗಿ ಅಲಲ್ಲಿ ಟ್ರಾಫಿಕ್ ಜಾಂ (Traffic Jam), ಅಪಘಾತ ಸೇರಿದಂತೆ ಅನೇಕ ತೊಂದರೆಗಳನ್ನು ಸಹ ಎದುರಿಸಬೇಕಾಗುತ್ತದೆ ಅದೇ ರೀತಿ ವಾಹನ ಚಲಾವಣೆಯ ನಿಯಮಗಳು (Traffic Rules) ಕಟ್ಟು ನಿಟ್ಟಾಗಿ ಪಾಲನೆ ಆಗದ ಹಿನ್ನೆಲೆಯಲ್ಲಿ ಅನೇಕ ರೀತಿಯ ಸಮಸ್ಯೆ ಸಹ ಎದುರಿಸಲಾಗುತ್ತಿದೆ. ಹಾಗಾಗಿ ಈಗ ಮತ್ತೆ ಈ ನಿಯಮಗಳ ಬಗ್ಗೆ ಮರು ಪರಿಶೀಲನೆ ಹಾಗೂ ಪಾಲನೇ ಆಗುವ ಬಗ್ಗೆ ತಿಳಿಯುವ ಸಲುವಾಗಿ ಕಟ್ಟು ನಿಟ್ಟಿನ ಕ್ರಮ ಜಾರಿಗೆ ತರಲು ಪೊಲೀಸ್ ಇಲಾಖೆ ಮುಂದಾಗಿದೆ.

ಪ್ರಮುಖ ಆದೇಶ:

ಸಂಚಾರ ನಿಯಮ (Traffic Rules) ಇತ್ತೀಚಿನ ದಿನದಲ್ಲಿ ಉಲ್ಲಂಘನೆ ಆಗುವುದು ಮನಗಂಡ ಪೊಲೀಸ್ ಇಲಾಖೆ ಕೆಲ ಆದೇಶ ಸಹ ಹೊರಡಿಸಿದೆ. ಈ ಮೂಲಕ ಎರಡು ಪ್ರತ್ಯೇಕ ವರ್ಗವಾಗಿ ವಿಂಗಡಣೆ ಮಾಡಿ ಅದರಲ್ಲಿ ನಿಯಮ ಪಾಲನೆ ಹಾಗೂ ಪಾಲನೆ ಮಾಡದೇ ಇರುವ ಬಗ್ಗೆ ಚರ್ಚಿಸಲಾಗುತ್ತಿದೆ. ಈ ಮೂಲಕ ನಿಯಮ ಉಲ್ಲಂಘನೆ ಆಗುವ ಪ್ರಕರಣ ಹಾಗೂ ಗುರುತರ ಉಲ್ಲಂಘನೆ ಪ್ರಕರಣ ಎಂಬ ಎರಡು ವಿಧ ಕಾಣಬಹುದು.

ನಿಯಮ ಉಲ್ಲಂಘನೆ:

 

advertisement

 

ನಿಯಮ ಉಲ್ಲಂಘನೆ ಹೆಸರೇ ಹೇಳುವಂತೆ ನಿಯಮ ಉಲ್ಲಂಘನೆ ಆದರೆ ಶಿಕ್ಷೆ , ದಂಡ ವಿಧಿಸಲಾಗುವುದು. ವಾಹನದಲ್ಲಿ ಕರ್ಕಶ ಹಾರನ್ ಬಳಕೆ ಮಾಡಿ ಶಬ್ದ ಮಾಲಿನ್ಯ ಮಾಡುವುದು, ತುಂಬಾ ಪ್ರಕಾಶಮಾನ ಬೆಳಕನ್ನು ವಾಹನಕ್ಕೆ ಬಳಸುವುದು, ಬ್ಲಿಂಕಡ್ ಲೈಟ್ (Blinked Light) ಬಳಸುವುದು, ನಿಷೇಧಿತ ಪ್ರದೇಶದಲ್ಲಿ ದೋಷಪೂರಿತ ಸೈಲನ್ಸರ್ (Defective Silencer) ಬಳಕೆ, ವಾಹನದಲ್ಲಿ ಉದ್ದವಾದ ವಸ್ತು ಒಯ್ಯವಾಗ ಇತರರಿಗೆ ತೊಂದರೆ ಆಗುವುದು, ಡಿಸ್ ಪ್ಲೇ ಕಾರ್ಡ್ (Display Card) ಇಲ್ಲದೇ ವಾಹನ ಚಲಾಯಿಸುವುದು, ವಾಹನಗಳ ಗ್ಲಾಸ್ ನಲ್ಲಿ ಬ್ಲ್ಯಾಕ್ ಫಿಲ್ಮ್ (Black Film) ಬಳಕೆ ಮಾಡುವುದು, ಆಟೋದವರು ಬಾಡಿಗೆ ತೆರಳಲು ನಿರಾಕರಿಸುವುದು, ಡಿಸ್ ಪ್ಲೇ ಕಾರ್ಡ್ ಇಲ್ಲದೇ ವಾಹನ ಚಲಾಯಿಸುವುದು, ಸರಕಾರಿ (Govt), ಟ್ಯಾಕ್ಸಿ (Taxi) ಮತ್ತು ಆಟೋ ಚಾಲಕರು (Auto Drivers) ಸಮವಸ್ತ್ರ ಧರಿಸದಿರುವುದು, ಪೊಲೀಸರು ಕೇಳಿದಾಗ ಅಗತ್ಯ ದಾಖಲಾತಿ ನೀಡದೇ ಇರುವುದು, ಪಾದಾಚಾರಿ ಮಾರ್ಗದ ಒತ್ತುವರಿ, ಪರ್ಮಿಟ್ ಉಲ್ಲಂಘನೆ, ರಾಂಗ್ ರೂಟ್ (Wrong Route) ನಲ್ಲಿ ವಾಹನ ಚಲಾಯಿಸುವುದು, ಭಾರೀ ವಾಹನದ ಪ್ರವೇಶ ಉಲ್ಲಂಘನೆ, ಇನ್ಶೂರೆನ್ಸ್ ಇಲ್ಲದೇ ವಾಹನ ಚಲಾಯಿಸುವುದು ಇತರೆ ವಿಚಾರವನ್ನು ನಿಯಮ ಉಲ್ಲಂಘನೆ ವಿರುದ್ಧ ಕೇಸ್ (Case) ದಾಖಲು ಮಾಡುವ ಅಧಿಕಾರ ಸಹ ನೀಡಲಾಗಿದೆ.

ದಂಡ ವಿಧಿಸಲಾಗುತ್ತದೆ:

ಈ ಪ್ರಕರಣದ ಸಾಲಿನಲ್ಲಿ ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುವಾಗ ಮೊಬೈಲ್ ಫೋನ್ ಬಳಕೆ, ಚಾಲನೆ, ಅತೀ ವೇಗದ ಚಾಲನೆ, ಅಜಾಗರೂಕತೆಯಿಂದ ಚಾಲನೆ, ಜಂಪಿಂಗ್ ಟ್ರಾಫಿಕ್ ಸಿಗ್ನಲ್ (Jumping Traffic Signal), ಫ್ರೀ ವೀಲ್ಹಿಂಗ್, ಅಡ್ಡಾದಿಡ್ಡಿ ವಾಹನ ಚಲಾಯಿಸುವುದು, ವಾಹನದಲ್ಲಿ ರೇಸ್ ಮಾಡುವುದು, ಅತೀ ವೇಗದಲ್ಲಿ ವಾಹನ ಚಲಾಯಿಸುವುದು, ಎಡಭಾಗದಿಂದ ಓವರ್ ಟೇಕ್ ಮಾಡುವುದು, ಹೆಲ್ಮೆಟ್ ಧರಿಸದಿರುವುದು, ಸೀಟ್ ಬೆಲ್ಟ್ (Seat Belt) ಧರಿಸದಿರುವುದು, ಇತರ ವಾಹನ ಅಥವಾ ಸರಕಾರಿ ಬಸ್ ಹಾಗೂ ವಾಹನ ನಿಲುಗಡೆ ಜಾಗದಲ್ಲಿ ವಾಹನ ಪಾರ್ಕಿಂಗ್ (Vehicle Parking) ಮಾಡುವುದು, ವಾಹನದ ರೂಫ್ (Vehicle Roof) ಮೇಲೆ ಪ್ರಯಾಣಿಕರನ್ನು ಕರೆದೊಯ್ಯುವುದು, ಮೋಟಾರ್ ಬೈಕ್ ಅಥವಾ ಸ್ಕೂಟಿನಲ್ಲಿ ಮೂವರು ಅಥವಾ ಹೆಚ್ಚು ಜನ ಪ್ರಯಾಣಿಸುವುದು, ಅಪಾಯಕಾರಿ ಜಾಗದಲ್ಲಿ ವಾಹಮ ಪಾರ್ಕಿಂಗ್ ಮಾಡುವುದು, ವಾಹನ ಪ್ರವೇಶ ನಿಷಿದ್ಧ ಭಾಗಕ್ಕೆ ತೆರಳುವುದು, ಬಸ್ ನಲ್ಲಿ ಫುಟ್ ಬೋರ್ಡ್ ನಿಂತು ಪ್ರಯಾಣಿಸುವುದು, ಪ್ರಯಾಣಿಕರನ್ನು ಗೂಡ್ಸ್ ವಾಹನ (Goods Vehicle) ದಲ್ಲಿ ಕರೆದೊಯ್ಯುವುದು, ಸರಕಾರಿ ಅಥವಾ ಖಾಸಗಿ ಬಸ್ ನಲ್ಲಿ ಮಿತಿ ಮೀರಿ ಜನರನ್ನು ಕರೆದೊಯ್ಯುವುದು, ಪಾದಾಚಾರಿ ಸ್ಥಳದಲ್ಲಿ ವಾಹನ ಪಾರ್ಕಿಂಗ್ ಮಾಡುವುದು, ಮೋಟಾರ್ ಬೈಕ್ ನಲ್ಲಿ ಚಲಾಯಿಸುವಾಗ ಹಿಂಬದಿ ಸವಾರರು ಹೆಲ್ಮೆಟ್ ಧರಿಸದೇ ಇರುವುದು, ವಾಹನದ ಮಿತಿಗಿಂತ ಹೆಚ್ಚು ಶಾಲಾ ಮಕ್ಕಳನ್ನು ಬಸ್, ವ್ಯಾನ್ ಮತ್ತು ಆಟೋದಲ್ಲಿ ಕರೆದೊಯ್ಯುವುದು ಇತರೆಗಳನ್ನು ಪ್ರವರ್ಗ ಒಂದರ ಅಡಿಯಲ್ಲಿ ಉಲ್ಲಂಘನೆ ಆದರೆ ದಂಡ ಹಾಗೂ ಶಿಕ್ಷೆ ವಿಧಿಸುವ ಅಧಿಕಾರ ಕಾನೂನಿಗೆ ಇದೆ ಎಂದು ಸಂಚಾರ ಮತ್ತು ರಸ್ತೆ ಸುರಕ್ಷತೆ ADGP ಸೀಮಂತ್ ಕುಮಾರ್ ಸಿಂಗ್ ಅವರು ಹೇಳಿದ್ದಾರೆ. ಅದೇ ರೀತಿ ಈ ಎಲ್ಲ ಸಂಗತಿಗಳ ಬಗ್ಗೆ ಸಂಚಾರ ಠಾಣೆಗಳಿಗೆ ಹೊಸ ಮಾರ್ಗ ಸೂಚಿ ನೀಡಿ ತಿಳಿಸಲಾಗಿದೆ.

advertisement

Leave A Reply

Your email address will not be published.