Karnataka Times
Trending Stories, Viral News, Gossips & Everything in Kannada

KSRTC: KSRTC ಯಲ್ಲಿ ಲಗೇಜ್ ಬ್ಯಾಗ್ ಗಳನ್ನು ತಗೆದುಕೊಂಡು ಹೋಗುವ ಎಲ್ಲಾ ಮಹಿಳೆಯರಿಗೆ ಹೊಸ ಸೂಚನೆ!

advertisement

KSRTC ಬಸ್ ನಲ್ಲಿ ಮಹಿಳಾ ಪ್ರಯಾಣಿಕರಿಗೆ ಉಚಿತ ಇದೆ ಎಂಬುದು ನಮಗೆಲ್ಲ ತಿಳಿದೆ ಇದೆ. ಮಹಿಳೆಯರಿಗೆ ಶಕ್ತಿ ಯೋಜನೆ ಮೂಲಕ ಉಚಿತ ಪ್ರಯಾಣ ಅವಕಾಶ ಇದ್ದರೂ ಕೂಡ ಅವರು ತಮ್ಮ ಜೊತೆ ಲಗೇಜ್ ಕ್ಯಾರಿ ಮಾಡಿದ್ದರೆ ಆ ಲಗೇಜ್ ಉಚಿತವಾಗುತ್ತಾ ಅಥವಾ ಅದಕ್ಕೆ ಪಾವತಿ ಮಾಡಬೇಕಾಗುತ್ತಾ ಎಂಬುದು ಅನೇಕರಿಗೆ ತಿಳಿದಿಲ್ಲ ಈ ಬಗ್ಗೆ KSRTC ನಿಯಮದಲ್ಲಿ ಏನನ್ನು ತಿಳಿಸಲಿದೆ. ಎಷ್ಟು ಚಾರ್ಜ್ ಪಡೆಯಲಿದೆ ಎಂಬ ಇತ್ಯಾದಿ ವಿಚಾರಗಳ ಬಗ್ಗೆ ನಾವು ಇಂದು ನಿಮಗೆ ಪೂರ್ತಿ ಮಾಹಿತಿಯನ್ನು ನೀಡಲಿದ್ದೇವೆ.

ಮಹಿಳೆಯರು ತಾವು ಪ್ರಯಾಣ ಮಾಡುವುದಕ್ಕೆ ಉಚಿತ ಅನುಮತಿ ಇದೆ ಎಂಬುದನ್ನು ಅರಿತಿದ್ದಾರೆ ಆದರೆ ತಮ್ಮೊಂದಿಗೆ ಕೊಂಡೊಯ್ಯುವ ವಸ್ತುವಿಗೆ ಟಿಕೆಟ್ ಕೊಳ್ಳಬೇಕು ಎಂಬುದೇ ಅನೇಕರಿಗೆ ಗೊತ್ತಿಲ್ಲ. ಲಗೇಜ್ ವಿಚಾರಕ್ಕೆ ಪ್ರಯಾಣಿಕರ ಮತ್ತು ಬಸ್ ಕಂಡೆಕ್ಟರ್ ನಡುವೆ ಅನೇಕ ಸಲ ಜಗಳ ಆಗುತ್ತಿರಲಿದೆ‌ ಲಗೇಜ್ ಶುಲ್ಕ ಎಷ್ಟು ಇರಲಿದೆ? ಎಷ್ಟು ವಿನಾಯಿತಿ ಇರಲಿದೆ ಎಂಬುದು ನೀವು ತಿಳಿಯಬಹುದು. ಹಾಗಿದ್ದರೂ ಇಂತಿಷ್ಟು ಪ್ರಮಾಣದ ಲಗೇಜ್ ಗಳಿಗೆ ಉಚಿತ ಇದೆ ಈ ಬಗ್ಗೆ ಮಾಹಿತಿ ಇಲ್ಲಿ ನೀಡಲಾಗಿದ್ದು ನೀವು ಈ ಮಾಹಿತಿಯನ್ನು ಪೂರ್ತಿ ಓದಿ.

ಎಷ್ಟು ವಿನಾಯಿತಿ ಇದೆ?

 

Image Source: ThePrint

 

KSRTC ನಲ್ಲಿ ಪ್ರಯಾಣ ಮಾಡುವವರಿಗೆ 30kg ವರೆಗೆ ಲಗೇಜ್ ಇಟ್ಟು ಕೊಂಡರೆ ಯಾವುದೇ ಟಿಕೆಟ್ ಮೊತ್ತ ನೀಡುವ ಅಗತ್ಯ ಇಲ್ಲ ಅದಕ್ಕಿಂತ ಹೆಚ್ಚು ಭಾರವಾದ ವಸ್ತುವನ್ನು ಅಥವಾ ಇತರೆ ಪ್ರಾಣಿ ಪಕ್ಷಿ ಕೊಂಡೊಯ್ಯುವ ಸಂದರ್ಭದಲ್ಲಿ ಇಂತಿಷ್ಟು ಮೊತ್ತ ಪೇ ಮಾಡಲೇ ಬೇಕು ಎಂಬ ನಿಯಮ ಇದೆ.

ಅದೇ ರೀತಿ ಮಹಿಳೆಯರಿಗೆ ಟಿಕೆಟ್ ಫ್ರೀ ಇದ್ದರೂ ಅವರು 30kg ಗಿಂತ ಹೆಚ್ಚು ಭಾರವಾದ ವಸ್ತುಗಳನ್ನು ಕೊಂಡೊಯ್ಯುವ ಸಂದರ್ಭದಲ್ಲಿ ಕಡ್ಡಾಯವಾಗಿ ಅದಕ್ಕೆ ಟಿಕೆಟ್ ಪೇ ಮಾಡಬೇಕು. 30kg ಗಿಂತ ಅಧಿಕ ಲಗೇಜ್ ಅನ್ನು ಯಾರು ಕೊಂಡೊಯ್ದರೂ ಹೆಚ್ಚುವರಿ ಲಗೇಜ್ ಗೆ ಶುಲ್ಕ ನೀಡಲೇ ಬೇಕು ಎಂದು ರಾಜ್ಯದ ಸಾರಿಗೆ ಇಲಾಖೆ ಈ ಬಗ್ಗೆ ಅಧಿಕೃತ ಆದೇಶ ನೀಡಿದೆ.

advertisement

ಇದಕ್ಕೂ ಟಿಕೆಟ್ ಇದೆ:

ನೀವು ಪ್ರಯಾಣ ಮಾಡುವಾಗ ನಿಮ್ಮ ಜೊತೆ ಕೋಳಿ, ಮೊಲ, ನಾಯಿ, ಬೆಕ್ಕು ಇತರ ಪ್ರಾಣಿ ಪಕ್ಷಿ ಕೊಂಡೊಯ್ಯುವ ಸಂದರ್ಭದಲ್ಲಿ ಕೂಡ ಟಿಕೆಟ್ ಕೊಳ್ಳಬೇಕು ಎಂಬ ನಿಯಮ ಇದೆ. ಹಾಗೆಂದು ಎಲ್ಲ ಸಾರಿಗೆ ಬಸ್ ನಲ್ಲಿ ಪ್ರಾಣಿಗಳ ಸಾಗಾಟಕ್ಕೆ ಒಯ್ಯುವ ಹಾಗಿಲ್ಲ‌. ರಾಜಹಂಸ ಸೇರಿದಂತೆ ಹವಾನಿಯಂತ್ರಿತ ಸಾರಿಗೆ ಬಸ್ ನಲ್ಲಿ ಪ್ರಾಣಿ ಪಕ್ಚಿ ಕೊಂಡೊಯ್ಯಬಾರದು.

 

Image Source: Public TV

 

ಸಾಮಾನ್ಯ ಹೊರವಲಯ ಹಾಗೂ ವೇಗದೂತ ಸಾರಿಗೆಯಲ್ಲಿ ಸಾಗಣೆ ಮಾಡಲು ಅನುಮತಿ ನೀಡಲಾಗಿದೆ. ಅವುಗಳಿಗೆ ಅರ್ಧ ಟಿಕೆಟ್ ಇರಲಿದೆ. ಒಂದು ಯುನಿಟ್ ಗೆ 75 ಪೈಸೆಯಂತೆ ಕನಿಷ್ಠ 5ರೂಪಾಯಿನಿಂದ ಎಷ್ಟು ತೂಕ ಇದೆ ಎಂಬ ಆಧಾರದ ಮೇಲೆ ಟಿಕೇಟ್ ದರ ನಿಗಧಿ ಆಗಲಿದೆ.

ಸಹ ಪ್ರಯಾಣಿಕರಿಗೆ ತೊಂದರೆ ಆಗುವಂತಿಲ್ಲ:

ನೀವು ಯಾವುದೇ ಒಂದು ಲಗೇಜ್ ಅನ್ನು ನಿಮ್ಮ ಜೊತೆ ಕ್ಯಾರಿ ಮಾಡಬೇಕು ಎಂದು ಬಯಸಿದರೆ ಅದನ್ನು ನಿಮ್ಮ ಪಕ್ಕದ ಸೀಟ್ ನಲ್ಲಿ ಇಡುವಂತಿಲ್ಲ, ಡ್ರೈವರ್ ಪಕ್ಕದಲ್ಲಿ ಇಂಜಿನ್ ಅಥವಾ ಪ್ಯಾಸೇಜ್ ಜಾಗದಲ್ಲಿ ಅಡ್ಡವಾಗಿ ಕೂಡ ಇಡುವಂತಿಲ್ಲ, ಬಸ್ ಮೇಲುಗಡೆ ಅಥವಾ ಲಗೇಜ್ ಡಿಕ್ಕಿನಲ್ಲೇ ಇಡಬೇಕು. ಅದೇ ರೀತಿ 30kg ತನಕ ಉಚಿತ ಲಗೇಜ್ ಕ್ಯಾರಿಯನ್ನು ವಾಣಿಜ್ಯೇತರ ಲಗೇಜ್ ಗಳಿಗೆ ಮಾತ್ರವೇ ಅನ್ವಯ ಮಾಡಲಾಗುವುದು ವಾಣಿಜ್ಯ ವಸ್ತು ಸಾಗಾಟಕ್ಕೆ ಟಿಕೆಟ್ ಕೊಳ್ಳಬೇಕು ಎಂಬ ನಿಯಮ ಕೂಡ ಇದೆ.

advertisement

Leave A Reply

Your email address will not be published.