Karnataka Times
Trending Stories, Viral News, Gossips & Everything in Kannada

SIM Card: ದೇಶಾದ್ಯಂತ 2 ಸಿಮ್ ಕಾರ್ಡ್ ಬಳಸುತ್ತಿದ್ದವರಿಗೆ ಕಹಿಸುದ್ದಿ!

advertisement

ಇತ್ತೀಚಿನ ವರ್ಷಗಳಲ್ಲಿ ನಿಮಗೆಲ್ಲರಿಗೂ ತಿಳಿದಿರಬಹುದು ನಾವು ಪ್ರತಿಯೊಬ್ಬರೂ ಕೂಡ ಮೊಬೈಲ್ ಹಾಗೂ ಇಂಟರ್ನೆಟ್ ಗೆ ನಮ್ಮನ್ನು ನಾವು ಸಂಪೂರ್ಣವಾಗಿ ಸಮರ್ಪಿಸಿಕೊಂಡಿದ್ದೇವೆ. ನಮ್ಮ ಪ್ರತಿಯೊಂದು ಕೆಲಸಗಳು ಕೂಡ ಮೊಬೈಲ್ ಹಾಗೂ ಇಂಟರ್ನೆಟ್ ಇಲ್ಲದೆ ನಡೆಯೋದಕ್ಕೆ ಸಾಧ್ಯನೇ ಇಲ್ಲ ಅನ್ನೋ ಮಟ್ಟಕ್ಕೆ ಮೊಬೈಲ್ ಹಾಗೂ ಸಿಮ್ ಕಾರ್ಡ್ (SIM Card) ಬಳಕೆಯನ್ನು ನಾವು ಇತ್ತೀಚಿನ ವರ್ಷಗಳಲ್ಲಿ ಹಚ್ಚಿಕೊಂಡುಬಿಟ್ಟಿದ್ದೇವೆ.

ಈಗ ತಿಳಿದು ಬಂದಿರುವ ಮಾಹಿತಿ ಪ್ರಕಾರ ಟೆಲಿಕಾಂ ಇಂಡಸ್ಟ್ರಿಯ (Telecom Industry) ಸಾಕಷ್ಟು ಕಂಪನಿಗಳು ತಮ್ಮ ರಿಚಾರ್ಜ್ ಪ್ಲಾನ್ ಅನ್ನು ಅಂದರೆ ಪ್ರಿಪೇಯ್ಡ್ ಹಾಗೂ ಪೋಸ್ಟ್ ಪೈಡ್ 2 ಪ್ಲಾನ್ ಗಳ ಬೆಲೆಯನ್ನು ಹೆಚ್ಚಿಸುವಂತಹ ಸಾಧ್ಯತೆ ಇದೆ.

ಎರಡು ಸಿಮ್ ಕಾರ್ಡ್ಗಳನ್ನು ಹೊಂದಿರುವವರಿಗೆ ಆಗಲಿದೆ ಪ್ರಾಬ್ಲಮ್:

 

Image Source: Prune.co.in

 

ಎರಡು ಸಿಮ್ ಕಾರ್ಡ್ಗಳನ್ನು (SIM Cards) ಹೊಂದಿರುವವರಿಗೆ ಮತ್ತೊಂದು ಸಿಮ್ ಕಾರ್ಡ್ ಅನ್ನು ಆಕ್ಟಿವ್ ಆಗಿರೋದಕ್ಕೆ ಸಾಕಷ್ಟು ಹೆಚ್ಚಿನ ಹಣವನ್ನು ಖರ್ಚು ಮಾಡಬೇಕಾದ ಅಗತ್ಯವಿದೆ ಎಂಬುದಾಗಿ ತಿಳಿದು ಬಂದಿದೆ. ಈಗಾಗಲೇ ಆಕ್ಟಿವ್ ಆಗಿರಿಸಲು ಜಿಯೋ ಏರ್ಟೆಲ್ ಗಳಂತಹ ಸಿಮ್ ಕಾರ್ಡ್ (SIM Card) ಗಳಿಗೆ 150 ರೂಪಾಯಿಗಳ ರಿಚಾರ್ಜ್ ಪ್ಲಾನ್ ಅನ್ನು ಮಾಡಬೇಕಾಗಿರುತ್ತದೆ.

advertisement

ಈಗ ಟ್ಯಾರಿಫ್ ಪ್ಲಾನ್ ಹೆಚ್ಚಾಗಿರುವ ಕಾರಣಕ್ಕಾಗಿ ಇದು 180 ರಿಂದ 200 ರೂಪಾಯಿಗಳ ವರೆಗೆ ಹೋಗುವಂತಹ ಸಾಧ್ಯತೆ ಕೂಡ ಇದೆ. ಈ ಲೆಕ್ಕಾಚಾರದಲ್ಲಿ ನೋಡುವುದಾದರೆ ನೀವು ಎರಡು ಸಿಮ್ ಕಾರ್ಡ್ಗಳನ್ನು ಕನಿಷ್ಠಪಕ್ಷ ಆಕ್ಟಿವ್ ಆಗಿಡಬೇಕು ಅಂದರೂ ಕೂಡ 400 ರೂಪಾಯಿಗಳನ್ನು ತಿಂಗಳಿಗೆ ರಿಚಾರ್ಜ್ ರೂಪದಲ್ಲಿ ಖರ್ಚು ಮಾಡಬೇಕಾಗಿರುತ್ತದೆ.

ಒಂದು ವೇಳೆ ನೀವು ತಿಂಗಳಿಗೆ 300 ರೂಪಾಯಿಗಳ ರಿಚಾರ್ಜ್ ಮಾಡುತ್ತಿದ್ದೀರಿ ಅಂದ್ರೆ ಟ್ಯಾರಿಫ್ ಪ್ಲಾನ್ ಬೆಲೆ ಹೆಚ್ಚಾಗಿರುವ ಕಾರಣದಿಂದಾಗಿ ಇದರ ಮೇಲೆ ನೀವು 75 ರೂಪಾಯಿಗಳನ್ನು ಹೆಚ್ಚು ನೀಡಬೇಕಾಗುತ್ತದೆ. 500 ರೂಪಾಯಿಗಳ ರಿಚಾರ್ಜ್ ಮೇಲೆ 125 ರೂಪಾಯಿ ಗಳನ್ನು ಹೆಚ್ಚು ನೀಡಬೇಕಾಗುತ್ತದೆ.

ತಿಂಗಳ ರಿಚಾರ್ಜ್ ಪ್ಲಾನ್ ಖರ್ಚು ಹೆಚ್ಚಾಗಲಿದೆ:

 

Image Source: Mint

 

ಸದ್ಯದ ಮಟ್ಟಿಗೆ ಬಹುತೇಕ ಜನರು 5G ಸೇವೆಗಳನ್ನು ಉಚಿತವಾಗಿ ಬಳಸುತ್ತಿದ್ದಾರೆ ಹಾಗೂ ಇದರಲ್ಲಿ ಅವರಿಗೆ ತಿಂಗಳಿಗೆ ರಿಚಾರ್ಜ್ ಪ್ಲಾನ್ ನಲ್ಲಿ ಹೆಚ್ಚಿಗೆ ಖರ್ಚಾಗುತ್ತಿಲ್ಲ. ಮುಂದಿನ ಸಮಯದಲ್ಲಿ ಜಿಯೋ (Jio) ಹಾಗೂ ಏರ್ಟೆಲ್ (Airtel) ಸಂಸ್ಥೆಗಳು ಸಾಮಾನ್ಯ ಬೆಲೆಗಿಂತ 50% ಹೆಚ್ಚಿನ ಬೆಲೆಯನ್ನು ಈ ಸೇವೆಗಳನ್ನು ನೀಡುವುದಕ್ಕೆ ಚಾರ್ಜ್ ವಿಧಿಸಬಹುದಾಗಿದೆ.

ಹೀಗಾಗಿ ಈ ಖರ್ಚುಗಳನ್ನು ಮೊದಲೇ ನೀವು ಭರಿಸೋದಕ್ಕೆ ರೆಡಿ ಇದ್ರೆ ಮಾತ್ರ ಎರಡು ಸಿಮ್ ಗಳನ್ನು ನೀವು ಬಳಸುವುದಕ್ಕೆ ತಯಾರಾಗಬಹುದಾಗಿದೆ ಇಲ್ಲವಾದಲ್ಲಿ ಸಿಂಗಲ್ ಸಿಮ್ ಅನ್ನು ಬಳಸಿಕೊಂಡು ಖರ್ಚನ್ನು ಕಡಿಮೆ ಮಾಡಬಹುದಾಗಿದೆ.

advertisement

Leave A Reply

Your email address will not be published.