Karnataka Times
Trending Stories, Viral News, Gossips & Everything in Kannada

Airtel: ಕಡಿಮೆ ಬೆಲೆಯ ಇನ್ನೊಂದು ಪ್ರಿಪೇಯ್ಡ್ ಪ್ಲಾನ್ ಘೋಷಿಸಿದ ಏರ್ಟೆಲ್, BSNLಗೆ ಹೊಡೆತ!

advertisement

ಭಾರತದಲ್ಲಿ ಮೊಬೈಲ್ ನೆಟ್ವರ್ಕ್ ಕಂಪೆನಿಯಲ್ಲಿ ಏರ್ ಟೆಲ್ ಕಂಪೆನಿ ಬಹಳ ಉತ್ತಮ ಸ್ಥಾನದಲ್ಲಿ ಇದೆ. Jio , BSNL  ಸೇರಿದಂತೆ ಅನೇಕ ಪ್ರಬಲ ಕಂಪೆನಿಗೆ ಪೈಪೋಟಿ ನೀಡುವ ಸಲುವಾಗಿ ಅನೇಕ ಪ್ರಿಪೇಯ್ಡ್ ಸೇವೆಯನ್ನು ಪರಿಚಯಿಸುತ್ತಲೇ ಬಂದಿದೆ. ಇದೀಗ ಏರ್ ಟೆಲ್ (Airtel) ಕಂಪೆನಿ ತನ್ನ ಗ್ರಾಹಕನಿಗೆ ಹೊಸ ಪ್ಲ್ಯಾನ್ ಅನ್ನು ಘೋಷಣೆ ಮಾಡಿದ್ದು ಇದರಿಂದಾಗಿ ಅನಿಯಮಿತ ಆಫರ್ ಗಳನ್ನು ನೀವು ಪಡೆಯಬಹುದು. ಈಗಾಗಲೇ ನೀವು ಏರ್ ಟೆಲ್ ಕಂಪೆನಿಯ ಸೇವೆ ಪಡೆದವರಾದರೆ ಇನ್ನು ಹೆಚ್ಚಿನ ಸೇವೆಯನ್ನು ಪಡೆಯಲಿದ್ದೀರಿ.

ಪ್ರಿಪೇಯ್ಡ್ ಸೇವೆ:

ಏರ್ಟೆಲ್ (Airtel) ಕಂಪೆನಿಯು ಪ್ರಿಪೇಯ್ಡ್ ಸೇವೆಯನ್ನು ನೀಡುತ್ತಲಿದೆ.666ರೂಪಾಯಿಗಳ ಪ್ರಿಪೇಯ್ಡ್ ರೀಚಾರ್ಜ್ ಮಾಡಿದರೆ 84ದಿನಗಳ ಸೇವೆ ನಿಮಗೆ ಸಿಗಲಿದೆ. ಉಚಿತ ರಾಷ್ಟ್ರೀಯ ರೋಮಿಂಗ್ ಜೊತೆಗೆ ಅನಿಯಮಿತ ಕರೆ ಸೌಲಭ್ಯ ನಿಮಗೆ ಸಿಗಲಿದೆ.  100 SMS ಸೌಲಭ್ಯ ಸಿಗಲಿದೆ, 1.5 GB ಡೇಟಾ ಸೌಲಭ್ಯ ಸಿಗಲಿದೆ. ಹಾಗಾಗಿ ಅನಿಯಮಿತ ಕರೆ ಮಾಡುವವರಿಗೆ ದೀರ್ಘಾವಧಿಯ ಸೇವೆ ಪಡೆಯುವ ಸಲುವಾಗಿ ಏರ್ ಟೆಲ್ ಕಂಪೆನಿಯ ಈ ಸೇವೆ ಬಹಳ ಉಪಕಾರಿ ಆಗಿರಲಿದೆ.

5G ಸೇವೆ ಪಡೆಯುವವರಿಗೆ ತುಂಬಾ ಉತ್ತಮ:

 

advertisement

 

5G ಸ್ಮಾರ್ಟ್ ಫೋನ್ ಬಳಕೆ ಮಾಡುವವರಿಗೆ ಈ ಒಂದು ಪ್ಲ್ಯಾನ್ ಬಹಳ ಅನುಕೂಲ ಆಗಲಿದೆ. 5G ಡೇಟಾವನ್ನು ಉತ್ತಮವಾಗಿ ನೀವು ಪ್ಲ್ಯಾನ್ ಸೌಲಭ್ಯ ಪಡೆಯಬಹುದಾಗಿದೆ. 5G,4G,3G,2G  ನೆಟ್ ವರ್ಕ್ ಸೇವೆ ಪಡೆಯಲು ಕಾನ್ಫಿಗರ್ ಸೇವೆಯನ್ನು ನೀಡಲಾಗುತ್ತಿದೆ. ಅದರ ಜೊತೆಗೆ ಉಚಿತ ಹಲೋಟ್ಯೂನ್ ಮತ್ತು ವಿಂಕ್ ಮ್ಯೂಸಿಕ್ ಸೇವೆ ಕೂಡ ನಿಮಗೆ ಸಿಗಲಿದೆ.

ವಿಮಾನದಲ್ಲೂ ವಿಶೇಷ ಸೇವೆ:

ವಿಮಾನ ಸಂಚಾರದ ಸಮಯದಲ್ಲಿ ಮೊಬೈಲ್ ಡಾಟಾ ಆಗಲಿ ಇಂಟರ್ ನೆಟ್ ಆಗಲಿ ಬಳಸುವಂತಿಲ್ಲ ಎಂಬುದು ನಮಗೆಲ್ಲ ತಿಳಿದಿದೆ‌‌. ಅದೇ ರೀತಿ ಬಳಕೆದಾರರಿಗೆ ಇಂತಹ ತುರ್ತು ಪರಿಸ್ಥಿತಿಯಲ್ಲಿಯೂ ನೆರವಾಗಲು ಏರ್ಟೆಲ್ ಕಂಪೆನಿ ಇನ್ ಫ್ಲೈಟ್ ಸೌಲಭ್ಯ ಪರಿಚಯಿಸುತ್ತಿದೆ. 195 ರೂಪಾಯಿ ರಿಚಾರ್ಜ್ ಮಾಡಿದರೆ  100 ನಿಮಿಷಗಳ ಕರೆ ಸೇವೆ ಹಾಗೂ  100 SMS ಸೌಲಭ್ಯ ಹಾಗೂ  250MB ಗಳ ಡೇಟಾ ಸೌಲಭ್ಯ ಸಿಗಲಿದೆ.

ಒಟ್ಟಾರೆಯಾಗಿ ಭಾರತದ ಪ್ರತಿಷ್ಠಿತ ಮೊಬೈಲ್ ನೆಟ್ ವರ್ಕ್ ಕಂಪೆನಿ ಗ್ರಾಹಕ ಸ್ನೇಹಿಯಾಗಿ ಅನೇಕ ಯೋಜನೆ ಜಾರಿಗೆ ತರುವುದರೊಂದಿಗೆ ತನ್ನ ಬ್ರ್ಯಾಂಚ್ ಗಳನ್ನು ಸಹ ವಿಸ್ತರಣೆ ಮಾಡುತ್ತಾ ಬಂದಿದೆ. ಈ ಮೂಲಕ ಜನರಿಗೆ ಸೇವೆ ನೀಡಿ ಮಾರುಕಟ್ಟೆಯಲ್ಲಿ ಪ್ರಬಲ ಪೈಪೋಟಿ ನೀಡುವ ಕನಸ್ಸನ್ನು ಏರ್ ಟೆಲ್ ಕಂಪೆನಿ ಹೊಂದಿರುವುದು ಕಾಣಬಹುದು.ನೀವು ಏರ್ ಟೆಲ್ ಕಂಪೆನಿ ಸಿಮ್ ಬಳಕೆದಾರರಾಗಿದ್ದಲ್ಲಿ ಈ ಮಾಹಿತಿ ಅನುಸಾರ ರೀಚಾರ್ಜ್ ಮಾಡಿದರೆ ಅಧಿಕ ಲಾಭ ಸಿಗಲಿದೆ

advertisement

Leave A Reply

Your email address will not be published.