Karnataka Times
Trending Stories, Viral News, Gossips & Everything in Kannada

Drought Relief Money: ಬರ ಪರಿಹಾರ ಬರದವರು ಕೂಡಲೇ ಈ ಕೆಲಸ ಮಾಡಿ! ಅಪ್ಡೇಟ್ ಆಗಿದೆ ಲಿಂಕ್

advertisement

ಇನ್ನು ‌ಕೂಡ‌ ಬಿಸಿಲಿನ ತೀವ್ರತೆ ಅಂತು ಕಡಿಮೆ ಯಾಗಿಲ್ಲ. ದಿನದಿಂದ ದಿನಕ್ಕೆ ವಾತಾವರಣದಲ್ಲಿ ಬಿಸಿಲಿನ ತಾಪ ಹೆಚ್ಚಾಗಿದ್ದು ಸೆಕೆ ಉರಿಯಿಂದ ಜನರಿಗೆ ತಡೆದು ಕೊಳ್ಳಲು ‌ಕೂಡ ಕಷ್ಟವಾಗುತ್ತಿದೆ. ಅದರಲ್ಲೂ ಕೃಷಿಗಂತೂ ಹೇಳುವುದೇ ಬೇಡ, ರೈತರಿಗೆ ಈ ಭಾರಿಯ ಬರದಿಂದ ಬಹಳಷ್ಟು ನಷ್ಟ ವಾಗಿದ್ದು ಪರಿಹಾರ ಒದಗಿಸಲು ಮನವಿ ಮಾಡಿಕೊಂಡಿದ್ದಾರೆ. ಈಗಾಗಲೇ ಈ ಬಗ್ಗೆ ಸಮ್ಮತಿ ನೀಡಿದ್ದು ದಾಖಲೆ ಸರಿಯಾದ ರೈತರಿಗೆ ಹಣ ಕೂಡ ಬಿಡುಗಡೆ ಮಾಡಿದೆ.‌ ಈ ಬಗ್ಗೆ ಆಪ್ಡೆಟ್ ಮಾಹಿತಿಯೊಂದು ಬಂದಿದ್ದು ರೈತರು ತಿಳಿಯಲೇ ಬೇಕು.

ರಾಜ್ಯ ಸರಕಾರದಿಂದ ಬಿಡುಗಡೆ:

 

Image Source: Business Standard

 

ರಾಜ್ಯದಲ್ಲಿ‌ ಈಗಾಗಲೇ 223 ತಾಲ್ಲೂಕುಗಳನ್ನು ಬರಪೀಡಿತ ಪ್ರದೇಶ ಎಂದು ಘೋಷಣೆ ಮಾಡಿದ್ದು 48 ಲಕ್ಷ ಹೆಕ್ಟೇರ್ ನಲ್ಲಿ ಬೆಳೆ ಹಾನಿಯಾಗಿದೆ. ರಾಜ್ಯ ಸರ್ಕಾರವು ಬರ ಪರಿಹಾರವಾಗಿ 2000 ಕೋಟಿ ರೂ. ಅನುದಾನವನ್ನು ನಿಗದಿ ಪಡಿಸಿದ್ದು, ಈಗಾಗಲೇ 628 ಕೋಟಿ ಹಣವನ್ನು ರೈತರ ಖಾತೆಗೆ ಬಿಡುಗಡೆ ಮಾಡಿದ್ದು ಮೊದಲ ಕಂತಿನ ಹಣ (Drought Relief Money) ಎರಡು ಸಾವಿರ ರೂಪಾಯಿ ಕೆಲವು ‌ರೈತರ ಖಾತೆಗೆ ಬಿಡುಗಡೆ ಯಾಗಿದೆ.

ಕೇಂದ್ರದಿಂದ ಹಣ?

 

advertisement

Image Source: India.Com

 

ಕೇಂದ್ರ ಮತ್ತು ರಾಜ್ಯ ಸರಕಾರದ ಬರ ಪರಿಹಾರದ ಸಮರ ನಡೆಯುತ್ತಲೆ ಇದ್ದು ಎನ್‌ಡಿಆರ್‌ಎಫ್‌ನಿಂದ ಬರ ಪರಿಹಾರ ಬಿಡುಗಡೆ ಮಾಡುವಂತೆ ಕೇಂದ್ರ ಸರ್ಕಾರಕ್ಕೆ‌ ರಾಜ್ಯ ಸರಕಾರ ಬೇಡಿಕೆ ಇಟ್ಟಿತ್ತು.ಈ ಬಗ್ಗೆ ರಾಜ್ಯ ಸರಕಾರ ರಿಟ್ ಅರ್ಜಿ ಸಲ್ಲಿಕೆ ಮಾಡಿತ್ತು. ಸುಪ್ರೀಂ ಕೋರ್ಟ್‌ನಲ್ಲಿ ಈ ಬಗ್ಗೆ ವಿಚಾರಣೆ ನಡೆದಿದ್ದು ಅರ್ಜಿ ವಿಚಾರಣೆ ವೇಳೆ ಪರಿಹಾರ ಬಿಡುಗಡೆ ಮಾಡುವುದಾಗಿ ಕೇಂದ್ರ ಸರ್ಕಾರ ಹೇಳಿತ್ತು. ಹಾಗೆಯೇ 3454 ಕೋಟಿ ರೂಪಾಯಿ ಪರಿಹಾರದ ಮೊತ್ತವನ್ನು ಬಿಡುಗಡೆ ಮಾಡಿದೆ.

ಈಗ ಬಿಡುಗಡೆ ಮಾಡಿರುವ ಪರಿಹಾರದ ಮೊತ್ತ (Drought Relief Money) ಕಡಿಮೆಯಾಗಿದೆ ಎಂದು ರಾಜ್ಯ ಸರಕಾರ ಮತ್ತೆ ಅಸಮಾಧಾನ ವ್ಯಕ್ತ ಪಡಿಸಿದೆ. ಹೀಗಾಗಿ ಎರಡನೇ‌ ಕಂತಿನಹಣವೂ ಶೀಘ್ರವಾಗಿ ಬಿಡುಗಡೆ ಯಾಗಬಹುದು.

ಹಣ ಜಮೆಯಾಗಿರುವ ಬಗ್ಗೆ ಮಾಹಿತಿ ಪಡೆಯಿರಿ:

ರೈತರು ಮೊದಲಿಗೆ parihara.karnataka.gov.in ಈ ಲಿಂಕ್ ಮೇಲೆ ಕ್ಲಿಕ್ ಮಾಡಿ. ಅಲ್ಲಿ ನೀವು Select Calamity Type ನಲ್ಲಿ Drought ಆಯ್ಕೆ ಮಾಡಬೇಕು. ಬಳಿಕ ‌ವರ್ಷ ಆಯ್ಕೆ ಮಾಡುವ ಆಪ್ಚನ್ ಇರಲಿದ್ದು Select Year Type 2023-24 ಆಯ್ಕೆ ಮಾಡಿಕೊಳ್ಳಬೇಕು. ನಂತರ ನಿಮ್ಮ ಆಧಾರ್ ನಂಬರ್ ಹಾಕಬೇಕು. ನಂತರ ‌ Captcha ಕ್ಯಾಪ್ಚ್ಯಾ ಕೋಡ್ ಹಾಕಬೇಕು. ಇಲ್ಲಿ‌ Payment Details ಮೇಲೆ ಕ್ಲಿಕ್ ಮಾಡಬೇಕು. ಅಲ್ಲಿ ನಿಮ್ಮ ಯಾವ ಬ್ಯಾಂಕಿಗೆ ಎಷ್ಟು ಹಣ ಜಮಯಾಗಿದೆ ಎಂದು‌ತಿಳಿಯಬಹುದು.

advertisement

Leave A Reply

Your email address will not be published.