Karnataka Times
Trending Stories, Viral News, Gossips & Everything in Kannada

Drought Relief Money: ಬರ ಪರಿಹಾರದ ಮೊತ್ತಕ್ಕೆ ಕಾಯುತ್ತಿದ್ದ ರೈತರಿಗೆ ಗುಡ್ ನ್ಯೂಸ್!

advertisement

ಇಂದು ರೈತರ ಏಳಿಗೆಗಾಗಿ ಸರಕಾರ ಹಲವು ರೀತಿಯ ಯೋಜನೆಗಳನ್ನು ಜಾರಿಗೆ ತರುತ್ತಲೆ ಬಂದಿದೆ.ಕರ್ನಾಟದಲ್ಲಿ‌ ಕೃಷಿಕರ ಸಂಖ್ಯೆ ಹೆಚ್ಚು ಇದ್ದು ಕೃಷಿ ಮಾಡಿಯೇ ಜೀವನ ನಡೆಸುವವರು ಹೆಚ್ಚು ಮಂದಿ ಇದ್ದಾರೆ. ಆದ್ರೆ ಇಂದು ರೈತರಿಗೆ ಬಳೆ ಬೆಳೆದಂತೆ ಆದಕ್ಕೆ ತಕ್ಕ ಪ್ರತಿಪಲವು ಸಿಗುತ್ತಿಲ್ಲ. ಹೋದ ಬಾರಿ ಮಳೆ ಹೆಚ್ಚಾಗಿ ಬೆಳೆ ನಾಶವಾದ್ರೆ ಈ ಭಾರಿ ಮಳೆ ಇಲ್ಲದೆ ಕೃಷಿಗೆ ಬರ ಉಂಟಾಗಿತ್ತು. ಹೆಚ್ಚಿನ ಕಡೆ ನೀರಿಲ್ಲದೆ ಬೆಳೆಗಳು ಸರಿಯಾದ ಫಸಲು ನೀಡುತ್ತಿಲ್ಲ ಎಂದು ರೈತರು ಬೇಸರ ಗೊಂಡಿದ್ದರು.ಇದಕ್ಕಾಗಿ ರಾಜ್ಯ ಸರಕಾರ ಬರ ಉಂಟಾದ ಪ್ರದೇಶಗಳಿಗೆ ಪರಿಹಾರ ಮೊತ್ತ ನೀಡುವುದಾಗಿ ತಿಳಿಸಿದೆ.

ರಾಜ್ಯ ಸರಕಾರದಿಂದ ಹಣ ಬಿಡುಗಡೆ:

ರಾಜ್ಯದಲ್ಲಿ ಬರಗಾಲ ಉಂಟಾದ ನಿಟ್ಟಿನಲ್ಲಿ ಆರ್ಥಿಕ ವಾಗಿ ಸರಕಾರ ಬೆಂಬಲ ನೀಡಬೇಕು ಎಂದು ರೈತರು ಮನವಿ ಮಾಡಿದ್ದರು. ಇನ್ನೂ 236 ತಾಲೂಕುಗಳ ಪೈಕಿ 223 ತಾಲೂಕುಗಳನ್ನು ಬರಗಾಲ ಪ್ರದೇಶ ಎಂದು ಸರಕಾರ ಘೋಷಣೆ ಮಾಡಿದ್ದು ಮೊದಲ ಕಂತಿನಲ್ಲಿ ತಲಾ 2000 ರೂ. ಹಣ (Drought Relief Money) ಜಮೆ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದೆ.

ಮೊದಲ ಕಂತಿನ ಹಣ ಜಮೆ?

 

advertisement

Image Source: Visual Stock

 

ಕೇಂದ್ರ ಸರಕಾರವು ಅನುದಾನ ಬಿಡುಗಡೆ ಮಾಡಿಲ್ಲ ಹೀಗಾಗಿ ರಾಜ್ಯ ಸರ್ಕಾರ ರೈತರಿಗಾಗಿ ಸಣ್ಣ ಪ್ರಮಾಣದ ಬರ ಪರಿಹಾರ ಹಣ (Drought Relief Money) ಬಿಡುಗಡೆ ಮಾಡುದಾಗಿ ಮಾಹಿತಿ ನೀಡಿತ್ತು. ಈಗಾಗಲೇ ರಾಜ್ಯ ಸರಕಾರ ರೈತನಿಗೆ 2000 ರೂಪಾಯಿವರೆಗೆ ಮೊದಲ ಕಂತಿನ ಹಣವನ್ನು ರೈತರಿಗೆ ಬಿಡುಗಡೆ ಮಾಡಿದೆ. ಸುಮಾರು 32 ಲಕ್ಷ ರೈತರಿಗೆ ಪರಿಹಾರದ ಹಣ ನೀಡಲಾಗಿದೆ.‌

ಈ ಜಿಲ್ಲೆ ಗಳಿಗೆ ಬರ ಪರಿಹಾರ ಮೊತ್ತ (Drought Relief Money) ಬಿಡುಗಡೆ:

ಬೆಳಗಾವಿ, ಕಲಬುರಗಿ, ಬೀದರ್, ವಿಜಯಪುರ, ಬಳ್ಳಾರಿ, ರಾಯಾಚೂರು, ಗದಗ,ಧಾರವಾಡ,ಬಾಗಲಕೋಟೆ ಜಿಲ್ಲೆಗಳಿಗೆ ಈಗಾಗಲೇ ಹಣ ಬಿಡುಗಡೆ ಮಾಡಿದ್ದಾರೆ.ಅದೇ ರೀತಿ ಹಾವೇರಿ, ಕೊಪ್ಪಳ, ಉತ್ತರ ನಗರ,ರಾಮನಗರ, ಮಂಡ್ಯ,ಮೈಸೂರು ಹಾಸನ, ಕೊಡಗು, ದಾವಣಗೆರೆ ಜಿಲ್ಲೆಗಳಿಗೂ ಹಣ ಬಿಡುಗಡೆ ಯಾಗಲಿದೆ. ಈ ಬಗ್ಗೆ ಸರಕಾರ ಮಾಹಿತಿ ನೀಡಿದ್ದು ರೈತರು ತಮ್ಮ ಬ್ಯಾಂಕ್ ಖಾತೆಯನ್ನು ಚೆಕ್ ಮಾಡುವ ಮೂಲಕ ಹಣ ಜಮೆಯಾಗಿರುವ ಬಗ್ಗೆ ಕನ್ಪರ್ಮ್ ಮಾಡಿಕೊಳ್ಳಬಹುದಾಗಿದೆ.

https://parihara.karnataka.gov.in/service87/ ಈ ಲಿಂಕ್ ಮೂಲಕ ನಿಮ್ಮ ಬರ ಪರಿಹಾರದ ಮೊತ್ತದ ಬಗ್ಗೆ ಪರಿಶೀಲನೆ ಮಾಡಬಹುದಾಗಿದೆ.

advertisement

Leave A Reply

Your email address will not be published.