Karnataka Times
Trending Stories, Viral News, Gossips & Everything in Kannada

GruhaLakshmi: ಈ ತಿಂಗಳ ಗೃಹಲಕ್ಷ್ಮಿ ಹಣ ಜಮೆಯ ಬಗ್ಗೆ ಬೆಳ್ಳಂಬೆಳಗ್ಗೆ ಹೊಸ ಅಪ್ಡೇಟ್!

advertisement

ರಾಜ್ಯ ಸರ್ಕಾರದ 5 ಗ್ಯಾರಂಟಿಗಳಲ್ಲಿ ಗೃಹಲಕ್ಷ್ಮಿ (GruhaLakshmi) ಯೋಜನೆಯ ಮಾತುಕತೆ ಜೋರಾಗಿದ್ದು ಈ ಯೋಜನೆಯ ಅಡಿಯಲ್ಲಿ ರಾಜ್ಯದ ಎಲ್ಲಾ ಬಡ ಕುಟುಂಬದ ಮಹಿಳೆಗೆ ಅಂದರೆ ಕುಟುಂಬದ ಹಿರಿಯ ಮಹೀಳೆಗೆ ಪ್ರತಿ ತಿಂಗಳು 2000 ರೂ ಅನ್ನು ನೀಡುತ್ತಿದೆ. ಈಗಾಗಲೇ 6ನೇ ಕಂತಿನವರೆಗೆ ಸರಿಯಾಗಿ ‌ನೊಂದಣಿ ಮಾಡಿದ ಮಹೀಳೆಯರಿಗೆ ಹಣ ಜಮೆ ಯಾಗಿದ್ದು ಏಳನೇ ಕಂತಿನ ಹಣಕ್ಕಾಗಿ ಮಹೀಳೆಯರು ಕಾಯುತ್ತಿದ್ದಾರೆ.

GruhaLakshmi ಹಣ ಸಂದಾಯವಾಗಿಲ್ಲ 

ಈಗಾಗಲೇ ಗೃಹಲಕ್ಷ್ಮಿ (GruhaLakshmi) ಹಣವನ್ನು ಪಡೆದುಕೊಂಡಿರುವ ಮಹಿಳೆಯರು ಸಂತಸ ವ್ಯಕ್ತಪಡಿಸಿದ್ದಾರೆ. ಆದರೆ, ಅರ್ಜಿ ಸಲ್ಲಿಕೆ ಮಾಡಿದ ಹಲವು ಮಹಿಳೆಯರಿಗೆ ಇನ್ನೂ ಗೃಹಲಕ್ಷ್ಮಿ ಹಣ ಸಂದಾಯವಾಗಿಲ್ಲ. ಈ ಬಗ್ಗೆ ಯಾಕಾಗಿ ಹಣ ಜಮೆ ಯಾಗಿಲ್ಲ ಎಂದು ಸರಕಾರ ಸ್ಪಷ್ಟನೆ ಯನ್ನು ಕೂಡ ನೀಡಿದೆ.

Image Source: Hindustan Times

ಇವರಿಗೆ GruhaLakshmi ಹಣ ಜಮೆ

advertisement

ಗೃಹಲಕ್ಷ್ಮಿ ಯೋಜನೆ (GruhaLakshmi Scheme)ಯ ಮೊತ್ತ ಈವರೆಗೆ ಆರು ಕಂತುಗಳ ಹಣ ಬಿಡುಗಡೆ ಯಾಗಿದ್ದು ಏಳನೇ‌ಕಂತಿನ ಹಣ ಇನ್ನಷ್ಟೆ ಬಿಡುಗಡೆ ಯಾಗಬೇಕಿದೆ. ಇದರಲ್ಲಿ ದಾಖಲೆಗಳೆಲ್ಲವು ಸರಿ ಇದ್ದ ಮಹೀಳೆಯರಿಗೆ ಮಾತ್ರ ಈ ತಿಂಗಳು ಹಣ ಜಮೆ ಮಾಡಲಿದೆ. ನಿಮ್ಮ ಆಧಾರ್ ಕಾರ್ಡ್(Aadhaar Card), ರೇಷನ್ ಕಾರ್ಡ್ (Ration Card), ಬ್ಯಾಂಕ್ ಖಾತೆ (Bank Account) ಮಾಹಿತಿ ಸರಿ ಇಲ್ಲದೆ ಇದ್ದಲ್ಲಿ ನಿಮ್ಮ ಖಾತೆಗೆ ಈ ಗೃಹಲಕ್ಷ್ಮಿ ಹಣ ಜಮೆಯಾಗುವುದಿಲ್ಲ.

Image Source: Deccan Herald

ಒಂದು ಕಂತಿನ ಹಣ ಜಮಾ ಆಗದೆ ಇರಲು ಕಾರಣವೇನು?

  • ಮೊದಲನೆಯದಾಗಿ ಬ್ಯಾಂಕ್ ಪುಸ್ತಕದೊಂದಿಗೆ ಆಧಾರ್ ಸೀಡಿಂಗ್ ಆಗಿರುವುದಿಲ್ಲ.ಹೀಗಾಗಿ ಹಣ ಬಂದಿಲ್ಲ.
  • ನಿಮ್ಮ ಆಧಾರ್ ಮತ್ತು ರೇಷನ್ ಕಾರ್ಡ್ ನಲ್ಲಿ ನಿಮ್ಮ ಹೆಸರು, ವಿಳಾಸ ಇತ್ಯಾದಿ ಮಾಹಿತಿಗಳು ಮ್ಯಾಚ್ ಆಗದೇ ಇದ್ದಲ್ಲಿ ಹಣ ಜಮೆಯಾಗಲ್ಲ.
  • ನಿಮ್ಮ ಬ್ಯಾಂಕ್ ಖಾತೆ ಚಾಲ್ತಿಯಲ್ಲಿ ಇಲ್ಲದಿದ್ದಲ್ಲಿ ಈ ಹಣ ಜಮೆಯಾಗಲ್ಲ.
  • ಇನ್ನೂ ಒಬ್ಬ ವ್ಯಕ್ತಿಯ ಹೆಸರಿನಲ್ಲಿ ಮೂರು, ನಾಲ್ಕು ಖಾತೆಗಳಿದ್ದರೆ ಅಂತಹವರಿಗೆ ಗೃಹಲಕ್ಷ್ಮಿಯ ಹಣವಿಲ್ಲ

ಈ ತಿಂಗಳ ಹಣ ಯಾವಾಗ ಜಮೆ?

ಮಾರ್ಚ್ ತಿಂಗಳ ಗೃಹಲಕ್ಷ್ಮಿ ಹಣವೂ ಈ ತಿಂಗಳ ಹದಿನೈದರ ನಂತರ ಜಮೆಯಾಗಲಿದೆ. ಈಗಾಗಲೇ ಸರಕಾರದ ದಿಂದ ಈ ಹಣ ಬಿಡುಗಡೆ ಗೊಂಡಿದ್ದು ಹಂತ ಹಂತವಾಗಿ ಹಣ ಜಮೆಯಾಗಲಿದೆ. ಈವರೆಗೆ 1.20 ಕೋಟಿ ಅರ್ಜಿಗಳಲ್ಲಿ ಸುಮಾರು 63 ಲಕ್ಷ ಮಹೀಳೆಯರಿಗೆ ಹಣ ಸಂದಾಯವಾಗಿದೆ. ಇನ್ನುಳಿದ ಶೇಕಡಾ 40% ಅರ್ಜಿಗಳಿಗೆ ಹಣ ಇನ್ನಷ್ಟೆ ಜಮೆಯಾಗ ಬೇಕಿದೆ.

advertisement

Leave A Reply

Your email address will not be published.