Bank Account: ರಿಸರ್ವ್ ಬ್ಯಾಂಕ್ ನಿಯಮದ ಪ್ರಕಾರ ಎಷ್ಟು ಬ್ಯಾಂಕ್ ಖಾತೆ ಹೊಂದಬಹುದು? ಹೊಸ ರೂಲ್ಸ್
ಇಂದು ಪ್ರತಿಯೊಬ್ಬರ ಬಳಿಯು ಬ್ಯಾಂಕ್ ಖಾತೆ ಇದ್ದೆ ಇದೆ. ಸಣ್ಣ ಮಗುವಿನಿಂದ ಹಿಡಿದು ಹಿರಿಯರ ವರೆಗೂ ಈ ಬ್ಯಾಂಕ್ ಖಾತೆ (Bank Account) ಬಹಳ ಪ್ರಮುಖ ವಾಗುತ್ತದೆ. ಹೆಚ್ಚಿನ ಜನರು ಹೂಡಿಕೆಗೆ ಆದ್ಯತೆ ನೀಡುವುದರಿಂದ ಅಂಚೆಕಛೇರಿ, ಬ್ಯಾಂಕ್ ಶಾಖೆಗಳಲ್ಲಿಯು ಖಾತೆ ತೆರೆದಿಡುತ್ತಾರೆ. ಇಂದು ಹೆಚ್ಚಿನ ಜನರ ಬಳಿ ಮುರು ನಾಲ್ಕು ಖಾತೆಗಳು ಇದ್ದೆ ಇರುತ್ತದೆ. ಆದ್ರೆ ಹೆಚ್ಚು ಖಾತೆ ಇದ್ದರೆ RBI ನಿಯಮ ಏನು ಎಂಬುದನ್ನು ನೀವು ತಿಳಿಯಲೇ ಬೇಕು.
ನಿಯಮ ವೇನು?
ಬ್ಯಾಂಕ್ ನಲ್ಲಿ ಹೆಚ್ಚಿನ ಜನರು ಸಂಬಳದ ಖಾತೆ (Salary Account) ಉಳಿತಾಯ ಖಾತೆ (Saving Account) ಜಂಟಿ ಖಾತೆ (Joint Account) ಹೀಗೆ ಹೀಗೆ ಖಾತೆಗಳನ್ನು ಹೊಂದಿರುವುದಕ್ಕೆ ಹಲವಾರು ಕಾರಣಗಳು ಇದೆ. ಜಾಬ್ ಕಾರಣ ಕೊಟ್ಟು ಕ್ರೆಡಿಟ್ ಕಾರ್ಡ್ (Credit Card) ಗಾಗಿ, ಸಾಲಕ್ಕಾಗಿ, ಫಿಕ್ಸಿಡ್ ಡೆಪಾಸಿಟ್ಗಾಗಿ, ಬೇರೆ ಬೇರೆ ಬ್ಯಾಂಕ್ಗಳಲ್ಲಿ ಖಾತೆಯನ್ನು(Bank Accounts) ತೆರೆಯುದು ಅನಿವಾರ್ಯ. ಆದರೆ ಯಾವುದೇ ವ್ಯಕ್ತಿಯಾಗಲಿ ತನ್ನ ಅಗತ್ಯಗೆ ಅನುಗುಣವಾಗಿ ಬ್ಯಾಂಕ್ ಖಾತೆಯನ್ನು ತೆರೆಯಬಹುದು. ಇಷ್ಟೆ ಖಾತೆ ಹೊಂದಿರಬೇಕು ಎಂಬ ನಿಯಮ ಅರ್ ಬಿ ಐ ಜಾರಿಗೆ ತಂದಿಲ್ಲ.
ಕನಿಷ್ಠ ಬ್ಯಾಲೆನ್ಸ್ ನಿಯಮ:
ಈಗಾಗಲೇ RBI ಕನಿಷ್ಠ ಬ್ಯಾಲೆನ್ಸ್ ಖಾತೆ ಬಗ್ಗೆ ಹೊಸ ನಿಯಮವನ್ನು ಕೂಡ ಜಾರಿಗೆ ತಂದಿದ್ದು , ಕನಿಷ್ಟ ಮೊತ್ತ ಹೊಂದಿರದ ಖಾತೆಗಳ ಮೇಲಿನ ದಂಡವನ್ನು ಮನ್ನಾ ಮಾಡುವ ನಿರ್ಧಾರವನ್ನು ಕೈಗೊಂಡಿದೆ. ಅದೇ ರೀತಿ ಬ್ಯಾಂಕ್ ಖಾತೆ ನಿಷ್ಕ್ರಿಯ ಮಾಡದಂತೆ ಸಲಹೆ ನೀಡಿದೆ.
ಹೆಚ್ಚು ಖಾತೆ ಇದ್ದರೆ ಲಾಭ ವೇನು?
- ನಿಮ್ಮಲ್ಲಿ ಬೇರೆ ಬೇರೆ ಬ್ಯಾಂಕಿನ ಖಾತೆ ಇದ್ದರೆ ಕೆಲವೊಂದು ಸಂದರ್ಭದಲ್ಲಿ ನಿಮಗೆ ಒಳಿತು. ಪೇಮೆಂಟ್ ಮಾಡುವ ಸಮಯದಲ್ಲಿ ಸರ್ವರ್ ಸಮಸ್ಯೆ ಉಂಟಾದ್ರೆ ನಿಮ್ಮ ಬ್ಯಾಂಕ್ ಖಾತೆಯಿಂದ ಹಣವನ್ನು ವರ್ಗಾವಣೆ ಮಾಡಲು ಸಾಧ್ಯ ವಿಲ್ಲದೆ ಇದ್ದಾಗ ಇನ್ನೊಂದು ಬ್ಯಾಂಕ್ ನ ಖಾತೆ ಬಳಸಬಹುದು.
- ಇನ್ನೂ ಒಂದಕ್ಕಿಂತ ಹೆಚ್ಚು ಬ್ಯಾಂಕ್ ಖಾತೆ ಇದ್ದರೆ ಕೆಲವೊಂದು ಸಂದರ್ಭದಲ್ಲಿ ಬ್ಯಾಂಕ್ ನಿಂದ ಹೆಚ್ಚಿನ ಆಫರ್ ಗಳನ್ನು ನೀವು ಪಡೆಯಬಹುದಾಗಿದೆ.
- ಇನ್ನು ಪ್ರತಿ ಖಾತೆಯನ್ನು ಹೊಂದಿಸಲು ನೀವು ಬ್ಯಾಂಕ್ ವಾರ್ಷಿಕ ಶುಲ್ಕವನ್ನು ಪಾವತಿ ಮಾಡಬೇಕಾಗುತ್ತದೆ. ನೀವು ಒಂದಕ್ಕಿಂತ ಹೆಚ್ಚಿನ ಖಾತೆಯನ್ನು ಹೊಂದಿದ್ದರೆ ಈ ಶುಲ್ಕ ಪಾವತಿ ಮಾಡಲೇಬೇಕಾಗುತ್ತದೆ.