Saving Account: ಉಳಿತಾಯ ಖಾತೆಯಲ್ಲೇ FD ಬಡ್ಡಿ ದರ ಬೇಕಾ? ಹಾಗಿದ್ದರೆ ಈ ಬ್ಯಾಂಕಿನಲ್ಲಿ ಖಾತೆ ತೆಗೆಯಿರಿ!
ಎಫ್ ಡಿ ಎಂದು ಸಾಮಾನ್ಯವಾಗಿ ಕರೆಯಲ್ಪಡುವ ನಿಶ್ಚಿತ ಠೇವಣಿ ಜನಪ್ರಿಯ ಹೂಡಿಕೆ ಆಯ್ಕೆಯಾಗಿರುತ್ತದೆ. ಹೆಚ್ಚಿನ ರಿಟರ್ನ್ ಗಳಿಸಲು, ಉಳಿತಾಯ ಖಾತೆ (Saving Account) ಯಲ್ಲಿ ಹಣ ಇಡುವ ಬದಲು ಎಫ್ ಡಿ ಯಲ್ಲಿ ಹಣ ಇಡುವುದು ಒಳ್ಳೆಯದು. ದೊಡ್ಡ ದೊಡ್ಡ ಬ್ಯಾಂಕ್ ಗಳು ಅಲ್ಪಾವಧಿಯಿಂದ ಮಧ್ಯಮಾವಧಿಗಳ ಎಫ್ ಡಿ ಗಳ ಮೇಲೆ ಆಕರ್ಷಕ ಬಡ್ಡಿ ದರ ಕೊಡುತ್ತವೆ. 1 ರಿಂದ 3 ವರ್ಷಗಳವರೆಗಿನ ಎಫ್ ಡಿ (FD) ಗಳ ಮೇಲೆ ಶೇಕಡ 6 ರಿಂದ 8 ರಷ್ಟು ಬಡ್ಡಿ ಸಿಗುತ್ತದೆ.
ಕೆಲವು ಬ್ಯಾಂಕ್ ಗಳು ಉಳಿತಾಯ ಖಾತೆ (Saving Account) ಗಳಲ್ಲೇ ಶೇಕಡ 8 ರಷ್ಟು ಬಡ್ಡಿ ಕೊಡುತ್ತಿವೆ. ಹೀಗೆ ಉಳಿತಾಯ ಖಾತೆ ಮತ್ತು ನಿಶ್ಚಿತ ಠೇವಣಿಗಳ ಬಡ್ಡಿ ದರ ಹೋಲಿಕೆ ಮಾಡಿ ಗ್ರಾಹಕರನ್ನು ಆಕರ್ಷಿಸುತ್ತಾ ಇದೆ. ಇದಕ್ಕೆ ವ್ಯತಿರಿಕ್ತವಾಗಿ, ಅನೇಕ ದೊಡ್ಡ ದೊಡ್ಡ ಬ್ಯಾಂಕ್ ಗಳು ಉಳಿತಾಯ ಖಾತೆಗಳ ಮೇಲೆ ಶೇಕಡ 2.5 ರಿಂದ 3 ರಷ್ಟು ಬಡ್ಡಿ ದರ ಕೊಡುತ್ತಾ ಇವೆ. ಹಾಗಿದ್ದರೆ ಯಾವ ಬ್ಯಾಂಕ್ ಗಳ ಬಡ್ಡಿ ದರ ಎಷ್ಟಿದೆ ಎನ್ನುವುದನ್ನು ನೋಡಿಕೊಂಡು ಬರೋಣ.
ಯಾವ ಯಾವ ಬ್ಯಾಂಕ್ ಅಲ್ಲಿ ಎಷ್ಟು ಬಡ್ಡಿ ದರ ಸಿಗುತ್ತದೆ ?
- ಎರಡು ಕೋಟಿ ರೂಪಾಯಿಗಿಂತ ಕಡಿಮೆ ಬ್ಯಾಲೆನ್ಸ್ ಇರೋ ಸೇವಿಂಗ್ಸ್ ಖಾತೆ (Saving Account) ಗಳಲ್ಲಿ ಡಿಸಿಬಿ ಬ್ಯಾಂಕ್ ಶೇಕಡ 8 ರಷ್ಟು ಬಡ್ಡಿ ಕೊಡುತ್ತಿವೆ. ಈ ಬಡ್ಡಿ ದರದಿಂದಾಗಿ ಇದು ಹೆಚ್ಚಿನ ಬಡ್ಡಿ ಕೊಡುವ ಸಾಲಿನ ಅಗ್ರ ಖಾಸಗಿ ಬ್ಯಾಂಕ್ ಗಳ ಸಾಲಿಗೆ ಡಿಸಿಬಿ ಬ್ಯಾಂಕ್ ಸೇರಿದೆ. ಪ್ರಸ್ತುತ ಇರುವ ಬಡ್ಡಿ ದರ 2023ರ ಸೆಪ್ಟೆಂಬರ್ 27 ರಿಂದ ಅನ್ವಯವಾಗಿದೆ.
- RBL Bank, ಖಾತೆಯಲ್ಲಿನ ಡೈಲಿ ಬ್ಯಾಲೆನ್ಸ್ ಆಧರಿಸಿ ಬಡ್ಡಿ ದರ ನಿರ್ಧರಿಸುತ್ತದೆ. ಉದಾಹರಣೆಗೆ, 25 ಲಕ್ಷ ರೂಪಾಯಿಗಿಂತ ಹೆಚ್ಚು ಮತ್ತು 2 ಕೋಟಿ ರೂಪಾಯಿಯೊಳಗೆ ಬ್ಯಾಲೆನ್ಸ್ ಇದ್ರೆ ಬಡ್ಡಿ ದರ ಶೇಕಡ 7.5 ರಷ್ಟಿರತ್ತೆ. ಒಂದು ಲಕ್ಷ ರೂಪಾಯಿವರೆಗಿನ ಠೇವಣಿಗಳ ಮೇಲೆ ಬಡ್ಡಿ ದರ ಶೇಕಡ 4.25 ರಷ್ಟು. ಹಾಗೇ ಒಂದರಿಂದ 10 ಲಕ್ಷ ರೂಪಾಯಿವರೆಗಿನ ಬ್ಯಾಲೆನ್ಸ್ ಮೇಲೆ ಬಡ್ಡಿ ದರ ಶೇಕಡ 5.5 ರಷ್ಟಿದೆ.
- ಸೂರ್ಯೋದಯ ಸ್ಮಾಲ್ ಫೈನ್ಯಾನ್ಸ್ ಬ್ಯಾಂಕ್ (Suryoday Small Finance Bank) ತನ್ನ ಗ್ರಾಹಕರ ಉಳಿತಾಯ ಖಾತೆಗಳ ಮೇಲೆ ಶೇಕಡ 7.5 ರಷ್ಟು ಬಡ್ಡಿ ದರ ಕೊಡುತ್ತಾ ಇದೆ. ಖಾತೆ ಬ್ಯಾಲೆನ್ಸ್ ಒಂದು ರೂಪಾಯಿಯಿಂದ ಹತ್ತು ಲಕ್ಷ ರೂಪಾಯಿವರೆಗೆ ಈ ಬಡ್ಡಿ ಇನ್ನು ಐದು ಕೋಟಿ ರೂಪಾಯಿಯಿಂದ 25 ಕೋಟಿ ರೂಪಾಯಿವರೆಗೆ ಬ್ಯಾಲೆನ್ಸ್ ಇದ್ರೆ ಬಡ್ಡಿ ದರ ಶೇಕಡ 7.75 ರಷ್ಟು ಇರುತ್ತದೆ.
- ಉಜ್ಜೀವನ್ ಸ್ಮಾಲ್ ಫೈನ್ಯಾನ್ಸ್ ಬ್ಯಾಂಕ್ (Ujjivan Small Finance Bank) ತನ್ನ ಗ್ರಾಹಕರಿಗೆ ಉಳಿತಾಯ ಖಾತೆಗಳ ಮೇಲೆ ಶೇಕಡ 3.5 ರಿಂದ 7.5 ರಷ್ಟು ಬಡ್ಡಿ ಕೊಡುತ್ತಿದೆ. ಒಂದು ಲಕ್ಷ ರೂಪಾಯಿವರೆಗಿನ ಠೇವಣಿಗಳಿಗೆ ಬಡ್ಡಿ ದರ ಶೇಕಡ 3.5 ರಷ್ಟಿದ್ದರೆ, ಒಂದರಿಂದ 5 ಲಕ್ಷ ರೂಪಾಯಿವರೆಗಿನ ಮೊತ್ತಕ್ಕೆ ಶೇಕಡ 5 ರಷ್ಟು ಹಾಗೂ ಉಳಿತಾಯ ಖಾತೆಗಳಲ್ಲಿ ಬ್ಯಾಲೆನ್ಸ್ 5 ಲಕ್ಷ ರೂಪಾಯಿ ಮೀರಿದರೆ ಬಡ್ಡಿ ದರ ಶೇಕಡ 7.5 ರಷ್ಟು ಸಿಗುತ್ತದೆ.
- ಎಯು ಸ್ಮಾಲ್ ಫೈನ್ಯಾನ್ಸ್ ಬ್ಯಾಂಕ್ (AU Small Finance Bank) ಉಳಿತಾಯ ಖಾತೆಗಳ ಮೇಲೆ ಶೇಕಡ 7.25 ರಷ್ಟು ಬಡ್ಡಿ ಕೊಡತ್ತೆ. ಐದು ಕೋಟಿ ರೂಪಾಯಿಗಿಂತ ಕಡಿಮೆ ಮೊತ್ತವಿದ್ದಲ್ಲಿ ಶೇಕಡ 7.25 ರಷ್ಟು ಬಡ್ಡಿ. ಒಂದು ವೇಳೆ ಒಂದು ಕೋಟಿ ರೂಪಾಯಿಗಿಂತ ಕಡಿಮೆ ಮೊತ್ತ ಇದ್ರೆ, ಶೇಕಡ 7 ರಷ್ಟು ಬಡ್ಡಿ ಸಿಗತ್ತೆ. ಈ ಬಡ್ಡಿ ದರಗಳು 2023ರ ಸೆಪ್ಟೆಂಬರ್ 11 ರಿಂದ ಜಾರಿಗೆ ಬಂದಿವೆ.
- ಇನ್ನು ಐಡಿಎಫ್ಸಿ ಫಸ್ಟ್ ಬ್ಯಾಂಕ್ (IDFC First Bank) ಬಡ್ಡಿ ದರ ನೋಡೋಣ. ಬ್ಯಾಲೆನ್ಸ್ ಮೊತ್ತ ಐದು ಲಕ್ಷ ರೂಪಾಯಿಗಿಂತ ಹೆಚ್ಚಿದ್ದು 25 ಕೋಟಿ ರೂಪಾಯಿಯಷ್ಟಿದ್ರೆ ಬಡ್ಡಿ ದರ ಶೇಕಡ 7 ರರಷ್ಟು. 25 ಕೋಟಿ ರೂಪಾಯಿಗಿಂತ ಹೆಚ್ಚಿನ ಮೊತ್ತದ ಬ್ಯಾಲೆನ್ಸ್ ಇದ್ರೆ ಬಡ್ಡಿ ದರ ಶೇಕಡ 6.75 ರಷ್ಟು. ಈ ದರಗಳು 2023ರ ಅಕ್ಟೋಬರ್ 1 ರಿಂದ ಅನ್ವಯವಾಗಲಿದೆ.
Small Finance Bank ನಲ್ಲಿ ಹಣದ ಸುರಕ್ಷತೆ ಹೇಗೆ?
ಸ್ಮಾಲ್ ಫೈನ್ಯಾನ್ಸ್ ಬ್ಯಾಂಕ್ ನಲ್ಲಿ ಹಣದ ಸುರಕ್ಷತೆ ಬಗ್ಗೆ ಭಯ ಬೇಡ. ಈ ಕಿರು ಹಣಕಾಸು ಸಂಸ್ಥೆಗಳು ಭಾರತೀಯ ರಿಸರ್ವ್ ಬ್ಯಾಂಕ್ – ಆರ್ ಬಿ ಐ ನಿಯಂತ್ರಣಕ್ಕೆ ಒಳಪಟ್ಟಿರುತ್ತವೆ. ಇವು ಆರ್ ಬಿ ಐ ನಿಂದ ಪರವಾನಗಿ ಪಡೆದು ಕಾರ್ಯನಿರ್ವಹಿಸುತ್ತಿವೆ. ದೇಶದಲ್ಲಿ ಬ್ಯಾಂಕಿಂಗ್ ಸೇವೆಗಳ ಉತ್ತೇಜನಕ್ಕಾಗಿ 2014-15ರ ಬಜೆಟ್ ನಲ್ಲಿ ಸ್ಮಾಲ್ ಫೈನ್ಯಾನ್ಸ್ ಬ್ಯಾಂಕ್ ಗಳ ಬಗ್ಗ ಘೋಷಿಸಲಾಯಿತು. ಕಿರು ಹಣಕಾಸು ಬ್ಯಾಂಕ್ ಗಳು ಕಡಿಮೆ ವ್ಯಾಪ್ತಿಯ ಕ್ಯಾಟಗರಿಗೆ ಸೇರಲಿದೆ. ಅವುಗಳ ಕಾರ್ಯಾಚರಣೆ ವ್ಯಾಪ್ತಿ ಕೂಡ ಸೀಮಿತ. ಆದಾಗ್ಯೂ, ದೊಡ್ಡ ಬ್ಯಾಂಕ್ ಗಳು ಉಳಿತಾಯ ಖಾತೆ, ಚಾಲ್ತಿಖಾತೆ, ನಿಶ್ಚಿತ ಠೇವಣಿ – ಎಫ್ ಡಿ, ರೆಕರಿಂಗ್ ಡೆಪಾಸಿಟ್ – ಆರ್ ಡಿ ಮತ್ತು ಸಾಲದಂತಹ ಸೇವೆಗಳನ್ನು ಕೊಡತ್ತೆ. ಸೀಮಿತ ಸಂಪನ್ಮೂಲ ಮತ್ತು ಕಡಿಮೆ ಸಿಬ್ಬಂದಿಯಿರುವ ಕಾರಣ, ಇವುಗಳ ಆಪರೇಷನಲ್ ವೆಚ್ಚ ಕಡಿಮೆ ಇರತ್ತೆ. ಹೀಗಾಗಿ ದೊಡ್ಡ ದೊಡ್ಡ ಬ್ಯಾಂಕ್ ಗಳಿಗೆ ಹೋಲಿಕೆ ಮಾಡಿದರೆ ಇವು ಹೆಚ್ಚಿನ ಬಡ್ಡಿ ಕೊಡುತ್ತವೆ.
ಗ್ರಾಹಕರನ್ನು ಸೆಳೆಯಲು ಸ್ಮಾಲ್ ಫೈನ್ಯಾನ್ಸ್ ಬ್ಯಾಂಕ್ ಗಳು ಉಳಿತಾಯ ಖಾತೆಗಳ ಮೇಲೆ ಹಾಗೂ ಎಫ್ ಡಿ ಗಳ ಮೇಲೆ ದೊಡ್ಡ ಬ್ಯಾಂಕ್ ಗಳಿಗೆ ಹೋಲಿಕೆ ಮಾಡಿದರೆ ಹೆಚ್ಚಿನ ಬಡ್ಡಿ ದರ ಕೊಡುತ್ತಿವೆ. ಈ ಬ್ಯಾಂಕ್ ಗಳು ಕೊಡುವ ಬಡ್ಡಿ ದರ ನಿಮಗೆ ಸೂಕ್ತ ಅನ್ನಿಸಿದರೆ , ನೀವು ಈ ಬ್ಯಾಂಕ್ ಗಳಲ್ಲಿ ಖಾತೆ ತೆರೆಯಬಹುದು. ಆಗ ನೀವು ಹೆಚ್ಚಿನ ಬಡ್ಡಿ ಕೂಡ ಗಳಿಸಬಹುದು. ಈ ಉಳಿತಾಯ ಖಾತೆಯ ಹಣವನ್ನು ಎಮರ್ಜೆನ್ಸಿ ಫಂಡ್ ಆಗಿಯೂ ಬಳಸಬಹುದು.
ನಿಮ್ಮ 3 ರಿಂದ 6 ತಿಂಗಳವರೆಗಿನ ಆದಾಯವನ್ನ ಎಮರ್ಜೆನ್ಸಿ ಫಂಡ್ ಆಗಿ ಈ ಬ್ಯಾಂಕ್ ಗಳ ಖಾತೆಗಳಲ್ಲಿಡಬಹುದು. ಒಂದು ವೇಳೆ, ನಿಮಗೆ ಹಣ ಬೇಕು ಎಂದಾದರೆ ಯಾವುದೇ ದಂಡ ಇಲ್ಲದೆ ಹಣ ವಿತ್ ಡ್ರಾ ಮಾಡಿಕೊಳ್ಳಬಹುದು. ಆದರೆ ನಿಶ್ಚಿತ ಠೇವಣಿಗಳನ್ನು ಅವಧಿಪೂರ್ವದಲ್ಲೇ ಹಿಂಪಡೆದರೆ ಪ್ರಿಮೆಚ್ಯೂರ್ ವಿತ್ ಡ್ರಾಗೆ ದಂಡ ಪಾವತಿಸಬೇಕಾಗಬಹುದು.