Karnataka Times
Trending Stories, Viral News, Gossips & Everything in Kannada

Post Office Scheme: ಪೋಸ್ಟ್ ಆಫೀಸ್ ನ ಈ ಯೋಜನೆಯಲ್ಲಿ ಕೇವಲ 10 ಸಾವಿರ ಹೂಡಿಕೆ ಮಾಡಿದ್ರೆ 4.4 ಲಕ್ಷ ಪಡೆಯಬಹುದು!

advertisement

ಹೂಡಿಕೆಗೆ ಭಾರತೀಯರು ಹೆಚ್ಚಿನ ಪ್ರಶ್ಯಾಸ್ತವನ್ನು ನೀಡುತ್ತಾರೆ. ಅದು ಚಿನ್ನ‌, ಆಸ್ತಿ, ಬ್ಯಾಂಕ್ ಎಫ್ ಡಿ, ಅರ್ ಡಿ ಇತ್ಯಾದಿ ಗಳ ಮೂಲಕ ಹೂಡಿಕೆ ಮಾಡುವುದು ಸಾಮಾನ್ಯ. ಆದರೆ ಇಂದು ಹೆಚ್ಚಿನ ಜನರು ಪೋಸ್ಟ್ ಆಫೀಸ್ ಹೂಡಿಕೆಗೆ ಒಲವು ತೋರಿಸುತ್ತಾರೆ. ಅದರಲ್ಲಿ ಉಳಿತಾಯದ ಅಭ್ಯಾಸ ಬೆಳೆಸುವ ಮತ್ತು ನಿವೃತ್ತಿ ಭದ್ರತೆ ಒದಗಿಸುವ ಉದ್ದೇಶದಿಂದ ಈ ಯೋಜನೆ ಬಹಳಷ್ಟು ಪ್ರಗತಿಯಲ್ಲಿದೆ. ಅದುವೇ ಪಬ್ಲಿಕ್ ಪ್ರಾವಿಡೆಂಟ್ ಫಂಡ್ ಅಥವಾ ಪಿಪಿಎಫ್ ಇದು ದೀರ್ಘ ಕಾಲದ ಹೂಡಿಕೆ ಯಾಗಿದೆ.

ಈ ಯೋಜನೆ ಯಾವ ರೀತಿ ಇರಲಿದೆ?

ಈ ಸ್ಕೀಮ್ 15 ವರ್ಷದ ಅವಧಿಯದ್ದಾಗಿದ್ದು 15 ವರ್ಷದ ಬಳಿಕ ಪ್ರತೀ ಐದು ವರ್ಷಕ್ಕೆ ಯೋಜನೆ ವಿಸ್ತರಣೆ ಕೂಡ ಮಾಡಬಹುದಾಗಿದೆ. ನೀವು ಯಾವುದೇ ಬ್ಯಾಂಕ್ ಅಥವಾ ಅಂಚೆ ಕಚೇರಿಯಲ್ಲಿ ಈ ಖಾತೆ ತೆರೆಯಲು ಅವಕಾಶ ಕೂಡ ಇದೆ. ಇದರಲ್ಲಿ ಸಾಮಾನ್ಯ ಎಫ್​ಡಿಗಳಿಗಿಂತಲೂ ಇದಕ್ಕೆ ಬಡ್ಡಿದರ ಹೆಚ್ಚು ಇರುತ್ತದೆ.

ಒಂದು ಪಿಪಿಎಫ್ ಖಾತೆ ತೆರೆಯಲು ಅವಕಾಶ

ಇಲ್ಲಿ ನಿಮ್ಮ ಹಣವು ಸುರಕ್ಷಿತವಾಗಿರುತ್ತದೆ ಮತ್ತು ಉತ್ತಮ ಬಡ್ಡಿಯನ್ನು ಸಹಪಡೆಯಲು ಸಹ ಸಾಧ್ಯವಾಗುತ್ತದೆ. ಆದ್ರೆ ಖಾತೆದಾರರಿಗೆ ಕೇವಲ ಒಂದು ಪಿಪಿಎಫ್ (PPF) ಖಾತೆ ತೆರೆಯಲು ಅವಕಾಶವಿದೆ. ಪೋಸ್ಟ್ ಆಫೀಸ್ ಪಿಪಿಎಫ್ ಮೂಲಕ ಹೂಡಿಕೆ ಮಾಡಲು ಉತ್ತಮ ಆಯ್ಕೆ ಇರಲಿದ್ದು ಈ ಯೋಜನೆಯಲ್ಲಿ ಕೇವಲ 10 ಸಾವಿರ ಹೂಡಿಕೆ ಮಾಡಿದ್ರೆ ಮೆಚ್ಯೂರಿಟಿಯಲ್ಲಿ ರೂ 4.4 ಲಕ್ಷ ಪಡೆಯಬಹುದು.

advertisement

ಮೆಚ್ಯೂರಿಟಿ ಮೊತ್ತ ಎಷ್ಟು?

ಹೌದು ಪೋಸ್ಟ್ ಆಫೀಸ್ (Post Office) ಪಬ್ಲಿಕ್ ಪ್ರಾವಿಡೆಂಟ್ ಫಂಡ್ ಮೂಲಕ ನೀವು ಪ್ರತಿ ವರ್ಷ10 ಲಕ್ಷ ರೂ ಹೂಡಿಕೆ ಮಾಡಬಹುದಾಗಿದ್ದು, ಇದರಲ್ಲಿ 7.1% ಬಡ್ಡಿದರ ಸಿಗಲಿದ್ದು, ಹೂಡಿಕೆ ಮಾಡಿದ ಒಟ್ಟು ಮೊತ್ತ 2 ಲಕ್ಷ ರೂ ಆದರೆ, ಒಟ್ಟು ಬಡ್ಡಿ ಗಳಿಕೆ ರೂ 2,43,886 ಆಗಿರುತ್ತದೆ. ನಿಮಗೆ ಮೆಚ್ಯೂರಿಟಿ ಮೊತ್ತ 4,43,886 ರೂ ದೊರೆಯಲಿದೆ.

ಕನಿಷ್ಠ ಹೂಡಿಕೆ ಮಾಡಿ

ಒಂದು ಆರ್ಥಿಕ ವರ್ಷದಲ್ಲಿ ನೀವು ಕನಿಷ್ಠ 500 ರೂ. ಗರಿಷ್ಠ 1.5 ಲಕ್ಷ ರೂ. ಆಗಿದ್ದು ಸೆಕ್ಷನ್ 80C ಅಡಿಯಲ್ಲಿ ಹೂಡಿಕೆ ಮೊತ್ತದ ಮೇಲೆ ತೆರಿಗೆ ಕಡಿತವೂ ಇರಲಿದೆ. ಇದಲ್ಲದೆ, ಆ ಹೂಡಿಕೆಯ ಮೇಲಿನ ಬಡ್ಡಿ ಮತ್ತು ಮೆಚ್ಯೂರಿಟಿಯಲ್ಲಿ ಪಡೆದ ಸಂಪೂರ್ಣ ಮೊತ್ತವೂ ತೆರಿಗೆ ಮುಕ್ತವು ಆಗಿರುತ್ತದೆ. ಇನ್ನು PPF ಖಾತೆಯಲ್ಲಿ ಲಾಕ್ ಇನ್ ಅವಧಿ 5 ವರ್ಷಗಳಲ್ಲಿ ಅಂದರೆ ಖಾತೆ ತೆರೆದ ವರ್ಷದ ನಂತರ 5 ವರ್ಷಗಳವರೆಗೆ ಈ ಖಾತೆಯಿಂದ ಹಣವನ್ನು ವಾಪಸ್ಸು ನೀಡುವುದಿಲ್ಲ.

advertisement

Leave A Reply

Your email address will not be published.