Karnataka Times
Trending Stories, Viral News, Gossips & Everything in Kannada

Yuva Nidhi Scheme: ಯುವನಿಧಿ ಯೋಜನೆಯಲ್ಲಿ ಬಿಗ್ ಅಪ್ಡೇಟ್, ಪ್ರತಿ ತಿಂಗಳು ಈ ದಾಖಲೆ ಸಲ್ಲಿಸುವುದು ಕಡ್ಡಾಯ!

advertisement

5 ಗ್ಯಾರಂಟಿಗಳಲ್ಲಿ ಜಾರಿಯಾದ ಕೊನೆಯ ಯೋಜನೆ ಯುವನಿಧಿ ಯಾಗಿದ್ದು ಇದು ರಾಜ್ಯದ ಪದವೀಧರರಿಗೆ ಮಾಸಿಕ 3 ಸಾವಿರ ರೂಪಾಯಿ ಹಾಗೂ ಡಿಪ್ಲೋಮಾ ಪಡೆದವರಿಗೆ ಮಾಸಿಕ 1500 ರೂಪಾಯಿಯನ್ನು ನೀಡಲಿದೆ. ಈಗಾಗಲೇ ಈ ಯೋಜನೆಗೆ ಡಿ.26ರಂದು ನೋಂದಣಿ ಪ್ರಕ್ರಿಯೆ ಆರಂಭವಾಗಿದ್ದು ಹೆಚ್ಚಿನ ನಿರುದ್ಯೋಗಿ ಗಳು ಯುವನಿಧಿ ಯೋಜನೆಯ ಸೌಲಭ್ಯ ವನ್ನು ಪಡೆಯುತ್ತಿದ್ದಾರೆ. ಆದರೆ ಯುವ ನಿಧಿ ಯೋಜನೆ (Yuva Nidhi Scheme) ಗೆ ಸೌಲಭ್ಯ ಪಡೆಯುವವರು ಈ ದಾಖಲೆ ಸಲ್ಲಿಸಿದರೆ ಮಾತ್ರ ಹಣ ದೊರೆಯುತ್ತದೆ.

ಈ ದಾಖಲೆ ಸಲ್ಲಿಸಿ:

 

 

ಯುವನಿಧಿ ಯೋಜನೆ (Yuva Nidhi Scheme) ಯ ಸೌಲಭ್ಯ ಪಡೆಯುವ ಫಲಾನುಭವಿಗಳು ಪ್ರತಿ ತಿಂಗಳು ಸ್ವಯಂಘೋಷಿತ ಪ್ರಮಾಣ ಪತ್ರ ಸಲ್ಲಿಕೆ ಮಾಡುವುದು ಕಡ್ಡಾಯವಾಗಿದೆ ಎಂದು ರಾಜ್ಯ ಸರಕಾರ ‌ತಿಳಿಸಿದೆ. ಪ್ರತಿ ತಿಂಗಳೂ ಕೂಡ ತಮಗೆ ಎಲ್ಲೂ ಕೆಲಸ ಸಿಕ್ಕಿಲ್ಲ, ಉನ್ನತ ಶಿಕ್ಷಣಕ್ಕೆ ದಾಖಲಾಗಿಲ್ಲ ಎಂದು ಸ್ವಯಂ ಘೋಷಿತ ಪ್ರಮಾಣಪತ್ರವನ್ನು ಅಪ್ಲೋಡ್‌ ಮಾಡಿದ್ದರೆ ಮಾತ್ರವೇ ಹಣ ಜಮೆಯಾಗುತ್ತದೆ. ಅದರೆ ಸುಳ್ಳು ಮಾಹಿತಿ ನೀಡಿ ಹಣ ಪಡೆಯುವಂತಿಲ್ಲ.

ಈ ದಾಖಲೆಗಳು ಕಡ್ಡಾಯ:

advertisement

  • Aadhaar Card
  • Income Certificate
  • Ration Card
  • Address Certificate
  • Academic Records
  • Photo
  • Bank Account etc

ಇವರು ಮಾತ್ರ ಅರ್ಹರು:

ಈ ಯೋಜನೆಯ ನಿಯಮದ ಪ್ರಕಾರ 2022-23 ಸಾಲಿನಲ್ಲಿ ಪದವಿ ಮುಗಿಸಿದವರಿಗೆ ಹಾಗೂ ಡಿಪ್ಲೋಮಾ ಮುಗಿಸಿದವರು ಮಾತ್ರ ಯುವ ನಿಧಿ ಯೋಜನೆಗೆ ಅರ್ಜಿ ಸಲ್ಲಿಕೆ ಮಾಡಲು ಅರ್ಹ ರಾಗುತ್ತಾರೆ. ಸ್ವಯಂ ಉದ್ಯೋಗಿ ಅಥವಾ ಯಾವುದೇ ಸಾರ್ವಜನಿಕ ಅಥವಾ ಖಾಸಗಿ ವಲಯದಲ್ಲಿ ಉದ್ಯೋಗದಲ್ಲಿರುವ ಅರ್ಜಿದಾರರು ಅರ್ಹರಲ್ಲ

ಇಲ್ಲಿ ಅರ್ಜಿ ಸಲ್ಲಿಸಿ:

ಅರ್ಜಿ ಸಲ್ಲಿಕೆ ಮಾಡುವ ನಿರೂದ್ಯೋಗ ಯುವಕ ಯುವತಿಯರು ಸೇವಾಸಿಂಧು ವೆಬ್‌ಸೈಟ್‌ ಮೂಲಕ ಅಲ್ಲದೆ ಕರ್ನಾಟಕ ಒನ್‌, ಗ್ರಾಮ ಒನ್‌, ಬಾಪೂಜಿ ಕೇಂದ್ರಗಳಲ್ಲೂ ಅರ್ಜಿ ಸಲ್ಲಿಕೆ ಮಾಡಲು ಅವಕಾಶ ಇದೆ.

advertisement

Leave A Reply

Your email address will not be published.