Karnataka Times
Trending Stories, Viral News, Gossips & Everything in Kannada

Yuva Nidhi Scheme: ಯುವನಿಧಿ ಯೋಜನೆಗೆ ಇಂತವರು ಅರ್ಹರಲ್ಲ, ಅರ್ಹರು ಇಲ್ಲಿ ಅರ್ಜಿ ಸಲ್ಲಿಸಬಹುದು!

advertisement

‘ನುಡಿದಂತೆ ನಡೆಯುತೇವೆ’ ಎನ್ನುವ ಧ್ಯೇಯ ವಾಕ್ಯದೊಂದಿಗೆ ಅಧಿಕಾರ ಕೈಗೆತ್ತಿಕೊಂಡ ಕಾಂಗ್ರೆಸ್ ಸರ್ಕಾರ ತನ್ನ ಮಾತಿನಂತೆ ಐದನೇ ಗ್ಯಾರಂಟಿ ಯೋಜನೆಯನ್ನು ಕೂಡ ಜಾರಿಗೆ ತರಲಿದೆ. ಇಂದು ಅಂದ್ರೆ ಡಿಸೆಂಬರ್ 26, 2023, ರಾಜ್ಯ ವಿಧಾನಸೌಧದ ಬ್ಯಾಂಕ್ವೆಟ್ ಹಾಲಿನಲ್ಲಿ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರ ನೇತೃತ್ವದಲ್ಲಿ ಐದನೇ ಗ್ಯಾರಂಟಿ ಯೋಜನೆ ಯುವ ನಿಧಿಗೆ ಚಾಲನೆ ನೀಡಲಾಗುವುದು.

Yuva Nidhi Yojana Benefits:

 

 

ನಿರುದ್ಯೋಗಿ ಯುವಕ ಯುವತಿಯರಿಗೆ ನಿರುದ್ಯೋಗ ಭತ್ಯೆ ನೀಡುವ ಯೋಜನೆ ಇದಾಗಿದೆ. ಪದವಿ (Degree) ಶಿಕ್ಷಣ ಮುಗಿಸಿ ಕೆಲಸದ ಹುಡುಕಾಟದಲ್ಲಿ ಇರುವ ಯುವಕ ಯುವತಿಯರಿಗೆ ಪ್ರತಿ ತಿಂಗಳು 3000 ಹಾಗೂ ಡಿಪ್ಲೋಮೋ (Diploma) ಮುಗಿಸಿದವರಿಗೆ ಪ್ರತಿ ತಿಂಗಳು 1,500 ರೂಪಾಯಿಗಳನ್ನು ನಿರುದ್ಯೋಗ ಭತ್ಯೆಯಾಗಿ ಸರ್ಕಾರ ನೀಡಲಿದೆ. ಇದು ಎರಡು ವರ್ಷಗಳ ಅವಧಿಯ ಯೋಜನೆಯಾಗಿದ್ದು ಮೊದಲ ಹಂತದಲ್ಲಿ 250 ಕೋಟಿ ರೂಪಾಯಿಗಳನ್ನು ಸರ್ಕಾರ ಮೀಸಲಿಟ್ಟಿದೆ. ಮುಂದಿನ ವರ್ಷಕ್ಕೆ ಈ ಮೊತ್ತ 1250 ಕೋಟಿ ಮೀರಬಹುದು ಎಂದು ಅಂದಾಜಿಸಲಾಗಿದೆ. ಯುವ ನಿಧಿ ಯೋಜನೆಯ ಪ್ರಯೋಜನವನ್ನು ರಾಜ್ಯದಲ್ಲಿ ಸುಮಾರು 5 ಲಕ್ಷ ಯುವಕ ಯುವತಿಯರು ಪಡೆದುಕೊಳ್ಳಲಿದ್ದಾರೆ.

180 ದಿನಗಳ ವರೆಗೆ ಅಂದರೆ ಪದವಿ ಅಥವಾ ಡಿಪ್ಲೋಮೋ ಮುಗಿಸಿ ಆರು ತಿಂಗಳಾದರೂ ಉದ್ಯೋಗ ಸಿಗದೇ ಇರುವ ಯುವಕ ಯುವತಿಯರು ಈ ಯೋಜನೆ (Yuva Nidhi Scheme) ಗೆ ಅರ್ಜಿ ಸಲ್ಲಿಸಬಹುದು. ಎರಡು ವರ್ಷಗಳ ಅವಧಿಗೆ ನೀಡಲಾಗಿರುವ ನಿರುದ್ಯೋಗ ಭತ್ಯೆ ಇದಾಗಿದ್ದು ಈ ನಡುವೆ ಉದ್ಯೋಗ ಸಿಕ್ಕರೆ ತಕ್ಷಣವೇ ಫಲಾನುಭವಿಗಳು ಸರ್ಕಾರದ ಗಮನಕ್ಕೆ ತರಬೇಕು. ಆಗ ಭತ್ಯೆ ಸ್ಥಗಿತಗೊಳಿಸಲಾಗುವುದು.

ಯಾರು ಅರ್ಜಿ ಸಲ್ಲಿಸಬಹುದು?

  • 2022 – 23ನೇ ಸಾಲಿನಲ್ಲಿ ಪದವಿ ಅಥವಾ ಡಿಪ್ಲೋಮೋ ಕೋರ್ಸ್ ಪಾಸ್ ಆಗಿರುವವರು
  • ಕರ್ನಾಟಕ ರಾಜ್ಯದ ನಿವಾಸಿ ಆಗಿರುವವರು. (ಕರ್ನಾಟಕದಲ್ಲಿಯೇ ಶಿಕ್ಷಣ ಮುಗಿಸಿರಬೇಕು)
  • ಪದವಿ ಹಾಗೂ ಡಿಪ್ಲೋಮೋ ಮುಗಿಸಿ 180 ದಿನಗಳ ವರೆಗೆ ಉದ್ಯೋಗ ಸಿಗದೇ ಇರುವವರು

advertisement

ಯಾರು ಅರ್ಜಿ ಸಲ್ಲಿಸುವಂತಿಲ್ಲ?

  • ಪದವಿ (Degree) ಅಥವಾ ಡಿಪ್ಲೋಮೋ (Diploma) ಕೋರ್ಸ್ ಮುಗಿಸಿ ಉದ್ಯೋಗಕ್ಕೆ ಸೇರಿರುವ ಅಭ್ಯರ್ಥಿ ಯೋಜನೆಗೆ ಅರ್ಹರಲ್ಲ.
  • ಅಪ್ರೆಂಟಿಸ್ ಆಗಿ ವೇತನ ಪಡೆಯುತ್ತಿರುವವರು ಅರ್ಜಿ ಸಲ್ಲಿಸುವಂತಿಲ್ಲ.
  • ಯಾವುದೇ ಸರ್ಕಾರಿ ಅಥವಾ ಖಾಸಗಿ ಉದ್ಯೋಗ ಮಾಡುತ್ತಿರುವವರು ಅರ್ಜಿ ಸಲ್ಲಿಸುವಂತಿಲ್ಲ.
  • ಪದವಿ ಮುಗಿಸಿ ಸ್ವಉದ್ಯೋಗ ಆರಂಭಿಸಿದವರು ಈ ಯೋಜನೆಗೆ ಅರ್ಜಿ ಸಲ್ಲಿಸುವಂತಿಲ್ಲ.
  • ಪದವಿ ಅಥವಾ ಡಿಪ್ಲೋಮಾ ಶಿಕ್ಷಣ ಮುಗಿಸಿ ಉನ್ನತ ವಿದ್ಯಾಭ್ಯಾಸ ಮಾಡುತ್ತಿರುವವರು ಅರ್ಜಿ ಸಲ್ಲಿಸುವಂತಿಲ್ಲ.

ಅರ್ಜಿ ಸಲ್ಲಿಸಲು ಬೇಕಾಗಿರುವ ದಾಖಲೆಗಳು:

  • Aadhaar Card
  • Caste Certificate
  • Income Certificate
  • 10th Class, Secondary PUC Degree or Diploma Marks Card.
  • ಡಿಪ್ಲೋಮೋ ಮುಗಿಸಿರುವವರು 8 ಹಾಗೂ 9ನೇ ತರಗತಿಯ ಮಾರ್ಕ್ಸ್ ಕಾರ್ಡ್ ಕೂಡ ಕೊಡಬೇಕಾಗುತ್ತದೆ.
  • ನಿರುದ್ಯೋಗಿ ಎನ್ನುವ ಬಗ್ಗೆ ಸ್ವಯಂಘೋಷಣಾ ಪತ್ರ
  • Bank Account Details
  • Mobile Number

ಎಲ್ಲಿ ಅರ್ಜಿ ಸಲ್ಲಿಸಬೇಕು?

ಸರ್ಕಾರದ ಅಧಿಕೃತ ವೆಬ್ಸೈಟ್ ಸೇವಾ ಸಿಂಧು ವೆಬ್ಸೈಟ್ನಲ್ಲಿ ಅರ್ಜಿ ಸಲ್ಲಿಸಬಹುದು ಎಂದು ಸರ್ಕಾರ ತಿಳಿಸಿದೆ ಇದರ ಹೊರತಾಗಿ ನೀವು ನಿಮ್ಮ ಹತ್ತಿರದ ಬೆಂಗಳೂರು ಒನ್ ಕರ್ನಾಟಕ ಒನ್ (Karnataka One), ಗ್ರಾಮ ವನ್ (Gram One), ಬಾಪೂಜಿ ಕೇಂದ್ರ ಮೊದಲಾದ ಸೇವಾ ಕೇಂದ್ರಗಳಲ್ಲಿಯೂ ಅರ್ಜಿ ಸಲ್ಲಿಸಬಹುದಾಗಿದೆ.

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಎರಡು ವರ್ಷಗಳ ಒಳಗೆ ಕೆಲಸ ಸಿಕ್ಕರೆ ತಕ್ಷಣ ಅದನ್ನು ಸರ್ಕಾರದ ಗಮನಕ್ಕೆ ತರಬೇಕು. ಪ್ರತಿ ತಿಂಗಳ 25ನೇ ತಾರೀಕಿನಂದು ಅಭ್ಯರ್ಥಿಗಳ ಪ್ರಗತಿ ಪರಿಶೀಲನೆ ನಡೆಸಲಾಗುತ್ತದೆ ಒಂದು ವೇಳೆ ನೀವು ಕೆಲಸ ಸಿಕ್ಕು ಅದನ್ನು ಸರ್ಕಾರದ ಗಮನಕ್ಕೆ ತರದೆ ಇದ್ದರೆ ಭಾರಿ ಪ್ರಮಾಣದ ದಂಡ ಹಾಗೂ ಶಿಕ್ಷೆ ಅನುಭವಿಸಬೇಕಾಗಬಹುದು ಎಂಬುದನ್ನು ನೆನಪಿಡಿ.

advertisement

Leave A Reply

Your email address will not be published.