Karnataka Times
Trending Stories, Viral News, Gossips & Everything in Kannada

GruhaLakshmi: ಗೃಹಲಕ್ಷ್ಮಿ ಹಣ ಬರದೇ ಇದ್ದವರಿಗೆ ಗುಡ್ ನ್ಯೂಸ್, ಈ ರೀತಿಯಾಗಿ ಮಾಡಿದ್ರೆ ಎಲ್ಲ ಕಂತಿನ ಹಣ 3 ದಿನದೊಳಗೆ ಬರುತ್ತೆ!

advertisement

ರಾಜ್ಯ ಸರಕಾರದ ಮಹತ್ವದ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮೀ ಯೋಜನೆ (GruhaLakshmi Yojana) ರಾಜ್ಯಾದ್ಯಂತ ಜನರಿಗೆ ಬಹಳ ಉಪಯುಕ್ತವಾಗುತ್ತಿದೆ. ಗೃಹಲಕ್ಷ್ಮೀ ಯೋಜನೆ ಮೂಲಕ ರಾಜ್ಯದ ಮಹಿಳೆಯರಿಗೆ ಎರಡು ಸಾವಿರ ಸರಕಾರದಿಂದ ಮೊತ್ತ ಪಾವತಿಯಾಗುತ್ತಿದ್ದು ಅನೇಕ ಮಹಿಳೆಯದ ಜೀವನ ನಿರ್ವಹಣೆಗೆ ಈ ಮೊತ್ತ ಬಹಳ ಉಪಯೋಗಕರವಾಗಿದೆ. ಹಾಗಿದ್ದರೂ ಇದುವರೆಗೆ ಒಂದು ಕಂತೂ ಬರದೇ ಕೂಡ ಸಮಸ್ಯೆ ಎದುರಿಸಿದವರು ಇದ್ದಾರೆ ಹಾಗಾಗಿ ಸರಕಾರ ಈ ರೀತಿ ಸಮಸ್ಯೆ ಸರಿಪಡಿಸುವ ಬಗ್ಗೆ ಚಿಂತನೆ ನಡೆಸಿದೆ.

 

 

ಗೃಹಲಕ್ಷ್ಮೀ (Gruha Lakshmi) ಯೋಜನೆಯಿಂದಾಗಿ ಮಹಿಳೆಯರಿಗೆ ಬಹಳ ಅನುಕೂಲ ಆಗುತ್ತಿದ್ದರೂ ಕೂಡ ಹಣ ಕ್ಲಪ್ತ ಸಮಯಕ್ಕೆ ಮಂಜೂರಾಗುತ್ತಿಲ್ಲ ಎಂಬ ಬಗ್ಗೆ ದೂರು ಕೂಡ ಬರುತ್ತಿದೆ ಈ ನೆಲೆಯಲ್ಲಿ ರಾಜ್ಯದ ಗೃಹಲಕ್ಷ್ಮೀ ಯೋಜನೆ ಅನೇಕರಿಗೆ ಬರದ ಹಿನ್ನೆಲೆ ಸಾಕಷ್ಟು ವಿರೋಧ ಎದುರಿಸುತ್ತಿದೆ. ಹಾಗಾಗಿ ಸರಕಾರ ಕೂಡ ಈ ಸಮಸ್ಯೆ ಬಗ್ಗೆ ಮಹಿಳೆಯರಿಗೆ ಮನದಟ್ಟು ಮಾಡಲು ಆಶಾ ಕಾರ್ಯಕರ್ತೆಯರು ಮತ್ತು ಅಂಗನವಾಡಿ ಕಾರ್ಯಕರ್ತೆಯರ ನೆರವು ಪಡೆಯುತ್ತಿದೆ. ಹಾಗಾಗಿ ಮೂರು ದಿನದ ಶಿಬಿರ ಕೈಗೊಳ್ಳುವ ತೀರ್ಮಾನ ಕೂಡ ಕೈ ಗೊಳ್ಳಲಾಗಿದೆ.

ಎಲ್ಲಿ ಶಿಬಿರ:

 

advertisement

 

ಗೃಹಲಕ್ಷ್ಮೀ ಯೋಜನೆಯ (GruhaLakshmi Yojana) ಈ ಒಂದು ಮೂರು ದಿನದ ಶಿಬಿರವನ್ನು ಆಯೋಜಿಸಲಾಗಿದ್ದು ಇದನ್ನು ಮುಖ್ಯವಾಗಿ ಜಾರಿಗೆ ತರುವುದು ರಾಜ್ಯದ ಎಲ್ಲ ಗ್ರಾಮ ಪಂಚಾಯತ್ ಕಚೇರಿಗಳಲ್ಲಿ‌. ಈ ಒಂದು ಶಿಬಿರದಲ್ಲಿ ಗೃಹಲಕ್ಷ್ಮೀ ತಾಂತ್ರಿಕ ಮತ್ತು ದಾಖಲಾತಿ ಸಮಸ್ಯೆ ಬಗೆಹರಿಸಿ ಸ್ಥಳದಲ್ಲೇ ಪರಿಹಾರ ನೀಡುವ ನೆಲೆಯಲ್ಲಿ ಡಿಸೆಂಬರ್ 27 ರಿಂದ 29ರ ವರೆಗೆ ಮೂರು ದಿನಗಳ ಕಾಲ ವಿಶೇಷ ಶಿಬಿರ ಹಮ್ಮಿಕೊಳ್ಳಲಾಗಿದೆ. ಈ ಬಗ್ಗೆ ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್, ಮಹಿತಿ ಮತ್ತು ತಂತ್ರಜ್ಞಾನ ಸಚಿವ ಪ್ರಿಯಾಂಕ ಖರ್ಗೆ (Priyank Kharge) ಅವರು ಮಾಧ್ಯಮದ ಮುಂದೆ ಮಾತನಾಡಿದ್ದಾರೆ.

ಪ್ರತೀ ಗ್ರಾಮಪಂಚಾಯತ್ ನಲ್ಲೂ ಕಾರ್ಯ:

ಈ ಬಗ್ಗೆ ಮಾತನಾಡಿದ್ದ ಪ್ರಿಯಾಂಕ ಖರ್ಗೆ (Priyank Kharge) ಅವರು, EKYC ಅಪ್ಡೇಟ್ ಬಾಕಿ ಇರುವುದು, ಬ್ಯಾಂಕ್ ಖಾತೆ (Bank Account) ನಿಷ್ಕ್ರಿಯ ಸೇರಿದಂತೆ ಅನೇಕ ಸಮಸ್ಯೆಗಳಿಗೆ ಪಿಡಿಒ ಮುಖೇನ ಮೂರು ದಿನಗಳ ವಿಶೇಷ ಶಿಬಿರ ನಡೆಯಲಿದೆ. ಈ ಒಂದು ಶಿಬಿರದಲ್ಲಿ ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು, ಎಲೆಕ್ಟ್ರಾನಿಕ್ ಡೆಲಿವರಿ ಆಫ್ ಸಿಟಿಜನ್ (Electronic Delivery of Citizen), ಬಾಪೂಜಿ ಸೇವಾ ಕೇಂದ್ರದ ಗಣಕಯಂತ್ರ ನಿರ್ವಾಹಕರು, ಇಂಡಿಯನ್ ಪೋಸ್ಟ್ ಪೇಮೆಂಟ್ (Indian Post Payment) ನವರು ಮತ್ತು ರಾಜ್ಯದ ಪ್ರಮುಖ ಬ್ಯಾಂಕಿನ ಸಿಬಂದಿ ಶಿಬಿರದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಗೃಹಲಕ್ಷ್ಮೀ ಯೋಜನೆಗೆ ತಾಂತ್ರಿಕ ಹಾಗೂ ಬ್ಯಾಂಕ್ ಸಂಬಂಧಿತ ಸಮಸ್ಯೆ ಬಗೆಹರಿಸುವ ನೆಲೆಯಲ್ಲಿ ಈ ಯೋಜನೆ ರೂಪಿಸಲಾಗುತ್ತಿದ್ದು ಹಣ ಬರದೇ ಇದ್ದವರು ಈ ಶಿಬಿರದ ಪ್ರಯೋಜನ ಪಡೆದುಕೊಳ್ಳಿ ಎಂದು ಹೇಳಿದ್ದಾರೆ. ಈ ಒಂದು ಶಿಬಿರದಲ್ಲಿ ಸ್ಥಳದಲ್ಲೇ ಇಕೆವೈಸಿ, ಆಧಾರ್ ಜೋಡಣೆ, ಬ್ಯಾಂಕ್ ಇತರ ಸಮಸ್ಯೆ ಪರಿಹಾರ ಕಾಣಲಿದೆ. ಸಿಬಂದಿ ಹಾಗೂ ಅಧಿಕಾರಿಗಳ ಸಹಯೋಗದೊಂದಿಗೆ ಸಮಸ್ಯೆ ಬಗೆಹರಿಸಲಾಗುವುದು. ಶಿಬಿರಕ್ಕೆ ಬರುವಾಗ ತಪ್ಪದೇ ತಮ್ಮ ಹಾಗೂ ಪತಿಯ ಆಧಾರ್ ಕಾರ್ಡ್ (Aadhaar Card), ಬ್ಯಾಂಕ್ ಪಾಸ್ ಬುಕ್ (Bank Pass Book), ಪಡಿತರ ಕಾರ್ಡ್ (Ration Card) ಇತರ ದಾಖಲೆ ತರುವಂತೆ ಸಚಿವರು ಸೂಚನೆ ನೀಡಿದ್ದಾರೆ.

advertisement

Leave A Reply

Your email address will not be published.