Karnataka Times
Trending Stories, Viral News, Gossips & Everything in Kannada

Maruti S Presso: ಮಾರುತಿ ಸುಜುಕಿ ಭರ್ಜರಿ ಆಫರ್, 4 ಲಕ್ಷದ ಕಾರಿಗೆ ಪಡೆಯಿರಿ 55,000 ರೂಪಾಯಿ ರಿಯಾಯಿತಿ.

advertisement

ದೇಶದ ಅತಿದೊಡ್ಡ ಕಾರು ತಯಾರಕ ಕಂಪನಿಯಾಗಿ ಮಾರುತಿ ಸುಜುಕಿ (Maruti Suzuki) ಗುರುತಿಸಿಕೊಂಡಿದೆ. ಸಂಸ್ಥೆಯ S- Presso ಕಾರಿನ ಮೇಲೆ ಈ ವರ್ಷಾಂತ್ಯದಲ್ಲಿ ಭರ್ಜರಿ ಡಿಸ್ಕೌಂಟ್ ಪಡೆದುಕೊಂಡಿದ್ದು, ಡಿಸೆಂಬರ್ 31 ರವರೆಗೆ ರಿಯಾಯಿತಿ ಸೌಲಭ್ಯಗಳು ಲಭ್ಯವಿರಲಿದೆ. ಆ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ ನೋಡೋಣ.

ಮಾರುತಿ ಸುಜುಕಿ ಆಫರ್ ಗಳು

ಡೀಲರ್ ಶಿಪ್ ಗಳ ಅರೇನಾ ಮತ್ತು ನೆಕ್ಸಾ ಶ್ರೇಣಿಯಲ್ಲಿ ತಮ್ಮ ಉತ್ಪನ್ನ ಶ್ರೇಣಿಯ ಮೇಲೆ ವರ್ಷದಾದ್ಯಂತ ದೊಡ್ಡ ರಿಯಾಯಿತಿ ನೀಡುತ್ತಿವೆ. ಮಾರುತಿ ಸುಜುಕಿ ತನ್ನ ಅತ್ಯುತ್ತಮ ಮೈಲೇಜ್ ಕಾರ್ ಆದ S- Presso ಮೇಲೆ ಬಂಪರ್ ಕೊಡುಗೆ ಸಹ ನೀಡುತ್ತಿದೆ .ಭಾರತದಲ್ಲಿ S- Presso ಬೆಲೆ 4.26 ಲಕ್ಷದಿಂದ ಪ್ರಾರಂಭವಾಗುತ್ತದೆ ಇದರಲ್ಲಿ ಬಣ್ಣದ ಆಯ್ಕೆಗಳು ಸಹ ಇದೆ. ಈ ಕಾರು ಏಳು ಬಣ್ಣಗಳಲ್ಲಿ ಆಯ್ಕೆ ಮಾಡಬಹುದಾಗಿದೆ. ಇನ್ನು ವರ್ಷದ ಕೊನೆಯ ಈ ಪ್ರಯೋಜನಗಳನ್ನು ಗ್ರಾಹಕರು ನಗದು ರೀತಿಯಲ್ಲಿ ವಿನಿಮಯ ಬೋನಸ್ ಹಾಗೂ ಕಾರ್ಪೊರೇಟ್ ರಿಯಾಯಿತಿ ರೂಪದಲ್ಲಿ ಪಡೆಯಬಹುದಾಗಿದೆ. ಇನ್ನು ಈ ಕಾರಿನ ಮೇಲೆ ಲಭ್ಯವಿರುವ ರಿಯಾಯಿತಿ ಕೊಡುಗೆಗಳನ್ನು ನೋಡೋಣ.

Image Source: Autocar Proffessional

ಮಾರುತಿ ಸುಜುಕಿ ಎಕ್ಸ್ಪ್ರೆಸ್ಸೋ ಮೇಲೆ ಎಷ್ಟು ರಿಯಾಯಿತಿ ಕೊಡುಗೆ ನೀಡುತ್ತಿದೆ?

advertisement

ಈ ತಿಂಗಳು ಪೆಟ್ರೋಲ್ ಚಾಲಿತ ಮಾರುತಿ ಸುಜುಕಿ S- Presso 35,000 ನಗದು ರಿಯಾಯಿತಿ ಲಭ್ಯವಿದೆ. ಅಲ್ಲದೆ 20,000 ರೂಪಾಯಿಗಳ ವಿನಿಮಯ ಬೋನಸ್ ಕೂಡ ಲಭ್ಯವಿದೆ ಮತ್ತೊಂದೆಡೆ CNG ರೂಪಾಂತರ ವಿನಿಮಯ ಬೋನಸ್ ಅನ್ನು ಪಡೆಯಬಹುದಾಗಿದೆ.

S- Presso ಕಾರಿನ ರೂಪಾಂತರಗಳು

Maruti S Presso ಕಾರು ಆರ್ಡರ್ ಮಾಡಿದ ಮೇಲೆ ಬಹು ಬೇಗ ಸಿಗುತ್ತದೆ ಇದು Std, LXi, VXi ಮತ್ತು VXi+ ರೂಪಾಂತರಗಳನ್ನು ಹೊಂದಿದೆ. ಅವುಗಳಲ್ಲಿ ಬೇರೆ ಬೇರೆ ವಿಧಗಳನ್ನು ಒಳಗೊಂಡಿದೆ. ಗ್ರಾಹಕರು ಇದರ ಬಣ್ಣಗಳನ್ನು ನೋಡಿದರೆ ಬೆರಗಾಗೋದು ಖಚಿತ ಹೌದು ಸಾಲಿಡ್ ಸೀಸನ್ ಆರೆಂಜ್, ಪರ್ಲ್ ಸ್ಯಾರಿ ಬ್ಲೂ, ಸಾಲಿಡ್ ವೈಟ್ , ಸಾಲಿಡ್ ಫೈಯರ್ ರೆಡ್ ,ಮೆಟಾಲಿಕ್ ಗ್ರಾನೈಟ್ ಗ್ರೇಟ್, ಮೆಟಾಲಿಕ್ ಸಿಲ್ಕಿ ಸಿಲ್ವರ್ ಮತ್ತು ಮಿಡ್ ನೈಟ್ ಬ್ಲಾಕ್ ಹೇಗೆ ಏಳು ಬಣ್ಣಗಳ ಆಯ್ಕೆಗಳಲ್ಲಿ ಯಾವುದಾದರೂ ಒಂದನ್ನು ಆಯ್ಕೆ ಮಾಡಬಹುದಾಗಿದೆ.

Image Source: Autocar India

ಏಂಜಿನ್ ಪವರ್ಟೆನ್ ಹೇಗಿದೆ?

ಈ ಕಾರು 1.0 ಲೀಟರ್ ಪೆಟ್ರೋಲ್ ಎಂಜಿನ್ ಹೊಂದಿದೆ. ಈ ಎಂಜಿನ್ 68PS ಪವರ್ ಮತ್ತು 89 NM ಟಾರ್ಕ್ ಅನ್ನು ಉತ್ಪಾದಿಸುತ್ತದೆ 5 -ಸ್ಪೀಡ್ ಮ್ಯಾನ್ಯುಯಲ್ ಟ್ರಾನ್ಸ್ ಮಿಷನ್ (Manual Transmission) ಎಂಜಿನ್ ನೊಂದಿಗೆ ಕಾಣ ಸಿಗುತ್ತದೆ.ಆದರೆ 5- ಸ್ಪೀಡ್ AMT ಗೇರ್ ಬಾಕ್ಸ್ ಅನ್ನು ಐಚ್ಚಿಕವಾಗಿ ಇರಿಸಲಾಗಿದೆ. ಈ ಎಂಜಿನ್ ನೊಂದಿಗೆ CNG ಕಿಟ್ನ ಆಯ್ಕೆ ಯು ಲಭ್ಯವಿದೆ. CNG ಮೋಡ್ ನಲ್ಲಿ ಇದರ ಪವರ್ ಔಟ್ ಪುಟ್ 56.69ps ಪವರ್ ಮತ್ತು 88.1 nm ಆಗಿದೆ ಇದರೊಂದಿಗೆ 5 -ಸ್ಪೀಡ್ ಮಾನ್ಯುಯಲ್ ಗೇರ್ ಬಾಕ್ಸ್ (Manual Gear Box)ಅನ್ನು ನೀಡಲಾಗಿದೆ.

advertisement

Leave A Reply

Your email address will not be published.