Karnataka Times
Trending Stories, Viral News, Gossips & Everything in Kannada

LIC: ಕೇವಲ 200ರೂ. ಹೂಡಿಕೆ ಮಾಡಿ 28 ಲಕ್ಷ ಹಿಂಪಡೆಯಿರಿ, ಎಲ್ಐಸಿಯ ಈ ಯೋಜನೆಯನ್ನು ಮಿಸ್ ಮಾಡ್ಕೋಬೇಡಿ!

advertisement

ನೀವು ಯಾವುದೇ ರೀತಿಯ ಹೂಡಿಕೆ ಮಾಡಲು ಬಯಸಿದರೆ, ಹೆಚ್ಚು ಭದ್ರತೆಯನ್ನು ಹೊಂದಿರುವಂತಹ ಯೋಜನೆಗಳಲ್ಲಿ ಹೂಡಿಕೆ ಮಾಡುವುದು ಒಳ್ಳೆಯದು. ಮ್ಯೂಚುವಲ್ ಫಂಡ್, SIP ಮೊದಲಾದ ಹೂಡಿಕೆ ಮಾರುಕಟ್ಟೆಯ ಉಪಾಯವನ್ನು ಹೊಂದಿರುವ ಹಿನ್ನೆಲೆಯಲ್ಲಿ ಸರ್ಕಾರದಿಂದಲೇ ಬಿಡುಗಡೆಯಾಗಿರುವ ಕೆಲವು ಪ್ರಮುಖ ಯೋಜನೆಗಳಲ್ಲಿ ನೀವು ಹೂಡಿಕೆ ಮಾಡಬಹುದಾಗಿದೆ.

ಈ ನಿಟ್ಟಿನಲ್ಲಿ ಲೈಫ್ ಇನ್ಸೂರೆನ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (Life Insurance Corparation Of India) ಹೆಚ್ಚು ಸುರಕ್ಷಿತವಾಗಿದೆ ಎನ್ನಬಹುದು. ಎಲ್ಐಸಿ ಇದುವರೆಗೆ ಗ್ರಾಹಕರಿಗೆ ಅನುಕೂಲವಾಗುವಂತಹ ಸಾಕಷ್ಟು ಬೇರೆ ಬೇರೆ ರೀತಿಯ ಹೂಡಿಕೆ ಯೋಜನೆಗಳನ್ನು ಪರಿಚಯಿಸಿದೆ. ಅತಿ ಕಡಿಮೆ ಹೂಡಿಕೆ ಮಾಡಿ ಹೆಚ್ಚಿನ ಲಾಭ ಪಡೆಯುವಂತಹ ಯೋಜನೆಗಳು, ನೀವು ದುಡಿಯುವ ಆರಂಭದ ಹಂತದಲ್ಲಿಯೇ ಹೂಡಿಕೆ ಆರಂಭಿಸಿದರೆ ಕೆಲವು ವರ್ಷಗಳಲ್ಲಿ ಅತಿ ದೊಡ್ಡ ಮೊತ್ತದ ಹಣವನ್ನು ಹಿಂಪಡೆಯಲು ಸಾಧ್ಯವಾಗುತ್ತದೆ.

LIC ಯ ಜೀವನ್ ಪ್ರಗತಿ ಯೋಜನೆ!

ಈ ಯೋಜನೆಯಲ್ಲಿ ಹೂಡಿಕೆ ಮಾಡಿದರೆ ನೀವು 200 ರೂಪಾಯಿಗಳ ಹೂಡಿಕೆಗೆ 28 ಲಕ್ಷ ರೂಪಾಯಿಗಳ ದೊಡ್ಡ ಮೊತ್ತದ ಹಣವನ್ನು ಹಿಂಪಡೆಯಬಹುದಾಗಿದೆ.

LIC ಜೀವನ್ ಪ್ರಗತಿ ಹೂಡಿಕೆ ಆರಂಭಿಸುವುದು ಹೇಗೆ?

advertisement

ಎಲ್ಐಸಿಯು ಜೀವನ ಪ್ರಗತಿ ಯೋಜನೆಯಲ್ಲಿ ನೀವು ಹೂಡಿಕೆ ಮಾಡುವುದಾದರೆ ಪ್ರತಿದಿನ ಕೇವಲ 200 ರೂಪಾಯಿಗಳನ್ನು ಮೀಸಲಿಟ್ಟರೆ ಸಾಕು ತಿಂಗಳಿಗೆ 6,000 ಗಳಂತೆ ವಾರ್ಷಿಕವಾಗಿ 72,000ಗಳನ್ನು ಠೇವಣಿ ಮಾಡಬೇಕು. ಈ ಯೋಜನೆಯಲ್ಲಿ 12 ರಿಂದ 20 ವರ್ಷಗಳ ಅವಧಿಗೆ ಯೋಜನೆ ಆಯ್ದುಕೊಳ್ಳುವ ಸ್ವಾತಂತ್ರ್ಯ ಗ್ರಾಹಕರಿಗೆ ಇದೆ. 20 ವರ್ಷಗಳ ನಂತರ ನಿಮ್ಮ ಖಾತೆ ಮೆಚ್ಯೂರ್ ಆಗುತ್ತದೆ. ಅಂದರೆ 20 ವರ್ಷಗಳ ಬಳಿಕ ಮೆಚುರಿಟಿ ಅವಧಿಯಲ್ಲಿ ಅಪಾಯ ಮುಕ್ತ 28 ಲಕ್ಷ ರೂಪಾಯಿಗಳನ್ನು ಹಿಂಪಡೆಯಲು ಸಾಧ್ಯವಿದೆ.

ಎಲ್ಐಸಿ ಯ ಜೀವನ ಪ್ರಗತಿ ಯೋಜನೆ (LIC Jeevan Pragati Scheme) ಯಲ್ಲಿ ಡೆತ್ ಬೆನಿಫಿಟ್ ಕೂಡ ಇದ್ದು, ಹೂಡಿಕೆ ಮಾಡಿದ ವ್ಯಕ್ತಿ ಅಕಾಲಿಕ ಮರಣ ಹೊಂದಿದರೆ, ವಿಮ ಮುಕ್ತ ಮಾತ್ರವಲ್ಲದೇ ಸರಳ ರಿವರ್ಶನರಿ ಬೋನಸ್ ಹಾಗೂ ಅಂತಿಮ ಬೋನಸ್ ಅನ್ನು ಸೇರಿಸಿ ನಾಮಿನಿಗೆ ಪಾಲಿಸಿ (Policy) ವರ್ಗಾಯಿಸಲಾಗುವುದು.

ಎಲ್ಐಸಿ ಜೀವನ್ ಪ್ರಗತಿ ಹೂಡಿಕೆ ಲೆಕ್ಕಾಚಾರ!

ಯೋಜನೆಯಲ್ಲಿ 12 ರಿಂದ 45 ವರ್ಷ ವಯಸ್ಸಿನವರು ಹೂಡಿಕೆ ಮಾಡಬಹುದಾಗಿದೆ. ಕನಿಷ್ಠ ಹೂಡಿಕೆಯ ಮೊತ್ತ 1.5 ಲಕ್ಷ ರೂಪಾಯಿಗಳು. ಗರಿಷ್ಠ ಎಷ್ಟು ಬೇಕಾದರೂ ಹೂಡಿಕೆ ಮಾಡಬಹುದು. ಒಂದು ಲೆಕ್ಕಾಚಾರದ ಪ್ರಕಾರ ನೀವು ನಾಲ್ಕು ಲಕ್ಷ ರೂಪಾಯಿಗಳ ವಿಮೆ ಮಾಡಿಸಿದರೆ ಐದು ವರ್ಷಗಳಲ್ಲಿ 5 ಲಕ್ಷ ರೂಪಾಯಿಗಳನ್ನು ರಿಟರ್ನ್ ಪಡೆಯಬಹುದು. ಈ ಆಧಾರದ ಮೇಲೆ ನೀವು ನಿಮ್ಮ ಬಳಿ ಎಷ್ಟು ಸಾಧ್ಯವಿದೆಯೋ ಅಷ್ಟು ಹಣವನ್ನು ಹೂಡಿಕೆ ಮಾಡಲು ಎಲ್ಐಸಿ ಅನುಕೂಲ ಮಾಡಿಕೊಡುತ್ತದೆ.

advertisement

Leave A Reply

Your email address will not be published.