Karnataka Times
Trending Stories, Viral News, Gossips & Everything in Kannada

PM Kisan: ರೈತರಿಗೆ ಬಂಪರ್ ಸುದ್ದಿ, ಹೆಚ್ಚಾಗಲಿದೆ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಹಣ!

advertisement

ದೇಶಾದ್ಯಂತ ವಾಸಿಸುವ ರೈತರಿಗೆ ಖುಷಿ ಕೊಡುವಂತಹ ವಿಚಾರ ಇದು. ಕೇಂದ್ರ ಸರ್ಕಾರ ರೈತರಿಗೆ ನೀಡಲಾಗುವ ಅನುದಾನದ ಪರಿಷ್ಕರಣೆ ಮಾಡಿದೆ. ಹೀಗಾಗಿ ಕೇಂದ್ರದ ಕೃಷಿ ಇಲಾಖೆಗೆ ಇನ್ನು ಮುಂದೆ ಹೆಚ್ಚು ಮೊತ್ತದ ಅನುದಾನ ಸಿಗಲಿದೆ. ಈ ಹಿನ್ನೆಲೆಯಲ್ಲಿ ರೈತರಿಗೆ ಸರ್ಕಾರದಿಂದ ಸಿಗುತ್ತಿರುವ ಹಣದ ಮೊತ್ತವನ್ನು ಹೆಚ್ಚಿಸಲು ನಿರ್ಧರಿಸಲಾಗಿದೆ.

ಕೃಷಿ ಇಲಾಖೆಗೆ 39% ನಷ್ಟು ಹೆಚ್ಚಿನ ಅನುದಾನ!

ರೈತರಿಗೆ ಅನುಕೂಲವಾಗುವಂತಹ ಆದಾಯ ಬೆಂಬಲ ಹಾಗೂ ಇತರ ಪಿಂಚಣಿ ಇನ್ಸೂರೆನ್ಸ್ ಮೊದಲಾದ ಯೋಜನೆಗಳನ್ನು ವಿಸ್ತರಿಸಲು ಕೇಂದ್ರ ಸರಕಾರ ನಿರ್ಧರಿಸಿದೆ. 2023- 24ರ ಬಜೆಟ್ ನಲ್ಲಿ ಕೇಂದ್ರ ಕೃಷಿ ಸಚಿವಾಲಯಕ್ಕೆ 39% ನಷ್ಟು ಅಂದರೆ 1.44 ಲಕ್ಷ ಕೋಟಿ ರೂ. ಹೆಚ್ಚಳವಾಗಲಿದೆ. ಹಣದ ಹಂಚಿಕೆಯಲ್ಲಿನ ದೊಡ್ಡ ಬದಲಾವಣೆ ರೈತರ ಮೇಲೆ ಸಕಾರಾತ್ಮಕ ಪರಿಣಾಮ ಬೀರಲಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Image Source: Informalnewz

advertisement

ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಹಣ ಏರಿಕೆ!

ದೊಡ್ಡ ಮೊತ್ತದ ಹಣವನ್ನು ಕೇಂದ್ರ ಸರ್ಕಾರ ಕೃಷಿ ಸಚಿವಾಲಯಕ್ಕೆ ನೀಡಿರುವ ಪರಿಣಾಮವಾಗಿ, ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಚಿವಾಲಯದಿಂದ ನೀಡಲಾಗುತ್ತಿರುವ ಕಿಸಾನ್ ಸಮ್ಮಾನ ನಿಧಿ ಯೋಜನೆ (PMKSNY) ಯ ಹಣವನ್ನು ವಾರ್ಷಿಕವಾಗಿ 6,000 ದಿಂದ 9000 ಗಳಿಗೆ ಹೆಚ್ಚಿಸಲು ನಿರ್ಧರಿಸಲಾಗಿದೆ. ಅದೇ ರೀತಿ ಪಿಎಂ ಫಸಲ್ ಬೀಮಾ ಯೋಜನೆ (PMFBY) ಯೋಜನೆಯ ಅಡಿಯಲ್ಲಿ ರೈತರ ಬೆಳೆ ಆಧಾರದ ಮೇಲೆ ಕೇವಲ 1.5 – 5% ಮಾತ್ರ ರೈತರು ಪ್ರೀಮಿಯಂ ಪಾವತಿಸಿದರೆ ಸಾಕು ಉಳಿದ ಹಣವನ್ನು ಸರ್ಕಾರವೇ ಪಾವತಿಸುತ್ತದೆ.

ಯಶಸ್ವಿ ಐದು ವರ್ಷ ಪೂರ್ಣಗೊಳಿಸಿದ ಪಿಎಂ ಕಿಸಾನ್ ಯೋಜನೆ!

ಪಿಎಂ ಕಿಸಾನ್ (PM Kisan) ಯೋಜನೆಗಳಿಗೆ ಫೆಬ್ರುವರಿ ತಿಂಗಳಿಗೆ 5 ವರ್ಷ ಮುಗಿಯಲಿದೆ. 2016ರಲ್ಲಿ ಆರಂಭವಾದ PMFBY ಜನರಿಗೆ ಹೆಚ್ಚು ಅನುಕೂಲವಾಗಿದ್ದು ಅತಿ ಕಡಿಮೆ ಪ್ರೀಮಿಯಂ ಪಾವತಿ ಮಾಡಿ ಬೆಳೆ ವಿಮೆ ಪರಿಹಾರ ಪಡೆದುಕೊಳ್ಳಬಹುದಾಗಿದೆ. ಸದ್ಯ ಕೇಂದ್ರ ಬಜೆಟ್ ನಲ್ಲಿ ಕೃಷಿ ಸಚಿವಾಲಯಕ್ಕೆ ಹೆಚ್ಚಿನ ಅನುಮೋದನೆ ಸಿಕ್ಕಿರುವುದರಿಂದ ರೈತರಿಗೂ ಕೂಡ ಇದರಿಂದ ಹೆಚ್ಚು ಆರ್ಥಿಕ ನೆರವು ಸಿಗುವ ಸಾಧ್ಯತೆ ಇದೆ.

advertisement

Leave A Reply

Your email address will not be published.