Karnataka Times
Trending Stories, Viral News, Gossips & Everything in Kannada

SBI Recruitment: ಯಾವುದೇ ಪರೀಕ್ಷೆ ಇಲ್ಲದೆ ಎಸ್ ಬಿ ಐ ನಲ್ಲಿ ಕೆಲಸ ಬೇಕೆ ? ಕೂಡಲೇ ಹೀಗೆ ಮಾಡಿ.

advertisement

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ (ಎಸ್‌ಬಿಐ) ಕೆಲಸ ಪಡೆಯಬೇಕೆ ? ಇಲ್ಲಿದೆ ಒಂದು ಉತ್ತಮ ಅವಕಾಶ. ಎಸ್‌ ಬಿ ಐ ವಿಶೇಷ ಕೇಡರ್ ಅಧಿಕಾರಿ ಹುದ್ದೆಗೆ ನೇಮಕಾತಿಯನ್ನು ಆರಂಭಿಸಿದೆ. ನೀವೂ ಕೂಡ ಎಸ್ ಬಿ ಐ ಬ್ಯಾಂಕ್‌ನಲ್ಲಿ ಅಧಿಕಾರಿಯಾಗಲು ಬಯಸಿದ್ದು ಸರಿಯಾದ ಸಮಯಕ್ಕೆ ಕಾಯುತ್ತಿದ್ದೀರಿ ಎಂದಾದರೆ ಆ ಸಮಯ ಈಗ ಬಂದಿದೆ.

ಎಸ್ ಬಿ ಐ ನ ಈ ಕೆಲಸಕ್ಕೆ ಅರ್ಜಿ ಹಾಕಲು ನೀವು ಅಧಿಕೃತ ವೆಬ್‌ಸೈಟ್ sbi.co.in ಅನ್ನು ಭೇಟಿ ಮಾಡಬೇಕು. ಇಲ್ಲಿ ನೇಮಕಾತಿ ಪ್ರಕ್ರಿಯೆಯ ಅಡಿಯಲ್ಲಿ, ಮ್ಯಾನೇಜರ್ (ಕ್ರೆಡಿಟ್ ಅನಾಲಿಸ್ಟ್), ಸಹಾಯಕ ವ್ಯವಸ್ಥಾಪಕ (ಭದ್ರತಾ ವಿಶ್ಲೇಷಕ), ಸರ್ಕಲ್ ಡಿಫೆನ್ಸ್ ಬ್ಯಾಂಕಿಂಗ್ ಸಲಹೆಗಾರ (ಸಿಡಿಬಿಎ) ಹುದ್ದೆಗಳಿಗೆ ನೇಮಕಾತಿ ಈಗ ಆರಂಭವಾಗುತ್ತಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಕೂಡ ಆರಂಭವಾಗಿದೆ.

ಎಸ್‌ ಬಿ ಐ ತನ್ನ ನೇಮಕಾತಿ ಪ್ರಕ್ರಿಯೆಯಲ್ಲಿ ಒಟ್ಟು 131 ಹುದ್ದೆಗಳಿಗೆ ಅರ್ಹ ಅಭರ್ಥಿಗಳನ್ನು ಹುಡುಕುತ್ತಿದೆ. ಅಭ್ಯರ್ಥಿಗಳು ಈ ಹುದ್ದೆಗಳಿಗೆ ಮಾರ್ಚ್ 04 ರ ಒಳಗೆ ಅರ್ಜಿ ಸಲ್ಲಿಸಬಹುದು. ಹೀಗಾಗಿ ತಡ ಮಾಡಬೇಡಿ. ನಿಮ್ಮ ಸರ್ಕಾರಿ ನೌಕರಿಯ ಅದರಲ್ಲೂ SBI ನಲ್ಲಿ ಕೆಲಸ ಮಾಡುವ ಕನಸು ನನಸಾಗಲು ಇಂದೇ ಅರ್ಜಿ ಸಲ್ಲಿಸಿ. ಮುಂದೆ ನೀಡಲಾದ ವಿವವರಗಳು ನಿಮ್ಮ ಅರ್ಜಿ ಸಲ್ಲಿಸುವ ಪ್ರಕ್ರಿಯೆಯನ್ನು ಸುಲಭವನ್ನಾಗಿಸಲಿದೆ.

SBI ಭರ್ತಿ ಮಾಡಲಿರುವ ಹುದ್ದೆಗಳು:

 

 

  • ಸಹಾಯಕ ವ್ಯವಸ್ಥಾಪಕ (ಭದ್ರತಾ ವಿಶ್ಲೇಷಕ) – 23 ಹುದ್ದೆಗಳು
  • ಉಪ ವ್ಯವಸ್ಥಾಪಕ (ಭದ್ರತಾ ವಿಶ್ಲೇಷಕ) – 51 ಹುದ್ದೆಗಳು
  • ಮ್ಯಾನೇಜರ್ (ಭದ್ರತಾ ವಿಶ್ಲೇಷಕ) – 03 ಹುದ್ದೆಗಳು
  • ಸಹಾಯಕ ಜನರಲ್ ಮ್ಯಾನೇಜರ್ (ಅಪ್ಲಿಕೇಶನ್ ಸೆಕ್ಯುರಿಟಿ) – 03 ಹುದ್ದೆಗಳು
  • ಸರ್ಕಲ್ ಡಿಫೆನ್ಸ್ ಬ್ಯಾಂಕಿಂಗ್ ಸಲಹೆಗಾರ (CDBA) – 01 ಹುದ್ದೆ
  • ಮ್ಯಾನೇಜರ್ (ಕ್ರೆಡಿಟ್ ಅನಾಲಿಸ್ಟ್) – 50 ಹುದ್ದೆಗಳು

advertisement

SBI ನಲ್ಲಿ ಫಾರ್ಮ್ ಭರ್ತಿ ಮಾಡುವ ಅರ್ಜಿ ಶುಲ್ಕ ಎಷ್ಟು?

SBI ಹೊರಡಿಸಿರುವ ಅಧಿಕೃತ ಅಧಿಸೂಚನೆಯ ಪ್ರಕಾರ, ಸಾಮಾನ್ಯ/ಇಡಬ್ಲ್ಯೂಎಸ್/ಒಬಿಸಿ ಅಭ್ಯರ್ಥಿಗಳಿಗೆ ಅರ್ಜಿ ಸಲ್ಲಿಸುವ ಶುಲ್ಕ 750 ರೂ ಆಗಿದೆ. ಆದರೆ SC/ST/PWBD ವರ್ಗಕ್ಕೆ ಸೇರಿದ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕದಿಂದ ವಿನಾಯಿತಿ ನೀಡಲಾಗಿದೆ.

ಅರ್ಜಿ ಸಲ್ಲಿಸಲು ಅರ್ಹತೆ:

ಮ್ಯಾನೇಜರ್ (ಕ್ರೆಡಿಟ್ ಅನಾಲಿಸ್ಟ್):

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ ಪದವಿ (ಯಾವುದೇ ವಿಭಾಗ) ಹೊಂದಿರಬೇಕು ಮತ್ತು M.B.A (ಹಣಕಾಸು) / PGDBA / PGDBM / MMS (Finance) / CA / CFA / ICWA ಹೊಂದಿರಬೇಕು.

ಎಸ್‌ ಬಿ ಐ ನಲ್ಲಿ ಅರ್ಜಿ ಸಲ್ಲಿಸಲು ವಯೋಮಿತಿ:

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಅಧಿಕೃತ ಅಧಿಸೂಚನೆಯಲ್ಲಿ ನೀಡಲಾದ ವಯಸ್ಸಿನ ಮಿತಿಯನ್ನು ಹೊಂದಿರಬೇಕು. ಆಗ ಮಾತ್ರ ನೀವು ಅರ್ಜಿ ಸಲ್ಲಿಸಲು ಅರ್ಹರಾಗುತ್ತೀರಿ.

advertisement

Leave A Reply

Your email address will not be published.