Karnataka Times
Trending Stories, Viral News, Gossips & Everything in Kannada

SBI: ಎಸ್ ಬಿ ಐ ಗ್ರಾಹಕರಿಗೆ ಶುಭ ಸುದ್ದಿ ಆಧಾರ್ ಕಾರ್ಡ್ ನಿಂದಲೇ ಬ್ಯಾಂಕಿನ ಈ ಕೆಲಸ ಮಾಡಿಕೊಳ್ಳಿ!

advertisement

ನೀವು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಗ್ರಾಹಕರಾಗಿದ್ರೆ ಖಂಡಿತವಾಗಿಯೂ ಇದು ನಿಮಗೆ ಒಳ್ಳೆಯ ಸುದ್ದಿ ಆಗಲಿದೆ. SBI ಹೊಸದೊಂದು ಅಪ್ ಡೇಟ್ ನೀಡಿದ್ದು, ಆಧಾರ್ ಕಾರ್ಡ್ (Aadhaa Card) ಮೂಲಕವೇ ಸಾಮಾಜಿಕ ಭದ್ರತಾ ಯೋಜನೆಯಲ್ಲಿ ನೋಂದಾಯಿಸಿಕೊಳ್ಳುವ ಸೌಲಭ್ಯವನ್ನು ಒದಗಿಸಲಿದೆ.

SBI New Facility:

 

 

ಎಸ್ ಬಿ ಐ ಅಧ್ಯಕ್ಷ ದಿನೇಶ್ ಖಾರಾ (Dinesh Kumar Khara) ಅವರು ಸಾಮಾಜಿಕ ಭದ್ರತಾ ಯೋಜನೆಯಲ್ಲಿ ನೋಂದಣಿ ಪ್ರಕ್ರಿಯೆಯನ್ನು ಹಿಂದಿಗಿಂತಲೂ ಸುಲಭಗೊಳಿಸುವ ಗುರಿಯನ್ನು SBI ಹೊಂದಿದ್ದು, ಈ ನಿಟ್ಟಿನಲ್ಲಿ ಗ್ರಾಹಕರಿಗೆ ಹೆಚ್ಚಿನ ಪ್ರಯೋಜನ ನೀಡಲಿದ್ದೇವೆ ಎಂದು ತಿಳಿಸಿದ್ದಾರೆ. PM Jeevan Jyoti Bima Yojana, PM Suraksha Bima Yojana ಹಾಗೂ Atal Pension Scheme ಯಲ್ಲಿ ಗ್ರಾಹಕರು ನೋಂದಣಿ ಮಾಡಿಕೊಳ್ಳಲು ಬಯಸಿದರೆ ಗ್ರಾಹಕ ಸೇವಾ ಕೇಂದ್ರಗಳಿಗೆ ಆಧಾರ್ ಕಾರ್ಡ್ ತೆಗೆದುಕೊಂಡು ಹೋಗಿ ಆ ಮೂಲಕ ನೋಂದಣಿ ಮಾಡಿಕೊಳ್ಳಬಹುದು.

Pass Book Required For Registration:

 

 

ಗ್ರಾಹಕರು ಈ ಮೇಲೆ ತಿಳಿಸಲಾದ ಸರ್ಕಾರದ ಯಾವುದೇ ಯೋಜನೆಗೆ ನೋಂದಣಿ ಮಾಡಿಕೊಳ್ಳುವುದಕ್ಕೆ ಆಧಾರ್ ಕಾರ್ಡ್ (Aadhaar Card) ಇದ್ರೆ ಸಾಕು ಪಾಸ್ ಬುಕ್ ಅನ್ನ ಬ್ಯಾಂಕಿಗೆ ತೆಗೆದುಕೊಂಡು ಹೋಗುವ ಅಗತ್ಯ ಇಲ್ಲ ಎಂದು ದಿನೇಶ್ ಖಾರ ತಿಳಿಸಿದ್ದಾರೆ. ಆರ್ಥಿಕ ಭದ್ರತೆಯನ್ನು ಸಾಧಿಸುವ ಸಲುವಾಗಿ ಎಲ್ಲಾ ಸಮಸ್ಯೆಗಳನ್ನು ಹೋಗಲಾಡಿಸುತ್ತಾ ಸಮಾಜದಲ್ಲಿ ವಾಸಿಸುವ ಪ್ರತಿಯೊಂದು ವರ್ಗವು ಕೂಡ ಸಬಲೀಕರಣಗೊಳ್ಳಬೇಕು ಹಾಗೂ ಅಂತವರನ್ನು ಬಲಪಡಿಸಬೇಕು ಎನ್ನುವುದು ಈ ಹೊಸ ಸೌಲಭ್ಯದ ಉದ್ದೇಶವಾಗಿದೆ ಎಂದಿದ್ದಾರೆ.

advertisement

Social Security Scheme Benefits:

ಪ್ರಧಾನ ಮಂತ್ರಿ ಜೀವನ ಜ್ಯೋತಿ ಬಿಮಾ ಯೋಜನೆ (PMJJBY):

ಇದು ಎಲ್ಲ ರೀತಿಯ ಮರಣದ ಕವರೇಜ್ ಒದಗಿಸುವ ಯೋಜನೆ ಆಗಿದ್ದು ವರ್ಷಕ್ಕೆ 436 ರೂಪಾಯಿಗಳ ಪ್ರೀಮಿಯಂ ಪಾವತಿ ಮಾಡಿದ್ರೆ 2 ಲಕ್ಷ ರೂಪಾಯಿಗಳವರೆಗಿನ ಜೀವ ವಿಮೆ ಪ್ರಯೋಜನ ಪಡೆಯಬಹುದು.

ಪ್ರಧಾನ ಮಂತ್ರಿ ಸುರಕ್ಷಾ ಭೀಮಾ ಯೋಜನೆ (PMSBY):

ಯೋಜನೆ ಕೂಡ ಒಂದು ವರ್ಷದ ಅಪಘಾತ ವಿಮೆ ಯೋಜನೆ ಆಗಿದೆ ಅಪಘಾತದಿಂದ ಮರಣ ಹೊಂದಿದರೆ ಅಥವಾ ಅಪಘಾತದಲ್ಲಿ ಭಾಗಶಃ ಅಂಗವೈಕಲ್ಯ ಉಂಟಾದರೆ ವಿಮೆ ಸೌಲಭ್ಯವನ್ನು ಪಡೆದುಕೊಳ್ಳಬಹುದು.

ಅಟಲ್ ಪಿಂಚಣಿ ಯೋಜನೆ (APY):

60 ವರ್ಷ ಮೇಲ್ಪಟ್ಟವರಿಗೆ ಪಿಂಚಣಿ ಯೋಜನೆಯನ್ನು ನೀಡುವ ಯೋಜನೆ ಇದಾಗಿದ್ದು, ಇದರಲ್ಲಿ ಪ್ರತಿ ತಿಂಗಳು 5,000 ಪಿಂಚಣಿಯಾಗಿ ಪಡೆಯಬಹುದು. ಅತಿ ಕಡಿಮೆ ಹೂಡಿಕೆ ಮಾಡಿ 5,000 ಪಿಂಚಣಿ ಪಡೆದುಕೊಳ್ಳಬಹುದಾದ ಯೋಜನೆ ಇದಾಗಿದೆ.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ದೇಶದ ಅತಿ ದೊಡ್ಡ ಸರ್ಕಾರಿ ಬ್ಯಾಂಕ್ ಆಗಿದೆ. ಠೇವಣಿ ಶಾಖೆಗಳು ಗ್ರಾಹಕರಿಗೆ ನೀಡಲಾಗುವ ಸೌಲಭ್ಯಗಳು ಹಾಗೂ ಉದ್ಯೋಗಿಗಳ ವಿಷಯದಲ್ಲಿ ಎಸ್‌ಬಿಐ ಇತರ ಬ್ಯಾಂಕುಗಳಿಗಿಂತಲೂ ಮುಂದಿದೆ. ಜೂನ್ 2023ರ ವರೆಗಿನ ಅಂಕಿ ಅಂಶದ ಪ್ರಕಾರ ಎಸ್ ಬಿ ಐ ಬ್ಯಾಂಕ್ ನಲ್ಲಿ ಒಟ್ಟು ಗ್ರಾಹಕರು ಠೇವಣಿ ಇಟ್ಟ ಮೊತ್ತ ಸುಮಾರು 45.31 ಲಕ್ಷ ಕೋಟಿ ರೂ. ಗಳು. ಇವುಗಳಲ್ಲಿ ಎಸ್ಬಿಐ ಗ್ರಾಹಕರಿಗೆ ನೀಡಿರುವ ಸಾಲದ ಮೊತ್ತ 33 ಲಕ್ಷ ಕೋಟಿ ರೂಪಾಯಿ ಎಂದು ವರದಿಯಾಗಿದೆ.

advertisement

Leave A Reply

Your email address will not be published.