Karnataka Times
Trending Stories, Viral News, Gossips & Everything in Kannada

Govt. Rules: ಫೆಬ್ರವರಿ 1 ರಿಂದ ಸರ್ಕಾರ ಸಂಬಂಧಿತ ಈ 9 ನಿಯಮಗಳು ಬದಲಾಗಲಿದೆ.

advertisement

ಪ್ರತೀ ಹೊಸ ತಿಂಗಳ ಆರಂಭ ವಾಗುತ್ತಿದ್ದಂತೆ ಸರಕಾರಿ ಸ್ವಾಮ್ಯದ ಅನೇಕ ಯೋಜನೆ, ಅಭಿವೃದ್ಧಿ, ಅರ್ಜಿ ಸಲ್ಲಿಕೆ ವಿನೂತನ ಕ್ರಮ ಎಲ್ಲವೂ ತಿಂಗಳ ಮೊದಲ ದಿನದಿಂದಲೇ ಜಾರಿ ಆಗುವುದು ಸಾಮಾನ್ಯವಾಗಿದ್ದು ಹೊಸ ವರ್ಷದ ಮೊದಲ ತಿಂಗಳು ಜನವರಿ ಮುಗಿಯುತ್ತಿದ್ದು ಇದೀಗ ಫೆಬ್ರವರಿ ತಿಂಗಳ ಆರಂಭಕ್ಕೆ ಕೆಲವೇ ದಿನವಷ್ಟೇ ಬಾಕಿ ಇದೆ. ಫೆಬ್ರವರಿ ಒಂದನೇ ತಾರೀಕಿನ ಬಳಿಕ ಅನೇಕ ವಿಚಾರಗಳು ಬದಲಾಗಲಿದೆ. ಅವುಗಳು ಯಾವುವು ಎಂಬ ಬಗ್ಗೆ ಸಂಪೂರ್ಣ ಮಾಹಿತಿ ನಾವಿಂದು ನಿಮಗೆ ನೀಡಲಿದ್ದೇವೆ.

 

  • ಫೆಬ್ರವರಿ 1 ರಿಂದ ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಯಲ್ಲಿ ಕೆಲ ಮಹತ್ವದ ಬದಲಾವಣೆ ಆಗಲಿದೆ. NPS ಅಂದರೆ ರಾಷ್ಟ್ರೀಯ ಪಿಂಚಣಿ ಯೋಜನೆ (National Pension Scheme) ಯಲ್ಲಿ ಉದ್ಯೋಗಿ ಹಾಗೂ ವೇತನ ನೀಡುವ ಸಂಸ್ಥೆಯಿಂದ ಸಂಗ್ರಹವಾದ ಪಿಂಚಣಿ (Pension) ಮೊತ್ತವನ್ನು ಅವಧಿ ಪೂರ್ವ ತೆಗೆಯಲು ನಿಯಮ ವಿಧಿಸಲಾಗುತ್ತದೆ. ಮನೆ, ಮದುವೆ, ವಾಹನ ಖರೀದಿ ಇನ್ನಿತರ ಕಾರಣಕ್ಕೆ ತಮ್ಮ ಪಿಂಚಣಿ (Pension) ಮೊತ್ತ ಭಾಗಶಃ ತೆಗೆಯಲು ಅವಕಾಶ ನೀಡಲಾಗುತ್ತದೆ. 25%ನಷ್ಟು ಪಿಂಚಣಿ ಹಿಂಪಡೆಯಬಹುದು.

 

  • ಭಾರತೀಯ ಬ್ಯಾಂಕಿನಲ್ಲಿ ಪ್ರತಿಷ್ಠಿತ ಸ್ಥಾನ ಹೊಂದಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (State Bank of India) ತನ್ನ ಗ್ರಾಹಕರಿಗೆ ವಿವಿಧ ವಿಧದಲ್ಲಿ ಕಡಿಮೆ ಬಡ್ಡಿ ದರದ ಗ್ರಾಹಕ ಉಪಯುಕ್ತವಿಧಾನದ ಗೃಹ ಸಾಲ ಪರಿಚಯಿಸುತ್ತಿದೆ. ವೇತನ ವರ್ಗ, NRI ಸೇರಿದಂತೆ ವಿಶೇಷ ವೃತ್ತಿ ನಿರತರಿಗೆ ಗೃಹಸಾಲದ ಮೇಲೆ 65ಬಿಪಿಎಸ್ ವರೆಗೆ ರಿಯಾಯಿತಿ ನೀಡಲಾಗುತ್ತಿದೆ.

 

advertisement

  • ಪಂಜಾಬ್ ಮತ್ತು ಸಿಂಧ್ ಬ್ಯಾಂಕ್ (Punjab and Sind Bank) ನ ಎಫ್ ಡಿ ಮೇಲೆ ಮಹತ್ವದ ಬದಲಾವಣೆ ತರಲಾಗಿದೆ. ವೀ ಬ್ಯಾಂಕಿನಲ್ಲಿ ಧನಲಕ್ಷ್ಮೀ 444ದಿನಗಳ ಎಫ್ ಡಿ ಚಿರಪರಿಚಿತವಾಗಿದೆ. ಫೆಬ್ರವರಿ ಒಂದರ ಬಳಿಕ ಈ ಯೋಜನೆ ಇರಲಾರದು. ಹಾಗಿದ್ದರೂ ಸಾಮಾನ್ಯ ಎಫ್ ಡಿ ನಲ್ಲಿ 444 ದಿನದ ಎಫ್ ಡಿ ನಲ್ಲಿ ಕೆಲ ಅಗತ್ಯ ಬದಲಾವಣೆ ಜಾರಿಗೆ ತರಲಾಗಿದೆ. ಸಾಮಾನ್ಯ ನಾಗರಿಕರಿಗೆ 7.4%, ಹಿರಿಯ ನಾಗರಿಕರಿಗೆ 7.9%, ಸೂಪರ್ ಹಿರಿಯ ನಾಗರಿಕರಿಗರ 8.5% ವರೆಗೆ ಬಡ್ಡಿದರ ನೀಡಲಾಗುತ್ತಿದ್ದು ಇದು ಅನೇಕ ಗ್ರಾಹಕರಿಗೆ ಬಹಳ ಪ್ರಯೋಜನಕಾರಿ ಆಗಲಿದೆ.

 

  • RBI ನಿಯಮದ ಪ್ರಕಾರ ಜನವರಿ 31ರ ಒಳಗೆ ಫಾಸ್ ಟ್ಯಾಗ್ ಬಳಗೆ ಮಾಡುವವರು ಕೆವೈಸಿ ಪೂರ್ಣಗೊಳಿಸಲೇ ಬೇಕು ಇಲ್ಲವಾದರೆ ಬ್ಲ್ಯಾಕ್ ಲೀಸ್ಟ್ ಗೆ ಸೇರಿಸಲಾಗುವುದು.

 

  • ಫೆಬ್ರವರಿ ಒಂದರಿಂದ ಆರ್ಬಿಐ ನಲ್ಲಿ ಹೊಸದೊಂದು ನಿಯಮ ಜಾರಿ ಆಗಲಿದೆ. ಮಿನಿಮಮ್ ಬ್ಯಾಂಕ್ ಬ್ಯಾಲೆನ್ಸ್ ಮತ್ತು ಸಿಬಿಲ್ (CIBIL) ಸ್ಕೋರ್ ನಲ್ಲಿ ಹೊಸ ನಿಯಮ ಜಾರಿ ಆಗಲಿದೆ. ಆರ್ ಬಿಐ ತನ್ನ ಅಧೀನದಲ್ಲಿ ಇರುವ ಬ್ಯಾಂಕುಗಳಿಗೆ ಹೊಸ ಮಿನಿಮಮ್ ಬ್ಯಾಲೆನ್ಸ್ ಬಗ್ಗೆ ಕೆಲ ಅಗತ್ಯ ಮಾನದಂಡಗಳನ್ನು ಜಾರಿಗೆ ತಂದಿದೆ. ಅದರ ಜೊತೆಗೆ ಸಿಬಿಲ್ ಸ್ಕೋರ್ ನಲ್ಲಿ 5 ಹೊಸ ನಿಯಮ ಸಹ ಜಾರಿ ಆಗಲಿದೆ.

 

  • ತತ್‌ಕ್ಷಣದ ಪಾವತಿ ಸೇವೆಯಲ್ಲಿ ಗಮನಾರ್ಹ ಬದಲಾವಣೆ ಆಗಲಿದೆ. ಫಲಾನುಭವಿಗಳ ಹೆಸರು ಸೇರಿಸದೇ ಗ್ರಾಹಕರು 5ಲಕ್ಷ ರೂಪಾಯಿ ವರೆಗೆ ಹಣ ವರ್ಗಾತಿಸಲು ಅವಕಾಶ ನೀಡಲಾಗಿದೆ.

advertisement

Leave A Reply

Your email address will not be published.