Karnataka Times
Trending Stories, Viral News, Gossips & Everything in Kannada

Swavalambi Scheme: ಕಾಂಗ್ರೆಸ್ ಸರ್ಕಾರದಿಂದ ಮತ್ತೊಂದು ಯೋಜನೆಯಲ್ಲಿ ಸಿಗಲಿದೆ 5 ಲಕ್ಷ ಸಹಾಯಧನ, ಅರ್ಹರು ಕೂಡಲೇ ಅಪ್ಲೈ ಮಾಡಿ!

advertisement

ಕಾಂಗ್ರೆಸ್ ಪಕ್ಷ ಅಧಿಕಾರ ವಹಿಸಿಕೊಂಡ ಮೇಲೆ ಒಂದಲ್ಲ ಒಂದು ಜನಾಭಿವೃದ್ದಿ ಕೆಲಸಗಳನ್ನು ಮಾಡಿಕೊಂಡು ಬರುತ್ತಲೇ ಇದೆ. ಇದೀಗ ಬ್ರಾಹ್ಮಣ ಸಮುದಾಯಕ್ಕೆ ಗುಡ್ ನ್ಯೂಸ್ ಪ್ರಕಟಿಸಿದೆ.ಆರ್ಥಿಕವಾಗಿ ಹಿಂದುಳಿದಿರುವ ಬ್ರಾಹ್ಮಣ ಕುಟುಂಬಗಳ ಶ್ರೇಯೋಭಿವೃದ್ದಿಗಾಗಿ ಕರ್ನಾಟಕ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ನೀಡುವ ಸ್ವಾವಲಂಭಿ (Swavalambi) ಮತ್ತು ಸಾಂದೀಪಿನಿ ಶಿಷ್ಯ ವೇತನ (Sandipani Pupil Salary) ದ ಯೋಜನೆಗಳ ಉಪಯೋಗವನ್ನು ಅರ್ಹರು ಪಡೆದುಕೊಳ್ಳಿ ಎಂದು ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.

ತಮ್ಮ ಕಚೇರಿಯಲ್ಲಿ ನಿಗಮದ ಡಿಬಿಟಿ ಪ್ರಕ್ರಿಯೆಗೆ ಚಾಲನೆ ನೀಡಿ ಮಾತನಾಡಿದ ಅವರು, ಆರ್ಥಿಕವಾಗಿ ಹಿಂದುಳಿದಿರುವ ಬ್ರಾಹ್ಮಣ ಕುಟುಂಬಗಳು ಸ್ವಯಂ ಉದ್ಯೋಗ ಹಾಗೂ ಆರ್ಥಿಕ ಚಟುವಟಿಕೆಗಳಿಗಾಗಿ ಬ್ಯಾಂಕ್ ನಿಂದ ಸಾಲ ಪಡೆದಿದ್ದಲ್ಲಿ, ಸಾಲದ ಪೈಕಿ ಶೇ. 20 ರಷ್ಟು ಹಣವನ್ನು ಸರ್ಕಾರ ಸ್ವಾವಲಂಭಿ ಯೋಜನೆ ಅಡಿಯಲ್ಲಿ ಸಹಾಯಧನ ನೀಡಲಿದೆ.

Swavalambi Scheme:

 

 

ಗರಿಷ್ಠ 5 ಲಕ್ಷದ ವರೆಗೆ ಸಹಾಯಧನ ನೀಡಲಾಗುವುದು. ವ್ಯಾಪಾರ, ಅಂಗಡಿ, ಹೈನುಗಾರಿಕೆ, ಹೊಲಿಗೆ ವೃತ್ತಿ, ಆಟಿಕೆ ತಯಾರಿಕೆ, ಮೊಬೈಲ್ ಅಂಗಡಿ, ಗುಡಿ ಕೈಗಾರಿಕೆ ಸೇರಿದಂತೆ ಹೆಚ್ಚಿನ ಘಟಕ ವೆಚ್ಚವಿರುವ ಆದಾಯ ಬರುವಂತಹ ಲಾಭದಾಯಕ ಉದ್ಯಮಗಳನ್ನು ಸ್ಥಾಪಿಸಲು ರಾಷ್ತ್ರೀಕೃತ ಬ್ಯಾಂಕ್ ಗಳಿ‌ಂದ ಸಾಲ ಪಡೆದವರು ಈ ಯೋಜನೆ (Swavalambi Scheme) ಅರ್ಹರಾಗಿರುತ್ತಾರೆ. ಜನವರಿ 31 ರ ವರೆಗೆ ಅರ್ಜಿ ಸಲ್ಲಿಸಲು ಅವಕಾಶ ಇದ್ದು ಅರ್ಹರು ಇದರ ಉಪಯೋಗ ಪಡೆದುಕೊಳ್ಳಿ ಎಂದು ಸಚಿವ ಕೃಷ್ಣ ಬೈರೇಗೌಡ (Minister Krishna Byre Gowda) ಅವರು ತಿಳಿಸಿದ್ದಾರೆ.

ಸಾಂದೀಪಿನಿ ಶಿಷ್ಯ ವೇತನ:

advertisement

ಮೆಟ್ರಿಕ್ ನಂತರದ ಪ್ರಥಮ ಹಾಗೂ ದ್ವಿತೀಯ ಪಿಯುಸಿ ಓದುತ್ತಿರುವ ಬ್ರಾಹ್ಮಣ ವಿದ್ಯಾರ್ಥಿ/ವಿದ್ಯಾರ್ಥಿನಿಯರಿಗೆ 15,000 ರೂ. ವರೆಗೆ ಸಾಂದೀಪಿನಿ ಯೋಜನೆ (Sandipani Scheme) ಅಡಿ ಶಿಷ್ಯ ವೇತನ ನೀಡಲಾಗುವುದು.

ಯುಜಿ/ಪಿಜಿ ಸೇರಿದಂತೆ ವಿವಿಧ ಕೋರ್ಸ್ ಗಳಿಗೆ ಸಿಇಟಿ ಪ್ರವೇಶ ಪರೀಕ್ಷೆ ಮೂಲಕ ತೇರ್ಗಡೆಯಾದ ವಿದ್ಯಾರ್ಥಿ/ವಿದ್ಯಾರ್ಥಿನಿಯರಿಗೆ, ದಾಖಲಾತಿ ಶುಲ್ಕದ ಮೊತ್ತದ 2/3 ಭಾಗ ಹಾಗೂ ಗರಿಷ್ಠ ರೂ. 1 ಲಕ್ಷದ ವರೆಗೆ ಬ್ರಾಹ್ಮಣ ಅಭಿವೃದ್ಧಿ ನಿಗಮದ ಮೂಲಕ ಸರ್ಕಾರ ಪಾವತಿಸಲಿದೆ. ಸದರಿ ಯೋಜನೆಗೆ ಅರ್ಜಿ ಸಲ್ಲಿಸಲು ಜನವರಿ.31 ಕೊನೆಯ ದಿನವಾಗಿರಲಿದೆ ಎಂದು ಅವರು ತಿಳಿಸಿದರು.

Sandipani Scheme Benefits:

ಸಾಂದೀಪಿನಿ ಯೋಜನೆ (Sandipani Scheme) ಯಡಿ ಕರ್ನಾಟಕ ಸರ್ಕಾರ 15000 ರೂ. ನೇರ ಲಾಭ ವರ್ಗಾವಣೆ ಮೂಲಕ ವಿದ್ಯಾರ್ಥಿ / ವಿದ್ಯಾರ್ಥಿನಿಯರ ಬ್ಯಾಂಕ್ ಖಾತೆಗಳಿಗೆ ಹಣ ಹಾಕಲಿದೆ. ಶಿಕ್ಷಣ ಮತ್ತು ಇತರ ಶುಲ್ಕಗಳು, ಪಠ್ಯಪುಸ್ತಕಗಳು, ಎಲೆಕ್ಟ್ರಾನಿಕ್ ಉಪಕರಣಗಳು ಹಾಗೂ ಇತರ ಅಧ್ಯಯನ ಉಪಕರಣಗಳು, ಹಾಸ್ಟೆಲ್, ಸಾರಿಗೆ ಹಾಗೂ ಬಟ್ಟೆಯಂತಹ ವೆಚ್ಚ ಪೂರೈಸಲು ಈ ಮೊತ್ತವನ್ನು ನೀಡಲಾಗುತ್ತದೆ. ಪ್ರಸಕ್ತ ವರ್ಷ ಒಟ್ಟು 9,206 ವಿದ್ಯಾರ್ಥಿಗಳು ಪ್ರಯೋಜನ ಪಡೆಯಲಿದ್ದಾರೆ. ಈ ವರ್ಷ ಅಂತಹ ವಿದ್ಯಾರ್ಥಿಗಳಿಗೆ ಸಹಾಯ ಮಾಡಲು ಸರ್ಕಾರ 13.77 ಕೋಟಿ ರೂ. ಮೀಸಲಿಟ್ಟಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಯೋಜನೆಯ ಫಲಾನುಭವಿ ಆಗಲು ಅರ್ಹತೆ ಹಾಗೂ ಮಾನದಂಡವೇನು?

• ಅರ್ಜಿ ಹಾಕುವ ವಿದ್ಯಾರ್ಥಿ / ವಿದ್ಯಾರ್ಥಿನಿಯರು ಕರ್ನಾಟಕ ಮೂಲದವರಾಗಿರಬೇಕು
• ಅರ್ಜಿದಾರ ವಿದ್ಯಾರ್ಥಿಗಳು ಬ್ರಾಹ್ಮಣರಾಗಿರಬೇಕು
• ಅವನು ಅಥವಾ ಅವಳು BPL ವರ್ಗಕ್ಕೆ ಸೇರಿರಬೇಕು
• ಅರ್ಜಿದಾರರು ಕನಿಷ್ಠ ಮೆಟ್ರಿಕ್ಯುಲೇಷನ್ ಪರೀಕ್ಷೆಯ ಪ್ರಮಾಣ ಪತ್ರವನ್ನು ಹೊಂದಿರಬೇಕಾದ್ದು ಕಡ್ಡಾಯ

advertisement

Leave A Reply

Your email address will not be published.