Karnataka Times
Trending Stories, Viral News, Gossips & Everything in Kannada

Pavithra Gowda-Darshan: ಪವಿತ್ರಾ ಗೌಡ ಜೊತೆ ದರ್ಶನ ಲವ್ ಸ್ಟೋರಿ ಶುರುವಾಗಿದ್ದು ಹೇಗೆ? ಸ್ಪಷ್ಟನೆ ನೀಡಿದ ಪವಿತ್ರಾ ಗೌಡ!

advertisement

ದರ್ಶನ್ ಕಾಟೇರ ಸಿನಿಮಾ ಸಕ್ಸಸ್ ಆಗುತ್ತಿದ್ದಂತೆ ವೈಯಕ್ತಿಕ ವಿಚಾರದ ಕಾಟ್ರವರ್ಸಿ ಜೋರಾಗಿಯೇ ನಡೆಯುತ್ತಿದೆ. ಇಂದು ಸೋಷಿಯಲ್ ಮೀಡಿಯಾದಲ್ಲಿ ಪವಿತ್ರಗೌಡ ಮತ್ತು ದರ್ಶನ್ (Pavithra Gowda-Darshan) ಅವರದೇ ‌ಪೋಟೊಗಳು ಭಾರೀ ವೈರಲ್ ಆಗುತ್ತಿದೆ. ಇದಕ್ಕೆಲ್ಲ ಮುಖ್ಯ ಕಾರಣ ನಟಿ ಪವಿತ್ರಗೌಡ. ಪವಿತ್ರಾ ಗೌಡ (Pavithra Gowda) ತನ್ನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ದರ್ಶನ್ (Darshan) ಜೊತೆಗಿನ ಫೋಟೊಗಳನ್ನು ಹಂಚಿಕೊಂಡಿದ್ದು ತಿಳಿದೆ ಇದೆ. ಅಲ್ಲದೇ, ನಮ್ಮಿಬ್ಬರ ಸಂಬಂಧ 10 ವರ್ಷ ಪೂರೈಸಿದೆ ಎಂದು ಬರೆದುಕೊಂಡಿದ್ದೆ ಮುಖ್ಯ ಕಾರಣ.

ದರ್ಶನ್ ಪತ್ನಿ ಗರಂ:

 

 

ಈ ವಿಚಾರಕ್ಕೆ ದರ್ಶನ್ ಪತ್ನಿ ಗರಂ ಆಗಿದ್ದು ವ್ಯಕ್ತಿಯೊಬ್ಬ ವಿವಾಹಿತನೆಂದು ತಿಳಿದಿದ್ದರೂ ಕೂಡ ಈಕೆ ತನ್ನ ವೈಯಕ್ತಿಕ ಪೂರೈಕೆಗಾಗಿ ಹಾಗೂ ಲಾಭಕ್ಕಾಗಿ ಆತನಿಗೆ ಹತ್ತಿರವಾಗುತ್ತಾಳೆ. ಪವಿತ್ರಾ ಮತ್ತು ಸಂಜಯ್ ಸಿಂಗ್ ಅವರ ಮಗಳು ಖುಷಿ ಗೌಡ ಎಂಬುದನ್ನು ಈ ಫೋಟೊಗಳು ಸ್ಪಷ್ಟವಾಗಿ ಸಾಬೀತು ಮಾಡುತ್ತವೆ ಎಂದು ಬರೆದುಕೊಂಡಿದ್ದರು. ಅದೇ ರೀತಿ ಪವಿತ್ರಾ ಗೌಡ (Pavithra Gowda) ಹಾಗೂ ಅವರ ಪತಿ ಸಂಜಯ್ ಸಿಂಗ್​ರ ಹಳೆಯ ಚಿತ್ರಗಳನ್ನು ವಿಜಯಲಕ್ಷ್ಮಿ ದರ್ಶನ್ (Vijayalakshmi Darshan) ತಮ್ಮ ಸಂದೇಶದೊಂದಿಗೆ ಹಂಚಿಕೊಂಡಿದ್ದಾರೆ.

ಪರಿಚಯ ವಾದದ್ದು ಹೇಗೆ?

advertisement

ಪವಿತ್ರಾ ಗೌಡ ದರ್ಶನ್ ಅವರನ್ನು ಮೊದಲ ಬಾರಿಗೆ ಭೇಟಿಯಾಗಿದ್ದು ಜಗ್ಗು ದಾದಾ ಚಿತ್ರದ ಸಂದರ್ಭದಲ್ಲಿ ಎನ್ನಲಾಗುತ್ತಿದೆ. ನಂತರದಲ್ಲಿ ಇವರ ಸ್ನೇಹ ಬೆಳೆಯುತ್ತಾ ಹೋಯಿತು ಎನ್ನಲಾಗಿದೆ. ಈ‌ ಮೊದಲು‌ ಕೆಲವು ಸಿನಿಮಾ ಮಾಡಿದ್ದರು ಅಷ್ಟು ಹಿಟ್ ಆಗಿರಲಿಲ್ಲ.ಆ ಸಮಯದಲ್ಲಿಯೇ ಜಗ್ಗು ದಾದಾ ಆಡಿಷನ್ ಕೊಡಲು ಪವಿತ್ರಾ ಗೌಡ ಹೋಗಿದ್ದರು. ಅಲ್ಲಿಯೇ ದರ್ಶನ್ ಅವರನ್ನ ಪರಿಚಯ ಮಾಡಿಕೊಂಡು ಭೇಟಿಯಾಗಿದ್ದರು ಎನ್ನಲಾಗಿದೆ.ಅಷ್ಟೆ ಅಲ್ಲದೆ ಇನ್ನೊಂದು ಮೂಲದ ಪ್ರಕಾರ ದರ್ಶನ್ ಹಾಗೂ ಪವಿತ್ರಾ ಗೌಡ ಛತ್ರಿಗಳು ಸಾರ್ ಛತ್ರಿಗಳ ಚಿತ್ರದ ಸಂದರ್ಭದಲ್ಲಿ ಇತ್ತು ಎನ್ನಲಾಗಿದೆ. ಒಟ್ಟಿನಲ್ಲಿ ಈ ಸ್ನೇಹ ಇಂದು ದರ್ಶನ್ ‌ಪತ್ನಿ ದ್ವೇಷ ಮಾಡುವವರೆಗೆ ತಲುಪಿದೆ.

ಪವಿತ್ರಗೌಡ ಸ್ಪಷ್ಟನೆ:

 

 

ಫೋಟೋ ವೈರಲ್​ ಆಗುತ್ತಿದ್ದಂತೆ ದರ್ಶನ್​ ಪತ್ನಿ ವಿಜಯಲಕ್ಷ್ಮೀ (Vijayalakshmi Darshan) ನಟಿ ಪವಿತ್ರಾ ವಿರುದ್ಧ ಮಾತನಾಡಿದ್ದಾರೆ. ಈ ಬೆನ್ನಲ್ಲೆ ಪವಿತ್ರಾಗೌಡ (Pavithra Gowda)  ಮತ್ತೊಮ್ಮೆ‌ ಪೋಸ್ಟ್​ ಮಾಡಿ ಸ್ಪಷ್ಟ ನೆ ನೀಡಿದ್ದಾರೆ. ನಾನು ಪವಿತ್ರ ಗೌಡ, ನನ್ನ ಮಗಳು ಖುಷಿ ಗೌಡ. ನಾನು ಸಂಜಯ್ ಎಂಬ ವ್ಯಕ್ತಿಯನ್ನು ಮದುವೆಯಾಗಿದ್ದು ನಂತರ ಖುಷಿ ಗೌಡ ಹುಟ್ಟಿರುತ್ತಾಳೆ. ಖುಷಿ ದರ್ಶನ್ ಮಗಳು ಎಂದು ಹೇಳಿಲ್ಲ.ನಾನು ಯಾವುದೇ ವೈಯಕ್ತಿಕ ಉದ್ದೇಶದಿಂದ ಹೇಳಿಲ್ಲ. ಪ್ರೀತಿ ಮತ್ತು ಆರೈಕೆಯಿಂದ 10 ವರ್ಷ ಜೊತೆಗೆ‌ ಇರುವುದು ಸುಲಭವಲ್ಲ ಎಂದು ಪೋಸ್ಟ್‌ ಮಾಡಿದ್ದಾರೆ.

advertisement

Leave A Reply

Your email address will not be published.